ನೀವು ವೈದ್ಯರ ಬಳಿ ಹೋದಾಗ ಅವರು ನಿಮ್ಮ ನಾಲಿಗೆ ತೂರಿಸಿ ಅಂತಾರೆ ಯಾಕೆ ಗೊತ್ತಾ
ಡಾಕ್ಟರ್ ಬಳಿಗೆ ಹೋದಾಗ ಅವರು ತಪ್ಪದೆ ನಮ್ಮ ನಾಲಿಗೆಯನ್ನು ನೋಡುತ್ತಾರೆ. ಏಕೆ ಗೊತ್ತಾ. ಆ ರಹಸ್ಯ ಏನೆಂದು ತಿಳಿದುಕೊಳ್ಳಿ ಮಾನವ ದೇಹದ ಅಂತರ್ಭಾಗಗಳಲ್ಲಿ , ಮಿಕ್ಕವುಗಳಿಗೆ ಸರಿ ಸಮಾನವಾದ್ದದ್ದು ಈ ನಮ್ಮ ನಾಲಿಗೆ. ಇದು ಕೇವಲ ರುಚಿ ಗ್ರಹಿಸುವುದಕ್ಕೆ ಮಾತ್ರವಲ್ಲ, ಅದು ನಮ್ಮ ಆರೋಗ್ಯವನ್ನು ತಿಳಿಸುವ ಮಾಪನವೂ ಕೂಡ.
ನಾಲಿಗೆಯ ಬಣ್ಣ, ಮೃದುತ್ವ, ಒದ್ದೆಯ ಮೂಲಕ ದೇಹದ ಒಳಗೊಳಗೆ ಏನು ನಡೆಯುತ್ತದೆ ಎಂದು ಹೊರಬೀಳುತ್ತದೆ. ಎಡೆಬಿಡದೇ ಲಾಲಾರಸವನ್ನು ಕಳುಹಿಸುವುದರ ಮೂಲಕ ಬಾಯಿಯಲ್ಲಿನ ಬ್ಯಾಕ್ಟೀರಿಯಾವೆಲ್ಲವನ್ನೂ ಹೊರಕ್ಕೆ ಕಳುಹಿಸಿ ಶುಭ್ರ ಗೊಳಿಸುತ್ತದೆ. ಸಹಜವಾಗಿ ತೆಳು ಗುಲಾಬಿ ಬಣ್ಣದಲ್ಲಿ, ಒದ್ದೆಯಾಗಿ, ಮೃದುವಾಗಿ ಇರುವ ನಾಲಿಗೆ ಆ ವ್ಯಕ್ತಿಯ ಆರೋಗ್ಯವಾಗಿ ಇದ್ದಾನೆಂದು ತಿಳಿಸುವ ಒಂದು ಸೂಚನೆಯಾಗಿದೆ.
ಡಾಕ್ಟರ್ ಬಳಿಗೆ ಹೋದಾಗ ನಾಲಿಗೆ ಪರಿಶೀಲಿಸುವುದರ ಮೂಲಕ ಡಾಕ್ಟರ್ ಎನೀಮಿಯಾದಿಂದ ವಿಟಮಿನ್, ಲವಣಗಳವರೆಗೂ ಡೀ-ಹೈಡ್ರೇಷನ್ ನಿಂದ ಕಿಡ್ನಿ ಸಮಸ್ಯೆಗಳವರೆಗೂ ನಾಲಿಗೆಯನ್ನು ನೋಡಿಯೇ ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ರಕ್ತ ಸಂಚಲನೆಯ ಮಟ್ಟ, ಕೊಲೆಸ್ಟ್ರಾಲ್ ನಾಲೆಗಳು, ಅಲರ್ಜಿಗಳು, ಜೀರ್ಣಾಶಯದ ಸಮಸ್ಯೆಗಳು, ಇವೆಲ್ಲವೂ ಹೊರ ಬೀಳುತ್ತದೆ. ನಾಲಿಗೆಯ ಮೇಲೆ ಕಾಣಿಸುವ
ಮುಖ್ಯ ಲಕ್ಷಣಗಳು:
ನಾಲಿಗೆ ಉಕ್ಕಿದ್ದರೆ, ರಕ್ತದಲ್ಲಿ ಹಿಮೋಗ್ಲೋಬಿನ್ ಲೋಪಗಳು, ಕಬ್ಬಿಣಾಂಶದ ಪ್ರೊಟೀನ್ ನ ಲೋಪ ಇದೆಯೆಂದು ಗ್ರಹಿಸಬೇಕು. ಇವು ಆಯಾಸ ,ನಿಶ್ಯಕ್ತಿಯ ಮೂಲಕ ಹೊರಬೀಳುತ್ತಿರುತ್ತದೆ.
