ಪ್ರತಿತಿಂಗಳು ಋತುಮತಿಯಾದಾಗ ತೀವ್ರ ಹೊಟ್ಟೆನೋವು ಬರುತ್ತಿದೆಯೇ? ಇಲ್ಲಿದೆ ಪರಿಹಾರ
ಮಹಿಳೆಯರು ಪ್ರತಿ ತಿಂಗಳು ರುತುಮತಿಯಯಗುವುದು ಒಂದು ನೈಸರ್ಗಿಕ ಕ್ರಿಯೆಯಾಗಿದೆ. ಕೆಲವು ಮಹಿಳೆಯರು ಸಹಜ ಸ್ಥಿತಿಯಲ್ಲಿದ್ದರೆ ಇನ್ನು ಕೆಲವು ಮಹಿಳೆಯರು ತುಂಬಾ ನೋವನ್ನು ಅಂದರೆ ಯಮಯಾತನೆಯನ್ನು ಅನುಭವಿಸುತ್ತಾರೆ. ಅದೊಂದು ನರಕದ ಅನುಭವವೇ ಸರಿ. ತಿಂಗಳ ಆ ದಿನಗಳು ಹತ್ತಿರ ಬಂತೆಂದರೆ ಯಾಕಪ್ಪ ಬಂತು ಎಂದು ಮರುಗುವನ್ತಗುತ್ತದೆ. ವೈಧ್ಯರ ಬಳಿ ಅಲೆದು ಅಲೆದು ಸುಸ್ತಾದರೂ ಇದಕ್ಕೆ ಪರಿಹಾರ ಮಾತ್ರ ಸಿಗುವುದಿಲ್ಲ. ಎಸ್ಟೋ ಔಷಧಗಳನ್ನು ಮಾಡಿ ಮಾಡಿ ಸುಸ್ತಾಗುತ್ತಾರೆ. ಯಾವ ಔಷಧವೂ ಪರಿಣಾಮ ಬೀರುವುದಿಲ್ಲ. ಕೆಲವೊಂದು ನೋವಿನ ಮಾತ್ರೆಗಳನ್ನು ತೆಗೆದುಕೊಂಡರೆ ಅದು ತಾತ್ಕಾಲಿಕ.
ಮುಟ್ಟಿನ ನೋವು ಹೆಚ್ಚಾಗಲು ಈಗಿನ ಜೀವನ ಶೈಲಿ, ಹಾಗೂ ಆಹಾರ ಪದ್ಧತಿಗಳು ಕೂಡ ಕಾರಣವಾಗಿದೆ. ಇವು ನೋವನ್ನು ಹೆಚ್ಚು ಮಾಡುತ್ತವೆ. ಏನು ಮಾಡೋದು? ಇದಕ್ಕೆ ಇಲ್ಲಿದೆ ಅತ್ಯಂತ ಒಳ್ಳೆಯ ಉತ್ತಮವಾದ ಸುಲಭ ಉಪಾಯಗಳು. ಖಂಡಿತ ಬಿಡದೆ ಉಪಯೋಗ ಮಾಡಿ ನೋಡಿ.
ನಮ್ಮ ದೇಹದಲ್ಲಿ ಹಾರ್ಮೋನುಗಳ ಅಸಮತೋಲನದಿಂದ ಹೊಟ್ಟೆನೋವು ಬರುತ್ತವೆ. ಅದಕ್ಕೆ ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು ಅಗತ್ಯ. ಮೊಬೈಲು, ಟಿವಿ ಎಂದು ನಿದ್ದೆಗೆದಬೇಡಿ.
ಅಧಿಕ ಪ್ರಮಾಣದಲ್ಲಿ ಕಾಫೀ ಕುಡಿಯುವುದರಿಂದ ಅದರಲ್ಲಿರುವ ಕೆಫಿನ್ ಅಂಶದಿಂದಾಗಿ ಮುಟ್ಟಿನ ಅವಧಿಯಲ್ಲಿ ಹೆಚ್ಚಿನ ನೋವು ಕಾಣಿಸಿಕೊಳ್ಳುತ್ತದೆ. ಆದಷ್ಟು ಕಡಿಮೆ ಮಾಡಿ.
ಧೂಮಪಾನ ಹಾಗೂ ಮಧ್ಯಪಾನ ಆರೋಗ್ಯವನ್ನು ಹಾಳು ಮಾಡುವುದರ ಜೊತೆಗೆ ಮುಟ್ಟಿನ ಮೇಲೂ ಪರಿಣಾಮ ಬೀರುತ್ತದೆ.
ಸಕ್ಕರೆ ಹಾಗೂ ಉಪ್ಪನ್ನು ಅಧಿಕವಾಗಿ ಸೇವಿಸುವುದರಿಂದ ನೋವು ಹೆಚ್ಚಾಗುತ್ತದೆ. ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸೇವಿಸಿ.
ಶುಂಠಿ ನೀರಿನ ಸೇವನೆ: ಒಂದು ಇಂಚಿನಷ್ಟು ಹಸಿಶುಂಠಿಯನ್ನು ತೆಗೆದುಕೊಂಡು ಸ್ವಲ್ಪ ಜಜ್ಜಿ ಒಂದು ಲೋಟ ನೀರಿಗೆ ಹಾಕಿ ಸಣ್ಣ ಉರಿಯಲ್ಲಿ ಹತ್ತು ನಿಮಿಷ ಕುದಿಸಿ. ಬಳಿಕ ಈ ನೀರನ್ನು ಸೋಸಿ. ಒಂದು ಕಪ್ ನಷ್ಟು ಬಿಸಿ ಬಿಸಿಯಾಗಿ ಈ ಶುಂಠಿ ನೀರನು ಕುಡಿಯಿರಿ. ದಿನಕ್ಕೆ ಎರದು ಬಾರಿ ಈ ನೀರನ್ನು ಸೇವಿಸುವುದರಿಂದ ಹೊಟ್ಟೆನೋವು ನಿವಾರಣೆಯಾಗುತ್ತದೆ.
