ಮಲಗುವ 1 ಗಂಟೆ ಮೊದಲು ಮೊಬೈಲ್ ಬಳಕೆ ಮಾಡಬಾರದು ಏಕೆ ಗೊತ್ತೇ

0
1398

ರಾತ್ರಿ ಸಮಯದಲ್ಲಿ ಏಕೆ ಮೊಬೈಲ್ ಬಳಕೆ ಮಾಡಬಾರದು?

ನಮ್ಮ ದಿನ ನಿತ್ಯದ ಜೀವನದಲ್ಲಿ ತಂತ್ರಜ್ಞಾನಗಳ ಬಳಕೆ ಹೆಚ್ಚು , ಬೆಳಗ್ಗೆ ಎದ್ಧಗಿನಿಂದ ರಾತ್ರಿ ನಿದ್ರೆ ಬರುವ ತನಕ ತಂತ್ರಾಂಶಗಳದ್ದೆ ರಾಜ್ಯಭಾರ, ಅದರಲ್ಲು ಮೊಬೈಲ್ ಬಳಕೆ ಹೆಚ್ಚು, ಮಲಗಿದ್ದಾಗಲು ಪಕ್ಕದಲ್ಲಿ ಮೊಬೈಲ್ ಇಲ್ಲವೆಂದರೇ ಪ್ರಪಂಚವೇ ಇಲ್ಲವೆಂದಗುತ್ತದೆ.

ಇತ್ತೀಚಿನ ದಿನಗಳಲ್ಲಿ ರಾತ್ರಿ ಸಮಯದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಾಡುವವರ ಪ್ರಮಾಣ ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಶೇ. 85 ಕ್ಕಿಂತ ಹೆಚ್ಚು ಯುವಜನರು ರಾತ್ರಿ ಸ್ಮಾರ್ಟ್‌ಫೋನ್ ಬಳಕೆಯಿಂದ ನಿದ್ದೆ ಮಾಡುತ್ತಿಲ್ಲ ಎಂಬ ಶಾಕಿಂಗ್ ವಿಷಯವನ್ನು ಅಧ್ಯಯನವು ತಿಳಿಸಿದೆ.

ನಮ್ಮ ಇತ್ತೀಚಿನ ಜೀವನ ಹೇಗೆಂದರೆ ಗಾಳಿ, ನೀರು, ಆಹಾರ ಬಿಟ್ಟು ಬದುಕುತ್ತೇವೆ,ಆದರೆ ಮೊಬೈಲ್ ಬಿಟ್ಟು ಬದುಕಲು ಸಾಧ್ಯವೇ ಇಲ್ಲ ಎಂದಾಗಿದೆ, ಅಷ್ಟರ ಮಟ್ಟಿಗೆ ಮನುಷ್ಯ ಮತ್ತು ಮೊಬೈಲ್ಗಳ ನಡುವೆ ಸಂಬಂಧ ಬೆಳೆಯುತ್ತಿದೆ.

ನಿದ್ದೆ ಮಾಡುವ ಸಮಯದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಾಡುವ ಪ್ರಮಾಣ ಹೆಚ್ಚಿರುವುದರಿಂದ ಮಾನವನ ಆರೋಗ್ಯ ಸ್ಥಿತಿ ಏರುಪೇರಾಗುತ್ತಿದೆ. ಇದು ಮಾನವನಲ್ಲಿ ಖಿನ್ನತೆ ಮೂಡಲು ಪ್ರಮುಖ ಕಾರಣವಾಗುತ್ತಿರುವ ಪರಿಣಾಮದಿಂದ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಲಾಗಿದೆ.!!
ಆದರೆ ಈ ಮೊಬೈಲ್ ಗಳ ಬಳಕೆಯಿಂದ ತಮ್ಮ ಜೀವನಕ್ಕೆ ಎಷ್ಟು ತೊಂದರೆ ಎಂದು ಗೊತ್ತಿದ್ದರು ಅದರ ಬಳಕೆ ಮಾತ್ರ ಜನಸಂಖ್ಯೆಯ ಹಾಗೇ ಹೇರುತಲೇ ಇದೇ, ಹುಟ್ಟಿದ ಮಗು ಸಹ ಅಮ್ಮ ಎಂದು ಕರೆಯದೇ ಮೊಬೈಲ್ ಎಂದು ಕರೆಯುವಷ್ಟು ಮೊಬೈಲ್ ಬಳಕೆ ಹೆಚ್ಚುತ್ತಿದೆ.

ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ದೆ ಮಾಡದಿದ್ದರೆ ಮಾನವನ ಮೆದುಳಿನ ಮೇಲೆ ಹೆಚ್ಚು ಒತ್ತಡ ಬೀಳಲಿದೆ. ಇದರಿಂದ ನೆನಪಿನ ಶಕ್ತಿ ಮತ್ತು ಏಕಾಗ್ರತೆ ಮೇಲೆ ಪರಿಣಾಮಗಳು ಬೀರುತ್ತದೆ.!! ಹೀಗೆ ಪ್ರತಿದಿನವೂ ಅಭ್ಯಾಸವಾಗುತ್ತಾ ಓದರೆ ಮಾನವನ ಮೆದುಳು ಖಿನ್ನತೆಗೆ ಜಾರುತ್ತದೆ ಎಂದು ಹೇಳಲಾಗಿದೆ.

ಮಾನವನ ದೇಹಕ್ಕೆ ಸರಿಯಾಗಿ ನಿದ್ದೆ ಸಿಗದಿದ್ದರೆ ಅವನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಮಧುಮೇಹ, ತಲೆನೊವ್ವುಗಳಂತಹ ಸಮಸ್ಯೆಗಳ ಜೊತೆಗೆ ಕ್ಯಾನ್ಸರ್‌ ಮತ್ತು ಬಬ್ರೈನ್ ಟ್ಯೂಮರ್‌ನಂತಹ ದೊಡ್ಡ ರೋಗಗಳೂ ಕೂಡ ಮಾನವನನ್ನು ಕಾಡುತ್ತವೆ ಎಂದು ವರದಿ ಹೇಳಿದೆ. ಇದು ಕೂಡ ಮುಂದೆ ಖಿನ್ನತೆಗೆ ಕಾರಣವಾಗುತ್ತದೆ.!!

ಮೊಬೈಲ್ ಫೋನ್‌ನ ವಿಕಿರಣವು ಸಂತಾನೋತ್ಪತ್ತಿಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಹೈಪೊಥಲಾಮಿಕ್, ಪಿಟ್ಯುಟರಿ, ಥೈರಾಯ್ಡ್, ಅಂಡಾಶಯದ ಕಾರ್ಯವೈಖರಿಗೆ ಅಡ್ಡಿಯುಂಟುಮಾಡುತ್ತದೆ. ಮಹಿಳೆಯರೂ ಈ ವಿಷಯದಲ್ಲಿ ತುಂಬ ಜಾಗರೂಕರಾಗಿರಬೇಕು. ಏಕೆಂದರೆ ಹೈಪೊಥಲಾಮಿಕ್ ಹಾಗೂ ಅಂಡಾಶಯವೂ ಇದರಿಂದ ಪ್ರಭಾವಿತವಾಗುವುದರಿಂದ ಮಹಿಳೆಯರಲ್ಲೂ ಫಲವಂತಿಕೆ ಸಮಸ್ಯೆಗಳೂ ತಲೆದೋರುತ್ತವೆ.

ಈ ಸಾಧನದಿಂದ ಹೊರಹೊಮ್ಮುವ ವಿಕಿರಣಗಳು ದೈಹಿಕವಾಗಿ, ಅದರಲ್ಲೂ ಸಾಧನದ ಸಮೀಪವಿರುವ ಜೀವಕೋಶದ ಮೇಲೆ, ಅಡ್ಡ ಪ್ರಭಾವ ಬೀರುತ್ತವೆ.

★ಮೊಬೈಲ್ ಹೆಚ್ಚು ಬಳಕೆಯಿಂದ ನಿದ್ರಾಹೀನತೆ, ಮನಸ್ಸಿನಲ್ಲಿ ಖಿನ್ನತೆ, ಜ್ಞಾಪಕ ಶಕ್ತಿ, ಮೆದುಳಿನ ಕ್ಯಾನ್ಸರ್, ಕಣ್ಣಿನ ಮೇಲೆ ಒತ್ತಡ, ನಿಶಕ್ತಿ, ಇವುಗಳನ್ನು ನಾವು ಬರಮಾಡಿಕೊಳ್ಳುತ್ತೆವೆ.

