ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣ ದ್ರಾಕ್ಷಿ ತಿನ್ನುವುದರಿಂದ ಏನಾಗುತ್ತದೆ ಗೊತ್ತಾ?

1
3172

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣ ದ್ರಾಕ್ಷಿ ತಿನ್ನುವುದರಿಂದ ಏನಾಗುತ್ತದೆ ಗೊತ್ತಾ?

ಒಣ ದ್ರಾಕ್ಷಿಯನ್ನು ಎಲ್ಲರೂ ಇಷ್ಟಪಡ್ತಾರೆ. ಈ ದ್ರಾಕ್ಷಿ ಬಾಯಿಗೆ ರುಚಿಯೊಂದೇ ಅಲ್ಲ ಆರೋಗ್ಯಕರ. ಒಣ ದ್ರಾಕ್ಷಿಯನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ರಾತ್ರಿ ಪೂರ್ತಿ ಹಾಗೆ ಇಟ್ಟು ಬೆಳಗ್ಗೆ ಸೇವಿಸುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ನೈಸರ್ಗಿಕವಾಗಿ ದೊರೆಯುವ ಯಾವುದೇ ಹಣ್ಣು- ಹಂಪಲುಗಳನ್ನು ತಿಂದರೂ ನಮ್ಮ ಆರೋಗ್ಯವನ್ನು ಸುಧಾರಿಸುತ್ತವೆ ಎಂಬ ಮಾತನ್ನು ವೈದ್ಯಲೋಕದಲ್ಲಿ ಕೇಳಿ ಬರುತ್ತದೆ. ಆದರೆ ಯಾವುದೇ ಹಣ್ಣು- ಹಂಪಲುಗಳ ಮೇಲೆ ರಸಾಯನಿಕಗಳನ್ನು ಸಿಂಪಡಿಸಿದೆಯೇ ಇಲ್ಲವೇ ಎಂಬುದನ್ನು ಗಮನಿಸುವುದು ಒಳ್ಳೆಯದು. ಹಣ್ಣಾಗುವ ಅವಧಿಗೆ ಮೊದಲೇ ಗಿಡಮರಗಳಿಂದ ಕಿತ್ತು ಅವುಗಳ ಮೇಲೆ ರಸಾಯನಿಕಗಳನ್ನು ಸಿಂಪಡಿಸಿ, ಬಲಾತ್ಕಾರದಿಂದ ಹಣ್ಣಾಗುವಂತೆ ಮಾಡಿದ್ದರೆ, ಅಂತಹ ಹಣ್ಣುಗಳು ಆರೋಗ್ಯಕ್ಕೆ ಹಾನಿಕರ.

ಒಣ ದ್ರಾಕ್ಷಿ ತಿನ್ನುವುದರ ಪ್ರಯೋಜನಗಳು ಹೀಗಿವೆ.

ಪ್ರತಿದಿನ ಬೆಳಿಗ್ಗೆ ಒಣದ್ರಾಕ್ಷಿ ಕುದಿಸಿದ ನೀರನ್ನು ಕುಡಿಯುವುದ್ರಿಂದ ಮಲಬದ್ಧತೆ, ಎಸಿಡಿಟಿ ಹಾಗೂ ಆಯಾಸ ಸಮಸ್ಯೆ ಕಡಿಮೆಯಾಗುತ್ತದೆ.

ಈ ನೀರು ಕೊಲೆಸ್ಟ್ರಾಲ್ ಮಟ್ಟವನ್ನು ಸರಿಯಾಗಿಡುತ್ತದೆ. ಇದು ದೇಹದಲ್ಲಿರುವ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಪ್ರತಿದಿನ ಈ ನೀರು ಕುಡಿಯುವುದ್ರಿಂದ ಲಿವರ್ ಆರೋಗ್ಯವಾಗಿರುತ್ತದೆ. ಚಯಾಪಚಯ ಕ್ರಿಯೆಯ ಮಟ್ಟವನ್ನು ನಿಯಂತ್ರಿಸುತ್ತದೆ.

ಒಂದು ಲೋಟ ಹಾಲಿಗೆ 10 ಒಣ ದ್ರಾಕ್ಷಿ ಹಾಕಿ, ತುಪ್ಪ ಹಾಕಿ ಪ್ರತಿನಿತ್ಯ ಬೆಳಗ್ಗೆ ಸೇವಿಸಿದರೆ ವೀರ್ಯ ಸಂಬಂಧಿತ ಸಮಸ್ಯೆಗಳು ದೂರವಾಗುತ್ತದೆ.

ಒಣ ದ್ರಾಕ್ಷಿ ಸೇವನೆಯಿಂದ ಹೃದಯ, ಕರುಳು ಮತ್ತು ರಕ್ತ ಸಮಸ್ಯೆಗಳು ದೂರವಾಗುತ್ತದೆ.

