ಒಬ್ಬ ಸಾಮಾನ್ಯ ವ್ಯಕ್ತಿ ಇಂದು 7 ಕೋಟಿ ಕಾರು ಖರೀದಿಸಿದ್ದು

1
2581

7.7 ಕೋಟಿ ರೂ.ಬೆಲೆಯ ವಿಶ್ವದ ಅತ್ಯಾಧುನಿಕ ಲ್ಯಾಂಬೋರ್ಗಿನಿ ಕಾರಿನ ಮಾಲೀಕ ಸತೀಶ್‌

ಮಾಗಡಿ: ಅಂದು ದೇವಸ್ಥಾನದಲ್ಲಿ ವಾರಾನ್ನ ತಿಂದು ಬೆಳೆದ ಹುಡುಗ, ಬದುಕಿನ ಬಂಡಿ ತಳ್ಳಲು ಬೆಂಗಳೂರಿಗೆ 14 ರ ವಯಸ್ಸಿನಲ್ಲೇ ಹೋದ, ಆಫೀಸ್‌ ಬಾಯ್‌ ಆಗಿದ್ದ ಹುಡುಗ ಇದೀಗ 7.7 ಕೋಟಿ ರೂ. ಬೆಲೆಯ ವಿಶ್ವದ ಅತ್ಯಾಧುನಿಕ ಲ್ಯಾಂಬೋರ್ಗಿನಿ ಕಾರಿನ ಒಡೆಯ ಅಲ್ಲದೇ ದಕ್ಷಿಣ ಭಾರತಕ್ಕೆ ಲ್ಯಾಂಬೋರ್ಗಿನಿ ಕಾರಿನ ಡಿಸ್ಟ್ರಿಬ್ಯೂಟರ್‌ ಆಗಿದ್ದಾನೆ.

ಮಾಗಡಿಯ ತಿರುಮಲೆಯ ಶ್ರೀರಂಗನಾಥಸ್ವಾಮಿ ದೇವಾಲಯದ ಬಳಿ ಟ್ರಕ್‌ನಲ್ಲಿದ್ದ ಪರದೆ ಮುಚ್ಚಿದ್ದ ಕಾರನ್ನ ನೋಡಲು ಜನವೋ ಜನ. ಕಾರನ್ನು° ಟ್ರಕ್‌ನಿಂದ ಇಳಿಸಿದಾಕ್ಷಣ ಎಲ್ಲರಿಗೂ ಆಶ್ಚರ್ಯ! ಎಂದೂ ನೋಡಿರದ ಕಾರು ನಮ್ಮೂರಿಗೆ ಬಂದಿದೆ ಎಂದು ಜನ ನಿಬ್ಬೆರಗಾಗಿದ್ದರು.

ತಿರುಮಲೆಯ ರಂಗಾಚಾರ್‌ ಪುತ್ರ ಸತೀಶ್‌, ಬಾಲ್ಯದಲ್ಲಿ ತಾನು ಅನುಭವಿಸಿದ ಬಡತನವನ್ನೆ ಮೆಟ್ಟಿಲನ್ನಾಗಿಸಿಕೊಂಡು ಯಶಸ್ಸಿನ ಹಾದಿ ಸಾಗಿದವ. ಮೊದಲು ಕಂಪ್ಯೂಟರ್‌ ಸಾಫ್ಟ್ವೇರ್‌ ಕಂಪೆನಿಯೊಂದರಲ್ಲಿ ಆಫೀಸ್‌ ಬಾಯ್‌ ಆಗಿದ್ದನು. ನಂತರ ಹಂತ ಹಂತವಾಗಿ ಬೆಳೆದ ಸತೀಶ್‌ ಹೀನಾ ಎಂಬ ಯುವತಿಯನ್ನು ಮದುವೆಯಾದರು.

1989ರಲ್ಲಿ ಮಾರುತಿ 800ನಲ್ಲಿ ಓಡಾಡುತ್ತಿದ್ದ ಸತೀಶ್‌ ನೋಡ ನೋಡುತ್ತಲೇ ಆರ್ಥಿಕವಾಗಿ ಸದೃಢರಾದರು. ಬೆಂಗಳೂರಿನ ಹಲವಡೆ ಅಪಾರ್ಟ್‌ಮೆಂಟ್‌ ನಿರ್ಮಿಸಿ ಮಾಲಿಕರಾದರು. ನಂತರ ಬೆಂಜ್‌, ಮರ್ಸಿಡೆಸ್‌. ವೋಕ್ಸ್‌ವೋಗನ್‌ ಸೇರಿದಂತೆ ಹಲವು ಕಂಪೆನಿಗಳ ಕಾರಿನ ಮಾಲಿಕರಾದರು.

