ಚರ್ಮದ ಕಾಂತಿಯನ್ನು ಹೆಚ್ಚಿಸಲು ಇಲ್ಲಿದೆ 7 ಉಪಾಯಗಳು.

0
1256

ಚರ್ಮದ ಕಾಂತಿಯನ್ನು ಹೆಚ್ಚಿಸಲು ಇಲ್ಲಿದೆ 7 ಉಪಾಯಗಳು. ಚರ್ಮದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಯಾರಿಗೆ ತಾನೆ ಇಷ್ಟವಿಲ್ಲ? ಇದಕ್ಕಾಗಿ ಎಷ್ಟೇ ಹಣ ಖರ್ಚು ಮಾಡಲು ಕೂಡ ನಾವು ತಯಾರಾಗಿರುತ್ತೇವೆ. ಜನರಲ್ಲಿ ಹೆಚ್ಚುತ್ತಿರುವ ಸೌಂದರ್ಯ ಭಾವವನ್ನು ಬಂಡವಾಳವನ್ನಾಗಿ ಮಾಡಿಕೊಂಡಿರುವ ಕಂಪೆನಿಗಳು ಅವರ ಬೇಡಿಕೆಗಳನ್ನು ಪೂರೈಸಲು ಮಾರುಕಟ್ಟೆಯಲ್ಲಿ ಅನೇಕ ಉತ್ಪನ್ನವನ್ನು ಬಿಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ. ಆದರೆ ಇಂತಹ ಉತ್ಪನ್ನಗಳಲ್ಲಿ ರಾಸಾಯನಿಕಗಳು ಅಧಿಕವಾಗಿದ್ದು, ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮಗಳನ್ನುಂಟು ಮಾಡುತ್ತವೆ.

ನಾವು ನಮ್ಮಚರ್ಮವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ನೈಸರ್ಗಿಕ ಪರಿಹಾರಗಳ ಕಡೆಗೆ ಗಮನ ಹರಿಸಬೇಕಾಗಿದೆ. ಅದ್ದರಿಂದ ರಾಸಾಯನಿಕ ವಸ್ತುಗಳನ್ನು ಬಳಸಿರುವ ಕಾಸ್ಮೆಟಿಕ್ ಉತ್ಪನ್ನಗಳನ್ನು ಮುಖಕ್ಕೆ ಹಚ್ಚುವುದನ್ನು ತಪ್ಪಿಸಿ ನೈಸರ್ಗಿಕವಾಗಿ ದೊರೆಯುವ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ವಸ್ತುಗಳನ್ನು ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಿ.

ಇಲ್ಲಿ ಚರ್ಮದ ಕಾಂತಿಯನ್ನು ಹೆಚ್ಚಿಸಲು ಕೆಲವು ಟಿಪ್ಸ್ ಗಳಿವೆ. ಇವುಗಳನ್ನು ಉಪಯೋಗಿಸಿ ನೋಡಿ.

ಕಡ್ಲೆಹಿಟ್ಟು ಮತ್ತು ಹಾಲು: ಒಂದು ವೇಳೆ ಚರ್ಮದ ಹೊರಪದರದಲ್ಲಿ ತೆಳುವಾದ ಪದರ ಆವರಿಸಿದ್ದರೆ ಇದು ಸತ್ತ ಜೀವಕೋಶಗಳು ಗಟ್ಟಿಯಾಗಿ ಅಂಟಿಕೊಂಡಿದ್ದಿದ್ದಿರಬಹುದು. ಇದನ್ನು ನಿವಾರಿಸಲು ಕಡ್ಲೆಹಿಟ್ಟು ಮತ್ತು ಕೊಂಚ ಹಸಿಹಾಲನ್ನು ಬೆರೆಸಿ ಲೇಪನ ತಯಾರಿಸಿ ಮುಖದ ಮೇಲೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಸತ್ತಜೀವಕೋಶಗಳು ಸುಲಭವಾಗಿ ನಿವಾರಣೆಯಾಗಿ ಕಾಂತಿಯುಕ್ತ ಚರ್ಮ ನಿಮ್ಮದಾಗುತ್ತದೆ.

