ಮಂಡಿ ನೋವಿಗೆ ಮನೆಯಲ್ಲೇ ಸುಲಭ ಪರಿಹಾರ

0
1506

ಮಂಡಿ ನೋವಿನಿಂದ ನರಳುವವರು ಈಗಿನ ಸಮಯದಲ್ಲಿ ಹಲವಾರು ಜನ. ಎಸ್ಟೇ ಔಷಧ ಮಾಡಿದರೂ ಸರಿ ಹೋಗಲ್ಲ. ಅಲೋಪಥಿಕ್, ನಾಟಿ ಔಷಧ, ಆಯುರ್ವೆಧಿಕ್ ಅಂತ ಎಲ್ಲೆಲ್ಲೋ ಸುತ್ತುತ್ತಾರೆ. ಆದ್ರೆ ಪರಿಣಾಮ ಮಾತ್ರ ಏನೂ ಇರಲ್ಲ. ಮಂಡಿನೋವಿನ ಕುರಿತು ಇಲ್ಲಿದೆ ಒಳ್ಳೆಯ ಮಾಹಿತಿ. ಓದಿ ತಿಳಿದುಕೊಳ್ಳಿ.

ಗಾಯದಿಂದ ತೀವ್ರತರ ಮೊಣಗಂಟು ನೋವಿಗೆ ನೀವು ತುತ್ತಾಗಿದ್ದರೆ ಇಲ್ಲಿದೆ ಅವುಗಳ ಹಿಂದಿನ ಕಾರಣಗಳು.

ಮಂಡಿ ಚಿಪ್ಪು : ಮೊಣಗಂಟು ಗಾಯ ಕೆಲವೊಮ್ಮೆ ಮೂಳೆ ಅಥವಾ ಮಂಡಿಯಲ್ಲಿರುವ ಕಾರ್ಟಿಲೇಜ್ (ಮೂಳೆಯ ಭಾಗಗಳನ್ನು ಸೇರಿಸುವ ಸ್ನಾಯುಗಳ) ಮುರಿತದಿಂದ ಉಂಟಾಗಬಹುದು. ಹೀಗೆ ಮುರಿದ ಸ್ನಾಯುಗಳ ಚೂರುಗಳು ಮೊಣಗಂಟಿನಲ್ಲಿ ಸಿಕ್ಕಿಹಾಕಿಕೊಂಡು ಇಡೀ ಭಾಗವನ್ನು ಚಲಿಸಲು ಸಾಧ್ಯವಾಗದಂತೆ ಮಾಡುತ್ತದೆ. ಇಂತಹ ನಿರ್ದಿಷ್ಟ ಗಾಯಕ್ಕೆ ಕೂಡಲೇ ಚಿಕಿತ್ಸೆ ನೀಡಬೇಕು. ಇಲ್ಲವಾದರೆ ಅಸಹನೀಯ ನೋವಿನ ಜೊತೆಗೆ ನಿಮ್ಮ ಮೊಣಗಂಟಿಗೆ ಇನ್ನಷ್ಟು ಹಾನಿ ಮಾಡುತ್ತದೆ.

ಬುರ್ಸಿಟಿಸ್ : ದೇಹದ ಗಂಟುಗಳು ಬುರ್ಸಾ ಎಂದು ಕರೆಯಲ್ಪಡುವ ದ್ರವದಿಂದ ರಕ್ಷಿತವಾಗಿವೆ. ಇದು ಮೆತ್ತನೆಯ ಹಾಸಿನಲ್ಲಿ ರೀತಿಯಲ್ಲಿ ಕೆಲಸ ಮಾಡಿ ಗಂಟುಗಳನ್ನು ಗಾಯಗಳಿಂದ ರಕ್ಷಿಸುತ್ತದೆ. ಏಟು ಅಥವಾ ನಿರಂತರ ಒತ್ತಡ ಆ ಭಾಗಕ್ಕೆ ಬಿದ್ದರೆ ಆಗ ಬುರ್ಸಾದ ಮೇಲೆ ಪರಿಣಾಮ ಉಂಟಾಗುತ್ತದೆ. ಇದರಿಂದ ನೋವು ಮತ್ತು ಊತ ಕಾಣಿಸಿಕೊಳ್ಳುತ್ತದೆ.

ಮೆಡಿಕಲ್ ಪ್ಲಿಕಾ ಸಿಂಡ್ರೋಮ್ : ಮೊಣ ಗಂಟುಗಳಲ್ಲಿ ಪ್ಲಿಕಾ ಎಂದು ಕರೆಯಲ್ಪಡುವ ಸ್ನಾಯು ಇರುತ್ತದೆ. ನಿರಂತರವಾಗಿ ಹಲವು ಗಂಟೆಗಳ ಕಾಲ ಓಡುವುದು ಇಲ್ಲವೇ ಇನ್ನಿತರ ಅಥ್ಲೆಟಿಕ್ ಕ್ರಿಯೆಯಲ್ಲಿ ತೊಡಗುವುದರಿಂದ ಇದಕ್ಕೆ ಕಿರಿಕಿರಿ ಉಂಟಾಗಿ ನೋವು ತಲೆದೋರುತ್ತದೆ. ಆದರೆ ಕೆಲವು ದಿನಗಳವರೆಗಿನ ಚಿಕಿತ್ಸೆಯ ಮೂಲಕ ಇದನ್ನು ಗುಣಪಡಿಸಿಕೊಳ್ಳಬಹುದು.

