ಜೇನಿಗೆ ಇರುವೆ ಬರದಂತೆ ತಡೆಯುವುದು ಹೇಗೆ?

0
924

ಜೇನು ಅಂದ್ರೆ ಇರುವೆಗೂ ಅಚ್ಚುಮೆಚ್ಚು

ಸಿಹಿ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಇರುವೆಗಳಿಗೂ ಕೂಡಾ  ನಾವು ಆಹಾರವನ್ನು ಸೇವಿಸುವುದಕ್ಕೆ ಅಥವಾ ಅಡುಗೆಯನ್ನು ಮಾಡಲು ಹೀಗೆ ಬೇರೆ ಬೇರೆ ಕಾರಣಗಳಿಗೆ ಜೇನು ತುಪ್ಪವನ್ನು ಬಳಸಿ ನಂತರ ಅದರೆ ಮುಚ್ಚಳವನ್ನು ಹಾಕದೇ ಹಾಗೆಯೆ ಬಿಟ್ಟು ಬಿಡಬಹುದು, ಅಥವಾ ಮುಚ್ಚಳ ಹಾಕುವುದಕ್ಕೇ ಮರೆತಿರಬಹುದು. ಅಥವಾ ಮಕ್ಕಳು ಜೇನನ್ನು ತಿಂದು ಮಚ್ಚಳ ಹಾಕದೇ ಓಡಿರಬಹುದು. ಆಗ ಸಿಹಿಯ ಪರಿಮಳಕ್ಕೆ ಇರುವೆಗಳು ನಿಮ್ಮ ಮನೆಯ ಅತಿಥಿಗಳಾಗಬಹುದು. ಅಂದರೆ ನಿಮ್ಮ ಮನೆಯಲ್ಲಿರುವ ಜೇನು ಪಾತ್ರೆಗೆ ಮುತ್ತಿಕೊಳ್ಳಬಹುದು. ಆದರೆ ನೀವು ಅದಲ್ಲಾಗಿ ಹೆಚ್ಚು ಯೋಚಿಸುವ ಅಗತ್ಯವಿಲ್ಲ. ನೀವು ಜೇನಿನ ಮುಚ್ಚಳವನ್ನು ತೆಗೆದೇ ಇಟ್ಟರೂ ಇರುವೆಗಳು ಬರದಂತೆ ತಡೆಯಲು ಹೆಲವು ಸುಲಭ ಉಪಾಯಗಳು ಇಲ್ಲಿವೆ.

1. ಒಂದು ಪ್ಲೇಟ್ ನ ಅಂಚಿನ ವರೆಗೆ ಬರುವಂತೆ ನೀರನ್ನು ತುಂಬಿ. ಅದರಲ್ಲಿ ಜೇನಿನ ಪಾತ್ರೆಯನ್ನು ಇಡಿ. ಇರುವೆಗಳಿಗೆ ಪ್ಲೇಟ್ ನಲ್ಲಿ ನೀರು ತುಂಬಿರುವುದರಿಂದ ಒಳಗಡೆ ಬರಲು ಸಾಧ್ಯವಿಲ್ಲ. ಇದರಿಂದ ನಿಮ್ಮ ಜೇನಿನ ಪಾತ್ರೆಯನ್ನು ಇರುವೆಗಳ ಕಾಟವಿಲ್ಲದಂತೆಯೇ ಇಡಬಹುದು.

2. ಜೇನು ತುಂಬಿದ ಬಾಟಲಿಯನ್ನು ನೀರು ತುಂಬಿದ ಪ್ಲೇಟ್ ನ ಮಧ್ಯದಲ್ಲಿ ಇಡಿ. ಇದರಿಂದಾಗಿ ನೀರು ಪ್ಲೇಟ್ ನ ಅಂಚುಗಳಲ್ಲಿ ಹರಡಿಕೊಳ್ಳುಬಹುದು. ಆದ್ದರಿಂದ ಜಾಗ್ರತೆಯಿಂಬ ಬಾಟಲಿಯನ್ನು ಇಡಿರಿ. ನಿಮ್ಮ ಜೇನಿನ ಪಾತ್ರೆಯನ್ನು ಇರುವೆಗಳಿಂದ ತಪ್ಪಿಸಲು ಇಷ್ಟು ಮಾಡಿದರೆ ಸಾಕು. ಆದರೆ ಜೇನಿನ ಇನ್ನಷ್ಟು ರಕ್ಷಣೆಗಾಗಿ ಮುಂದಿನ ಹಂತವನ್ನು ಪ್ರಯೋಗಿಸಿ.

3. ಸೀಮೆ ಸುಣ್ಣದ ತುಂಡು ಅಥವಾ ಚಾಕ್ ಬಳಸಿ ಜೇನು ತುಂಬಿದ ಜಾರ್ / ಬಾಟಲಿಯ ಸುತ್ತ ವೃತ್ತಾಕಾರದಲ್ಲಿ ಬರೆಯಿರಿ. ಸೀಮೆ ಸುಣ್ಣದ ತುಂಡು ನೈಸರ್ಗಿಕವಾಗಿ ಇರುವೆಗಳನ್ನು ತಡೆಗಟ್ಟುವ ಸಾಧನವಾಗಿದೆ.

4. ಜೇನಿಗೆ ಒಂದು ಮುಚ್ಚಳವನ್ನು ಹಾಕಿ. ಜೇನಿನ ಹನಿ ಬಾಟಲಿಯಿಂದ ಹೊರಗೆ ಚೆಲ್ಲದಂತೆ ನೋಡಿಕೊಳ್ಳಿ .

ಸಲಹೆಗಳು : ನೀರು ಆವಿಯಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಆಗಾಗ್ಗೆ ಪ್ಲೇಟ್ ನ್ನು ಪರಿಶೀಲಿಸುತ್ತಿರಿ.

ಈ ವಿಧಾನವನ್ನು ಶಾಶ್ವತವಾಗಿ ಜೇನಿನ ಬಾಟಲಿಯ ಮುಚ್ಚಳವು ಕಳೆದು ಹೋದರೆ ಬಳಸಬಹುದು.

ಪ್ಲೇಟ್ ನಲ್ಲಿ ಸದಾ ನೀರಿರುವಂತೆ ನೋಡಿಕೊಳ್ಳಿ. ಹಾಗೆಯೇ ಆ ಬಾಟಲಿಗೆ

ಸರಿಹೋಗುವಂತಹ ಮುಚ್ಚಳವನ್ನೂ ಹುಡುಕಿ ಹಾಕಿ.

ಈ ವಿಧಾನಕ್ಕೆ ಬೇಕಾಗುವ ವಸ್ತುಗಳು :
2 ರಿಂದ  3 ಸೆ. ಅಗಲದ ಅಂಚುಳ್ಳ ಪ್ಲೇಟ್
ಸೀಮೆ ಸುಣ್ಣದ ತುಂಡು
ಈ ವಿಧಾವದ ಮೂಲಕ ನಿಮ್ಮ ಮನೆಯಲ್ಲಿ ಜೇನನ್ನು ಬಹಳಷ್ಟು ಕಾಲ ಇರುವೆಗಳು ಬರದಂತೆ ಸಂರಕ್ಷಿಸಬಹುದು.

LEAVE A REPLY

Please enter your comment!
Please enter your name here