ಗಂಟಲಲ್ಲಿ ಕಿರಿಕಿರಿ ಇರುವ ವ್ಯಕ್ತಿಗಳು ನಿತ್ಯ ಬೆಳಗ್ಗೆ ಮತ್ತು ಸಾಯಂಕಾಲ 4 – 5 ಒಣ ದ್ರಾಕ್ಷಿ ಚಪ್ಪರಿಸಿ ತಿನ್ನಿ.

ಒಣ ದ್ರಾಕ್ಷಿ ವಿಟಾಮಿನ್, ಖನಿಜ, ಆಂಟಿ ಆಕ್ಸಿಡೆಂಟ್‌ಗಳನ್ನು ಹೇರಳವಾಗಿ ಹೊಂದಿರುವುದರಿಂದ ಮಕ್ಕಳು ಹಾಗೂ ದೈಹಿಕ ಕ್ಷಮತೆಯ ಕೊರತೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ಇದು ಅತ್ಯುತ್ತಮವಾದ ಉಪಾಯವಾಗಿದೆ. ಇಂತಹವರು ಎಷ್ಟು ಸಾಧ್ಯವೇ ಅಷ್ಟು ಒಣ ದ್ರಾಕ್ಷಿಗಳನ್ನು ತಿನ್ನುತ್ತಿರ ಬೇಕು.

ಅಷ್ಟೇ ಅಲ್ಲ, ಒಣ ದ್ರಾಕ್ಷಿ ಕ್ಯಾನ್ಸರ್ ಕಾರಕ ಜೀವಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನೂ ಹೊಂದಿದೆ. ಕೊಲೆಸ್ಟ್ರಾಲ್ ಪ್ರಮಾಣ ನಿಯಂತ್ರಣದಲ್ಲಿಡುವಲ್ಲೂ ಇದರ ಪಾತ್ರ ಮಹತ್ವದ್ದು. ಇನ್ನು ವೈರಸ್,ಫಂಗಸ್ನ ವಿರುದ್ಧ ಕೂಡ ಇದು ದೇಹಕ್ಕೆ ರಕ್ಷಣೆ ನೀಡಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ. ಒಣ ದ್ರಾಕ್ಷಿ ಸೇವನೆಯಿಂದ ರಕ್ತ ನಾಳಗಳು ತ್ವರಿತ ಗತಿಯಲ್ಲಿ ಚಟುವಟಿಕೆ ಭರಿತವಾಗುತ್ತವೆ.

ಒಣದ್ರಾಕ್ಷಿಯಲ್ಲಿ ವಿಟಮಿನ್ನುಗಳು ಹೆಚ್ಚಾಗಿವೆ. ರಕ್ತಹೀನತೆಯನ್ನು ತಡೆಯುತ್ತದೆ.ಒಣದ್ರಾಕ್ಷಿಯಲ್ಲಿ ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಶಕ್ತಿಯಿದೆ.ಇವುಗಳನ್ನು ನಿರಂತರವಾಗಿ ದಿನಕ್ಕೆ ಆರು ಇಲ್ಲ ಐದು ತೆಗೆದುಕೊಂಡರೆ ಸಣ್ಣಕರುಳಿನಲ್ಲಿರುವ ವ್ಯರ್ಥ ಪದಾರ್ಥಗಳನ್ನು ಸುಲಭವಾಗಿ ಹೊರಹೊಗುತ್ತವೆ.ಆಯುರ್ವೇದದಲ್ಲಿ ಒಣದ್ರಾಕ್ಷಿಗೆ ಮಹತ್ವದ ಸ್ಥಾನಮಾನ ಇದೆ. ಶೀತ, ಕೆಮ್ಮು, ಕಫ ಎಲ್ಲವನ್ನೂ ದೂರ ಮಾಡುವ ಶಕ್ತಿ ಈ ಒಣದ್ರಾಕ್ಷಿಗೆ ಇದೆ. ಇದರ ಜೊತೆಗೆ ಸೌಂದರ್ಯ ವೃದ್ಧಿಯನ್ನು ಸಹ ಇದು ಮಾಡುತ್ತದೆ.

ಒಣದ್ರಾಕ್ಷಿಯಲ್ಲಿ ಪ್ರೊಟೀನ್, ವಿಟಮಿನ್ನುಗಳು ಹೆಚ್ಚಿರುವುದರಿಂದ ತುಂಬಾ ಸಣ್ಣ ಇರುವವರು ತೆಗೆದುಕೊಳ್ಳಬಹುದು.ಕ್ರೀಡಾಪಟುಗಳು ತಮ್ಮ ಬಲ ವೃದ್ಧಿಸಿಕೊಳ್ಳಲು ಒಣದ್ರಾಕ್ಷಿ ತಿನ್ನುವುದು ಉತ್ತಮ.ಇವುಗಳಲ್ಲಿನ ಕೊಲೆಸ್ಟರಾಲ್, ವಿಟಮಿನ್ನುಗಳು ಮುಂತಾದವು ಪೋಷಕಾಂಶಗಳನ್ನು ಒದಗಿಸಿ ರೋಗ ನಿರೋಧಕ ಶಕ್ತಿ ನೀಡುತ್ತವೆ.

