ತೂಕ ಕಡಿಮೆ ಮಾಡಬೇಕು ಅಂತ ಇದ್ರೆ ಈ ಆಹಾರ ದಯವಿಟ್ಟು ತಿನ್ನಬೇಡಿ

0
1211

ಎಷ್ಟೇ ಡಯಟ್ ಮಾಡ್ತಿದ್ರು ತೂಕ ಕಡಿಮೆ ಆಗ್ತಾ ಇಲ್ವಾ.. ಅದಕ್ಕೆ ಕಾರಣ ತಿಳಿದುಕೊಳ್ಳಿ

ಎಲ್ಲರು ಸಹಜವಾಗಿ ತೂಕವನ್ನು ತಗ್ಗಿಸಿಕೊಳ್ಳಬೇಕು ಸ್ಲಿಮ್ ಆಗಿ ಕಾಣಬೇಕು ಅಂತ ಆಸೆ ಪಡೋದು ಸಹಜ‌. ಆದರೆ, ದಿನದ ಅಂತ್ಯಕ್ಕೆ ವಿಫಲರಾಗುತ್ತಾರೆ. ಅದಕ್ಕಾಗಿ ಸರಿಯಾದ ಸಮಯ, ಸರಿಯಾದ ವ್ಯಾಯಾಮ ಅಥವಾ ಸರಿಯಾದ ಡೈಟ್. ನಿಯಮಗಳನ್ನು ಪಾಲಿಸದೇ ಇರುವುದರಿಂದ ತೂಕ ತಗ್ಗಿಸಿಕೊಳ್ಳುವುದರಲ್ಲಿ ವಿಫಲವನ್ನು ಕಾಣುತ್ತಿದ್ದಾರೆ. ತೂಕವನ್ನು ತಗ್ಗಿಸಿಕೊಳ್ಳುವುದರಲ್ಲಿ ಡೈಟಿಂಗ್ ತುಂಬಾ ಪ್ರಭಾವವನ್ನು ತೋರುತ್ತದೆ. ಅಷ್ಟೇ ಅಲ್ಲ, ಇದು ಅತ್ಯಂತ ಕಠಿಣವಾದ ಕೆಲಸವು ಹೌದು. ಆದ್ದರಿಂದ ಡೈಟ್ ವಿಷಯದಲ್ಲಿ ನಾವು ತೆಗೆದುಕೊಳ್ಳುವ ಆಹಾರದ ಬಗ್ಗೆ ಅಂದ್ರೆ ಏನು ತಿನ್ನಬೇಕು, ಏನನ್ನು ತಿನ್ನಬಾರದು ತಿಳಿದುಕೊಳ್ಳುವುದು ಅತ್ಯವಶ್ಯಕ.

ಈ ಆರು ಆಹಾರವನ್ನು ದಿನವೂ ತೆಗೆದುಕೊಳ್ಳುವುದನ್ನು ತಗ್ಗಿಸಿದರೆ ತೂಕ ಕಡಿಮೆಮಾಡುವುದು ಕೂಡ ಸುಲಭದ ಕೆಲಸ. ಆದರೆ ನೀವು ತಿನ್ನುವ ಕೆಲವು ಆಹಾರಗಳಲ್ಲಿ ಕೊಬ್ಬಿನ ಅಂಶ ಒಳಗೊಂಡಿರುತ್ತದೆ, ಅದೇ ಸಮಯದಲ್ಲಿ ಹೆಚ್ಚಾಗಿ ನ್ಯೂಟ್ರೀಷಿಯನ್ಸ್ ಹೊಂದಿರುವ ಆಹಾರಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಅದೇ ಸಮಯದಲ್ಲಿ ಕೆಲವು ಆಹಾರಗಳಿಗೆ ಪೂರ್ತಿಯಾಗಿ ದೂರ ಇರಬೇಕು. ಈ ಆಹಾರಗಳು ನಿಶ್ಯಬ್ದವಾಗಿ ತೂಕವು ತಾನಾಗಿಯೇ ಕಡಿಮೆ ಗೊಳ್ಳುತ್ತದೆ. ಅದೇನೆಂದು ನೋಡಿ. ತೂಕ ತಗ್ಗಿಸಿಕೊಳ್ಳುವುದಕ್ಕೆ ಬೆಳಿಗ್ಗೆ ತೆಗೆದುಕೊಳ್ಳಬೇಕಾದ ಟಾಪ್ 6 ಪ್ರೋಟೀನ್ ರಿಚ್ ಆಹಾರಗಳು