★ಅದರಲ್ಲೂ ಹೆಚ್ಚಾಗಿ ಕತ್ತಲೆಯಲ್ಲಿ ಮೊಬೈಲ್ ಬಳಸುವುದರಿಂದ ಅದರ ಬೆಳಕು ಕಣ್ಣಿನ ಮೇಲೆ ಬಿದ್ದು ದೃಷ್ಟಿ ಕಳೆದುಕೊಳ್ಳುತ್ತೇವೆ, ಹಾಗೂ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಮೇಲಟೋನಿನ್ ಎಂಬ ಹಾರ್ಮೋನ್ ಉತ್ತ್ಪತಿಯನ್ನು ಕಡಿಮೆ ಮಾಡುತ್ತದೆ.

★ನಮ್ಮ ಆರೋಗ್ಯಕ್ಕೆ ನಿದ್ರೆ ಎಂಬುದು ತುಂಬಾ ಮುಖ್ಯ ಆದರೆ ಈ ಮೊಬೈಲ್ ಬಳಕೆಯಿಂದ ನಿದ್ರೆ ಮಾಡದೆ ಡಿಪ್ರೆಷನ್ ಗೆ ಒಳಗಾಗುತ್ತಾವೇ.

★ಈ ಮೊಬೈಲ್ ಬಳಕೆಯಿಂದ ಪುರುಷತ್ವಕ್ಕೆ ಕುತ್ತು ಬರುತ್ತದೆ, ಹೆಂಗಸರಿಗೆ ಮಕ್ಕಳಾಗಲು ತೊಂದರೆಯಾಗುತ್ತದೆ, ಚಿಕ್ಕ ಮಕ್ಕಳು ಬುದ್ಧಿಮಾಂದ್ಯರಾಗುತ್ತಾರೆ.

★ಒಂದು ಚಿಕ್ಕ ವಿಷಯಕ್ಕೂ ಸಹ ಮೊಬೈಲ್ ಕಿವಿಯ ಬಳಿ ಹೋಗುವುದರಿಂದ ಅದರ ವೈಬ್ರೇಷನ್ ಮೆದುಳಿಗೆ ಹನಿ ಉಂಟು ಮಾಡುತ್ತದೆ, ಹಾಗೂ ಹೃದಯದ ಮೇಲೆ ತುಂಬ ಪರಿಣಾಮ ಉಂಟಾಗಿ ಜೀವವನ್ನೇ ಕಳೆದುಕೊಳ್ಳುವ ಸಂಭವ ಸಹ ಒದಗಿ ಬರುತ್ತದೆ.

ಮಾನವನಿಗೆ ಸ್ಮಾರ್ಟ್‌ಫೋನ್ ಬಿಟ್ಟಿರಲು ಸಾಧ್ಯವಿಲ್ಲ ಎನ್ನುವುದು ನಿಜ. ಆದರೆ, ಮಾನವನ ದೇಹಕ್ಕೆ ಮತ್ತು ಮನಸ್ಸಿಗೆ ಉಲ್ಲಾಸ ನೀಡುವ ನಿದ್ದೆಯನ್ನು ಕೂಡ ಈ ಸ್ಮಾರ್ಟ್‌ಫೋನ್ ಕಸಿದುಕೊಳ್ಳುತ್ತಿರುವುದು ಎಚ್ಚರಿಕೆಯ ವಿಷಯವಾಗಿದೆ. ಹಾಗಾಗಿ, ಸ್ಮಾರ್ಟ್‌ಫೋನ್ ಬಳಕೆಗೆ ಒಂದು ಮಿತಿ ಇದೆ. ಅತಿಯಾದರೆ “ಅಮೃತ ಸಹ ವಿಷ ಆಗುತ್ತದೆ “ಹಾಗೆಯೇ ಮನುಷ್ಯನ ಜೀವನದಲ್ಲಿ ಮೊಬೈಲ್ ಬಳಕೆ ಹೆಚ್ಚಾದರೆ ಜೀವ ಸಹ ಹೋಗುತ್ತೇ, ಆದ್ದರಿಂದ ಮೊಬೈಲ್ ಬಳಸುವುದನ್ನು ಕಡಿಮೆ ಮಾಡಿ ,’ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ‘ಇದೆ ಅದನ್ನು ಕಾಪಾಡಿಕೊಳ್ಳಿ.

LEAVE A REPLY

Please enter your comment!
Please enter your name here