ದಿನಕ್ಕೆ ಒಂದು ಬಾಳೆಹಣ್ಣು ತಿನ್ನಲೇಬೇಕು ನೀವು

0
1098

ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೇದು ಆದ್ರೆ ಮಾರುಕಟ್ಟೆಯಲ್ಲಿ ಕೆಲವೊಂದು ಹಣ್ಣುಗಳ ದರ ಗಗನಕ್ಕೇರಿರುತ್ತದೆ. ಅಂಥವನ್ನು ಕೊಂಡುಕೊಂಡು ತಿನ್ನಲು ಬಡವರಿಗೆ ಕಷ್ಟಸಾಧ್ಯ. ಆದರೆ ಬಾಳೆ ಹಣ್ಣುಗಳು ಕೈಗೆಟುಕುವ ದರದಲ್ಲಿ ಸಿಗುತ್ತದೆ. ಜೊತೆಗೆ ಸ್ವಲ್ಪ ಜಾಗ ಇದ್ದರೆ ಮನೆಯಲ್ಲೂ ಸಹ ಬೆಳೆಯಬಹುದಾಗಿದೆ. ಈ ಬಾಳೆಹಣ್ಣಿನ ಉಪಯೋಗ ಏನೇನು ಎಂದು ತಿಳಿದುಕೊಂಡರೆ ಖಂಡಿತಾ ಬಾಳೆಹಣ್ಣನ್ನು ತಪ್ಪದೆ ತಿನ್ನುವಿರಿ.

ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶಗಳಾದ ಸುಕ್ರೀಸ್, ಫ್ರುಕ್ಟೋಸ್, ಹಾಗೇ ಗ್ಲುಕೋಸ್ ಈ ರೀತಿ ಹೆಚ್ಚು ಅಂಶಗಳು ಇದೆ

ಎರಡು ಬಾಳೆಹಣ್ಣು ತಿಂದರೆ 100 ನಿಮಿಷಗಳು ಕೆಲಸಮಾಡುವ ಶಕ್ತಿಯನ್ನು ನಮ್ಮ ದೇಹಕ್ಕೆ ಒದಗಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.

ನಮಗೆ ಡಿಪ್ರೆಶನ್ ಇದ್ದಾಗ ಬಾಳೆಹಣ್ಣು ಸೇವಿಸುವುದು ಸೂಕ್ತ

ರಕ್ತಹೀನತೆ ಸಮಸ್ಯೆ ಇದ್ದವರಿಗೆ ಬಾಳೆಹಣ್ಣು ಸೇವಿಸಿದರೆ ಉತ್ತಮ ಮದ್ದು ಎಂದು ವೈದ್ಯರು ತಿಳಿಸಿದ್ದಾರೆ, ಇದರಲ್ಲಿ ಕಬ್ಬಿಣ ಅಂಶ ಹೆಚ್ಚಾಗಿರುವುದರಿಂದ ಹಿಮೋಗ್ಲೋಬಿನ್ ಉತ್ಪಾದಿಸಲು ಸಹಕಾರಿಯಾಗಿದೆ.

ಬಿ.ಪಿ ಸಮಸ್ಯೆ ಇದ್ದವರಿಗೆ ಬಾಳೆಹಣ್ಣು ತುಂಬಾ ಒಳ್ಳೆಯದು. ಕಾರಣ ಇದರಲ್ಲಿ ಪೊಟ್ಯಶಿಯಮ್ ಹೆಚ್ಚಾಗಿದೆ, ಲವಣಾಂಶ ಕಡಿಮೆಯಾಗಿದೆ.

ಮಕ್ಕಳು ಬಾಳೆಹಣ್ಣು ತಿನ್ನುವುದರಿಂದ ಬುದ್ಧಿಶಕ್ತಿ ಹೆಚ್ಚು ಮಾಡುತ್ತದೆ

ಮಲಬದ್ಧತೆಗೆ ಮಾತ್ರೆ ನುಂಗಿ ಸಕಾಗಿದ್ರೆ ಬಾಳೆಹಣ್ಣು ಬಾಳೆಹಣ್ಣು ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ

ಹ್ಯಾಂಗ್ ಓವರ್ ನಂತಹ ಉದಾಸೀನತೆಯ ಪ್ರಸಂಗಗಳಲ್ಲಿ ಬಾಳೆಹಣ್ಣಿನ ಮಿಲ್ಕ್‍ಶೇಕ್ ಹೆಚ್ಚು ಉಪಯುಕ್ತ ಎಂದು ಪ್ರಯೋಗಗಳಿಂದ ತಿಳಿದಿದೆ.

ಸೊಳ್ಳೆ ಕಡಿದಾಗ ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಿಂದ ತಿಕ್ಕಿದರೆ ಬಾವು ಹಾಗೂ ತುರಿಕೆ ಕಡಿಮೆಯಾಗುತ್ತದೆ. ಎಂಬುದು ದೃಡಪಟ್ಟಿದೆ

ಸಿಗರೇಟ್ ಅಭ್ಯಾಸವಿದ್ದವರಿಗೆ ಬಾಳೆಹಣ್ಣಿನ ಸೇವನೆಯಿಂದ ಅದನ್ನು ಕಡಿಮೆಗೊಳಿಸಲು ಸಹಾಯವಾಗಿದೆಯಂತೆ, ಇದಕ್ಕೆ ಈ ಹಣ್ಣಿನಲ್ಲಿರುವ ವಿಟಮಿನ್ ಬಿ-6, ಬಿ-12, ಪೊಟ್ಯಾಶಿಯಮ್, ಮೆಗ್ನೀಶಿಯಮ್ ಅಂಶಗಳೇ ಕಾರಣವೆನ್ನಲಾಗಿದೆ.

ಮಂಗಗಳು ಸದಾ ಸುಖಿಯಾಗಿರುವುದಕ್ಕೆ ಬಾಳೆಯಹಣ್ಣಿನ ಸೇವನೆಯೇ ಕಾರಣವಂತೆ.

ಬಾಳೆಯ ಹಣ್ಣನ್ನು ಸೇಬು ಹಣ್ಣಿನೊಂದಿಗೆ ಹೋಲಿಸಿದರೆ, ಇದರಲ್ಲಿ ನಾಲ್ಕು ಪಟ್ಟು ಪ್ರೋಟೀನ್ ಇದೆ, ಎರಡು ಪಟ್ಟು ಕಾರ್ಬೋಹೈಡ್ರೇಟ್ಸ್ ಇವೆ, ಮೂರುಪಟ್ಟು ಫಾಸ್ಫರಸ್ ಇದೆ, ಐದು ಪಟ್ಟು ವಿಟಮಿನ್ ಎ ಹಾಗೂ ಕಬ್ಬಿಣಸತ್ವ ಇವೆ, ಎರಡುಪಟ್ಟು ಇತರ ವಿಟಮಿನ್ ಹಾಗೂ ಮಿನರಲ್ಸ್ ಇವೆ.

LEAVE A REPLY

Please enter your comment!
Please enter your name here