ಬಾಳೆಕಾಯಿಯ ಕೋಫ್ತಾ ಕರಿ ಸುಪರ್

0
858

ಬಾಳೆಕಾಯಿಯ ಕೋಫ್ತಾ ಕರಿ ಸುಪರ್

ಈ ಕೋಫ್ತಾವನ್ನು ನಾನಾ ಬಗೆಯಲ್ಲಿ ತಯಾರಿಸಬಹುದು. ಮಾಂಸಾಹಾರದಿಂದ ತಯಾರಿಸಬಹುದು ಮತ್ತು ತರಕಾರಿಯಿಂದ ಕೂಡ ತಯಾರಿಸಬಹುದು. ಕೋಫ್ತಾ ಗ್ರೇವಿ ರೀತಿ ಇರುವುದರಿಂದ ಇದನ್ನು ರೊಟ್ಟಿ , ಚಪಾತಿ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇವತ್ತು ನಾವು ರುಚಿಕರವಾದ ಬಾಳೆಹಣ್ಣಿನ ಕೋಫ್ತಾ ತಯಾರಿಸುವ ವಿಧಾನ ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು:

ಸಾರು ಬಾಳೆ ಕಾಯಿ 4 ಚೆನ್ನಾಗಿ ಬೇಯಿಸಿರಬೇಕು
ಆಲೂಗೆಡ್ಡೆ 2 ಬೇಯಿಸಿದ್ದು
ಈರುಳ್ಳಿ 2 ಪೇಸ್ಟ್ ಮಾಡಿರಬೇಕು
ಬೆಳ್ಳುಳ್ಳಿ 2 ಪೇಸ್ಟ್ ಮಾಡಿರಬೇಕು
ಎರಡು ಇಂಚಿನಷ್ಟು ದೊಡ್ಡದಿರುವ ಶುಂಠಿ ( ಪೇಸ್ಟ್ ಮಾಡಿರಬೇಕು)
ಕತ್ತರಿಸಿದ ಟೊಮೆಟೊ 1
ಹಸಿ ಮೆಣಸಿನ ಕಾಯಿ 2
ಜೀರಿಗೆ 1 ಚಮಚ
ಪಲಾವ್ ಎಲೆ 1 ಅಥವಾ ಸ್ವಲ್ಪ ಕರಿಬೇವಿನ ಎಲೆ
ಕೆಂಪು ಮೆಣಸಿನ ಪುಡಿ 2 ಚಮಚ ತುಂಬಾ ಖಾರವಿರುವ ಪುಡಿಯಾದರೆ ಒಂದೂವರೆ ಚಮಚ ಸಾಕು
ಎಣ್ಣೆ
ತುಪ್ಪ 1 ಚಮಚ
ಅಕ್ಕಿ ಹಿಟ್ಟು 2 ಚಮಚ
ಗಸೆಗಸೆ
ಗೋಡಂಬಿ
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:
1. ಶುಂಠಿ, ಬೆಳ್ಳುಳ್ಳಿ, ಗಸೆಗಸೆ, ಈರುಳ್ಳಿಯನ್ನು ಹಾಕಿ ಪೇಸ್ಟ್ ಮಾಡಬೇಕು.
2. ಸಾರು ಬಾಳೆ ಕಾಯಿ ಮತ್ತು ಆಲೂಗೆಡ್ಡೆಯನ್ನು ಬೇಯಿಸಬೇಕು. ನಂತರ ಅದರ ಸಿಪ್ಪೆ ಸುಲಿದು ಚೆನ್ನಾಗಿ ಹಿಸುಕಬೇಕು. ಹೀಗೆ ಹಿಸುಕುವಾಗ ಸ್ವಲ್ಪ ಉಪ್ಪು ಮತ್ತು ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ಕಲೆಸಬೇಕು.
