ಸಪೋಟ ಹಣ್ಣಿನ ಉಪಯೋಗಗಳು ತಿಳಿದರೆ ನೀವು ದಿನವೂ ತಿನ್ನುತ್ತೀರಾ.

0
2302

ಸಪೋಟ ಎಂಬ ಹಣ್ಣಿನ ಹೆಸರು ಪ್ರತಿಯೊಬ್ಬರಿಗೂ ಗೊತ್ತು. ಸಪೋಟ ಎಂದರೆ ಎಲ್ಲರಿಗೂ ಬಾಯಲ್ಲಿ ನೀರೂರುತ್ತದೆ. ಸಪೋಟಾ ಹಣ್ಣಿಗೆ ಚಿಕ್ಕು ಎಂದೂ ಕರೆಯುತ್ತಾರೆ. ಇದು ಉಷ್ಣವಲಯದಲ್ಲಿ ಬೆಳೆಯುವ ನಿತ್ಯ ಹರಿದ್ವರ್ಣದ ಮರಕ್ಕೆ ಸಪೋಟ ಎಂದು ಕರೆಯಲಾಗಿದೆ. ಸಪೋಟ ಇದು ಒಂದು ಪ್ರಮುಖ ಹಣ್ಣಿನ ಮರ.ಮೂಲತಃ ವೆಸ್ಟ್ ಇಂಡೀಸ್ ಹಾಗೂ ಮೆಕ್ಸಿಕೋಮೂಲಸ್ಥಾನ.ಕರ್ನಾಟಕದಲ್ಲಿ ಕರಾವಳಿ ಹಾಗೂ ಒಳನಾಡಿನಲ್ಲಿ ಪ್ರಮುಖ ತೋಟಗಾರಿಕಾ ಬೆಳೆಯಾಗಿದೆ. ಸಪೋಟ ಹಣ್ಣು ಸೊಗಸಾದ ಕ್ಯಾಲರಿಯುಕ್ತ ಹಣ್ಣುಗಳಾದ ಮಾವಿನ ಹಣ್ಣು, ಬಾಳೆ ಹಣ್ಣು ಮತ್ತು ಹಲಸಿನಹಣ್ಣುಗಳ ವರ್ಗಕ್ಕೆ ಸೇರಿದೆ. ಈ ಹಣ್ಣಿಗೆ ಇತರೆ ಹೆಸರುಗಳು ನೋಸ್ ಬೆರ್ರಿ, ಸಪೋಡಿಲ್ಲಾ ಪ್ಲಮ್, ಚಿಕ್ಕು ಸಪೋಟ, ಇತ್ಯಾದಿಹೆಸರುಗಳಿವೆ.

ಸಪೋಟ ಹಣ್ಣಿನಲ್ಲಿರುವ ಹೇರಳವಾದ ಪೋಷಕಾಂಶಗಳು ಆರೋಗ್ಯಕ್ಕೆ ಬಹಳ ಶ್ರೇಷ್ಠವಾಗಿರುವುದಲ್ಲದೆ ತಿನ್ನಲು ಅತ್ಯಂತ ರುಚಿಯಾಗಿಯೂ ಇರುವುದು ನಮಗೆಲ್ಲರಿಗೂ ತಿಳಿದ ವಿಷಯ. ಈ ಹಣ್ಣಿನಲ್ಲಿರುವ ರುಚಿಯಾದ ತಿರುಳು ಸುಲಭವಾಗಿ ಜೀರ್ಣವಾಗುವುದು ಹಾಗೂ ಅದರಲ್ಲಿರುವ ಹೆಚ್ಚಿನ ಗ್ಲೂಕೋಸ್ ನಮ್ಮ ದೇಹಕ್ಕೆ ಪುನರ್ಚೇತನ ಕೊಡುವ ಶಕ್ತಿಯುಳ್ಳದ್ದಾಗಿದೆ. ಈ ಹಣ್ಣಿನಲ್ಲಿ ಜೀವಸತ್ವಗಳು, ಖನಿಜಾಂಶಗಳು ಮತ್ತು ಟ್ಯಾನಿನ್ ಇವುಗಳು ಸಮೃದ್ಧವಾಗಿವೆ. ಅಷ್ಟು ಮಾತ್ರವಲ್ಲದೆ ಇನ್ನು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ.

ಸಪೋಟ ಹಣ್ಣಿನ ವಿವಿಧ ಆರೋಗ್ಯದ ಲಾಭಗಳ ಕುರಿತು ತಿಳಿಯೋಣ. ಚಿಕ್ಕು ಹಣ್ಣು ಕ್ಯಾನ್ಸರ್‌ ಬರುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಇದರಲ್ಲಿರುವ ಹೇರಳ ಪೌಷ್ಟಿಕಾಂಶದಿಂದಾಗಿ ಸೂಪರ್‌ ಫುಡ್‌ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಹಣ್ಣಿನಲ್ಲಿ ನಾರಿನಂಶ, ಆ್ಯಂಟಿ ಆಕ್ಸಿಡೆಂಟ್‌ ಹಾಗೂ ಕ್ಯಾನ್ಸರ್‌ ನಿರೋಧಕ ಗುಣ ಕೂಡ ಇದೆ. ಆದ್ದರಿಂದ ಹಲವು ಬಗೆಯ ಕ್ಯಾನ್ಸರ್‌ಗಳಿಂದ ರಕ್ಷ ಣೆ ನೀಡುತ್ತದೆ.

