ಕಿಡ್ನಿ ಸ್ಟೋನ್ ಇದ್ದರೆ ಹೀಗೆ ಮಾಡಿ. ಇಲ್ಲವಾದರೆ ಮಾಹಿತಿ ಓದಿ ಜಾಗೃತರಾಗಿ

1
882

ಮಧುಮೇಹ, ಕುಡಿತ, ಡ್ರಗ್ಸ್, ಬೀಪಿ, ಧೂಮಪಾನ, ಡಿಹೈಡ್ರೆಶನ್,ಮುಂತಾದ ಖಾಯಿಲೆಯಿಂದ ನರಳುತ್ತಿದ್ದರೆ, ದೇಹಕ್ಕೆ ಅಗತ್ಯವಿದ್ದಷ್ಟು ನೀರನ್ನು ಕುಡಿಯದಿದ್ದರೆ, ರಕ್ತದ ಚಲನೆಯಲ್ಲಿ ಏರುಪೇರು ಆಗುತ್ತಿದ್ದರೆ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಮೂತ್ರಕೋಶ ಹಾಗೂ ಲವಣಾಂಶಗಳಲ್ಲಿ ಏರುಪೆರಾದಾಗ ಮೂತ್ರದಲ್ಲಿ ಹರಳುಗಳು ಉತ್ಪತ್ತಿಯಾಗುತ್ತವೆ.ಕ್ಯಾಲ್ಸಿಯಂ ಮತ್ತು ಯೂರಿಕ್ ಏಸಿಡ್ ನ ಹರಳುಗಳನ್ನು ಕರಗಿಸುವ ದ್ರವ ಕಡಿಮೆಯಿದ್ದಾಗ ಅವು ಅಂಟಿಕೊಳ್ಳಲು ಪ್ರಾರಂಭವಾಗಿ ಗಂತುಗಳಾಗಿ ಪರಿವರ್ತನೆ ಆಗುತ್ತದೆ. ಅಲ್ಲದೇ ಕೆಲವು ಸತತ ಔಷಧ ಸೇವನೆಗಳಿಂದಲೂ ಕಲ್ಲುಗಳು ಉಂಟಾಗುತ್ತದೆ.

ಕಿಡ್ನಿಯಲ್ಲಿ ಕಲ್ಲುಗಳು ಇದ್ದಾಗ ಕಂಡು ಬರುವ ಲಕ್ಷಣಗಳು

 1. ಆಗಾಗ ಮೂತ್ರ ಮಾಡಬೇಕೆನಿಸುವುದು.
 2. ವಾಕರಿಕೆ ಮತ್ತು ವಾಂತಿ ಬರುವಂತಾಗುವುದು. ಕೆಲವೊಮ್ಮೆ ವಾಂತಿ ಆಗುವ ಸಂಭವಗಳೂ ಇರುತ್ತವೆ.
 3. ಮೂತ್ರ ವಿಸರ್ಜನೆಯ ಸಮಯದಲ್ಲಿ ವಿಪರೀತ ನೋವು ಕಾಣಿಸುವುದು.
 4. ಕೆಲವು ಬಾರಿ ಮೂತ್ರವು ದುರ್ವಾಸನೆಯಿಂದ ಕೂಡಿರುವುದು
 5. ನೋವಿನಲ್ಲಿ ಏರುಪೇರುಗಳಾಗುವುದು. ಕೆಲವೊಮ್ಮೆ ನೋವು 20 ನಿಮಿಷದಿಂದ ಒಂದು ಗಂಟೆಯವರೆಗೂ ಕಾಡಬಹುದು.
 6. ಸೋಂಕಿದ್ದಾಗ ಆಗಾಗ ಜ್ವರ ಮತ್ತು ಕೈ-ಕಾಲುಗಳಲ್ಲಿ ನಡುಕ ಉಂಟಾಗುವುದು.
 7. ಇದಕ್ಕಿದ್ದಂತೆ ಬೆನ್ನಿನಿಂದ ಪ್ರಾರಂಭವಾಗಿ ಮುಂಭಾಗಕ್ಕೆ ಬರುವ ನೋವು ಅಂದರೆ ಪಕ್ಕೆಲುಬುಗಳು, ಬೆನ್ನಿನ, ಎದೆ ಮೂಳೆಗಳ ಕೆಳಭಾಗದಲ್ಲಿ ನೋವು ಉಂಟಾಗುವುದು.
 8. ಮೂತ್ರದಲ್ಲಿ ರಕ್ತ ಅಥವಾ ಇತರೆ ಯಾವುದೇ ರೀತಿಯ ತೊಂದರೆಗಳು ಕಂಡಾಗ ಎಕ್ಸ್‌ರೇ ಮಾಡಿಸಿದಾಗ ಇವು ಕಾಣಿಸುತ್ತವೆ.
 9. ದೇಹದಲ್ಲಿ ಕಿಡ್ನಿ ಫಿಲ್ಟರ್ ನಂತೆ ಕೆಲಸ ಮಾಡುತ್ತೆ. ಆದರೆ ಕಿಡ್ನಿಗಳಿಗಾಗಿ ನೀವ ಕಾಡುವ ಕಿಡ್ನಿ ಸಮಸ್ಯೆ ನಿಮ್ಮನ್ನು ಒತ್ತಡಕ್ಕೀಡುಮಾಡಬಹುದು.