ನಾಲಿಗೆ ಕೆಂಪು ಬಣ್ಣದಲ್ಲಿದ್ದರೆ, ಅದು ವಿಟಮಿನ್ ಬಿ-12, ಫೋಲಿಕ್ ಯಾಸಿಡ್ ಲೋಪಗಳಿವೆಯೆಂದು ಭಾವಿಸಬೇಕು. ವೈರಲ್ ಇನ್ಫೆಕ್ಷನ್ ಕಾರಣವಾಗಿ ನಿಮಗೆ ಜ್ವರ ಇದ್ದಾಗಲೂ ಕೂಡ ನಾಲಿಗೆ ಕೆಂಪಾಗಿರುತ್ತದೆ.
ನಾಲಿಗೆ ನೇರಳೆ ಬಣ್ಣದಲ್ಲಿದ್ದರೆ, ದೇಹದಲ್ಲಿ ಕೊಲೆಸ್ಟ್ರಾಲ್ ನಾಲೆಗಳು ಹೆಚ್ಚಾಗಿವೆಯೆಂದು ಅರ್ಥ. ಇದು ರಕ್ತ ಸಂಚಲನೆ ಸರಿಯಾಗಿ ಇಲ್ಲವೆಂದು ತಿಳಿಸುವ ಸೂಚನೆ ಕೂಡ.
ರಕ್ತ ಸಂಚಲನೆ ಸರಿಯಾಗಿ ಇರಬೇಕೆಂದರೆ ವ್ಯಾಯಾಮಗಳು ಅತ್ಯವಶ್ಯಕ.
ಕಪ್ಪು ಬಣ್ಣದಲ್ಲಿದ್ದರೆ, ದೇಹದಲ್ಲಿ ರಕ್ತ ಕಣಗಳು ಸತ್ತು ಹೋಗುವ ವೇಗಕ್ಕೆ ಮೀರಿ ರಕ್ತ ಕಣಗಳ ಉತ್ಪತ್ತಿ ಅಧಿಕವಾಗಿದೆ ಎಂದುಕೊಳ್ಳಬೇಕು. ಅತಿಯಾಗಿ ಯಾಂಟಿ ಬಯೋಟಿಕ್ಸ್ ತೆಗೆದುಕೊಳ್ಳುವುದರಿಂದ ಕೂಡ ಕೆಲವರಿಗೆ ಈ ಸಮಸ್ಯೆ ತಲೆ ಎತ್ತುತ್ತದೆ.
ಇದೇ ಅಲ್ಲದೇ ಧೂಮಪಾನ, ಅತಿಯಾಗಿ ಕಾಫಿ ಕುಡಿಯುವುದು, ದಂತದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವಾಗಿ ಇರುವುದರಿಂದಲೂ ಕೂಡ ಈ ಸಮಸ್ಯೆಗೆ ದಾರಿ ಮಾಡಿಕೊಟ್ಟಂತೆ. ಪಾಪಿಲೇ ಜೀವನವೆಲ್ಲಾ ಬೆಳೆಯುತ್ತಲೇ ಇರುತ್ತದೆ.
ಮಾಮೂಲಿಯಾಗಿ ಆದರೆ ಚೀವಿಂಗ್, ಡ್ರಿಂಕಿಂಗ್ ನಿಂದ ನಾಲಿಗೆಯ ಮೇಲೆ ಅಷ್ಟೇನು ಪ್ರಭಾವ ಬೀರುವುದಿಲ್ಲ ಆದರೆ, ಕೆಲವು ಬಾರಿ ನಾಲಿಗೆಯ ಮೇಲಿರುವ ಗ್ರಂಥಿಗಳು ಹೆಚ್ತಾಗುತ್ತದೆ. ಇದೇ ಸಮಯದಲ್ಲಿ ಬ್ಯಾಕ್ಟೀರಿಯಾ ಹೆಚ್ಚಾಗುವ ಪ್ರಮಾದವಿದೆ. ನಾಲಿಗೆ ತನ್ನ ಸಹಜ ವರ್ಣವನ್ನು ಕೂಡ ಕಳೆದುಕೊಳ್ಳುತ್ತದೆ. ನಾಲಿಗೆಯ ಮೇಲೆ ಅಲ್ಸರ್ ಏರ್ಪಟ್ಟರೆ, ವ್ಯಾಧಿ ನಿರೋದಕ ಶಕ್ತಿ ತಗ್ಗಿದೆ ಎಂದುಕೊಳ್ಳಬೇಕು. ವೈರಲ್ ಇನ್ಫೆಕ್ಷನ್ ನಿಂದ ಸಮಸ್ಯೆ ಬಂದರೂ ಅದು ಅಂಟು ವ್ಯಾಧಿಯಲ್ಲ. ತಣ್ಣನೆಯ ಹಾಲು, ಮೊಸರು, ನಿಂಬೆ ಹಣ್ಣಿನ ರಸ ಸೇವಿಸಿದರೆ ಅಲ್ಸರ್ ವೇಗವಾಗಿ ಕಡಿಮೆಯಾಗುವ ಸಾಧ್ಯತೆಗಳಿವೆ.