ಕಾರ್‌ ಕ್ರೇಜ್‌: ಕಾರುಗಳ ಬಗ್ಗೆ ವಿಶೇಷ‌ ಕ್ರೇಜ್‌ ಬೆಳೆಸಿಕೊಂಡ ಸತೀಶ್‌ ಎಲ್ಲಾ ರೀತಿಯ ಐಷಾರಾಮಿ ಕಾರುಗಳ ಒಡೆಯರಾದರು. ವಿಶ್ವದ ಅತ್ಯಾಧುನಿಕ ನ್ಪೋರ್ಟ್ಸ್ ಕಾರ್‌ ಆದ ಇಟಲಿ ಮೂಲದ ಲ್ಯಾಂಬೋರ್ಗಿನಿ ಕಾರಿನ ಒಡೆಯನಾಗಬೇಕೆಂಬ ಕನಸು ಹೊಂದಿದ್ದರು. ಈ ಕಾರನ್ನ ಕೊಳ್ಳಲು ಮೊದಲಿಗೆ ಕಂಪನಿಯವರೊಂದಿಗೆ ಮಾತುಕತೆ ನಡೆಸಿದಾಗ ದೆಹಲಿ ಮತ್ತು ಮುಂಬೈ ಶೋರೂಂಗಳಿಂದ ಖರೀದಿ ಮಾಡಬೇಕಾಗಿತ್ತು.

ದಕ್ಷಿಣ ಭಾರತದಲ್ಲಿ ಲ್ಯಾಂಬೋರ್ಗಿನಿ ಕಾರಿನ ಡೀಲರ್‌ಶಿಪ್‌ ಯಾರ ಬಳಿಯೂ ಇರಲಿಲ್ಲ. ಆಗ ಮನಸ್ಸು ಮಾಡಿದ ಸತೀಶ್‌ ಲ್ಯಾಂಬೋರ್ಗಿನಿ ಕಾರಿನ ಡೀಲರ್‌ಶಿಪ್‌ನ° ದಕ್ಷಿಣ ಭಾರತಕ್ಕೆ ಪಡೆದುಕೊಂಡರು. ಬೆಂಗಳೂರಿನ ಕಸ್ತೂರ್‌ಬಾ ರಸ್ತೆ ಮತ್ತು ಕೇರಳದ ಕೊಚ್ಚಿ ಮತ್ತಿತರೆಡೆ ಲ್ಯಾಂಬೋರ್ಗಿನಿ ಶೋರೂಂ ತೆರೆಯಲು ಸಿದ್ಧತೆ ನಡೆಸಿದ್ದಾರೆ.

ತಿರುಮಲೆ ಗ್ರಾಮದ ಮಂದಿ ನಮ್ಮೂರಿನ ಹುಡುಗ ವಿಶ್ವದ ಪ್ರಖ್ಯಾತ ಕಾರಿನ ಮಾಲಿಕನಾಗುವುದರೊಂದಿಗೆ ಡಿಸ್ಟ್ರಿಬ್ಯೂಟರ್‌ ಕೂಡ ಆಗಿದ್ದಾನೆಂದು ಖುಷಿ ಪಡುತ್ತಿದ್ದಾರೆ.

ಯಶಸ್ಸಿನ ಹಾದಿ ಬೆಂಗಳೂರಿಗೆ ಹೋದ ನಂತರ ಅಪಾರ್ಟ್‌ಮೆಂಟ್‌ ಕಟ್ಟುವ ಕಾಯಕಕ್ಕೆ ಇಳಿದರು. ಹೊಯ್ಸಳ ಕನ್‌ಸ್ಟ್ರಕ್ಷನ್ಸ್‌ ಎಂಬ ಕಂಪನಿ ಆರಂಭಿಸಿದ ಸತೀಶ್‌, ಯಶಸ್ಸಿನ ಮೆಟ್ಟಿಲುಗಳನ್ನ ಒಂದಾದ ಮೇಲೆ ಒಂದರಂತೆ ಕಟ್ಟುತ್ತಾ ಹೋದ. ಹಲವಡೆ ಅಪಾರ್ಟ್‌ಮೆಂಟ್‌ ನಿರ್ಮಿಸಿ ಮಾಲಿಕರಾಗಿದ್ದಾರೆ. ಬಡತನದಲ್ಲಿದ್ದಾಗ ತನಗೆ ತನ್ನ ಕುಟುಂಬಕ್ಕೆ ಒಪ್ಪತ್ತಿನ ಊಟ ನೀಡಿದ ಮನೆದೇವರು ತಿರುಮಲೆ ರಂಗನಾಥಸ್ವಾಮಿಯನ್ನು ಮರೆಯಲಿಲ್ಲ. ತನ್ನೆಲ್ಲಾ ಯಶಸ್ಸಿಗೆ ತಿರುಮಲೆ ರಂಗನೇ ಕಾರಣವೆಂದು ಸತೀಶ್‌ ಮೊದಲಿಗೆ ಉತ್ಸವ ಮೂರ್ತಿಗೆ ಸುಮಾರು 60 ಲಕ್ಷ ವೆಚ್ಚದ ಚಿನ್ನದ ಕಿರೀಟ ತೊಡಿಸಿದರು. ನಂತರ ಮೂಲ ದೇವರಿಗೆ 1.20 ಕೋಟಿ ವೆಚ್ಚದಲ್ಲಿ ವಜ್ರಖಚಿತ ಕಿರೀಟ ನೀಡಿದರು. ಹುಟ್ಟೂರಿನಲ್ಲಿ ಸಮಾಜಮುಖೀಯಾಗಿದ್ದಾರೆ.

