ಹಾರ್ಟ್ ಅಟ್ಯಾಕ್ ಆಗಬಾರದು ಅಂದ್ರೆ ಈ ನಿಯಮಗಳು ಪಾಲಿಸಿ

0
1374

ರಾತ್ರಿ  1  ಗಂಟೆಯಿಂದ 4  ರ ವೇಳೆಯಲ್ಲಿ ಹೆಚ್ಚಾಗಿ ಹೃದಯಘಾತ ಸಂಭವಿಸಲು ಕಾರಣವೇನು

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಎಂಬುದು ಹೆಚ್ಚಾಗಿ ಕಂಡುಬರುತ್ತದೆ, ಅದರಲ್ಲೂ ರಾತ್ರಿ 2 ಗಂಟೆಯ ಸಮಯದಲ್ಲಿ ಹೆಚ್ಚು ಈ ಸಮಯದಲ್ಲೇ ಸಂಭವಿಸಲು ಕಾರಣವೇನು ಮಾನವನ ಶರೀರದಲ್ಲಿ ಒಂದೊಂದು ಅವಯವ ಒಂದೊಂದು ಸಮಯದಲ್ಲಿ ಸಂಭವಿಸುತ್ತದೆ ಅದಕ್ಕೆ ಅನುಗುಣವಾಗಿ ಹೃದಯವು ರಾತ್ರಿ 2 ರಿಂದ 2.30 ರಲ್ಲಿ ಹೆಚ್ಚಾಗಿ ಕ್ರಿಯಾಶೀಲತೆಯಿಂದ ಕೂಡಿರುತ್ತದೆ. ಈ ಸಮಯದಲ್ಲಿ ಹೃದಯಕ್ಕೆ ಹೆಚ್ಚು ಆಮ್ಲಜನಕ ಬೇಕಾಗಿರುತ್ತದೆ ತುಂಬಾ ವೇಗವಾಗಿ ಕೆಲಸ ಮಾಡುವ ಈ ಹೃದಯಕ್ಕೆ ಸರಿಹೊಂದುವ ಹಾಗೇ ಆಮ್ಲಜನಕ ಸಿಗದೇ ಹೋದಾಗ ಹೃದಯದ ಕೆಲಸ ನಿಲ್ಲುತ್ತ, ನೋವು ಕಂಡು ಬರುತ್ತದೆ ಅದು ಹೆಚ್ಚಾಗಿ ರಾತ್ರಿ 2 ರಿಂದ 2.30 ರ ಸಮಯದಲ್ಲಿ ಆಗುತ್ತದೆ.

