ಕತ್ತು ನೋವಿಗೆ ನಿಮ್ಮ ಮನೆಯಲ್ಲೇ ಇದೆ ಮದ್ದು

0
1189

ಕತ್ತು ನೋವನ್ನು ಹೋಗಲಾಡಿಸಲು ಹರಸಾಹಸ ಪಡುತ್ತೇವೆ ಆದರೆ ತುಂಬ ಸುಲಭವಾಗಿ ದೂರ ಮಾಡಬಹುದು ಅದು  ಹೇಗೆ ಅಂದ್ರೆ

ನಮ್ಮ ಇತ್ತೀಚಿನ ಜೀವನದಲ್ಲಿ ಕೆಲಸ ಕಾರ್ಯಗಳು ನೆಡೆಯುವುದು ಹೆಚ್ಚಾಗಿ ತಂತ್ರಜ್ಞಾನಗಳಿಂದ ಅವುಗಳಿಲ್ಲದೆ ಕೆಲಸ ಪೂರ್ಣವಾಗುವುದೇ ಇಲ್ಲ, ಎಲ್ಲ ಕೆಲಸಗಳು ಬೇಗ ಬೇಗ ಪೂರ್ಣವಾಗಬೇಕೆಂದು ತಂತ್ರಾಂಶಗಳ ಬಳಕೆ ಮಾಡಿ ಕೆಲಸ ಮುಗಿಸುತ್ತೇವೆ, ಹಾಗೇ ಎಷ್ಟು ಒತ್ತಡವನ್ನು ಲೆಕ್ಕಿಸದೆ ಕೆಲಸ ಮಾಡುತ್ತೇವೆ,ಅಂತಹ ಸಂಧರ್ಭದಲ್ಲಿ ದೇಹದ ಸ್ಥಿತಿಗತಿಯನ್ನು ನೆನಪಿನಲ್ಲಿ ಇಟ್ಟುಕೊಳ್ಳದೆ ಒಂದೇ ವಿಧವಾಗಿ ಕೆಲಸ ಮಾಡುತ್ತೇವೆ.ಹಾಗೇ ಮಾಡಿದ ನಂತರ ನಮಗೆ ಕಾಣಿಸಿಕೊಳ್ಳುವುದು ಕಣ್ಣಿನ ತೊಂದರೆ, ಕುತ್ತಿಗೆ ನೋವು, ಬೆನ್ನುನೋವುಗಳು.ಅದರಲ್ಲೂ ತುಂಬಾ ಮೃದುವಾದ ಭಾಗವಾಗಿರುವುದು ಕತ್ತು ಇದಕ್ಕೆ ಹೆಚ್ಚು ಶ್ರಮ, ಒತ್ತಡ ಬೀಳುತ್ತದೆ. ತಲೆ ಮೇಲೆ ಹೆಚ್ಚು ಭಾರ ಬಿದ್ದಾಗ ಕತ್ತಿನ ಮೇಲೆ ಪ್ರಭಾವ ಬೀಳುತ್ತದೆ. ಆಗ ಎಲುಬುಗಳು, ಮೂಳೆ, ನರಗಳ ಸಮಸ್ಯೆ ಉಂಟಾಗುತ್ತದೆ.

ನಾವು ಸರಿಯಾದ ಆರೈಕೆಯನ್ನು ಕತ್ತಿಗೆ ಮಾಡುವುದಿಲ್ಲ ಯಾವುದೋ ಭಂಗಿಯಲ್ಲಿ ಕುಳಿತುಕೊಳ್ಳುತ್ತೇವೆ. ಮಲಗುತ್ತೇವೆ. ಹೆಚ್ಚು ಸಮಯ ಕತ್ತು ಬಗ್ಗಿಸಿ ಕೆಲಸ ಮಾಡುತ್ತೇವೆ. ಕಂಪ್ಯೂಟರ್, ಮೊಬೈಲ್ ಗಳ ತಲೆ ತಗ್ಗಿಸಿ ಹೆಚ್ಚು ನೋಡುವುದು. ಸರಿಯಾದ ರಸ್ತೆಯಲ್ಲಿ ಚಲಿಸದೆ ಇರುವುದು, ಡಿ. ವಿಟಮಿನ್ ಕಡಿಮೆಯಾಗಿರುವುದು. ಸಹ ಕತ್ತು ನೋವನ್ನು ತರುತ್ತವೆ

ಈ ನೋವುಗಳನ್ನು ನಿವಾರಿಸಲು ವಿಧವಿಧದ ಮುಲಮು, ಮಾತ್ರೆಗಳನ್ನು ಸೇವಿಸುತ್ತೇವೆ ಆದರೆ ಅದರಿಂದ ನೋವಿಗೆ ಮುಕ್ತಿ ಸಿಗುವುದಿಲ್ಲ. ಆಗದರೇ ಈ ನೋವಿನಿಂದ ಮುಕ್ತಿ ಪಡೆಯುವುದು ಹೇಗೇ.

