ನಿಮಗೆ ಜೀವನದಲ್ಲಿ ಯಶಸ್ಸು ಬೇಕು ಅಂದ್ರೆ ಈ ಮಾಹಿತಿ ಓದಿ

0
1130

ನಿಮ್ಮ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ಹೇಗೆ? ಇದನ್ನು ಓದಿ.

ಸಹಜವಾಗಿ ಮನುಷ್ಯ ತನ್ನ ಜೀವನವನ್ನು ಸುಖಮಯವಾಗಿ ಕಳೆಯಲು ಇಚ್ಚಿಸುತ್ತಾನೆ, ಇದು ಅವನ ಸ್ವಾಭಾವಿಕ ಗುಣವು ಹೌದು. ಆದರೆ ತಾನು ಬದುಕಿನಾದ್ಯಂತ ನಡೆದು ಬಂದ ದಾರಿಯನ್ನು ಒಮ್ಮೆ ನೆನೆಸಿಕೊಂಡಾಗ ತನ್ನ ಕಾರ್ಯದ ಮೇಲೆ ಮರಗುವದು ಮಾನವನ ಹುಟ್ಟು ಗುಣ. ದಿನದಲ್ಲಿ ಇನ್ನೊಂದೆರೆಡು ಗಂಟೆ ಜಾಸ್ತಿ ಸಿಕ್ಬೇಕಿತ್ತು. ಎಲ್ಲ ಕೆಲ್ಸ ಮಾಡಿ ಮುಗಿಸ್ತಿದ್ದೆ, ಹೀಗೆ ಹಲುಬುವ ಹಲವರನ್ನು ನಾವು ನೀವು ನೋಡಿಯೇ ಇರುತ್ತೇವೆ. ಇರುವ ೨೪ ಗಂಟೆಯನ್ನು ಸದುಪಯೋಗ ಪಡಿಸಿಕೊಳ್ಳುವ ವಿಧಾನ ತಿಳಿಯದೇ ಅವರು ಒದಾಡುತ್ತಿರುತ್ತಾರೆ. ಸಮಯ ನಿರ್ವಹಣೆ ಒಂದು ಕಲೆ. ಸಮಯವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಪಳಗಿಸಿಕೊಳ್ಳಬೇಕು.

ಮೊದಲು ಮಾಡಬೇಕಾದ ಕೆಲಸ:ಒಂದು ಸಲ ದಿನದ ಎಲ್ಲ ಕೆಲಸಗಳನ್ನು ಗುರುತು ಹಾಕಿಕೊಂಡ ನಂತರ ನಿರ್ಧರಿಸಿ. ತಕ್ಷಣ ಮಾಡಬೇಕಾದ ಕೆಲಸ, ಇಂದೇ ಮಾಡಬೇಕಾದ ಕೆಲಸ, ರಾತ್ರಿಯೊಳಗೆ ಮುಗಿಸಬೇಕಾದ ಕೆಲಸ, ನಾಳೆ ಮಾಡಿದರೂ ಪರವಾಗಿಲ್ಲ ಎನ್ನುವ ಕೆಲಸಗಳಿಗೆ ಪ್ರತ್ಯೇಕವಾಗಿ ಗುರುತು ಮಾಡಿಟ್ಟುಕೊಳ್ಳಿ.

ನೆನಪಿನ ಪಟ್ಟಿ ಜೊತೆಗಿರಲಿ:ಸದಾಕಾಲವೂ ನೆನಪಿನ ಪುಸ್ತಕ ಹಾಗೂ ಒಂದು ಪೆನ್ ಇಟ್ಟುಕೊಳ್ಳುವುದನ್ನು ರೂಢಿ ಮಾಡಿಕೊಳ್ಳಿ. ಎಲ್ಲವನ್ನೂ ನೆನಪಿನ ಶಕ್ತಿಗೇ ಹೊರಿಸುವುದು ದೊಡ್ಡ ತಪ್ಪು. ಮಾಹಿತಿಯ ಮಹಾಪೂರದಿಂದ ಮಿದುಳು ಕೆಲವು ಸಂಗತಿಗಳನ್ನು ಸಮಯಕ್ಕೆ ಸರಿಯಾಗಿ ನೆನಪಿಸುವುದಿಲ್ಲ. ನೆನಪಾದಾಗ ಅದನ್ನು ಗುರುತು ಮಾಡಿಕೊಳ್ಳಿ.