ಫ್ರೈಡ್ ಪೊಟ್ಯಾಟೋ ಚಿಪ್ಸ್ :ನೀವು ತಿನ್ನುವ ಈ ಚಿಕ್ಕ ತಿಂಡಿ ಎಣ್ಣೆಯಲ್ಲಿ ಕರಿಯುವುದಾಗಿರುತ್ತದೆ. ಮುಖ್ಯವಾಗಿ ಫ್ರೈಡ್ ಪೊಟ್ಯಾಟೋ ಚಿಪ್ಸ್ ರೀತಿಯದ್ದಾದರೆ, ಸುಲಭವಾಗಿ ನಿಮ್ಮ ತೂಕವನ್ನು ಹೆಚ್ಚಿಸಿಬಿಡುತ್ತದೆ. ಚಿಕನ್, ಫ್ರೆಂಚ್ ಫ್ರೈ ಇವೆಲ್ಲವೂ ಹೃದಯಕ್ಕೇ ಅನಾರೋಗ್ಯ ಕಲ್ಪಿಸುತ್ತದೆ.ಫ್ರೈಡ್ ಪೋಟ್ಯಾಟೋ ತಿನ್ನುವುದರಿಂದ ತೂಕ ಹೆಚ್ಚಾಗುವುದಲ್ಲದೇ ,ಕ್ಯಾಲರಿಗಳು ಫ್ಯಾಟ್, ಇವೆಲ್ಲವೂ ಹೆಚ್ಚಾಗಿ ದೇಹದಲ್ಲಿ ಇನ್ಸುಲಿನ್ ಲೆವೆಲ್ಸ್ ಹೆಚ್ಚಾಗಿ ದೇಹದ ಮೇಲೆ ಕೆಟ್ಟ ಪ್ರಭಾವ ತೋರುತ್ತದೆ.

ಕಾರ್ಬೋನೇಟೆಡ್ ಡ್ರಿಂಕ್ಸ್ :ತೂಕ ತಗ್ಗಿಸಿಕೊಳ್ಳಬೇಕೆಂದರೆ ಈ ಕಾರ್ಬೋನೇಟೆಡ್ ಡ್ರಿಂಕ್ಸ್ ಕುಡಿಯುವುದು ಅಪಾಯಕಾರಿ. ಇದರಿಂದ ಹೊಟ್ಟೆ ಉಬ್ಬುತ್ತದೆ, ಇದರಲ್ಲಿ ಕ್ಯಾಲೊರಿಫಿಕ್ ಹೆಚ್ಚಾಗಿ ಇರುತ್ತವೆ, ಗೆರಿಲಿನ್ ಹಸಿವನ್ನು ಹೆಚ್ಚಿಸುವ ಹಾರ್ಮೋನ್ ಗಳು ಹೆಚ್ಚಾಗುತ್ತದೆ. ಕೆಲವು ಅಧ್ಯಾಯನಗಳ ಪ್ರಕಾರ ಸೋಡಾಗಳು ತೂಕ ಹೆಚ್ಚಾಗುವುದಕ್ಕೆ ಪ್ರಧಾನ ಕಾರಣ ಎನ್ನುತ್ತಿದೆ. ಡೈಟ್ ಸೋಡಾದಲ್ಲಿ ಆರ್ಟೀಫಿಷಿಯಲ್ ಸ್ವೀಟ್ನರ್ಸ್ ಅನ್ನು ಉಪಯೋಗಿಸುವುದರಿಂದ ಮತ್ತಷ್ಟು ಹಸಿವನ್ನು ಹೆಚ್ಚಿಸುತ್ತದೆ. ಆದ್ದರಿಂದ ಸೋಡಾ ಇದನ್ನು ಬಿಡಿ..

ಪಾಸ್ಟ್ರೈಸ್ :ಪಾಸ್ಟೈಸ್ ನೋಡಿದೊಡನೆ, ತಿನ್ನಬೇಕೆಂಬ ಆಸೆ ಹುಟ್ಟಿಸುತ್ತದೆ. ಇದು ಆರೋಗ್ಯಕ್ಕೆ ಹಾನಿಕರ. ತೂಕ ತಗ್ಗುವುದಕ್ಕಿಂತ ಮೊದಲೇ ತೂಕ ಹೆಚ್ಚಾಗಿ ಬಿಡುವಂತೆ ಮಾಡುತ್ತದೆ. ಇವುಗಳ ತಯಾರಿಗೆ ಉಪಯೋಗಿಸುವ ಶುಗರ್ಸ್, ರೀಫೈಂಡ್ ಫ್ಲೋರ್ಸ್, ಆರ್ಟಿಫಿಷಿಯಲ್ ಟ್ರಾನ್ಸ್ ಫ್ಯಾಟ್, ಸಿಹಿಯ ಕೋರಿಕೆಯನ್ನು ತೀರಿಸಬಹುದೇ ಹೊರತು , ತಿಂದ ಪ್ರತಿ ಬಾರಿ ತೂಕ ಹೆಚ್ಚಳ ವಾಗುತ್ತಿದೆ ಎಂದು ನಿರ್ಧರಿಸಿ ಬಿಡಿ.

