ತಲೆಹೊಟ್ಟು ನಿವಾರಿಸಲು ಇಲ್ಲಿದೆ ಪರಿಹಾರ.
ಹೊಟ್ಟಿಗೆ ಅನೇಕ ವಿಧವಾದ ಮನೆಯ ಔಷಧಿಗಳಿವೆ. ಇವು ಎಲ್ಲರಿಗೂ ಕೆಲಸ ಮಾಡುತ್ತವೆಯೆಂದು ಹೇಳಲಾಗುವುದಿಲ್ಲವಾದರೂ ಇದರಿಂದ ನಷ್ಟವೇನೂ ಇಲ್ಲ. ಯಾರಿಗೆ ಯಾವುದು ಕೆಲಸ ಮಾಡುತ್ತದೆಯೋ ಎಂಬುದನ್ನು ಬಳಸಿಯೇ ನೋಡಬೇಕಾಗುತ್ತದೆ. ಹಲವಾರು ಜನರು ಹಲವು ರೀತಿಯ ಔಷಧಗಳನ್ನು ಅಂಗಡಿಯಲ್ಲಿ ಕೊಂಡು ತಂದು ಉಪಯೋಗಿಸುತ್ತಾರೆ. ಇದರಿಂದ ಯಾವ ಪರಿಣಾಮವೂ ಆಗುವುದಿಲ್ಲ. ಈ ಸಮಸ್ಯೆಗೆ ಮನೆ ಮದ್ದೇ ಪರಿಹಾರ. ತಪ್ಪದೇ ಇವುಗಳನ್ನು ಮಾಡಿನೋಡಿ. ನಿಮಗೇ ಗೊತ್ತಾಗುತ್ತದೆ. ಇವುಗಳಲ್ಲಿ ಎಷ್ಟು ಶಕ್ತಿ ಇದೆ ಎಂದು.
- ಕೆಂಪು ದಾಸವಾಳದ ಎಲೆಗಳನ್ನು ನೀರಿನಲ್ಲಿ ಚನ್ನಾಗಿ ತೊಳೆದು ಅರೆದು ತಲೆಗೆ ಹಚ್ಚಿ ಅರ್ದ ಘಂಟೆ ಬಿಟ್ಟು ಸ್ವಚ್ಛವಾದ ನೀರಿನಿಂದ ತೊಳೆಯಿರಿ. ಹೀಗೆ ಒಂದು ವಾರ ಮಾಡಿದರೆ ತಲೆ ಹೊಟ್ಟು ಮಾಯವಾಗುವುದು.
- ಮೆಂತೆಯ ಬೀಜಗಳ ಕಣಕವನ್ನು ಪ್ರಯೋಗಿಸಿ ತಲೆಕೂದಲುಗಳನ್ನು ತೊಳೆಯುವುದರಿಂದ, ತಲೆಯ ಹೊಟ್ಟು , ಕೂದಲಿನ ಉದುರುವಿಕೆ ಹಾಗೂ ತಲೆ ಬೋಳಾಗುವುದನ್ನು ತಡೆಗಟ್ಟಬಹುದಲ್ಲದೆ ಕೂದಲು ಉದ್ದವಾಗಿಯೂ ಆರೋಗ್ಯವಾಗಿಯೂ ಕಪ್ಪಾಗಿಯೂ ಉಳಿಯುತ್ತದೆ. ಅಥವಾ ಮೆಂತೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಒಂದು ತಿಂಗಳುಗಳ ಕಾಲ ನೆನೆಯಿಸಿ ಇಡಿ. ನಂತರ ಪ್ರತಿದಿನವೂ ಆ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ತಲೆ ಹೊತ್ತು ಕಡಿಮೆಯಾಗುತ್ತದೆ.
- ಕೊಬ್ಬರಿಯೆಣ್ಣೆಯಲ್ಲಿ ಮೆಂತೆಯ ಬೀಜಗಳನ್ನು ನೆನೆಯಿಸಿದರೆ ಅದು ಔಷಧೀಯ ಕೂದಲೆಣ್ಣೆಯಾಗುವುದು ಮತ್ತು ತಲೆಗೆ ತಂಪು ಕೊಡುವುದು.
