ಮನೆಯಲ್ಲೇ ಉಚಿತವಾಗಿ ಮಾಡಬಹದು ಫೇಶಿಯಲ್

0
1875

ಯಾವ ಕಾರಣಕ್ಕೆ ಫೇಶಿಯಲ್ ಮಾಡಿಸುತ್ತೀರಿ?

ಎಲ್ಲರೂ ಒಂದೇ ಕಾರಣಕ್ಕೆ ಫೇಶಿಯಲ್ ಮಾಡಿಸುವುದಿಲ್ಲ. ಕೆಲವರು ಮೊಡವೆ ಸಮಸ್ಯೆ ನಿವಾರಿಸಲು ಫೇಶಿಯಲ್ ಮಾಡಿಸಿದರೆ ಮತ್ತೆ ಕೆಲವರು ತ್ವಚೆ ಮತ್ತಷ್ಟು ಆಕರ್ಷಕವಾಗಿ ಕಾಣಲು ಫೇಶಿಯಲ್ ಮಾಡಿಸುತ್ತಾರೆ. ವಿಶ್ರಾಂತಿಯ ಅನುಭವ ಪಡೆಯಲು ಪ್ರತ್ಯೇಕವಾದ ಫೇಶಿಯಲ್ ಮಾಡಿಸಬೇಕು. ಫೇಶಿಯಲ್ ನ ಸಂಪೂರ್ಣ ಪ್ರಯೋಜನ ಪಡೆಯಲು ಯಾವ ಕಾರಣಕ್ಕೆ ಫೇಶಿಯಲ್ ಮಾಡುತ್ತಿದ್ದೇವೆ, ಅದಕ್ಕೆ ಯಾವ ಫೇಶಿಯಲ್ ಸೂಕ್ತ ಎಂದು ತಿಳಿದಿರಬೇಕು. ಆದ್ದರಿಂದ ಮೊಡವೆ ನಿವಾರಣೆಗೆ, ತ್ವಚೆಯಲ್ಲಿರುವ ಕಲೆ ನಿವಾರಿಸಲು, ನಯವಾದ ತ್ವಚೆ, ವಿಶ್ರಾಂತಿಗಾಗಿ ಫೇಶಿಯಲ್ ಅಂತ 4 ರೀತಿಯ ಫೇಶಿಯಲ್ ವಿಧಾನ ನೀಡಲಾಗಿದೆ. ನಿಮಗೆ ಯಾವುದು ಸೂಕ್ತವೋ ಅದನ್ನು ಮಾಡಬಹುದು.

1. ಮೊಡವೆಗೆ ಫೇಶಿಯಲ್: ಅಡುಗೆ ಸೋಡಾದ ಫೇಶಿಯಲ್ ಕೂಡ ಮೊಡವೆಗೆ ಪರಿಣಾಮಕಾರಿ. 3-4 ಚಮಚ ಅಡುಗೆ ಸೋಡಾವನ್ನು ಪೇಸ್ಟ್ ನಂತೆ ತಯಾರಿಸಿಕೊಂಡು ಮೃದುವಾಗಿ ಮುಖಕ್ಕೆ ಉಜ್ಜಿಕೊಂಡು 10 ನಿಮಿಷದ ಬಳಿಕ ಬಟ್ಟೆಯಿಂದ ಒರೆಸಿಕೊಳ್ಳಬೇಕು. ಇದು ಮೊಡವೆ ಹೋಗಿಸುವ ಒಂದು ಸುಲಭದ ದಾರಿ.

2.ಬಾಳೆಹಣ್ಣಿನ ಫೇಶಿಯಲ್: 1 ಚೆನ್ನಾಗಿ ಹಣ್ಣಾದ ಬಾಳೆಹಣ್ಣು, 1 ಚಮಚ ಜೇನು, 2-3 ಚಮಚ ನಿಂಬೆರಸ, ಹಾಲಿನ ಕೆನೆ 1/2 ಚಮಚ ಇವುಗಳನ್ನು ಚೆನ್ನಾಗಿ ಬೆರೆಸಿ ಮುಖಕ್ಕೆ ಲೇಪಿಸಿಕೊಂಡು ಮಸಾಜ್ ಮಾಡಿಕೊಳ್ಳಬೇಕು. ನಂತರ 15 ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳಬೇಕು.ಈ ಫೇಶಿಯಲ್ ನಿಂದ ತ್ವಚೆಗೆ ಅವಶ್ಯಕವಿರುವ ವಿಟಮಿನ್ ಎ, ಬಿ, ಸಿ ಮತ್ತು ಇ ದೊರೆಯುವುದರಿಂದ ತ್ವಚೆ ನುಣುಪಾಗಿ ಕಲೆ ಮುಕ್ತವಾಗಿ ಹೊಳಪನ್ನು ಹೊಂದುವುದು