ಕಿಡ್ನಿಯಲ್ಲಿ ಕಲ್ಲುಗಳು ಉತ್ಪತ್ತಿಯಾದಾಗ ಏನೇನು ಮಾಡಬೇಕು?

 1. ಬೀಡಿ, ಸಿಗರೇಟು, ಮದ್ಯಪಾನವನ್ನು ಬಿಟ್ಟುಬಿಡಿ.
 2. ಸೋಡಾ ಮತ್ತು ತಂಪು ಪಾನೀಯದ ಅತಿಯಾದ ಸೇವನೆ ಕಿಡ್ನಿಗೆ ಹಾನಿಕಾರಕ. ಗಾಢವಾದ ಸೋಡಾದಲ್ಲಿನ ಆಸಿಡ್ ಮತ್ತು ಮಿನರಲ್ ಗಳು ಕಿಡ್ನಿಗೆ ತೊಂದರೆ ನೀಡುತ್ತದೆ. ಪಾನೀಯದಲ್ಲಿರುವ ಫಾಸ್ಫಾರಿಕ್ ಆಸಿಡ್, ಮೂಳೆಗಳಲ್ಲಿರುವ ಕ್ಯಾಲ್ಸಿಯಂ ಹೀರಿಕೊಂಡು, ಕಿಡ್ನಿಯಲ್ಲಿ ಕಲ್ಲುಗಳಾಗಿ ಮಾರ್ಪಾಡಾಗುತ್ತದೆ.
 3. ದಿನಂಪ್ರತಿ 7 ರಿಂದ 8 ಲೀಟರ್‌ನಷ್ಟು ನೀರು ಕುಡಿಯಿರಿ.
 4. ಸಾತ್ವಿಕ ಆಹಾರವನ್ನೇ ಸೇವಿಸಿ, ಹಸಿರು ತರಕಾರಿಗಳನ್ನು ಹೆಚ್ಚಾಗಿ ತಿನ್ನಿ.
 5. ಅಡುಗೆಯಲ್ಲಿ ಬೆಳ್ಳುಳ್ಳಿಯನ್ನು ಬಳಸಿ, ಸಕ್ಕರೆ ಮತ್ತು ಉಪ್ಪಿನ ಪ್ರಮಾಣ ಸೇವನೆ ಕಡಿಮೆ ಮಾಡಿ, ಕರಿದ ಹಾಗೂ ಮಸಾಲೆ ಪದಾರ್ಥಗಳನ್ನು ತ್ಯಜಿಸಿ.
 6. ನಿಯಮಿತ ವ್ಯಾಯಾಮ ಜೀವನದ ಅಂಗವಾಗಲಿ, ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಪೀಡಿತರು ಆಗಾಗ್ಗೆ ರಕ್ತ, ಮೂತ್ರದಲ್ಲಿನ ಸಕ್ಕರೆ ಪ್ರಮಾಣವನ್ನು ಪರಿಶೀಲಿಸಿಕೊಳ್ಳಿ.
 7. ಮಜ್ಜಿಗೆ, ತಾಜಾ ಮೊಸರು, ಆಕಳ ಹಾಲು, ಪಪ್ಪಾಯಿ, ಸೇಬು, ಸಿಹಿ ಮಾವಿನಹಣ್ಣು, ಬಾಳೆಹಣ್ಣು, ನುಗ್ಗೆಕಾಯಿ, ಹುರುಳಿಕಾಯಿ, ಪರಂಗಿ ಕಾಯಿ, ಕ್ಯಾರೆಟ್, ಎಳನೀರು, ಬಾರ‌್ಲಿ ನೀರು ಹೆಚ್ಚು ಬಳಸಿ.