ಲಿಂಬೆ ಮತ್ತು ಜೇನು: ಬಿಸಿಲಿನಿಂದ ಚರ್ಮ ಕಪ್ಪಗಾಗಿದ್ದರೆ ಈ ವಿಧಾನ ಅತ್ಯುತ್ತಮವಾಗಿದೆ. ಲಿಂಬೆಯ ಬಿಳಿಚುಕಾರಕ ಗುಣ ಮತ್ತು ಜೇನಿನ ತಂಪೊಗೊಳಿಸುವ ಗುಣಗಳು ಒಟ್ಟಾಗಿ ಚರ್ಮದ ಬಣ್ಣವನ್ನು ಸಹಜವರ್ಣದತ್ತ ತರಲು ನೆರವಾಗುತ್ತವೆ. ಇದರಿಂದ ಕಳೆಗುಂದಿದ್ದ ಚರ್ಮ ಮತ್ತೆ ಕಾಂತಿ ಪಡೆಯುತ್ತದೆ. ಸಮಪ್ರಮಾಣದಲ್ಲಿ ಲಿಂಬೆಸರ ಮತ್ತು ಜೇನನ್ನು ಬೆರೆಸಿ ಕೊಂಚವೇ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಹತ್ತಿಯಿಂಡೆಯಿಂದ ಒರೆಸಿಕೊಳ್ಳುವ ಮೂಲಕ ಈ ಕಾಂತಿಯನ್ನು ಪಡೆಯಬಹುದು

ಹಸಿರು ಟೀ ಕುದಿಸಿ ಸೋಸಿದ ನೀರು: ಒಂದು ಚಿಕ್ಕಚಮಚ ಮೊಸರಿಗೆ ಒಂದು ಚಿಕ್ಕಚಮಚ ಲಿಂಬೆಹಣ್ಣಿನ ರಸ ಸೇರಿಸಿ. (ಈಗ ತಾನೇ ಹಿಂಡಿದ ಲಿಂಬೆರಸ). ಇದಕ್ಕೆ ಒಂದರಿಂದ ಎರಡು ಚಿಕ್ಕ ಚಮಚ ಹಸಿರು ಟೀ ಕುದಿಸಿ ಸೋಸಿದ ನೀರನ್ನು ಬೆರೆಸಿ. ಈ ಲೇಪನವನ್ನು ಮುಖದ ಮೇಲೆ ನಯವಾಗಿ ಒಮ್ಮುಖವಾಗಿ ಹಚ್ಚಿರಿ. ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಕು

ಮೊಟ್ಟೆಯ ಬಿಳಿಯ ಭಾಗ + ಮೊಸರು: ಮೊಟ್ಟೆಯ ಬಿಳಿಯ ಭಾಗ ನಿಮ್ಮ ದೇಹಕ್ಕೆ ಮಾತ್ರವಲ್ಲ, ನಿಮ್ಮ ತ್ವಚೆಗೂ ಅಷ್ಟೇ ಒಳ್ಳೆಯದು. ತ್ವಚೆಗೆ ಅತ್ಯಗತ್ಯವಾದ ಜೀವಸತ್ವ ಮತ್ತು ಖನಿಜಾಂಶಗಳು ಮೊಟ್ಟೆಯಲ್ಲಿ ಸಮೃದ್ಧವಾಗಿದೆ. ಮೊಟ್ಟೆ ಹಾಗೂ ಮೊಸರಿನ ಮಿಶ್ರಣ ಒಂದು ಉತ್ತಮ ಸೌಂದರ್ಯವರ್ಧಕ. ಮೊಟ್ಟೆಯ ಬೆಳಿಯ ಭಾಗ ಮತ್ತು ಮೊಸರನ್ನು ಮಿಶ್ರಣಮಾಡಿ. ಇದನ್ನು ಪೇಸ್ಟ್ ನಂತೆ ಮಾಡಿ ಮುಖಕ್ಕೆ ಹಚ್ಚಿ 15 -20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಮುಖ ತೊಳೆದು ಮಾಯ್ಸ್ಚರೈಸರ್ ಹಚ್ಚಿ.

ಟೊಮೆಟೋ ಮತ್ತು ಜೇನುತುಪ್ಪ: ಟೊಮೆಟೋವು ಚರ್ಮಕ್ಕೆ ಶಕ್ತಿ ನೀಡಿ ಬಿಗಿಗೊಳಿಸುವುದು. ಇದು ಎಲ್ಲಾ ರೀತಿಯ ಚರ್ಮಕ್ಕೆ ಒಳ್ಳೆಯದು. ಜೇನುತುಪ್ಪದೊಂದಿಗೆ ಸೇರಿಸಿದಾಗ ಚರ್ಮಕ್ಕೆ ಒಳ್ಳೆಯ ಕಾಂತಿ ಸಿಗುವುದು. ಜೇನುತುಪ್ಪ ಮತ್ತು ಟೊಮೆಟೋ ಜ್ಯೂಸ್ ಅನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಿಕೊಳ್ಳಿ. ಈ ಮಿಶ್ರಣ ಮುಖಕ್ಕೆ ಹಚ್ಚಿಕೊಳ್ಳಿ. ರಾತ್ರಿ ಹಾಗೆ ಬಿಟ್ಟು ಬೆಳಗ್ಗೆ ಮುಖ ತೊಳೆಯಿರಿ.