ಕತ್ತು ನೋವಿಗೆ ತುಂಬಾ ಸರಳವಾದ ಔಷಧಿ ವ್ಯಾಯಾಮ. ಯೋಗ ಮಾಡುವುದು. ಬಿಸಿನೀರಿನ ಒತ್ತಡ ಹೇರುವುದು

ಕತ್ತು ನೋವು ನಿವಾರಿಸಲು ಹಲವು ರೀತಿಯ ಮುಲಾಮು, ಮಾತ್ರೆಗಳಿವೆ, ಆದರೆ ಆ ನೋವಿನಿಂದ ಅತ್ಯಂತ್ಯ ಪರಿಣಾಮಕಾರಿ ಅಂದ್ರೆ ಅದು ಆಲಿವ್ ಆಯಿಲ್ ಎಣ್ಣೆ ಮತ್ತು ಉಪ್ಪು, ಇದರ ಬೆರಕೆಯು ನಿಮ್ಮ ಕುತ್ತಿಗೆ ನೋವಿಗೆ ಉಪಶಮನ ನೀಡುತ್ತದೆ.

ಈ ಎರಡು ಅತ್ಯುತ್ತಮ ಪದಾರ್ಥಗಳ ಬಳಕೆ ಮಾಡಿಕೊಂಡು ಕುತ್ತಿಗೆ ನೋವನ್ನು ಕಡಿಮೆ ಮಾಡಲು ಅತ್ಯಂತ ಹಳೆಯ ಚಿಕಿತ್ಸಕ ವಿಧಾನವಾಗಿದೆ. ಈ ವಿಧಾನವನ್ನು ಪ್ರಾಚೀನ ಕಾಲದಿಂದಲೂ ಬಳಸಲಾಗಿದೆ. ಅದಕ್ಕಾಗಿಯೇ ಇದು ಬಹಳ ಜನಪ್ರಿಯವಾಗಿದೆ. ಕೆಲವು ಮನೆ ಸಾಮಗ್ರಿಗಳು ಬಳಸಿ ಕುತ್ತಿಗೆ ನೋವನು ಕಡಿಮೆ ಮಾಡಬಹದು

ಬೇಕಾಗಿರುವ ಸಾಮಗ್ರಿ
ಉಪ್ಪು 10 ಚಮಚ ಅಂದ್ರೆ ಎಪ್ಸಂ ಸಾಲ್ಟ್ ಅಂತ
ಆಲಿವ್ ಎಣ್ಣೆ 15 ಚಮಚ
ಒಂದು ಶುದ್ದವಾದ ಬಟ್ಟಲು

ಮಾಡುವ ಕ್ರಮ: ನಾವು ಮೇಲೆ ತಿಳಿಸಿದ ಪದಾರ್ಥಗಳನ್ನು ಗಾಜಿನಲ್ಲಿ ಹಾಕಿ ಚೆನ್ನಾಗಿ ಮಿಶ್ರಮಾಡಿ. ಮಿಶ್ರಣವನ್ನು ಜಾರಿನಲ್ಲಿ ಹಾಕಿ ಮುಚ್ಚಿ, ಈ ಮಿಶ್ರಣವನ್ನು ಕೆಲವು ಗಂಟೆಗಳ ಕಾಲ ಶೀತಲ ಸ್ಥಳಗಳಲ್ಲಿ ಸಂಗ್ರಹಿಸಿ. ಕೆಲವು ಗಂಟೆಗಳ ನಂತರ, ಅದರ ಬಣ್ಣ ಬದಲಾಗುತ್ತದೆ.

ಈ ಕಲಸಿದ ಮಿಶ್ರಣ ಉಪಯೋಗಿಸಿ 2-3 ನಿಮಿಷಗಳ ಕಾಲ ನಿಮ್ಮ ಕುತ್ತಿಗೆಯನ್ನು ಮಸಾಜ್ ಮಾಡಿ. ಇದು ರಕ್ತ ಪರಿಚಲನೆ ಹೆಚ್ಚಿಸುತ್ತದೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಜೊತೆಗೆ, ಒತ್ತಡದ ನೋವು ನಿವಾರಣೆಗೆ ಸಹಾಯ ಮಾಡವುದು. ಈ ಮನೆಯ ಮದ್ದು ಪರಿಹಾರವು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ. ಕುತ್ತಿಗೆ ನೋವು ತ್ವರಿತವಾಗಿ ನಿವಾರಣೆಯಾಗುತ್ತದೆ‌. ಸ್ವಲ್ಪ ಸಮಯ ಬಿಟ್ಟು ಹಚ್ಚಿದ ಜಾಗ ತಣ್ಣೀರಿನ ಬಟ್ಟೆಯಿಂದ ಒರೆಸಿ ವಿಶ್ರಾಂತಿ ಪಡೆದುಕೊಳ್ಳಿ.

LEAVE A REPLY

Please enter your comment!
Please enter your name here