ಕಿವಿ ನೋವಿಗೆ ಇಷ್ಟು ಮಾಡಿ ಸಾಕು

0
1003

ಕಿವಿ ನೋವು ಸಾಮಾವ್ಯವಾಗಿ ಎಲ್ಲರಿಗೂ ಕಾಡುವ ಸಮಸ್ಯೆ. ತಕ್ಷಣಕ್ಕೆ ಕಿವಿ ನೋವು ಕಾಣಿಸಿಕೊಳ್ಳಬಹುದು. ಕಿವಿಯ ಒಳಭಾಗದಲ್ಲಿ, ಕಿವಿ ಹೊರಗೆ, ಮಧ್ಯ ಭಾಗದಲ್ಲಿ ನೋವು, ತುರಿಕೆ ಕಾಣಿಸಿಕೊಳ್ಳುವುದು, ಕಿವಿ ಮುಟ್ಟಿದರೆ ನೋವಾಗುವುದು ಇವೆಲ್ಲಾ ಕಾಣಿಸಿಕೊಳ್ಳುತ್ತವೆ. ಕೂಡಲೇ ವೈದ್ಯರನ್ನು ಕಾಣಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ನೀವೂ ಯೋಚನೆ ಮಾಡಬೇಕಿಲ್ಲ. ಮನೆಯಲ್ಲೇ ಸೀಗುವ ವಸ್ತುಗಳನ್ನು ಬಳಸಿ ಕಿವಿಯ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

ಬೆಳ್ಳುಳ್ಳಿ: ಕಾಲು ಗ್ಲಾಸ್ ಸಾಸಿವೆ ಎಣ್ಣೆಗೆ 6 ಅಥವ 7 ಬೆಳ್ಳುಳ್ಳಿ ಎಸಳನ್ನು ಹಾಕಿ ಅದು ಬೆಳ್ಳುಳ್ಳಿ ಗಾಢ ಕಂದು ಬಣ್ಣ ಬರುವವರೆಗೆ ಕಾಯಿಸಬೇಕು. ನಂತರ ಆ ಎಣ್ಣೆಯನ್ನು ಚೆನ್ನಾಗಿ ಸೋಸಿ ಒಂದು ಪುಟ್ಟ ಡಬ್ಬದಲ್ಲಿ ಶೇಖರಿಸಿಟ್ಟು ದಿನಕ್ಕೆ ಎರಡು ಬಾರಿ ಕಿವಿಗೆ ಹಾಕಬೇಕು. ಈ ರೀತಿ ಮಾಡಿದರೆ ಆಗಾಗ ಬರುವ ಕಿವಿನೋವು ಕಡಿಮೆಯಾಗುತ್ತದೆ.

ಬಾದಾಮಿ ಎಣ್ಣೆ: ಚಮಚವನ್ನು ಬಿಸಿ ನೀರಿನಲ್ಲಿಟ್ಟು ಬಿಸಿ ಮಾಡಿ ಅದಕ್ಕೆ ಬಾದಾಮಿ ಎಣ್ಣೆಯನ್ನು ಹಾಕಿ ಕಿವಿಗೆ ಹಾಕಿದರೆ ಕಿವಿನೋವು ಕಡಿಮೆಯಾಗುತ್ತದೆ.

ವಿಟಮಿನ್ ಸಿ : ಆಹಾರದಲ್ಲಿ ಸತು ಮತ್ತು ವಿಟಮಿನ್ ಸಿ ಇರುವ ಅಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕಿವಿ ಸಂಬಂಧಿತ ಕಾಯಿಲೆ ಬರದಂತೆ ತಡೆಯಬಹುದು.

ಉಪಯುಕ್ತ ನಿಂಬೆ : ಗಜ ನಿಂಬೆ ಹಣ್ಣಿನ ರಸದಲ್ಲಿ ಸ್ವಲ್ಪ ತುಪ್ಪ ಬೆರೆಸಿ ಕಾಯಿಸಿ ಬೆಚ್ಚಗಿನ ರಸವನ್ನು ಕಿವಿಗೆ ಹಾಕಿದರೆ ಕಿವಿ ನೋವ್ವು ಗುಣವಾಗುತ್ತದೆ.

ಹುಣಿಸೆ ಮರದ ಚಿಗುರೆಲೆಗಳನ್ನು ಎಳ್ಳೆಣ್ಣೆ ಯಲ್ಲಿ ಹಾಕಿ ಕಾಯಿಸಿ ಎಣ್ಣೆಯನ್ನು ಸ್ವಲ್ಪ ಬೆಚ್ಚಗಿರುವಾಗ ಕಿವಿಗಳಿಗೆ ಒಂದು ಅಥವ ಎರಡು ತೊಟ್ಟು ಹಾಕಿದರೆ ಕಿವಿ ನೋವ್ವು ಗುಣವಾಗುತ್ತದೆ.

ಈರುಳ್ಳಿ: ಸಣ್ಣದಾಗಿರುವ ಈರುಳ್ಳಿಯನ್ನು ತೆಗೆದುಕೊಂಡು ಕತ್ತರಿಸಿ, ಮೈಕ್ರೋವೇವ್‌ನಲ್ಲಿ 2 ನಿಮಿಷ್ ಕಾಲ ಬಿಸಿ ಮಾಡಿಟ್ಟುಕೊಳ್ಳಬೇಕು. ತಣ್ಣಗಾದ ಬಳಿಕ ರಸವನ್ನು ಹಿಂಡಿ ತೆಗೆದು ನೋವಿರುವ ಕಿವಿಗೆ ಎರಡು ಅಥವ ಮೂರು ಹನಿ ಹಾಕಿಕೊಳ್ಳಿ. ನಂತರ ಮತ್ತೊಂದು ಬದಿಗೆ ಮಲಗಿಕೊಳ್ಳಬೇಕು. ಹೀಗೆ ಮಾಡುವುದರಿಂದ ನಿಮ್ಮ ಕಿವಿ ಸರಿಯಾಗಿ ಮದ್ದು ತಲುಪುತ್ತದೆ.

LEAVE A REPLY

Please enter your comment!
Please enter your name here