ಈಕೆ ಈಗ 5 ಕೋಟಿ ರುಪಾಯಿ ಕಂಪನಿಯ ಒಡತಿ
ಪರಿಶ್ರಮ ಇದ್ದರೆ ಅಸಾಧ್ಯವಾದದ್ದು ಯಾವುದು ಇಲ್ಲ ಎಂದು ಹಿಂದೆ ನಾವು ಅನೇಕ ಜನರನ್ನು ನೋಡಿದ್ದೇವೆ ಕೇಳಿದ್ದೇವೆ, ಇಂದು ನಾವು ಹೇಳಲು ಹೊರಟಿರುವುದು ಅಂತಹ ಒಂದು ಮಹಿಳೆಯ ಬಗ್ಗೆ. ಆಕೆ ಒಮ್ಮೆ ದಿನಕ್ಕೆ ಕನಿಷ್ಠ 20 ರೂಪಾಯಿ ಗಳಿಸಲಾಗದ ಸ್ಥಿತಿಯಲ್ಲಿದ್ದಳು. ಆದರೆ ಈಗ ಕೋಟಿ ರೂಪಾಯಿಯ ವಹಿವಾಟು ಮಾಡುವ ಕಂಪನಿಯ ಯಜಮಾನಿ. ಅದಕ್ಕಾಗಿ ಅವರು ತುಂಬಾ ಶ್ರಮಿಸಿದರು. ಅಷ್ಟೇ ಅಲ್ಲದೆ ಒಮ್ಮೆ ತನ್ನಹಾಗೆ ಬದುಕಿದ ಮಹಿಳೆಯರಿಗೆ ನಾನಿದ್ದೀನಿ ಎಂದು ಭರವಸೆ ನೀಡಿ, ಅವರಿಗೆ ಉದ್ಯೋಗಗಳಿಗೆ ದಾರಿ ಮಾಡಿಕೊಟ್ಟಿದ್ದಾರೆ. ಆಕೆ ಮಂಜುಳಾ ವಘೇಲಾ.
ಅಹಮದಾಬಾದ್ನ ಮಂಜುಳಾ ವಘೇಲಾ, 1981 ಕ್ಕೂ ಮುಂಚಿತವಾಗಿ, ಸುಮಾರು 35 ವರ್ಷಗಳ ಹಿಂದೆ ಹೆದ್ದಾರಿಯಲ್ಲಿ ಪೇಪರ್ ಆಯುತ್ತ ಜೀವನ ಸಾಗಿಸುತ್ತಿದ್ದರು. ಪ್ರತಿದಿನ, ಒಂದು ದೊಡ್ಡ ಚೀಲವನ್ನು ಹಿಂಭಾಗದಲ್ಲಿ ಹಿಡಿದು ದಿನವೆಲ್ಲ ಕಷ್ಟಪಟ್ಟು ಕಾಗದ, ಪ್ಲಾಸ್ಟಿಕ್ ಮತ್ತು ಕಬ್ಬಿಣದ ವಸ್ತುಗಳನ್ನು ಸಂಗ್ರಹಿಸುತ್ತಿದ್ದರು, ಹಾಗೆ ಸಂಗ್ರಹಿಸಿದ ವಸ್ತುಗಳನ್ನು ಸಂಜೆಯ ಸಮಯದಲ್ಲಿ ವೇಸ್ಟ್ ಪೇಪರ್ ಮಾರ್ಟ್ ನ ವರ್ತಕರಿಗೆ ಮಾರುತ್ತಿದ್ದರು. ಹಾಗೆ ಮಾರಿದ ಅಂದು ಅವ್ರಿಗೆ ದಿನಕ್ಕೆ 20 ರೂ. ಅದರಿಂದಲೇ ಅವರು ತಮ್ಮ ಕುಟುಂಬವನ್ನು ಪಾಲಿಸಬೇಕಾಗಿತ್ತು. 1981 ರಲ್ಲಿ, ಆಬೆನ್ ಭಟ್ ಹೆಸರಿನ ಮಹಿಳೆ ತನ್ನ ಸ್ವಯಂ ಉದ್ಯೋಗಿ ಮಹಿಳಾ ಸಂಘದ ಸೇವೆ ಹೆಸರಿನಲ್ಲಿ ಮಂಜುಗೆ ಸಹಾಯ ಮಾಡಿದರು. ಮಂಜುಳಾ ತನ್ನದೇ ಆದ ಸಣ್ಣ ಸೇವ ಕಂಪನಿಯನ್ನು ಸ್ಥಾಪಿಸಲು ಸಾಧ್ಯವಾಯಿತು.