ಈ ಹೃದಯಾಘಾತ ಸಂಭವಿಸುವ ಮೊದಲು ಕೆಲವು ಲಕ್ಷಣಗಳು ಕಂಡುಬರುತ್ತದೆ ಅವುಗಳೆಂದರೆ ತುಂಬಾ ಸುಸ್ತು,ಸಂಕಟವಾಗುತ್ತದೆ. ಪದೇ ಪದೇ ಮೈ ಕೈ ನೋವು ಕಂಡುಬರುತ್ತದೆ. ಏನೋ ಬಾರವಾದ ವಸ್ತುವನ್ನು ಎದೆಯ ಮೇಲೆ ಇಟ್ಟಿರುವ ಹಾಗೇ ಆಗುತ್ತದೆ. ಉಸಿರಾಟದಲ್ಲಿ ತೊಂದರೆ ಆಗುತ್ತದೆ.ಪದೇ ಪದೇ ಉಸಿರು ಗಟ್ಟುವ ಹಾಗೇ ಆಗುತ್ತದೆ. ಅರೆನಿದ್ರಾವಸ್ಥೆ.ನಿದ್ರೆ ಬರದಿರುವುದು. ಹೆಚ್ಚು ಬೆವರುವುದು. ಸಹ ಕಂಡುಬರುತ್ತದೆ. ಹೊಟ್ಟೆ ತೊಳೆಸುವುದು. ಅಜೀರ್ಣ. ಗ್ಯಾಸ್ ಅಸಿಡಿಟಿ. ಹೊಟ್ಟೆನೋವು ಸಹ ಕಂಡುಬರುತ್ತದೆ. ಶರೀರದ ಮೇಲ್ಬಾಗದಿಂದ ಎಡಗೈ ಕೆಳಗಿನವರೆಗೂ ನೋವು ಬರುತ್ತದೆ.ಕಾಲುಗಳು, ಪಾದಗಳು, ಇಮ್ಮದಿಗಳಲ್ಲಿ ಸೆಳೆತ ಉಂಟಾಗುತ್ತದೆ. ಹೃದಯಸಂಬಂದಿ ಕಾಯಿಲೆಗಳು ಇದ್ದರೆ ಹೃದಯ ಬಡಿತವು ಕಂಡುಬರುತ್ತದೆ. ಆಗಾಗ ಜ್ವರ, ನೆಗಡಿ, ಕೆಮ್ಮು,ಶೀತ ಕಂಡುಬರುತ್ತದೆ.ಜೊತೆಗೆ ತಲೆ ತಿರುಗುತ್ತದೆ, ಕಣ್ಣು ಮಂಜಾಗುತ್ತದೆ. ಹೆಚ್ಚಾಗಿ ತಣ್ಣನೆಯ ಬೆವರು ಹರಿಯುತ್ತದೆ. ಖಂಡಿತ  ಈ ಲಕ್ಷಣಗಳು ಕಂಡುಬಂದರೆ ನಿರ್ಣಲಕ್ಷಣೆ ಮಾಡಬೇಡಿ.

 

ಹೃದಯಾಘಾತ ಸಂಭವಿಸದ ಹಾಗೇ ಎಚ್ಚರ ವಹಿಸುವುದು ಹೇಗೇ ಆರೋಗ್ಯದಾಯಕ ಆಹಾರಗಳನ್ನು ಸೇವಿಸಬೇಕು. ದಿನ ನಿತ್ಯ ಉತ್ತಮ ವ್ಯಾಯಾಮಗಳನ್ನು ಮಾಡಬೇಕು. ದಿನಕ್ಕೆ ಒಂದೂವರೆ ಚಮಚದಷ್ಟು ಉಪ್ಪನ್ನು ಮಾತ್ರ ಸೇವಿಸಬೇಕು. ಕೊಬ್ಬಿನಂಶ ಕಡಿಮೆ ಇರುವ ಪದಾರ್ಥಗಳನ್ನು ಸೇವಿಸಬೇಕು. ಎತ್ತರಕ್ಕೆ ತಕ್ಕಂತೆ ತೂಕ ನೋಡಿಕೊಳ್ಳಬೇಕು.
ಧೂಮಪಾನ. ಮಧ್ಯಪಾನಗಳಿಂದ ದೂರವಿರಬೇಕು. ಒತ್ತಡಗಳಿಂದ ದೂರವಿರಬೇಕು. ಊಟದಲ್ಲಿ ಹೆಚ್ಚಾಗಿ ಮೊಳಕೆ ಕಾಳು ಹಣ್ಣು ತರಕಾರಿ ಸೇವಿಸಬೇಕು. ಊಟದಲ್ಲಿ ಕಾಳು ಮೆಣಸು ಬೆಲ್ಲ ನಿಂಬೆ ರಸ ಉಪಯೋಗಿಸಬೇಕು. ದಿನಾಲು 1 ಚಮಚ ತುಳಸಿ ರಸ ಸೇವಿಸುವುದು. ಅಮೃತ ಬಳ್ಳಿ ಕಷಾಯ ಸೇವಿಸುವುದು. ಬಿಸಿನೀರು ಸೇವನೆ ಮಾಡುವುದು.

 

LEAVE A REPLY

Please enter your comment!
Please enter your name here