ಯೋಚಿಸಿ ಕೆಲಸ ಮಾಡಿ:ಕೆಲಸ ಮಾಡಿದ ನಂತರ ಯೋಚಿಸುವುದು ಒಂದು ರೀತಿ. ಯೋಚಿಸಿ ಕೆಲಸ ಮಾಡುವುದು ಮತ್ತೊಂದು ರೀತಿ. ಜೀವನದಲ್ಲಿ ಎಷ್ಟು ಸಲ ನಾವು ಈ ಬೇಡದ ಕೆಲಸಕ್ಕಾಗಿ ಎಷ್ಟು ಟೈಂ ವೇಸ್ಟ್ ಮಾಡಿದೆ ಎಂದುಕೊಳ್ಳುತ್ತೇವೆ. ಕೆಲಸ ಪ್ರಾರಂಭಿಸುವ ಮೊದಲು ಒಂದು ಕ್ಷಣ ಯೋಚಿಸಿದ್ದರೆ ಹಲವು ಗಂಟೆಗಳು ಉಳಿಯುತ್ತಿದ್ದವು.

ಸತತ ಬದಲಾವಣೆ ಅಗತ್ಯ:ವೇಗವಾಗಿ ಕೆಲಸ ಮಾಡುವುದನ್ನು ಸತತವಾಗಿ ಕಲಿಯಬೇಕು. ಯಾವುದೇ ಕೆಲಸದಲ್ಲಿ ನಾವು ಪಳಗಿದಂತೆ ಕೆಲಸ ಮಾಡುವ ವೇಗ ಹೆಚ್ಚಾಗಲೇಬೇಕು. ಈ ನಿಟ್ಟಿನಲ್ಲಿ ಸತತ ಪ್ರಯತ್ನ ಅಗತ್ಯ.

ಮೌಲ್ಯಮಾಪನ:ನಿಮ್ಮ ಬದುಕಿನ ೨೪ ಗಂಟೆ ಹೇಗೆ ಕಳೆಯುತ್ತಿದೆ ಎಂಬ ಬಗ್ಗೆ ಆಗಾಗ ಪರಿಶೀಲಿಸುವುದು ಅಗತ್ಯ. ನಿಮ್ಮ ದಿನಚರಿಯಲ್ಲಿ ಬೇಡದ ಸಂಗತಿಗಳ್ದಿದರೆ ಅದನ್ನು ಗುರುತಿಸಿ ತೆಗೆದುಹಾಕಿ ಸಮಯ ಉಳಿಸಲು ಇದು ಸಹಾಯ ಮಾಡುತ್ತದೆ.

ಚಟ ಬಿಡಿ:ನಿಮ್ಮ ಸಮಯ ಅಮೂಲ್ಯ. ಕುಡಿತ, ಧೂಮಪಾನ, ಚಾಡಿ ಹೇಳುವುದು, ಅಶ್ಲೀಲ ಚಿತ್ರಗಳನ್ನು ನೋಡುವುದು ಮೊದಲಾದ ದುರಭ್ಯಾಸಗಳನ್ನು ನೀವೇ ಗುರುತಿಸಿಕೊಳ್ಳಿ. ಒಂದು ದಿನದ್ಲಲಿ ಇವಕ್ಕೆ ಸರಾಸರಿ ಎಷ್ಟು ಸಮಯ ವ್ಯಯವಾಗುತ್ತಿದೆ ಲೆಕ್ಕಾಹಾಕಿ. ದೃಢ ನಿರ್ಧಾರದಿಂದ, ಅಗತ್ಯ ಬ್ದಿದರೆ ಹಿರಿಯ ಸಲಹೆಯಿಂದ ಇವನ್ನು ಗ್ಲೆಲಲು ಯತ್ನಿಸಿ. ಕೆಟ್ಟ ಚಟಗಳನ್ನು ಬಿಟ್ಟುಬಿಡಿ.