ಮಂಜುಳಾ ಶುರುಮಾಡಿದ ಆ ಕಂಪನಿಯ ಹೆಸರು ಶ್ರೀ ಸೌಂದರ್ಯ ಸಫಾಯಿ ಉತ್ಕರ್ಷ್ ಮಹಿಳಾ ಸೇವಾ ಸಹಾಯಕ ಸಂಸ್ಥೆ SSSUMSSML. ಆ ಕಂಪನಿಯಲ್ಲಿ ಕಚೇರಿಗಳು, ಕಾರ್ಯಾಲಯಗಳು, ಇತರ ಕಂಪನಿಗಳಿಗೆ ಸ್ವಚ್ಛಗೊಳಿಸಲು ಕಂಪನಿಯು ಪ್ರಾರಂಭಿಸಿತು, ತನ್ನ ಕಂಪೆನಿಯು ನೋಂದಾಯಿಸಲು ಸುಮಾರು 5 ವರ್ಷಗಳನ್ನು ತೆಗೆದುಕೊಂಡಿತು. ಇದು ಸೇವಾ ಸಂಸ್ಥೆಯಾಗಿರುವುದರಿಂದ, ಉತ್ಪನ್ನಗಳನ್ನು ಮಾರುವ ಸಂಸ್ಥೆಯಲ್ಲವೆಂದು ಅಧಿಕಾರಿಗಳಿಗೆ ಮನವೊಲಿಸಲು ಅಷ್ಟು ದಿನಗಳನ್ನು ತೆಗೆದುಕೊಂಡಿದೆ. ಆದರೆ ನಿಧಾನವಾಗಿ ಕಂಪನಿ ಬೆಳೆಯಿತು.
ಅದರಲ್ಲಿ ಕೆಲಸ ಮಾಡುವವರು ಕೂಡ ಒಮ್ಮೆ ಮಂಜುಳಾರಂತೆ ಪೇಪರ್ ಆಯುವ ಕೆಲಸ ಮಾಡುತ್ತಿದ್ದವರು ಎಂಬುದು ಗಮನಾರ್ಹ. ಅಂತಹ ಮಹಿಳೆಯರನ್ನು ಮಂಜುಳ ಒಟ್ಟುಗೂಡಿಸಿ ಅವರಿಗೆ ಶಿಕ್ಷಣವನ್ನು ಕೊಟ್ಟು ನಂತರ ಅವರ ಕಂಪನಿಯಲ್ಲಿ ಕೆಲಸ ನೀಡಲಾಯಿತು.ಇದರಿಂದ ಆ ಮಹಿಳೆಯರು ತಮ್ಮ ಸ್ವಂತ ಕಾಲುಗಳ ಮೇಲೆ ನಿಂತುಕೊಳ್ಳಲು ಪ್ರಾರಂಭಿಸಿದರು. 400 ಕ್ಕೂ ಹೆಚ್ಚು ಮಹಿಳೆಯರು ಪ್ರಸ್ತುತ ಕೆಲಸ ಮಾಡುತ್ತಿದ್ದಾರೆ. ಈಗ ಅವರು ವರ್ಷಕ್ಕೆ ರೂ 1 ಕೋಟಿಗಿಂತ ಹೆಚ್ಚು ಸಂಪಾದಿಸುತ್ತಾರೆ. ಅದು ತನ್ನ ಜೀವನವನ್ನು ಉಳಿಸಿಕೊಳ್ಳಲು ಅಲ್ಲ, ತನ್ನಂತವರಿಗೆ ಉದ್ಯೋಗವನ್ನು ನೀಡುತಿರುವ ಮಂಜುಳರನ್ನು ನಿಜವಾಗಿಯೂ ಪ್ರಶಂಸಿಸಬೇಕು.