ಕೆಂಡೊನಿಟಿಸ್ : ಮೂಳೆ ಮತ್ತು ಮಾಂಸಖಂಡವನ್ನು ಜೋಡಿಸುವ ಸ್ನಾಯುಗಳ ಸಮೂಹವೇ ಟೆಂಡನ್ಸ್. ಇದರ ಅತಿಯಾದ ಬಳಕೆಯಿಂದ ಅವುಗಳು ಉರಿಯೂತಕ್ಕೆ ಒಳಗಾಗಿ ಊದಿಕೊಳ್ಳಲು ಆರಂಭಿಸುತ್ತವೆ. ಇಂತಹ ಊತದಿಂದ ಅತೀವ ನೋವು ಅನುಭವಿಸಬೇಕಾಗುತ್ತದೆ.

ಮಂಡಿನೋವಿಗೆ ಇಲ್ಲಿದೆ ಕೆಲವು ಚಿಕಿತ್ಸೆಗಳು. 

ಮೈ ತೂಕ ಇಳಿಸಿಕೊಳ್ಳುವುದು ಬೊಜ್ಜಿನ ಮೈ ಮಂಡಿ ನೋವಿಗೆ ಪ್ರಮುಖ ಕಾರಣ. ಮೈ ತೂಕ ಹೆಚ್ಚಾದಂತೆ ಮಂಡಿಯ ಮೇಲೆ ಒತ್ತಡ ಬಿದ್ದು ಮಂಡಿ ನೋವು ಕಾಣಿಸಿಕೊಳ್ಳುವುದು. ಆದ್ದರಿಂದ ತಪ್ಪದೇ ವ್ಯಾಯಾಮ ಹಾಗೂ ಡಯಟ್‌ ಮೂಲಕ ತೂಕ ಕಮ್ಮಿ ಮಾಡಬೇಕು.

ಮಂಡಿ ಬಲಪಡಿಸುವ ವ್ಯಾಯಾಮಗಳು ಯೋಗದಲ್ಲಿ ಮಂಡಿಯನ್ನು ಬಲಪಡಿಸುವ ಆಸನಗಳಿವೆ. ಅವುಗಳನ್ನು ನಿಯಮಿತವಾಗಿ ಮಾಡುವುದರಿಂದ ಮಂಡಿ ನೋವು ಕಡಿಮೆಯಾಗುವುದು.

ಈ ಚುಚ್ಚು ಮದ್ದುಗಳು ಮಂಡಿನೋವು ಕಡಿಮೆ ಮಾಡುವಲ್ಲಿ ಸಹಕಾರಿ ಮಂಡಿ ನೋವು ಕಾಣಿಸಿದ ಪ್ರಾರಂಭದಲ್ಲಿಯೇ ಚುಚ್ಚುಮದ್ದುಗಳನ್ನು ಹಾಕಿಸಿಕೊಳ್ಳುವುದು ಒಳ್ಳೆಯದು.

ಈರುಳ್ಳಿ ಸೇವನೆ: ಸಲ್ಫರ್ ಹಾಗೂ ಉತ್ಕರ್ಷಣ ನಿರೋಧಿ ಗುಣಗಳಿಂದ ಕೂಡಿರುವ ಈರುಳ್ಳಿ ನೋವುಗಳನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಈರುಳ್ಳಿ ಕರುಳಿನ ಚಲನೆಗೂ ಉತ್ತಮವಾಗಿದೆ.

ತೆಂಗಿನ ಎಣ್ಣೆಯ ಮಸಾಜ್: ಬೆಚ್ಚಗಿನ ತೆಂಗಿನೆಣ್ಣೆಯನ್ನು ನೋವಿರುವ ಮಂಡಿಗೆ ಮಸಾಜ್ ಮಾಡುವುದರಿಂದ ಮಂಡಿ ನೋವಿನಿಂದ ಮುಕ್ತಿ ದೊರೆಯುತ್ತದೆ. ಉಗುರು ಬೆಚ್ಚನೆಯ ತೆಂಗಿನೆಣ್ಣೆಯಿಂದ ಮಸಾಜ್ ಮಾಡುವುದರಿಂದ ನೋವಿನಿಂದ ತುರ್ತು ಪರಿಹಾರ ದೊರೆಯುತ್ತದೆ.

ಅರಶಿನ ಹಾಲು ಸೇವನೆ: ಅರಶಿನ ಹಾಲು ಸೇವನೆ ಮಾಡುವುದು ಮಂಡಿ ನೋವಿಗೆ ಉಪಶಮನವನ್ನು ಒದಗಿಸುವ ಒಂದು ಮನೆಮದ್ದಾಗಿದ್ದು ನಿಮಗೆ ತಕ್ಷಣ ಆರಾಮವನ್ನು ನೀಡುತ್ತದೆ. ದಿನವೂ ಅರಶಿನ ಬೆರೆತ ಹಾಲನ್ನು ಕುಡಿಯಿರಿ. ಈ ಸಾಂಬಾರು ಪದಾರ್ಥವು ಆಂಟಿಸೆಪ್ಟಿಕ್ ಆಗಿದೆ. ಹಾಲು ಮೂಳೆಗಳಿಗೆ ಅತ್ಯುತ್ತಮ.

ಯೋಗ ಅಭ್ಯಾಸ: ದಿನವೂ ಮಂಡಿ ನೋವಿಗೆ ಸಂಬಂಧಿಸಿದ ಕೆಲವು ಯೋಗ ಆಸನಗಳ ಅಭ್ಯಾಸ ಮಾಡುವುದರಿಂದ ನೋವು ನಿಧಾನವಾಗಿ ನಿವಾರಣೆಯಾಗುತ್ತದೆ.

LEAVE A REPLY

Please enter your comment!
Please enter your name here