ವಯಸ್ಸು ಇನ್ನು ಕಡಿಮೆ ಆದರು ಬಿಳಿ ಕೂದಲು ಬರ್ತಿದ್ಯ ಹಾಗಾದ್ರೆ ಇಷ್ಟು ಮಾಡಿ ಸಾಕು
ಸೌಂದರ್ಯದ ವಿಷಯ ಬಂದರೆ ವಿವಿಧ ರೀತಿಯ ಕೇಶ ವಿನ್ಯಾಸ ಮುಖ್ಯವಾಗುತ್ತದೆ. ಹಾಗೆಯೇ ಕೂದಲ ಆರೈಕೆಯ ಜೊತೆಗೆ ದಟ್ಟವಾದ ಕಪ್ಪು ಕೂದಲು ಎಲ್ಲರನ್ನೂ ಆಕರ್ಷಿಸುತ್ತದೆ. ಅಂದವಾದ ಕಪ್ಪು ಕೂದಲು ತಮ್ಮದಾಗಬೇಕೆಂದು ಸಾಕಷ್ಟು ಜನರು ಬಯಸುವುದನ್ನು ನಾವೆಲ್ಲಾ ಕಾಣುತ್ತಿರುತ್ತೇವೆ. ಆದರೆ ಇತ್ತೀಚಿನ ಒತ್ತಡದ ಜೀವನ ಶೈಲಿ, ಬದುಕಿನ ಜಂಜಾಟಗಳಲ್ಲಿ ಕೂದಲು ಬಿಳಿಯಾಗುವುದು ಕೂಡ ಒಂದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ನೆರೆತ ಕೂದಲಿನಿಂದ ಮರೆಮಾಚಿಕೊಳ್ಳಲು ರಾಸಾಯನಿಕ ವಸ್ತುಗಳ ಮೊರೆ ಹೋಗುತ್ತಿರುವುದನ್ನು ಕಾಣಬಹುದು. ಸಾಕಷ್ಟು ಸಣ್ಣ ವಯಸ್ಸಿನ ಜನರು ಈಗ ಬೆಳ್ಳಿ ಕೂದಲಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಅನಿಯಮಿತ ಜೀವನ ಶೈಲಿ ಮತ್ತಿತರ ಕಾರಣಗಳಿಂದ ಅಕಾಲಿಕ ನೆರೆಕೂದಲು ಒಂದು ದೊಡ್ಡ ಸಮಸ್ಯೆಯಾಗಿದೆ. ತಾರುಣ್ಯದಲ್ಲೇ ಕೂದಲು ನೆರೆದಿರುವ ಸಮಸ್ಯೆ ಈಗ ಭಾರತದಲ್ಲೂ ಕೂಡ ಕಾಣಿಸಿಕೊಳ್ಳುತ್ತಿದೆ. ತಜ್ಞರು ಈ ತೊಂದರೆಗೆ ಕಾರಣಗಳನ್ನು ಹುಡುಕಿದ್ದಾರೆ. ಅದರ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ. ನೈಸರ್ಗಿಕ ಮನೆ ಮದ್ದಿನಿಂದ ಕೂದಲು ಕಪ್ಪಾಗಿ ಮಾಡಬಹುದು, ಮುಖ್ಯವಾಗಿ ಶಂಪು ಬಳಕೆ ಕಡಿಮೆ ಮಾಡ್ಬೇಕು. ಸಾಧ್ಯ ಆದ್ರೆ ಸಂಪೂರ್ಣವಾಗಿ ನಿಲ್ಲಿಸಿದರು ಒಳ್ಳೇದು.
ಒಂದು ಹಿಡಿ ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನಸಿಡಿ. ನೀರಿನಿಂದ ತೆಗೆದ ಬಳಿಕ ಬಿಸಿಲಿನಲ್ಲಿ ಅದು ಕಂದು ಬಣ್ಣಕ್ಕೆ ಬರುವ ತನಕ ಮತ್ತು ಗರಿಗರಿ ಆಗುವ ತನಕ ಒಣಗಿಸಿ. ಒಣಗಿದ ಎಲೆಗಳನ್ನು ಸರಿಯಾಗಿ ಪುಡಿ ಮಾಡಿಕೊಳ್ಳಿ. ಪಾತ್ರೆಯಲ್ಲಿತೆಂಗಿನ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಅದಕ್ಕೆ ನಾಲ್ಕು ಚಮಚ ಕರಿಬೇವಿನ ಪುಡಿಯನ್ನು ಹಾಕಿ. ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಕುದಿಯಲಿ. ಎಣ್ಣೆಯನ್ನು ತಣ್ಣಗಾಗಲು ಬಿಟ್ಟು ನಂತರ ಇದನ್ನು ಒಂದು ಬಾಟಲಿಗೆ ಹಾಕಿ ಗಟ್ಟಿಯಾಗಿ ಮುಚ್ಚಳ ಮುಚ್ಚಿಡಿ. ಇದನ್ನು ಬೇಕಾದಾಗ ತೆಗೆದು ಬಳಸಿಕೊಳ್ಳಿ. ಇದನ್ನು ಒಂದು ವಾರ ಕಾಲ ಬಳಸಿದಾಗ ಕೂದಲು ಕಪ್ಪಗಾಗುತ್ತದೆ.
ಅಂಗಡಿಯಲ್ಲಿ ಸಿಗುವ ಕೆಮಿಕಲ್ ಮಿಶ್ರಿತ ಶಾಂಪೂ ನಿಮ್ಮ ಕೂದಲನ್ನು ಹೆಚ್ಚು ಹೆಚ್ಚು ಆಳು ಮಾಡುತ್ತೆ ಯಾವಾಗಲು ಸೀಗೆ ಪುಡಿ ಮತ್ತು ಚಿಗರೆ ಪುಡಿ ಉಪಯೋಗ ಮಾಡಿದ್ರೆ ನಿಮ್ಮ ಕೂದಲು ಹೆಚ್ಚಿನ ಹೊಳಪಿನಿಂದ ಕೊಡುತ್ತೆ. ನೀವು ಎಷ್ಟೇ ಬಾರಿ ಸೀಗೆ ಪುಡಿ ಮತ್ತು ಚಿಗರೆ ಪುಡಿ ಬಳಕೆ ಮಾಡಿದ್ರು ನಿಮ್ಮ ಕೂದಲಿಗೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ. ನಮ್ಮ ವೆಬ್ಸೈಟ್ ನಲ್ಲಿ ಇರುವ ಎಲ್ಲ ಮಾಹಿತಿಗಳಿಗೆ ಕಾಪಿ ರೈಟ್ಸ್ ಹೊಂದಿದ್ದು ನಮ್ಮ ಅನುಮತಿ ಇಲ್ಲದೆ ಮಾಹಿತಿ ನಕಲು ಮಾಡುವುದು ಅಥವ ಚಿತ್ರಗಳನ್ನು ದುರ್ಬಲಿಕೆ ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ಮಾಹಿತಿ ಶೇರ್ ಮಾಡಿ ನಿಮ್ಮ ಸ್ನೇಹಿತರಿಗೂ ಜಾಗ್ರತೆ ಮೂಡಿಸಿ.