ಕೊಬ್ಬನ್ನುಕಡಿಮೆ ಮಾಡುವ ಮಸಾಲೆ ಪದಾರ್ಥಗಳು

0
891

ದೇಹದ ಕೊಬ್ಬು ಕರಗಿಸಲು ಎಷ್ಟೆಲ್ಲಾ ಕಸರತ್ತು ಮಾಡ್ತೇವೆ ಆದರು ತೂಕ ಕಡಿಮೆ ಆಗೋದಿಲ್ಲ ಕೆಲವು ಬಾರಿ ದುಬಾರಿ ಹಣ ಖರ್ಚು ಮಾಡಿ ಯಾವುದೇ ಫಲ ಇಲ್ಲದೆ ಕೊನೆಗೆ ಸುಮ್ಮನೆ ಆಗಿ ಬಿಡ್ತೇವೆ, ನಮಗೆ ಗೊತ್ತಿರುವ ಕೆಲವು ಉಪಯುಕ್ತ ಮಾಹಿತಿಗಳನ್ನ ನಿಮಗಾಗಿ ನೀಡಿದ್ದೇವೆ, ಕೆಳಗೆ ನೀಡಿರುವ ಕೆಲವು ಮಸಾಲೆ ಪದಾರ್ಥಗಳು ದೇಹದ ಕೊಬ್ಬನು ಕಡಿಮೆ ಮಾಡುತ್ತದೆ ಎಂದು ದೃಡಿಕರಿಸಿದೆ ಆದರೆ ಬಗ್ಗೆ ಮಾಹಿತಿ ಪಡೆದುಕೊಳ್ಳಿ

ಪ್ರತಿ ನಿತ್ಯ ನಾವು ಮೆಣಸಿನ ಪುಡಿ ಹಾಕಿ ಮಾಡಿದ ಖಾರ ಪದಾರ್ಥಗಳನ್ನು ತಿನ್ನುವುದು ಸಹಜ ಆದ್ರೆ ಹೆಚ್ಚು ಕೊಬ್ಬಿನ ಅಂಶ ಇರುವವರು ಮೆಣಸಿನ ಪುಡಿಯನ್ನು ಸ್ವಲ್ಪ ಮಟ್ಟಿಗೆ ಹೆಚ್ಚು ಸೇವಿಸುವುದರಿಂದ ಹಸಿವು ಕಡಿಮೆಯಾಗುತ್ತದೆ ಹಾಗೂ ಕೊಬ್ಬು ಕರಗುತ್ತದೆ. ಸೇವನೆ ನಿಯಮಿತವಾಗಿ ಇರಲಿ

ದಾಲ್ಚಿನ್ನಿ ಹಲವು ರೀತಿಯ ಔಷಧೀಯ ಗುಣಗಳು ಹೊಂದಿದೆ ಇದ್ರಲ್ಲಿ ಅನೇಕ ರೋಗಗಳನ್ನು ಕಡಿಮೆ ಮಾಡುವ ಶಕ್ತಿ ಇದೆ. ಇದು ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ದಾಲ್ಚಿನ್ನಿ ಬಳಸುವುದು ತಪ್ಪಿಸಬೇಡಿ.

ಹಾಗೆಯೇ ಪ್ರತಿ ನಿತ್ಯ ದಾಲ್ಚಿನ್ನಿ ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆಯ ಮಟ್ಟ ಸ್ಥಿರವಾಗಿರುತ್ತದೆ. ಸಕ್ಕರೆ ಮಟ್ಟ ಹತೋಟಿಗೆ ಬಂದರೆ ದೇಹ ಸೀಮಿತವಾಗಿ ಇರುತ್ತದೆ.

ಅರಿಶಿನದಲ್ಲಿ ಅನೇಕ ಸತ್ವಗಳು ಇರುತ್ತದೆ ಶುದ್ದವಾದ ಅಡುಗೆಗೆ ಬಳಸುವ ಅರಿಶಿನ ಬಳಕೆ ಮಾಡಿದ್ರೆ ಅದು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.

ಅಡುಗೆಯ ರುಚಿ ಹೆಚ್ಚಿಸುವ ಶುಂಠಿಗೂ ಆರೋಗ್ಯಕ್ಕೂ ಉತ್ತಮ ನಂಟಿದೆ. ದೇಹದ ಕಲ್ಮಶಗಳನ್ನು ಶುದ್ಧೀಕರಿಸುವಲ್ಲಿ ಶುಂಠಿ ಅತ್ಯುತ್ತಮವಾಗಿದೆ. ಇದು ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.

ಬೆಳ್ಳುಳ್ಳಿಯು ದೇಹದಲ್ಲಿ ಶೇಖರವಾಗಿರುವ ಕೊಬ್ಬನ್ನು ಕಡಿಮೆಗೊಳಿಸುತ್ತದೆ.

LEAVE A REPLY

Please enter your comment!
Please enter your name here