ಜ್ವರಕ್ಕೆ ಮನೆ ಮದ್ದು

0
3190

ಜ್ವರದಿಂದ ಮುಕ್ತಿ ಪಡೆಯಲು ಸುಲಭ ಮಾರ್ಗಗಳು.

ಹೆಚ್ಚಾಗಿ ಜನರು ಅನುಭವಿಸುವ ಕಾಯಿಲೆಯೆಂದರೇ ಜ್ವರ, ಇದು ಮನುಷ್ಯನನ್ನು ಖಿನ್ನತೆಗೆ ಒಳಪಡಿಸುತ್ತದೆ ಯಾವ ಕೆಲಸವನ್ನು ನಿರ್ವಹಿಸಲು ಆಸಕ್ತಿ ಇಲ್ಲದಾಗೆ ಮಾಡಿ ಬೀಡುತ್ತದೆ, ಆದ್ದರಿಂದ ನಾವು ಈ ಆಹಾರ ಕ್ರಮಗಳನ್ನು ಅನುಸರಿಸುತ್ತ ಜ್ವರದಿಂದ ಬಿಡುಗಡೆ ಹೊಂದಬಹುದು ಅದು ಹೇಗೆ ಗೊತ್ತಾ.

 

ಜ್ವರದ ಆಹಾರಗಳಲ್ಲಿ ಮುಖ್ಯವಾದದ್ದು ಹಣ್ಣುಗಳು ಇದರಲ್ಲಿ ವಿಟಮಿನ್ ಮತ್ತು ಮಿನರಲ್ಸ್ ಗಳಿವೆ ಅದರಲ್ಲೂ ಲಘು ಹಾಗೂ ಸುಲಭವಾಗಿ ಜೀರ್ಣವಾಗುವ ಕಿತ್ತಳೆ, ದ್ರಾಕ್ಷಿ, ಸೇಬು, ಇನ್ನಿತರ ಹಣ್ಣುಗಳು ಜ್ವರದ ವಿರುದ್ಧ ಹೋರಾಡುತ್ತವೆ.

ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಗಳಿಂದ ಸಮೃದ್ದವಾಗಿರುವ ಸಲಾಡ್, ಕ್ಯಾರೇಟ್. ಸೌತೆಕಾಯಿ,ಇವುಗಳು ಜ್ವರದಿಂದ ಕುಂದಿರುವ ವ್ಯಕ್ತಿಗಳಿಗೆ ತಮ್ಮ ಶಕ್ತಿಯನ್ನು ಮರಳಿಸಲು ಸಹಾಯ ಮಾಡುತ್ತದೆ.

ಹಣ್ಣು ಮತ್ತು ತರಕಾರಿಗಳಿಂದ ತಯಾರಿಸಿದ ಜ್ಯೂಸ್ ಗಳಲ್ಲಿ ಉನ್ನತ ಮಟ್ಟದ ಪ್ರೋಟೀನ್ ಮತ್ತು ಪೌಷ್ಠಿಕಾಂಶ ಇರುವುದರಿಂದ ಜ್ವರವನ್ನು ಹೋಗಲಾಡಿಸುತ್ತದೆ.

ಬೆಳ್ಳುಳ್ಳಿಯಲ್ಲಿ ಸೂಕ್ಮಣು ಜೀವಿಗಳ ವಿರೋಧಿ ಗುಣಗಳಿರುವುದರಿಂದ ಜ್ವರಕ್ಕೆ ಉತ್ತಮ ಔಷಧ ಮತ್ತು ಪ್ರೋಟೀನ್ಗಳಿಂದ ಸಮೃದ್ಧವಾಗಿರುವ ಬ್ರೌನ್ ಬ್ರೆಡ್ ಗಳು ಸಹ ಮನುಷ್ಯ ನಲ್ಲಿ ಶಕ್ತಿ ತುಂಬುತ್ತದೆ.

ಬಾಳೆಹಣ್ಣಿನ ಮಿಲ್ಕ್ ಶೇಕ್ ಅಥವಾ ಬಾಳೆಹಣ್ಣಿನೊಂದಿಗೆ ಸಕ್ಕರೆ ಹಾಕಿ ಸೇವಿಸುತ್ತಾ ಬಂದರೆ ವಾಕರಿಕೆ, ಬಳಲಿಕೆ, ವಾಂತಿ, ಜ್ವರಗಳಿಂದ ಮುಕ್ತಿ ಪಡೆಯಬಹುದು.

ಶುಂಠಿ. ತುಳಸಿ. ಪುದೀನ ಇವುಗಳು ಉರಿಯೂತ, ಶಮನಕಾರಿ ಮತ್ತು ಸೂಕ್ಷ್ಮಣು ಜೀವಿಗಳ ವಿರುದ್ಧ ಹೋರಾಡುವ ಗುಣಗಳು ಇದ್ದು ಜ್ವರದ ವೈರಸ್ ವಿರುದ್ಧ ಹೋರಾಡುತ್ತವೆ. ಜ್ವರ ಬೇಗನೆ ಕಡಿಮೆ ಆಗಲು ಸಹಕಾರ ನೀಡುತ್ತದೆ.

ಹೆಸರುಬೇಳೆಯಲ್ಲಿ ವಿಟಮಿನ್ ಡಿ. ಸಿ.ಮೆಗ್ನಿಸಿಯಂ ಅಂಶಗಳಿದೇ ಆದ್ದರಿಂದ ಇದನ್ನು 20 ನಿಮಿಷ ನೆನೆಸಿ ಆ ನೆನೆಸಿದ ನೀರನ್ನು ಶೋಧಿಸಿ ಕುಡಿಯುವುದರಿಂದ ಜ್ವರ ಕಡಿಮೆಯಾಗುತ್ತದೆ.

ಕಿವಿಹಣ್ಣಿನಲ್ಲಿ ವಿಟಮಿನ್ ಸಿ. ಎ. ಈ. ಪೊಟ್ಯಾಸಿಯಂ. ಪ್ರೋಟೀನ್. ನಾರಿನಂಶ ಇರುವುದರಿಂದ ದೇಹದಲ್ಲಿ ಶಕ್ತಿ ತುಂಬಿ ಜ್ವರ ಕಡಿಮೆ ಮಾಡುತ್ತದೆ.

ಇವುಗಳನ್ನು ಪ್ರಯತ್ನಿಸಿ ನಿಮ್ಮ ಜ್ವರದಿಂದ ಮುಕ್ತಿ ಪಡೆಯಿರಿ.

LEAVE A REPLY

Please enter your comment!
Please enter your name here