 8. ಬಟಾಣಿ, ಉದ್ದಿನ ಬೇಳೆ, ಆಲೂಗಡ್ಡೆ, ಎಲೆಕೋಸು, ಬಸಲೆ, ಲವಣ, ಬದನೆಕಾಯಿ, ಹುಳಿ ಮೊಸರು, ಕೆಂಪು ಮತ್ತು ಹಸಿರು ಮೆಣಸಿನಕಾಯಿ, ಹುಳಿ ಪದಾರ್ಥಗಳು, ಮಾಂಸ ಮತ್ತು ಮದ್ಯದಿಂದ ಸಾಧ್ಯವಾದಷ್ಟು ದೂರವಿರಿ.
 9. ಬ್ಲ್ಯಾಕ್ ಬೀನ್ಸ್ ಕಿಡ್ನಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಾರದಲ್ಲಿ ಎರಡು ಬಾರಿಯಾದರೂ ಬ್ಲ್ಯಾಕ್ ಬೀನ್ಸ್ ತಿನ್ನಬೇಕು. ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸಲು ಬ್ಲ್ಯಾಕ್ ಬೀನ್ಸ್ ಹೆಚ್ಚಾಗಿ ತಿನ್ನುವುದು ಒಳ್ಳೆಯದು.
 10. ಮೂತ್ರ ವಿಸರ್ಜನೆಗೆ 2-3 ಗಂಟೆಗಳಗೊಮ್ಮೆ ಹೋಗಿ. ಮೂತ್ರ ಬಂದರೆ ತಡೆ ಹಿಡಿಯುವ ಪ್ರಯತ್ನ ಮಾಡಬೇಡಿ. ಮೂತ್ರವನ್ನು ತಡೆ ಹಿಡಿಯುವುದರಿಂದ ಕಿಡ್ನಿ ಸ್ಟೋನ್ಸ್ ಬರಬಹುದು.
 11. ಆಂಟಿ ಆಕ್ಸಿಡೆಂಟ್ ಗಳು ಅಧಿಕವಿರುವ ಹಣ್ಣು-ತರಕಾರಿಗಳನ್ನು ತಿನ್ನಿ. ಸಿಟ್ರಸ್ ಮತ್ತು ಬೆರ್ರಿ ಹಣ್ಣುಗಳಲ್ಲಿ ಈ ಅಂಶ ಅಧಿಕವಿರುತ್ತದೆ.
 12. ಕೊತ್ತಂಬರಿ ಸೊಪ್ಪು ಕಣ್ಣಿಗೆ ಮತ್ತು ಕಿಡ್ನಿಗೆ ತುಂಬಾ ಒಳ್ಳೆಯದು. ಇದು ಕಿಡ್ನಿಯಲ್ಲಿರುವ ಕಲ್ಮಶವನ್ನು ಹೊರಹಾಕಿ ಕಿಡ್ನಿಯನ್ನು ಶುದ್ಧ ಮಾಡುತ್ತದೆ.
