ಕಡಲೆಯಲ್ಲಿ ಏನೇನು ಅಂಶಗಳಿವೆ ಎಂಬುದನ್ನು ತಿಳಿದುಕೊಳ್ಳಿ.

0
1312

ಕಡಲೆ ಒಂದು ದ್ವಿದಳ ಧಾನ್ಯ ಕಾಳು. ಅದರ ಬೀಜಗಳಲ್ಲಿ  ಪ್ರೋಟೀನ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಲೆಗ್ಯುಮಿನೋಸೀ ಕುಟುಂಬದ ಸೈಸರ್ ಆರಿಯಿಟಿನಮ್ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿದೆ‌.

ಕಡಲೆಯ ಉಪಯೋಗಗಳು. ಗಿಡಗಳು ಇನ್ನೂ ಚಿಕ್ಕವಾಗಿರುವಾಗಲೇ ಅವುಗಳ ಚಿಗುರನ್ನು ಮುರಿದು ತೊಪ್ಪಲು ಪಲ್ಲೆಯಾಗಿ ಇಲ್ಲವೆ ಹಾಗೆಯೇ ಒಣಗಿಸಿ ಬಿಟ್ಟು ಕೆಲವು ದಿನಗಳ ಅನಂತರ ಉಪಯೋಗಿಸುತ್ತಾರೆ. ಕಾಳುಗಳು ಇನ್ನೂ ಪುರ್ತಿಯಾಗಿ ಬಲಿಯುವುದಕ್ಕೆ ಮೊದಲೇ ತಿಂದರೂ ರುಚಿಕರವಾಗಿರುವುದಲ್ಲದೇ ಪುಷ್ಟಿಕರವಾಗಿಯೂ ಇರುತ್ತವೆ. ಒಣಗಿದ ಬೀಜಗಳನ್ನು ನೆನೆಹಾಕಿ ತಿನ್ನುವುದು ಆರೋಗ್ಯಕರ ಎಂದು ಎಲ್ಲರಿಗೂ ತಿಳಿದ ಮಾತು. ಹುರಿದು, ಹುರಿಗಾಳನ್ನಾಗಿ ತಿನ್ನುವುದಲ್ಲದೆ ಬೇಳೆಮಾಡಿ ಅಡಿಗೆ ಮಾಡುವುದೂ ಸಾಮಾನ್ಯವಾಗಿದೆ. ಕಡಲೆಯ ಹಿಟ್ಟಿನಿಂದ ಹಲವಾರು ಬಗೆಯ ಸಿಹಿ ಹಾಗೂ ಖಾರದ ತಿಂಡಿಗಳನ್ನು ತಯಾರಿಸುತ್ತಾರೆ.