ಐಸ್ ಕ್ರೀಮ್ಸ್ : ಬೇಸಿಗೆಯಲ್ಲಿ ಬಿಸಿಯಾಗಿರುವ ಈ ದಿನಗಳಲ್ಲಿ ಪ್ರತಿ ಮನೆಯಲ್ಲಿಯೂ ಐಸ್ ಕ್ರೀಂ ಇರುತ್ತದೆ. ನಾವು ಅವರ ಮನೆಗೆ ಹೋದರೂ, ಅವರು ನಮ್ಮ ಮನೆಗೆ ಬಂದರೂ , ಅಥವಾ ಯಾವುದಾದರೂ ಪಾರ್ಟೀ ಅಂತ ಹೋದರೂ , ಹೊರಗೆ ತಿರುಗಾಡಲೆಂದು ಹೋದರೂ ತಪ್ಪದೇ ಐಸ್ ಕ್ರೀಂ ತಿನ್ನುವುದು ಅಭ್ಯಾಸ ಆಗಿಬಿಟ್ಟಿದೆ. ಐಸ್ ಕ್ರೀಂ ನಲ್ಲಿ ಕ್ಯಾಲರಿಗಳು ಜಾಸ್ತಿ, ಹಾಗಾಗಿ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಲು ಕಾರಣವಾಗುತ್ತದೆ. ತಿನ್ನಲು ರುಚಿಯಾಗಿದ್ದರೂ ,ಶುಗರ್ ನಿಂದ ತಯಾರಿಸಿದ್ದಾದ್ದರಿಂದ ಹೈ ಕ್ಯಾಲರಿಗಳು ಆರೋಗ್ಯಕ್ಕೆ ಹಾನಿಯುಂಟು ಮಾಡಿಸುತ್ತದೆ. ಮುಖ್ಯವಾಗಿ ದೇಹದ ತೂಕವನ್ನು ಹೆಚ್ಚಿಸುತ್ತದೆ.

ಶುಗರಿ ಸೆರಲ್ಸ್:ಬ್ರೇಕ್ ಫಾಸ್ಟ್ ಗಾಗಿ ಶುಗರೀ ಸೆರಲ್ಸನ್ನು ನೀವು ತಿನ್ನುತ್ತಿರಬಹುದು, ಆದರೆ ಇದರಲ್ಲಿ ಶುಗರ್ಸ್ ಇರುವುದರಿಂದ ದೇಹಕ್ಕೆ ,ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಹೊಟ್ಟೆಗೆ ಹೆಚ್ಚಿನ ಕ್ಯಾಲರಿಗಳು ಶೇಖರಣೆಯಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕರ. ವ್ಯಾಯಾಮದಿಂದ ಕ್ಯಾಲರಿಗಳನ್ನು ತಗ್ಗಿಸಬೇಕೆಂದುಕೊಂಡರೂ ನಂತರ ಕಷ್ಟವಾಗುತ್ತದೆ. ಆದ್ದರಿಂದ ಫ್ಯಾಟ್ ಅನ್ನು ಕರಗಿಸುವ ಸೆರೆಲ್ಸ್ ಮಾರ್ಕೆಟ್ ನಲ್ಲಿವೆ, ಅವುಗಳನ್ನ ಉಪಯೋಗಿಸುವುದು ಒಳ್ಳೆಯದು.

ವೈಟ್ ಬ್ರೆಡ್ :ಬ್ರೆಡ್ ನಲ್ಲಿ ವಿವಿಧ ರೀತಿಗಳಿವೆ. ವೈಟ್ ಬ್ರೆಡ್ ಮೈದಾ ಹಿಟ್ಟು, ಶುಗರ್ ನಿಂದ ತಯಾರಿಸಲ್ಪಟ್ಟಿರುತ್ತದೆ ಆದ್ದರಿಂದ ಓಬೇಸಿಸಿಟಿಗೆ ಕಾರಣವಾಗುತ್ತದೆ. ವೈಟ್ ಬ್ರೆಡ್ ಬ್ಲಡ್ ಶುಗರ್ ಲೆವೆಲ್ಸ್ ಅನ್ನು ವೇಗವಾಗಿ ಹೆಚ್ಚಿಸುತ್ತದೆ. ಮತ್ತು ಇನ್ನೂ ನೀವು ವೈಟ್ ಬ್ರೆಡ್ ನೊಂದಿಗೆ ಬಟರ್ ಅನ್ನು ಕೂಡ ತಿನ್ನುವುದರಿಂದ ದೇಹದಲ್ಲಿ ಕ್ಯಾಲರಿ ಕೌಂಟ್ ಅನಾಯಾಸವಾಗಿ ಬೆಳೆದು ಬಿಡುತ್ತದೆ. ಆದ್ದರಿಂದ ಇದರ ಬದಲಾಗಿ , ಗೋಧಿಯಿಂದ ತಯಾರಿಸಿದ ಬ್ರೆಡ್ ಅನ್ನು ಆಯ್ಕೆ ಮಾಡಿಕೊಳ್ಳಿ..

ವೈಟ್ ಬ್ರೆಡ್ ತೂಕವನ್ನು ಹೆಚ್ಚಿಸುವುದಲ್ಲದೇ ಅನಾರೋಗ್ಯಕ್ಕೆ ಕೂಡ ಪರೋಕ್ಷವಾಗಿ ಕಾರಣವಾಗುತ್ತದೆ. ಮೈದಾ ಹೆಚ್ಚು ಅಂಶ ಇರುವ ಬ್ರೆಡ್ ಸೇವನೆ ಆರೋಗ್ಯಕ್ಕೆ ತುಂಬಾ ಅಪಾಯಕರ.

LEAVE A REPLY

Please enter your comment!
Please enter your name here