ಹಾಲು ಮತ್ತು ಅರಿಶಿನ: ಚರ್ಮದ ಕಾಂತಿ ಹೆಚ್ಚಿಸುವಲ್ಲಿ ಅರಿಶಿನದ ಪಾತ್ರ ಮಹತ್ತರವಾಗಿದ್ದು ಭಾರತದಲ್ಲಿ ನೂರಾರು ವರ್ಷಗಳಿಂದ ಬಳಸಲ್ಪಡುತ್ತಾ ಬರಲಾಗಿದೆ. ಒಂದು ಚಿಕ್ಕ ಚಮಚ ಅರಿಶಿನ ಪುಡಿಯನ್ನು ಕೊಂಚವೇ ಹಸಿಹಾಲಿನೊಂದಿಗೆ ಬೆರೆಸಿ ಮುಖಲೇಪ ತಯಾರಿಸಿ…ಹಾಲು ಮತ್ತು ಅರಿಶಿನ ಇದಕ್ಕೆ ಕೆಲವು ಹನಿ ಕೊಬ್ಬರಿ ಎಣ್ಣೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವಷ್ಟು ದಪ್ಪನಾಗಿಸಿ. ಈ ಲೇಪವನ್ನು ಈಗತಾನೇ ತೊಳೆದುಕೊಂಡ ಮುಖಕ್ಕೆ ತೆಳುವಾಗಿ ಹಚ್ಚಿ ಸುಮಾರು ಅರ್ಧ ಗಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ

ನಿಂಬೆ ಮತ್ತು ಕಿತ್ತಳೆ ಸಿಪ್ಪೆ: ಇವುಗಳಲ್ಲಿನ ಸಿಟ್ರಸ್ ಅಂಶ ತ್ವಚೆಯ ಕಾಂತಿಗೆ ಹೆಚ್ಚು ಉಪಯುಕ್ತ. ಸ್ಕ್ರಬ್ ನಂತೆ ಕೆಲಸ ನಿರ್ವಹಿಸುವ ಈ ಸಿಪ್ಪೆಗಳನ್ನು ಬೇಕಾದಾಗ ಬಳಸಿಕೊಳ್ಳಬಹುದು. ಈ ಸಿಪ್ಪೆಗಳನ್ನು ಒಣಗಿಸಿ ಪುಡಿ ಮಾಡಿಕೊಂಡು ಬೇಕೆಂದಾಗ ಹಾಲು ಮತ್ತು ಸ್ವಲ್ಪ ಓಟ್ ಪೌಡರ್ ನೊಂದಿಗೆ ಬೆರೆಸಿಕೊಂಡು ಮುಖಕ್ಕೆ ಲೇಪಿಸಿಕೊಳ್ಳಬೇಕು. ಇದು ಸೌಂದರ್ಯಕ್ಕಷ್ಟೇ ಅಲ್ಲ ಔಷಧೀಯ ಗುಣಗಳೂ ಇದರಲ್ಲಿರುವ ಕಾರಣ ಇದರ ಬಳಕೆಯಿಂದ ದ್ವಿಗುಣ ಲಾಭ ಪಡೆಯಬಹುದು. ಈ ವಿಧಾನಗಳಲ್ಲಿ ಯಾವುದಾದರೂ ಒಂದನ್ನಾದರೂ ವಾರಕ್ಕೊಮ್ಮೆ ನೀವು ಅನುಸರಿಸಿದಲ್ಲಿ ನಿಮಗೆ ಅದ್ಭುತ ಫಲಿತಾಂಶ ಖಾತ್ರಿ. ನಿಮ್ಮ ಸೌಂದರ್ಯದ ವೃದ್ಧಿಗೊಳಿಸುವಿಕೆ ನಿಮ್ಮ ಕೈಯಲ್ಲೇ ಇರುವುದರಿಂದ ಇದರಲ್ಲಿ ಯಾವುದೇ ರಾಜಿಯನ್ನು ನೀವು ಮಾಡಿಕೊಳ್ಳಬೇಡಿ. ನಿಮ್ಮಲ್ಲಿ ಸಹಜ ಸೌಂದರ್ಯವನ್ನು ವೃದ್ಧಿಸುವ ಈ ಪರಿಣಾಮಕಾರಿ ವಿಧಾನಗಳು ನಿಮಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ

LEAVE A REPLY

Please enter your comment!
Please enter your name here