ಇನ್ನೊಬ್ಬರ ಕೆಲಸ ಬೇಡ:ನಾನೊಬ್ಬ ಹೀರೋ ಆಗಬೇಕು ಎಂಬ ಭ್ರಮೆಯಿಂದ ಇನ್ನೊಬ್ಬರ ಕೆಲಸ ಮಾಡುವುದನ್ನು ಕೆಲವರು ರೂಢಿಸಿಕೊಳ್ಳುತ್ತಾರೆ. ಈ ಜಗತ್ತಿನ್ಲಲಿ ಅವರವರ ಕೆಲಸ ಅವರವರೇ ಮಾಡಬೇಕು. ನೀವು ಬೇಕಾದರೆ ಇನ್ನೊಬ್ಬರಿಗೆ ಸಹಾಯ ಮಾತ್ರ ಮಾಡಬಹುದು. ಆದರೆ ಅವರ ಹೊಣೆಯನ್ನು ನಿಮ್ಮ ಹೆಗಲಿಗೆ ಹೊತ್ತುಕೊಳ್ಳಬೇಡಿ. ಇನ್ನೊಬ್ಬರ ಕೆಲಸಗಳನ್ನೇ ಮಾಡುತ್ತ್ದಿದರೆ ನಿಮ್ಮ ಕೆಲಸಗಳಿಗೆ ಸಮಯ ಉಳಿಯುವುದಿಲ್ಲ.

ಭವಿಷ್ಯದ ಪುಟಗಳು:೧೦ ವರ್ಷದ ನಂತರ ನಿಮ್ಮ ಬದುಕು ಹೇಗಿರಬೇಕು? ೨೦ ವರ್ಷದ ನಂತರ ಹೇಗಾಗಬೇಕು? ಎಂಬ ಬಗ್ಗೆ ನಿಮ್ಮದೇ ಆದ ಕನಸುಗಳಿರಲಿ. ಕನಸುಗಳನ್ನು ಬರೆದಿಟ್ಟುಕೊಂಡು ಅವುಗಳತ್ತ ಮುನ್ನುಗ್ಗಲು ಯತ್ನಿಸಿ. ಪ್ರತಿ ಮುಂಜಾನೆ ನಿಮ್ಮ ಕನಸಿನ ಹಾದಿಯ್ಲಲಿ ಎಷ್ಟು ದೂರ ಕ್ರಮಿಸ್ದಿದೀರಿ ಎಂಬುದನ್ನು ಪರಿಶೀಲಿಸಿ. ನಿಮಗೆ ಗೊತ್ತ್ತಿಲ್ಲದೇ ನಿಮ್ಮ ದಿನಚರಿ ಬದಲಾಗುತ್ತೆ.

ಬೇಡದ ಕೆಲಸಗಳು:ಚೆನ್ನಾಗಿ ಮಾಡಲು ಬರುತ್ತದೆ ಎಂಬ ಒಂದೇ ಕಾರಣಕ್ಕೆ ಬೇಡದ ಕೆಲಸಗಳನ್ನು ಮಾಡುವುದು ಎಷ್ಟು ಸರಿ? ಚೆನ್ನಾಗಿ ಕಸಗುಡಿಸಲು ಬರುತ್ತದೆ ಎಂದು ಬೀದಿಯೆಲ್ಲಾ ಕಸ ಗುಡಿಸಲು ಸಾಧ್ಯವೇ? ಬೇಡದ ಕೆಲಸಗಳನ್ನು ಮಾಡುತ್ತಾ ಕಾಲಹರಣ ಮಾಡಬೇಡಿ. ಸಮಯವನ್ನು ಸರಿಯಾಗಿ ಒಳ್ಳೆಯ ಕೆಲಸಗಳಿಗಾಗಿ ಉಪಯೋಗಿಸಿ.

LEAVE A REPLY

Please enter your comment!
Please enter your name here