3. ನಂತರ ಈ ಹಿಟ್ಟಿನಿಂದ ನಿಂಬೆ ಗಾತ್ರದಲ್ಲ್ಲಿ ಉಂಡೆ ಕಟ್ಟಬೇಕು.
4. ಈಗ ಬಾಣಲೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಬೇಕು. ಎಣ್ಣೆ ಕುದಿ ಬರುವಾಗ ಉಂಡೆಯನ್ನು ಅದರಲ್ಲಿ ಹಾಕಿ ಕರಿದು ತೆಗೆಯಬೇಕು. ನಂತರ ತಯಾರಾದ ಕೋಫ್ತಾವನ್ನು ಸ್ವಲ್ಪ ಅಗಲವಾದ ಪಾತ್ರೆಯಲ್ಲಿ ಇಟ್ಟಿರಿ.
5. ಈಗ ಸಾರಿನ ಪಾತ್ರೆಯನ್ನು ಉರಿಯಲ್ಲಿಟ್ಟು ಸ್ವಲ್ಪ ತುಪ್ಪ ಹಾಕಿ ಅದಕ್ಕೆ ಪಲಾವ್ ಎಲೆ ಅಥವಾ ಕರಿಬೇವಿನ ಎಲೆ ಹಾಕಿ , ಜೀರಿಗೆಯನ್ನು ಹಾಕಿ 3 ನಿಮಿಷ ಹುರಿದು, ಈರುಳ್ಳಿ, ಬೆಳ್ಳುಳ್ಳಿ, ಶುಂಠಿಯ ಪೇಸ್ಟ್ ಹಾಕಿ 3-4 ನಿಮಿಷ ಕಾಲ ಬಿಸಿ ಮಾಡಬೇಕು.
6. ನಂತರ ಕತ್ತರಿಸಿದ, ಹಸಿಮೆಣಸಿನಕಾಯಿ, ಕತ್ತರಿಸಿದ ಟೊಮೆಟೊವನ್ನು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಬಿಸಿ ಮಾಡಬೇಕು.
7. ಈಗ ಸ್ವಲ್ಪ ಸಕ್ಕರೆ ಮತ್ತು ನೆಲ ಕಡಲೆ ಅಥವಾ ಗೋಡಂಬಿ ಹಾಕಬೇಕು.
8. ಕೆಂಪುಮೆಣಸಿನ ಪುಡಿ, ಜೀರಿಗೆ ಪುಡಿ, ಸ್ವಲ್ಪ ಅರಿಶಿಣ ಪುಡಿ, ಕೊತ್ತಂಬರಿ ಪುಡಿ ಹಾಕಿ 2-3 ನಿಮಿಷ ಬಿಸಿ ಮಾಡಬೇಕು. ನಂತರ ಒಂದು ಬಟ್ಟಲು ನೀರು ಹಾಕ ಬೇಕು. ಈ ಮಿಶ್ರಣ ಕುದಿ ಬಂದು ಗಟ್ಟಿ ಗ್ರೇವಿ ರೀತಿಯಾಗುವಾಗ ಅದಕ್ಕೆ ತಯಾರಿಸಿಟ್ಟ ಕೋಫ್ತಾ ಹಾಕಿದರೆ ಬಾಳೆಹಣ್ಣಿನ ಕೋಫ್ತಾ ರೆಡಿ.
ಇದನ್ನು ಚಪಾತಿ, ದೋಸೆ, ಪೂರಿ, ರೊಟ್ಟಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
ಸಲಹೆ: ಇದನ್ನು ಬಿಸಿಬಿಸಿಯಾಗಿ ತಿನ್ನಿ. ಇಲ್ಲದಿದ್ದರೆ ಕೋಫ್ತಾ ಗ್ರೇವಿಯನ್ನು ಹೀರಿಕೊಂಡು ಮೆತ್ತಗಾಗುವುದು.

ಸುಷ್ಮಾ ಭಟ್

LEAVE A REPLY

Please enter your comment!
Please enter your name here