ಮೂತ್ರಪಿಂಡದಲ್ಲಿ ಕಲ್ಲುಗಳಾಗಿದ್ದರೆ ಶಸ್ತ್ರಕ್ರಿಯೆಯಿಂದಲೇ ನಿವಾರಿಸಬೇಕೆಂದೇನಿಲ್ಲ. ಬದಲಿಗೆ ಚಿಕ್ಕು ಹಣ್ಣಿನ ಬೀಜಗಳನ್ನು ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿ ಮಾಡಿ ಒಂದು ಲೋಟ ನೀರಿನೊಂದಿಗೆ ಬೆರೆಸಿ ನಿಯಮಿತವಾಗಿ ಕುಡಿಯಬೇಕು. ಈ ಬೀಜಗಳು ಕಲ್ಲುಗಳನ್ನು ಕರಗಿಸಿ ಮೂತ್ರದ ಮೂಲಕ ವಿಸರ್ಜನೆಯಾಗಲು ನೆರವಾಗುತ್ತದೆ.

ಚಿಕ್ಕು ಹಣ್ಣಿನಲ್ಲಿ ವಿಟಮಿನ್‌ ಎ ಅಧಿಕವಾಗಿರುವುದರಿಂದ ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು ಹಾಗೂ ದೃಷ್ಟಿ ಕೂಡ ಉತ್ತಮವಾಗುತ್ತದೆ.

ಚಿಕ್ಕು ಹಣ್ಣಿನಲ್ಲಿರುವ ಕ್ಯಾಲ್ಷಿಯಂ, ಗಂಧಕ, ಕಬ್ಬಿಣ ಹಾಗೂ ಇತರ ಖನಿಜಗಳು ಮೂಳೆಗಳನ್ನು ಆರೋಗ್ಯಕರವಾಗಿ ಹಾಗೂ ಬಲಿಷ್ಠಗೊಳಿಸಲು ನೆರವಾಗುತ್ತವೆ.

ಸಪೋಟ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಾಗಿ ಇರುವುದರಿಂದ ಮಲಬದ್ಧತೆಗೆ ಸಂಭಂದಪಟ್ಟ ಕೊರತೆಗಳನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ. ಹೀಗಾಗಿ ಇದು ದೊಡ್ಡಕರುಳಿನ ಒಳಚರ್ಮವನ್ನು ಕಾಪಾಡುವುದಲ್ಲದೆ ಯಾವುದೇ ಸೋಂಕುಗಳು ಬರುವುದಂತೆ ತಡೆಯುತ್ತದೆ.

ಈ ಹಣ್ಣಿನಲ್ಲಿ ಧಾರಾಳವಾಗಿರುವ ಕಾರ್ಬೋಹೈಡ್ರೇಟ್ಸ್ ಮತ್ತು ಪೋಷಕಾಂಶಗಳು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಬಹಳ ಪ್ರಯೋಜನಕಾರಿ. ಇದು ದೌರ್ಬಲ್ಯ, ವಾಕರಿಕೆ ಮತ್ತು ತಲೆತಿರುಗುವ ಲಕ್ಷಣಗಳನ್ನು ಕಡಿಮಾಡಲು ಸಹಾಯವಾಗುತ್ತದೆ.

ಕ್ಯಾಲ್ಶಿಯಮ್ ಮತ್ತು ಇತರ ಮಿನರಲ್‎ಗಳಾದ ಫಾಸ್ಫರಸ್ ಮತ್ತು ಕಬ್ಬಿಣವನ್ನು ಚಿಕ್ಕುವು ಹೊಂದಿದ್ದು ಮೂಳೆಗಳನ್ನು ಆರೋಗ್ಯಕರವಾಗಿ ಮತ್ತು ಬಲಯುತವಾಗಿರಿಸುವಲ್ಲಿ ಇದು ಸಹಕಾರಿಯಾಗಿದೆ. ಚಿಕ್ಕುವನ್ನು ದಿನವೂ ಸೇವಿಸುವುದರಿಂದ ಮೂಳೆಗಳ ಆರೋಗ್ಯವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ ಅಂತೆಯೇ ಮೂಳೆಗಳ ದೃಢತೆ ಮತ್ತು ಗುಣಮಟ್ಟ ಕೂಡ ಅತ್ಯುತ್ತಮವಾಗಿರುತ್ತದೆ.

ಇದರ ಬೀಜಗಳನ್ನು ಚೆನ್ನಾಗಿ ಅರೆದು ಪೇಸ್ಟ್‌ಮಾಡಿ ಹರಳೆಣ್ಣೆಯಜೊತೆ ಮಿಶ್ರಣ ಮಾಡಿಕೊಂಡು ನೆತ್ತಿಯಮೇಲೆ ಹಚ್ಚಿ. ಒಂದು ರಾತ್ರಿಕಳೆದು ಮಾರನೇ ದಿನ ಚೆನ್ನಾಗಿ ತೊಳೆಯಿರಿ. ಇದರಿಂದ ನಿಮ್ಮ ಕೂದಲು ಮೃದುವಾಗುವುದಲ್ಲದೆ ತಲೆಹೊಟ್ಟಿನ ಸಮಸ್ಯೆಯನ್ನು ನಿಯಂತ್ರಿಸಬಹುದು.

LEAVE A REPLY

Please enter your comment!
Please enter your name here