ಕಡಲೆಯ ಬಗ್ಗೆ ಹೆಚ್ಚಿನ ಮಾಹಿತಿಗಳು

 1. ಕಡಲೆಯಲ್ಲಿ ಫೈಬರ್ ಪದಾರ್ಥಗಳು ಹೆಚ್ಚಾಗಿ ಇರುತ್ತದೆ, ಇದು ಶರೀರದಲ್ಲಿರುವ ಕೊಲೆಸ್ಟ್ರಾಲ್’ನ್ನು ಕಡಿಮೆ
  ಗೊಳಿಸುತ್ತದೆ. ಇದರೊಂದಿಗೆ ಹೃದಯ ಸಂಬಂಧಿ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಬಹುದು.
 2. ನಾನ್ ವೆಜ್ ತಿನ್ನದಿರುವವರು ಕಡಲೆಯನ್ನು ವರವೆಂದು ಕರೆಯಬಹುದು , ಯಾಕೆಂದರೆ ಮಾಂಸದಲ್ಲಿರುವ ಪ್ರೋಟೀನ್’ಗಳೆಲ್ಲವೂ ಕಡಲೆಯಲ್ಲೇ ಲಭ್ಯವಿದೆ.
 3. ಪೊಟಾಶಿಯಂ, ಮೆಗ್ನೀಶಿಯಂ, ಕ್ಯಾಲ್ಸಿಯಂ ರೀತಿ ಎಷ್ಟೋ ತರಹದ ಮಿನರಲ್ಸ್ ಕಡಲೆಯಲ್ಲಿ ಇರುತ್ತದೆ. ಇದು ಬೀಪಿಯನ್ನು ಕಂಟ್ರೋಲ್ ಮಾಡುತ್ತದೆ. ಹೆಚ್ಚು ಹೊತ್ತಿದ್ದರೂ ಹಸಿವು ಆಗದೆ ಮಾಡುತ್ತದೆ. ಇದರಿಂದ ಭಾರ ತಗ್ಗಿಸ ಬೇಕೆಂದಿರುವವರಿಗೆ ಕಡಲೆಗಳು ತುಂಬಾ ಉಪಯೋಗ ವಾಗುತ್ತದೆ ಎಂದು ಹೇಳಬಹುದು.
 4. ಕಡಲೆಗಳನ್ನು ಸಾಮಾನ್ಯವಾಗಿ ತಿನ್ನುತ್ತಿದ್ದರೆ ರಕ್ತದಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆ ಹೆಚ್ಚಾಗುತ್ತದೆ. ಇದರೊಂದಿಗೆ ರಕ್ತಹೀನತೆ ಇರುವವರಿಗೆ ಎಷ್ಟೋ ಒಳ್ಳೆಯದು.
 5. ಕಡಲೆಯಲ್ಲಿ ಅಮೈನೋ ಯ್ಯಾಸಿಡ್ಸ್, ಟ್ರಿಪ್ಟೋಫಾನ್, ಸೆರೊಟೋನಿಕ್ ರೀತಿಯ ಉಪಯೋಗಕರವಾದ ಪೋಷಕಾಂಶಗಳು ಸಮೃದ್ದಿಯಾಗಿರುತ್ತದೆ. ಇವು ಒಳ್ಳೆಯ ನಿದ್ರೆ ಬರುವಂತೆ ಮಾಡುತ್ತದೆ.
 6. ಕಡಲೆಯಲ್ಲಿ ಆಲ್ಫಾ ಲಿನೋಲಿನಿಕ್ ಯ್ಯಾಸಿಡ್ , ಒಮೇಗಾ 3 ಫ್ಯಾಟಿ ಯ್ಯಾಸಿಡ್ ಹೆಚ್ಚಾಗಿ ಇರುತ್ತದೆ, ಇವು ಕೊಲೆಸ್ಟ್ರಾಲ್’ನ್ನು ತಗ್ಗಿಸುವಲ್ಲಿ ಜೊತೆಗೆ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.
 7. ಐರನ್, ಪ್ರೋಟೀನುಗಳು,ಮಿನರಲ್ಸ್ ಸಮೃದ್ದಿಯಾಗಿ ಇರುವುದರಿಂದ ಕಡಲೆಗಳು ಶರೀರಕ್ಕೆ ಒಳ್ಳೆಯ ಶಕ್ತಿಯನ್ನು ಕೊಡುತ್ತದೆ. ಯ್ಯಾಂಟಿ ಆಕ್ಸಿಡೆಂಟುಗಳು ಹೆಚ್ಚಾಗಿ ಇರುವುದರಿಂದ ರೋಗ ನಿರೋಧಕ ಶಕ್ತಿಯು ಹಿಮ್ಮಡಿಗೊಳ್ಳುತ್ತದೆ.
 8. ಹಾಲಿನಲ್ಲಿ ಇರುವ ಕ್ಯಾಲ್ಸಿಯಂಗೆ ಬಹುತೇಕ ಸಮಾನವಾದ ಕ್ಯಾಲ್ಸಿಯಂ ಕಡಲೆಯಲ್ಲಿ ನಮಗೆ ಸಿಗುತ್ತದೆ. ಇದರೊಂದಿಗೆ ಮೂಳೆಗಳು ಧೃಡವಾದ ಶಕ್ತಿ ಸಿಗುತ್ತದೆ.
 9. ಪಾಸ್ಪರಸ್ ಹೆಚ್ಚಾಗಿ ಇರುವುದರಿಂದ ಶರೀರದಲ್ಲಿ ಹೆಚ್ಚಾಗಿರುವ ಉಪ್ಪನ್ನು ಹೊರಕ್ಕೆ ಕಳುಹಿಸುತ್ತದೆ.
 10. ಹಳದಿ ಕಾಮಾಲೆ ಇರುವವರು ಕಡಲೆಗಳನ್ನು ತಿಂದರೆ ಬೇಗನೆ ವಾಸಿಯಾಗುತ್ತಾರೆ.
 11. ಮ್ಯಾಂಗನೀಸ್, ಪಾಸ್ಪರಸ್ ಸಮೃದ್ದಿಯಾಗಿ ಇರುವುದರಿಂದ ಚರ್ಮ ಸಂಬಂಧಿ ಸಮಸ್ಯೆಗಳು ತೊಲಗುತ್ತವೆ. ತುರಿಕೆ, ಗಜ್ಜಿ ರೀತಿಯ ಕಾಯಿಲೆಗಳಿಂದ ಉಪಶಮನ ಸಿಗುತ್ತದೆ..
 12. ರಾತ್ರಿ ನೆನೆಸಿಟ್ಟ ಕಡಲೆಗೆ ಉಪ್ಪು, ಶುಂಠಿ, ಜೀರಿಗೆ ಬೆರೆಸಿ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ. ಕಡಲೆ ಸಿಪ್ಪೆ ತೆಗೆಯದೆ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.
 13. ಮಧುಮೇಹ ರೋಗಿಗಳಿಗೂ ಇದು ಪರಿಣಾಮಕಾರಿ. ಬೆಳ್ಳಂಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವನೆ ಮಾಡಬೇಕು.
 14. ಹುರಿದ ಕಡಲೆಯ ಸೇವನೆ ಮಾಡುವುದರಿಂದ ಪದೇ ಪದೇ ಮೂತ್ರ ಬರುವುದು ಕಡಿಮೆಯಾಗುತ್ತದೆ. ಕಡಲೆ ಜೊತೆ ಬೆಲ್ಲ ಬೆರೆಸಿ ಸೇವನೆ ಮಾಡುವುದರಿಂದ ಮೂತ್ರಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ಕಡಿಮೆಯಾಗುತ್ತವೆ.
 15. ಕಡಲೆ ಹಿಟ್ಟಿನ ಪುಡಿಯನ್ನು ಅರಿಶಿನದ ಜೊತೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮ ಹೊಳಪು ಪಡೆಯುತ್ತದೆ.
 16. ಮಹಿಳೆಯರಿಗೆ ಕೂಡಾ ಕಡಲೆ ಕಾಳು ಸೇವನೆ ಬಹಳ ಸಹಾಯಕಾರಿ. ಈ ಕಾಳಿನಲ್ಲಿರುವ ಫೈಟೊಸ್ಟ್ರೊಜನ್‌‌‌‌‌‌ ಮತ್ತು ಆ್ಯಂಟಿ ಆಕ್ಸಿಡೆಂಟ್‌‌ಗಳು ಸ್ತನ ಕ್ಯಾನ್ಸರ್‌‌‌ ಉಂಟು ಮಾಡುವಂತ ರೋಗಾಣುಗಳನ್ನು ನಾಶ ಮಾಡುತ್ತವೆ.

LEAVE A REPLY

Please enter your comment!
Please enter your name here