ಜೀರಿಗೆ ನೀರು: ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆಯನ್ನು ಜಜ್ಜಿ ಹಾಕಿ ಕುದಿಸಿ. ಬಳಿಕ ತಣ್ಣಗಾದ ಮೇಲೆ ಒಂದು ಕಪ್ ನಷ್ಟು ಜೀರಿಗೆ ನೀರನ್ನು ಸೇವಿಸಿ. ಹೀಗೆ ಮಾಡುವುದರಿಂದ ಆದಿನಗಳಲ್ಲಿನ ಸೆಳೆತ, ಆಯಾಸ ಕಡಿಮೆಯಾಗುತ್ತದೆ.
ಕ್ಯಾರೆಟ್ ಜ್ಯೂಸ್: ಒಂದು ಗ್ಲ್ಯಾಸ್ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಋತುಚಕ್ರದ ಸಮಯದ ನೋವು ನಿವಾರಣೆಯಾಗುತ್ತದೆ. ಅಲ್ಲದೇ ಋತುಚಕ್ರದ ಸಮಯದಲ್ಲಿ ರಕ್ತದ ಹರಿವು ಸುಲಭವಾಗಿ ಆಗುವಂತೆ ಮಾಡುತ್ತದೆ.
ಸಿಹಿಗುಂಬಳ: ನೈಸರ್ಗಿಕವಾಗಿ ದೊರಕುವ ಮನೆಮದ್ದುಗಳಲ್ಲಿ ಸಿಹಿಗುಂಬಳ ಕೂಡ ಒಂದು. ಸಿಹಿಗುಂಬಳ ಕಾಯಿಯ ತಿರುಳನ್ನು ತೆಗೆದುಕೊಂಡು ರೂಮ್ ಟೆಂಪರೇಚರ್ ನಲ್ಲಿ ಸ್ವಲ್ಪ ಒಣಗಲು ಬಿಡಿ. ನಂತರ ಅದನ್ನು ಮಿಕ್ಸಿ ಮಾಡಿ, ಸಕ್ಕರೆ ಇಲ್ಲವೇ ಬೆಲ್ಲ ಮತ್ತು ಹಾಲು ಅಥವಾ ಸಕ್ಕರೆ ಮತ್ತು ಮೊಸರು ಸೇರಿಸಿ ಪ್ರತಿದಿನ ಸೇವಿಸುವುದರಿಂದ ಋತುಚಕ್ರದ ಸಂದರ್ಬದಲ್ಲಿ ಅತಿಯಾದ ರಕ್ತಸ್ರಾವದಿಂದ ಆಗುವ ಹೊಟ್ಟೆನೋವು, ಸುಸ್ತನ್ನು ನಿವಾರಿಸಬಹುದು.
ಒಂದು ಲೋಟ ಬಿಸಿಹಾಲಿಗೆ ಅರಿಶಿನ ಪುಡಿಯನ್ನು ಹಾಕಿ ಕುಡಿಯುವುದರಿಂದ ನೋವು ಶಮನವಾಗುವುದು.
ಲೋಳೆರಸಕ್ಕೆ ಸ್ವಲ್ಪ ಮೊಸರನ್ನು ಹಾಕಿ ಕಲಸಿ. ನಂತರ ಆಗಾಗ ತಿನ್ನುತ್ತಾ ಇರಿ. ನೋವು ಕಡಿಮೆಯಾಗುತ್ತದೆ.
ವಿಷೇಶ ಸೂಚನೆ: ಒಂದು ಹತ್ತರಿಂದ ಹದಿನೈದು ಸಾಂಭಾರ್ ಸೊಪ್ಪು ಅಥವಾ ದೊಡ್ಡಪತ್ರೆ ಎಲೆಗಳನ್ನು ಚನ್ನಾಗಿ ತೊಳೆದು ಜಜ್ಜಿ ಅದರ ರಸವನ್ನು ತೆಗೆದು ಸ್ವಲ್ಪ ಮೊಸರಿನ ಜೊತೆಗೆ ಕಲಸಿ ತಿನ್ನುವುದರಿಂದ ಕೇವಲ ಹದಿನೈದು ನಿಮಿಷಗಳ ಒಳಗೆ ನೋವು ಮಾಯವಾಗುತ್ತದೆ. ದಿನಕ್ಕೆ ಎರಡು ಸಲ ಹೀಗೆ ತಿನ್ನಬೇಕು.
ಬೇಕರಿ ತಿಂಡಿ ತಿನಿಸುಗಳು, ಕರಿದ ಪಧಾರ್ಥಗಳು, ಪಿಜ್ಜ್ಹಾ ಬರ್ಗರ್, ಕೋಲ್ಡ್ ಡ್ರಿಂಕ್ಸ್ ಗಳನ್ನು ಎಷ್ಟು ಸಾಧ್ಯವೋ ಅಸ್ಷ್ಟು ಕಡಿಮೆ ಮಾಡಿ. ಪೂರ್ತಿಯಾಗಿ ಬಿಟ್ಟರೆ ಉತ್ತಮ. ಹೀಗೆ ಮಾಡಿದರೆ ಖಂಡಿತ ನಿಮ್ಮ ಹೊಟ್ಟೆನೋವಿನ ಸಮಸ್ಸ್ಯೆ ಕಡಿಮೆ ಆಗುತ್ತದೆ.