3. ನಯವಾದ ತ್ವಚೆಗಾಗಿ :ಟೊಮೆಟೊ ಫೇಶಿಯಲ್ : ಹಣ್ಣಾದ ಟೊಮೆಟೊ 1, 1 ಚಮಚ ನಿಂಬೆ ರಸ, ಒಂದು ಚಮಚ ಓಟ್ ಮೀಲ್ಸ್ ಇವುಗಳನ್ನು ಮಾಡಿ ಈ ಮಿಶ್ರಣವನ್ನು ಪೇಸ್ಟ್ ರೀತಿ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಡಬೇಕು. ನಂತರ ಬಿಸಿ ನೀರಿನಿಂದ ಮುಖ ತೊಳೆಯಬೇಕು.

4. ವಿಶ್ರಾಂತಿಗಾಗಿ ಹರ್ಬಲ್ ಫೇಶಿಯಲ್ : ಒಂದು ಮೊಟ್ಟೆಯ ಬಿಳಿ, ಒಂದು ಚಮಚ ಗ್ಲಿಸರಿನ್, ಒಂದು ಜೇನು ಒಂದು ಚಮಚ ಹಾಲಿನ ಪುಡಿ ಈ ಎಲ್ಲಾ ವಸ್ತುಗಳನ್ನು ಮಿಶ್ರ ಮಾಡಬೇಕು. ಹೀಗೆ ಮಿಶ್ರ ಮಾಡುವಾಗ ಸ್ವಲ್ಪ ಗಟ್ಟಿಯಾಗಿರುವಂತೆ ಮಾಡಬೇಕು. ಇಲ್ಲದಿದ್ದರೆ ಮುಖಕ್ಕೆ ಹಚ್ಚಿದರೆ ಮಿಶ್ರಣ ಮುಖದಲ್ಲಿ ಜಾರಲಾರಂಭಿಸುತ್ತದೆ. ಈಗ ಈ ಮಿಶ್ರಣಕ್ಕೆ ಸ್ವಲ್ಪ ಲ್ಯಾವೆಂಡರ್ ಎಣ್ಣೆಯನ್ನು ಸೇರಿಸಬೇಕು. ಈಗ ಈ ಮಿಶ್ರಣವನ್ನು ಮುಖಕ್ಕೆ ಮೇಲ್ಮುಖವಾಗಿ ಹಚ್ಚಿ 15- 20 ನಿಮಿಷ ಬಿಡಬೇಕು. ಹೀಗೆ ಹಚ್ಚಿ ಆರಾಮ ಕುರ್ಚಿಯಲ್ಲಿ ಕುಳಿತು ಕಣ್ಣುಗಳನ್ನು ಮುಚ್ಚಿ ನಿಧಾನಕ್ಕೆ ಉಸಿರಾಡುತ್ತಿರಬೇಕು. ಲ್ಯಾವೆಂಡರ್ ಎಣ್ಣೆ ಬಳಸಿರುವುದರಿಂದ ತುಂಬಾ ವಿಶ್ರಾಂತಿಯ ಅನುಭವ ಉಂಟಾಗುತ್ತದೆ.

ಈಗ ಟವಲ್ ಅನ್ನು ಬಿಸಿ ನೀರಿನಲ್ಲಿ ನೆನೆಸಿ ಅದರಿಂದ ಮುಖವನ್ನು ಉಜ್ಜಿ ಫೇಶಿಯಲ್ ತೆಗೆಯಬೇಕು. ನಂತರ ನೀರು ಹಾಕಿ ಮುಖ ತೊಳೆದರೆ ನುಣಪಾದ ಮುಖ ನಿಮ್ಮದಾಗುವುದು.

LEAVE A REPLY

Please enter your comment!
Please enter your name here