ಒಣದ್ರಾಕ್ಷಿಯಲ್ಲಿನ ಯಾಂಟೀಯಾಕ್ಸಿಡೆಂಟ್ ಗಳು ಕ್ಯಾನ್ಸರ್ ಕಣಗಳನ್ನು ದೂರ ಮಾಡುತ್ತವೆ. ಹೈಬಿಪಿಯನ್ನುಕಡಿಮೆ ಮಾಡುತ್ತದೆ. ಇವುಗಳಲ್ಲಿನ ಪೊಟಾಸಿಯಂ ರಕ್ತನಾಳಗಳಲ್ಲಿನ ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯವಾಗಿರಿಸುತ್ತದೆ. ಒಣದ್ರಾಕ್ಷಿಯಲ್ಲಿನ ವಿಟಮಿನ್ ಬಿ, ಹಾಗೂ ಕಬ್ಬಿಣ ಇರುವುದರಿಂದ ರಕ್ತಕಣಗಳ ಉತ್ಪಾದನೆಗೆ ತುಂಬಾ ಸಹಾಯಕವಾಗಿವೆ.

ಇನ್ನು ವೈರಸ್, ಫಂಗಸ್ನ ವಿರುದ್ಧ ಕೂಡ ಇದು ದೇಹಕ್ಕೆ ರಕ್ಷಣೆ ನೀಡಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ. ಒಣ ದ್ರಾಕ್ಷಿ ಸೇವನೆಯಿಂದ ರಕ್ತ ನಾಳಗಳು ತ್ವರಿತ ಗತಿಯಲ್ಲಿ ಚಟುವಟಿಕೆ ನಡೆಸುತ್ತವೆ.

ಒಣ ದ್ರಾಕ್ಷಿಯ ಪೇಯ ತಯಾರಿಕೆ ಮಾಡುವ ರೀತಿ:

ಎರಡು ಲೋಟ ನೀರು ಹಾಗೂ 8 ರಿಂದ 10 ಒಣದ್ರಾಕ್ಷಿಯನ್ನು ಬಳಸಿಕೊಂಡು ಪೇಯ ತಯಾರಿಸಬಹುದು. ಮೊದಲಿಗೆ ಒಣದ್ರಾಕ್ಷಿಯನ್ನು ಚೆನ್ನಾಗಿ ತೊಳೆಯಬೇಕು. ನೀರನ್ನು ಚಿಕ್ಕ ಪಾತ್ರೆಯಲ್ಲಿ ಹಾಕಿ ಬಿಸಿ ಮಾಡಬೇಕು, ನೀರು ಕುದಿಯಲು ಆರಂಭಿಸುತ್ತಿದ್ದಂತೆ ಒಣದ್ರಾಕ್ಷಿಯನ್ನು ಹಾಕಿ ಕುದಿಸಬೇಕು, ಆ ನಂತರ, ನೀರನ್ನು ತಣ್ಣಗೆ ಮಾಡಿ, ಇಡೀ ರಾತ್ರಿಯಿಡಬೇಕು. ಮರುದಿನ ಬೆಳಿಗ್ಗೆ ನೀರನ್ನು ಸೋಸಿ ಲೋಟದಲ್ಲಿ ಸಂಗ್ರಹಿಸಬೇಕು. ನಂತರ ಆ ನೀರನ್ನು ಉಗುರು ಬೆಚ್ಚಗಾಗುವಂತೆ ಮತ್ತೊಮ್ಮೆ ಕಾಯಿಸಿ, ಕುಡಿದರೆ ಒಳ್ಳೆಯದು. ಬೆಳಗಿನ ವೇಳೆ ಖಾಲಿ ಹೊಟ್ಟೆಗೆ ಈ ನೀರನ್ನು ಕುಡಿಯಬೇಕು. ಆದಾದ ನಂತರ ಸುಮಾರು ಅರ್ಧಗಂಟೆ ಕಾಲ, ಏನನ್ನು ಸೇವಿಸಬಾರದು, ಆ ಬಳಿಕ ನಿತ್ಯದ ಉಪಹಾರ ಸೇವಿಸಬಹುದು. ಇದೇ ವಿಧಾನವನ್ನು ಕೆಲವು ದಿನ ಪಾಲಿಸಬೇಕು. ಸುಮಾರು ಎರಡು ತಿಂಗಳ ಬಳಿಕ ನಿಮ್ಮ ಆರೋಗ್ಯದಲ್ಲಿ, ವಿಶೇಷವಾಗಿ ಯಕೃತ್ ಕಾರ್ಯ ನಿರ್ವಹಣೆಯಲ್ಲಿ ಸುಧಾರಣೆ ಕಾಣಬಹುದು.

1 COMMENT

LEAVE A REPLY

Please enter your comment!
Please enter your name here