ತಲೆಯ ಮೇಲಿನ ಹೊಟ್ಟು ಇದ್ದರೆ ಮತ್ತು ಕೂದಲಿನ ಉದುರುವಿಕೆಯಿದ್ದರೆ, 2 ಕೋಳಿಮೊಟ್ಟೆಗಳ ಲೋಳೆಗಳನ್ನು ಚೆನ್ನಾಗಿ ಹೊಡೆದು ಅದಕ್ಕೆ 2 ಊ.ಚ ನೀರು ಸೇರಿಸುವುದು. ತಲೆಕೂದಲನ್ನು ನೀರಿನಿಂದ ಗಲಬರಿಸಿ ಆ ಮೇಲೆ ಮೊಟ್ಟೆಯ ಮಿಶ್ರಣವನ್ನು ತಲೆಕೂದಲಿಗೆ ಪ್ರಯೋಗಿಸಿ, ತಲೆಬುರುಡೆಯನ್ನು ಅಂಗಮರ್ದನ ಮಾಡಿ 10 ನಿಮಿಷಗಳ ತನಕ ಇಡುವುದು. ಆಮೇಲೆ ಬಿಸಿ ನೀರಿನಿಂದ ಕೂದಲನ್ನು ಗಲಬರಿಸಿ ತೊಳೆಯುವುದು. - ಹುಳಿ ಮೊಸರು, ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ತಲೆಗೆ ಹಚ್ಚಿ ನಂತರ ಸ್ನಾನ ಮಾಡಬಹುದು.
- ನೆಲ್ಲಿಕಾಯಿ, ಮೆಂತ್ಯವನ್ನು ಸಹ ಬಳಸಬಹುದು. ಒಂದು ಸಲ ಔಷಧಿಯಿಂದ ಹೊಟ್ಟನ್ನು ನಿಯಂತ್ರಿಸಿದ ನಂತರ, ಇಂತಹ ಮನೆ ಮದ್ದನ್ನು ಬಳಸುವುದೇ ಒಳ್ಳೆಯದು.
- ಅಡುಗೆ ಉಪ್ಪನ್ನು ನೀರಿನಲ್ಲಿ ಕರಗಿಸಿ ಆ ದ್ರವದಿಂದ ಕೂದಲುಗಳನ್ನು ತೊಳೆದರೆ ತಲೆಬುರುಡೆಯು ಸ್ವಚ್ಛವಾಗಿ ತಲೆಯ ಮೇಲಿನ ಹೊಟ್ಟು ಮಾಯವಾಗುತ್ತದೆ. ಮತ್ತು ಕೂದಲಿನ ಉದುರುವಿಕೆಯನ್ನು ತಡೆಗಟ್ಟುತ್ತದೆ.
- ತಲೆಯ ಮೇಲಿನ ಹೊಟ್ಟನ್ನು ನಿವಾರಿಸಲಿಕ್ಕೆ : ವಾರಕ್ಕೆ ಎರಡು ಸಲ ನಿಂಬೆಹಣ್ಣಿನ ಒಂದು ಸಿಪ್ಪೆಯನ್ನು ತಲೆಬುರುಡೆಗೆ ಚೆನ್ನಾಗಿ ಉಜ್ಜಿ ಒರೆಸಿ ನಿಂಬೆರಸವನ್ನು ತಲೆಕೂದಲಿಗೆ ಪ್ರಯೋಗಿಸುವುದು. 5 ನಿಮಿಷಗಳ ನಂತರ ಸಾಬೂನು ಮತ್ತು ನೀರು ಹಾಕಿ ತೊಳೆದು ತೆಗೆಯುವುದು.
- ಸುಧಾರಿಸಲು ಕಷ್ಟಕರವಾದ ಕೂದಲು ಮತ್ತು ತಲೆಯ ಮೇಲಿನ ಹೊಟ್ಟು ಇದ್ದರೆ ಮೂರು ದಿವಸಗಳ ಮುಂಚಿನ ಹಳೆ ಮೊಸರನ್ನು ಫಿಡ್ಜ್ ನಲ್ಲಿಟ್ಟದಾಗಿರಕೂಡದು, ತಲೆ ಬುರುಡೆಗೆ ಹಾಕಿ ಅಂಗಮರ್ದನ ಮಾಡುವುದು. ಅದನ್ನು ಅರ್ದ ಘಂಟೆಯ ಕಾಲ ಹಾಗೆ ಇಟ್ಟುಕೊಂಡು ಆ ಮೇಲೆ ಸಾಬೂನು ನೀರಿನಿಂದ ತೊಳೆದು ತೆಗೆಯುವುದು.