ಲ್ಯಾಂಬೋರ್ಗಿನಿ ಕಾರ್‌ ಸ್ಪೆಷಾಲಿಟಿ ಈ ಕಾರು ಸಾಮಾನ್ಯ ಹಳ್ಳಿ ನಗರದ ರಸ್ತೆಗಳಲ್ಲಿ ಓಡಾಡಲು ಸಾಧ್ಯವಿಲ್ಲ. ಹಂಪ್ಸ್ಗಳನ್ನ ಹತ್ತಿ ಓಡುವ ಕಾರು ಇದಾಗಿಲ್ಲ. ರಸ್ತೆಗಿಂತು ಮುಕ್ಕಾಲು ಅಡಿ ಎತ್ತರದ ಚಾರ್ಸಿ ಹೊಂದಿರುವ ಈ ಕಾರು ಸಮತಟ್ಟಾದ ರಸ್ತೆಗಳಲ್ಲಿ ಓಡಲು ಮಾತ್ರ ಸಾಧ್ಯ. ಲ್ಯಾಂಬೋರ್ಗಿನಿ ಕಾರು ವಿ-12 ಎಂಜಿನ್‌ನ° ಹೊಂದಿದೆ. ಸೆವನ್‌ ಹಂಡ್ರೆಡ್‌ ಹಾರ್ಸ್‌ಪವರ್‌ ಈ ಕಾರಿನ ಸಾಮರ್ಥ್ಯ. 350 ಕಿಲೋಮಿಟರ್‌ ಈ ಕಾರಿನ ಟಾಪ್‌ಸ್ಪೀಡ್‌ ಹೊಂದಿದೆ. ಈ ಕಾರಿನ ಬಾಡಿ ಪೂರಾ ತುಂಬಾ ಶಕ್ತಿ ಶಾಲಿ ವಸ್ತುವಾಗಿರುವ ಕಾರ್ಬನ್‌ ಫೈಬರ್‌ನಿಂದ ಕೂಡಿದೆ. ನ್ಪೋರ್ಟ್ಸ್ ಯುಟಿಲಿಟಿ ವಾಹನವಾಗಿರುವುದರಿಂದ ಟೂ ಸೀಟರ್‌ ವಾಹನವಾಗಿದೆ. ಕಾರಿನ ಡೋರ್‌ ಹಕ್ಕಿಯ ರೆಕ್ಕೆಗಳಂತೆ ತೆರದುಕೊಳ್ಳುತ್ತದೆ. ಗೀಯರ್‌ ಇಲ್ಲದೇ ಎಕ್ಸಲೇಟರ್‌ ಹೊಂದಿದೆ. ಜತೆಗೆ ಅತ್ಯಾಧುನಿಕ ಫೀಚರ್ಗಳ್ನನ ಈ ನ್ಪೋರ್ಟ್ಸ್ ಕಾರು ಒಳಗೊಂಡಿದೆ. ಒಂದು ಲೀಟರ್‌ ಪೆಟ್ರೋಲ್‌ನಲ್ಲಿ 3 ಕಿಲೋಮೀಟರ್‌ ಪ್ರಯಾಣಿಸಬಹುದು.

1 COMMENT

  1. But how he became rich so soon, The person who is literally begging for food, has no money how cum He can start Apartment constructions?? how cum he will be a millionaire ??? can you explain the same ??

LEAVE A REPLY

Please enter your comment!
Please enter your name here