 13. ಬಾಳೆಹೂ ಅಥವಾ ಬಾಳೆದಿಂಡಿನ ಪಲ್ಯ ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸುವಲ್ಲಿ ತುಂಬಾ ಪರಿಣಾಮಕಾರಿ.
 14. ಪ್ರತಿದಿನ ಎರಡು ಲೀಟರ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಮೂತ್ರ ಹೋಗುವಂತೆ ದ್ರವ ಪದಾರ್ಥಗಳ ಸೇವನೆ ಮಾಡುವುದು ಅಗತ್ಯ.
 15. ಮೂತ್ರವು ಕುಡಿಯುವ ನೀರಿನ ಬಣ್ಣದಂತೆಯೇ ಇರಬೇಕು.
 16. ಸಾಮಾನ್ಯವಾಗಿ ಕೆಲವು ರೋಗಿಗಳು 5ರಿಂದ 6 ಲೀಟರ್ ದ್ರವ ಪದಾರ್ಥಗಳನ್ನು ಸೇವಿಸುವುದುಂಟು. ಇದು ಸರಿಯಲ್ಲ. ಆದಷ್ಟು ಹೆಚ್ಚು ಕುಡಿಯಿರಿ.
 17. ಕೆಲವರು ಯೂರಿನ್ ಸ್ಟೋನ್ ಆಗುವುದನ್ನು ನಿಯಂತ್ರಿಸಲು ಬಿಯರ್ ಕುಡಿಯುತ್ತಾರೆ. ಇದರಿಂದ ಕಿಡ್ನಿ ಸ್ಟೋನ್ ಕಡಿಮೆಯಾಗುವ ಬದಲಾಗಿ ಹೆಚ್ಚಾಗುತ್ತದೆ.
 18. ಬೀಜಗಳಿರುವ ತರಕಾರಿಗಳನ್ನು ಸೇವಿಸಬಾರ ದೆಂಬ ನಂಬಿಕೆ ತಪ್ಪು. ಯಾಕೆಂದರೆ ಆಹಾರದಲ್ಲಿರುವ ಬೀಜಗಳು ಮೂತ್ರನಾಳದವರೆಗೆ ಹೋಗುವುದಕ್ಕೆ ಸಾಧ್ಯವಿಲ್ಲ.
 19. ಎಳನೀರು, ಬಾರ್ಲಿ, ಅನಾನಸ್ ಜ್ಯೂಸ್, ಬಾಳೆಹಣ್ಣು, ನಿಂಬೆಹಣ್ಣು, ಹುರುಳಿ, ಕ್ಯಾರೆಟ್, ಹಾಗಲಕಾಯಿ ಮುಂತಾದವುಗಳನ್ನು ಸೇವಿಸಬೇಕು.
 20. ಟೊಮಾಟೋ, ಹೂಕೋಸು, ಕಪ್ಪು ದ್ರಾಕ್ಷಿ, ಬೂದುಗುಂಬಳಕಾಯಿ, ಮಷ್ರೂಮ್, ಪಾಲಕ್, ಜವಳಿಕಾಯಿ, ಬದನೆಕಾಯಿ, ಅತಿಯಾದ ಮಾಂಸ ಇವುಗಳ ಸೇವನೆಯಿಂದ ದೂರವಿರಬೇಕು.

ಕಿಡ್ನಿ ಸಮಸ್ಯೆಯನ್ನು ದೂರವಾಗಿಸಲು ಈ ಐದು ಆಹಾರ ಕ್ರಮಗಳನ್ನು ಪಾಲನೆ ಮಾಡಿ.

 1. ಕೆಂಪು ದುಂಡು ಮೆಣಸಿನ ಕಾಯಿ: ಇದರಲ್ಲಿನ ನಾರಿನಂಶ, ವಿಟಮಿನ್ ಬಿ6, ವಿಟಮಿನ್ ಎ, ಫೋಲಿಕ್ ಆಸಿಡ್ ಮತ್ತು ಲೈಪೊಸೀನ್ ಎಂಬ ಆಂಟಿಆಕ್ಸಿಡೆಂಟ್ ಕಿಡ್ನಿಯನ್ನು ಶುದ್ಧಗೊಳಿಸುತ್ತದೆ. ಪೂರ್ತಿ ಬೇಯಿಸಿ ತಿನ್ನುವ ಬದಲು ಹಸಿ ಅಥವಾ ಅರ್ಧ ಬೇಯಿಸಿರುವುದನ್ನು ತಿಂದರೆ ಒಳ್ಳೆಯದು.
 2. ಹೂಕೋಸು ಮತ್ತು ಎಲೆಕೋಸು: ಈ ಎರಡೂ ತರಕಾರಿಗಳು ಕಿಡ್ನಿಗೆ ತುಂಬಾ ಆರೋಗ್ಯಕರ. ಎಲೆಕೋಸಿನಲ್ಲಿರುವ ವಿಟಮಿನ್ ಕೆ ಮತ್ತು ಹೂಕೋಸಿನಲ್ಲಿರುವ ವಿಟಮಿನ್ ಸಿ ಕಿಡ್ನಿಗೆ ಆರೋಗ್ಯ ನೀಡುತ್ತದೆ. ಕಿಡ್ನಿಗೆ ಹೆಚ್ಚು ಪೊಟಾಶಿಯಂ ಒಳ್ಳೆಯದಲ್ಲ. ಅದಕ್ಕಾಗಿ ಕಡಿಮೆ ಪೊಟಾಶಿಯಂ ಇರುವ ಆಹಾರವನ್ನು ಕಿಡ್ನಿ ಡಯಟ್ ನಲ್ಲಿ ಸೇರಿಸಿಕೊಳ್ಳಬೇಕು.
 3. ಮೊಟ್ಟೆ ಬಿಳಿ ಭಾಗ: ಮೊಟ್ಟೆ ಬಿಳಿ ಭಾಗ ಮೂಳೆಗೆ ಉತ್ತಮ ಪ್ರೊಟೀನ್ ಒದಗಿಸುತ್ತದೆ ಮತ್ತು ಇದರಲ್ಲಿನ ಅಮಿನೊ ಆಸಿಡ್ ಕಿಡ್ನಿಗೆ ಶಕ್ತಿ ನೀಡುತ್ತೆ. ಕಿಡ್ನಿಯ ಆರೋಗ್ಯಕ್ಕೆ ಕೇವಲ ಮೊಟ್ಟೆಯ ಬಿಳಿ ಭಾಗ ಮಾತ್ರ ತಿನ್ನಬೇಕು. ಮೊಟ್ಟೆಯ ಹಳದಿ ಭಾಗದಲ್ಲಿನ ಫಾಸ್ಪರಸ್ ಮತ್ತು ಪೊಟಾಶಿಯಂ ಕಿಡ್ನಿಗೆ ಸಮಸ್ಯೆ ಉಂಟುಮಾಡುತ್ತದೆ.
 4. ಸ್ಟ್ರಾಬೆರಿ, ದ್ರಾಕ್ಷಿ: ಎರಡೂ ತರಹದ ದ್ರಾಕ್ಷಿ ಹಣ್ಣು ಕಿಡ್ನಿಗೆ ನಿಜಕ್ಕೂ ಅವಶ್ಯಕ ಆಹಾರ. ಉರಿ ನಿವಾರಕ ಮತ್ತು ಅಶುದ್ದತೆಯನ್ನು ತೊಲಗಿಸುವ ಗುಣ ಈ ಹಣ್ಣುಗಳಲ್ಲಿರುವುದರಿಂದ ಇದರ ಸೇವನೆ ತುಂಬಾ ಮುಖ್ಯ.
 5. ಆಲಿವ್ ಎಣ್ಣೆ: ಇದು ಕಿಡ್ನಿಗೆ ಮಾತ್ರವಲ್ಲ, ಇಡೀ ದೇಹಕ್ಕೂ ಒಳಿತನ್ನು ಉಂಟುಮಾಡುತ್ತದೆ. ಆಲಿವ್ ನಲ್ಲಿರುವ ಓಲಿಕ್ ಫ್ಯಾಟಿ ಆಸಿಡ್ ಕಿಡ್ನಿಯಲ್ಲಿ ಆಕ್ಸಿಡೇಶನ್ ತಗ್ಗಿಸಿ ಕಿಡ್ನಿಯನ್ನು ಆರೋಗ್ಯವಾಗಿಡುತ್ತದೆ.

1 COMMENT

LEAVE A REPLY

Please enter your comment!
Please enter your name here