ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು ಅಂದರೆ ಅದು ಅಮ್ರತ ಸಮಾನ. ನಮ್ಮೆಲ್ಲರ ಆರೋಗ್ಯಕ್ಕೆ ಸಂಜೀವಿನಿಯಿದ್ದಂತೆ.

0
1446

ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಯಾರು ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುತ್ತಿರಲಿಲ್ಲ. ಇದರ ಬದಲಾಗಿ ನೀರು ಕುಡಿಯಲು ತಾಮ್ರದ ಪಾತ್ರೆಗಳನ್ನು ಬಳಸುತ್ತಿದ್ದರು. ತಾಮ್ರದ ಪಾತ್ರೆಯಿಂದ ನೀರನ್ನು ಕುಡಿಯುವುದರಿಂದ ವ್ಯಕ್ತಿಯ ಆರೋಗ್ಯ ಉತ್ತಮಗೊಳ್ಳುವುದಲ್ಲದೆ, ಹಲವಾರು ರೋಗಗಳ ವಿರುದ್ಧ ಹೋರಾಡುವಲ್ಲಿಯೂ ಇದು ಸಹಾಯ ಮಾಡುತ್ತದೆ.

ತಾಮ್ರದ ಪಾತ್ರೆಯಲ್ಲಿಟ್ಟ ಆಹಾರ ಬಳಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ

ಬದಲಾದ ಕಾಲಮಾನ ಹಾಗೂ ಹೊಸ ಜೀವನ ಶೈಲಿಯಿಂದಾಗಿ ನಿತ್ಯ ನಾವು ಸ್ಟೀಲ್ ಮತ್ತು ಪ್ಲಾಸ್ಟಿಕ್ ತಟ್ಟೆ, ಲೋಟಗಳ ಮೊರೆ ಹೋಗಿದ್ದೇವೆ. ಆದರೆ ತಾಮ್ರದ ಲೋಟದಲ್ಲಿ ಪ್ರತಿ ದಿನ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದರೆ ಇನ್ನೆಂದೂ ನೀವು ಸ್ಟೀಲ್ ಲೋಟಗಳ ಕಡೆ ತಿರುಗಿಯೂ ನೋಡುವುದಿಲ್ಲ..

ವ್ಯಕ್ತಿಯ ಆರೋಗ್ಯ ಉತ್ತಮಗೊಳ್ಳುವುದಕ್ಕೆ ತಾಮ್ರದ ಪಾತ್ರೆಯಿಂದ ಕುಡಿಯುವ ನೀರು ಸಹಾಯ ಮಾಡುತ್ತದೆ. ತಾಮ್ರದ ಪಾತ್ರೆಯಲ್ಲಿನ ನೀರು ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. ತಾಮ್ರ, ಸೂಕ್ಷ್ಮಾಣು ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಎನ್ನಲಾಗಿದ್ದು, ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಥೈರಾಯಿಡ್ ಸಮಸ್ಯೆಗೆ ತಾಮ್ರದ ಕೊರತೆಯೂ ಒಂದು ಪ್ರಮುಖ ಕಾರಣ. ಹೀಗಾಗಿ, ತಾಮ್ರದ ಜಗ್ ನಲ್ಲಿ ಸಂಗ್ರಹಿಸಲಾಗಿರುವ ನೀರನ್ನು, ಊಟಕ್ಕೆ ಮೊದಲು ಕುಡಿಯುವುದರಿಂದ ಥೈರಾಯಿಡ್ ಸಮಸ್ಯೆಗಳ ವಿರುದ್ಧ ಹೋರಾಡಲು ನೆರವಾಗುತ್ತದೆ.

ಇದರ ಪ್ರಯೋಜನಗಳು ಹೀಗಿವೆ:

  1. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
    ತಾಮ್ರದ ಅಂಶ ಮಾನವನ ದೇಹದಲ್ಲಿ ರೋಗ ನಿರೋಧಕ ಅಂಶವನ್ನು ಹೆಚ್ಚಿಸುತ್ತದೆ. ಆ ಮೂಲಕ ಯಾವುದೇ ರೋಗಗಳು ಸುಲಭವಾಗಿ ದೇಹಕ್ಕೆ ತಾಗದಂತೆ ನೋಡಿಕೊಳ್ಳುತ್ತದೆ.
  2. ಬೊಜ್ಜಿನ ಸಮಸ್ಯೆಯಿಂದ ಮುಕ್ತಿ
    ಬೊಜ್ಜಿನಿಂದ ಬಳಲುತ್ತಿರುವ ಮಂದಿ ನಿತ್ಯ ಡಯಟ್ ಹಾಗೂ ವ್ಯಾಯಾಮ ಮಾಡಿದರೂ ತೂಕ ಇಳಿಕೆಯಾಗುತ್ತಿಲ್ಲ ಎಂದು ದುಃಖ ಪಡುತ್ತಾರೆ. ಆದರೆ ತಾಮ್ರದ ಲೋಟದಲ್ಲಿ ನಿತ್ಯ ನೀರು ಕುಡಿಯುವುದರಿಂದ ಅಧಿಕ ಬೊಜ್ಜು ಕೂಡ ನಿಯಂತ್ರಣಕ್ಕೆ ಬರುತ್ತದೆ.
  3. ವಯಸ್ಸನ್ನು ಮರೆಮಾಚುತ್ತದೆ
    ತಾಮ್ರದಲ್ಲಿ ಆ್ಯಂಟಿ ಆಕ್ಸಿಂಡೆಂಟ್ ಅಂಶ ಯಥೇಚ್ಛವಾಗಿದ್ದು, ಇದು ದೇಹದ ಅನಾವಶ್ಯಕ ಬೊಜ್ಜಿನ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡುತ್ತದೆ. ಅಂತೆಯೇ ದೇಹ ಮತ್ತು ಮುಖದ ಮೇಲಿನ ಸುಕ್ಕುಗಳನ್ನು ತೊಡೆದು ಹಾಕುವ ಶಕ್ತಿ ತಾಮ್ರಕ್ಕೆ ಇದ್ದು, ನಿರ್ಜೀವ ಜೀವಕೋಶಗಳನ್ನು ತೊಡೆದುಹಾಕಿ ಹೊಸ ಜೀವಕೋಶಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
  4. ದೇಹದ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
    ಊಟದ ಬಳಿಕ ಅಥವಾ ಇತರೆ ಸಂದರ್ಭಗಳಲ್ಲಿ ತಾಮ್ರದ ಚೊಂಬು ಅಥವಾ ತಾಮ್ರದ ಲೋಟಗಳಲ್ಲಿ ನೀರು ಕುಡಿಯುವುದರಿಂದ ಅದರಲ್ಲಿನ ಅಂಶಗಳು ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಅಂತೆಯೇ ಹೊಟ್ಟೆಯೊಳಗಿನ ಉರಿಯನ್ನು ನಿಯಂತ್ರಿಸುತ್ತದೆ. ಆ ಮೂಲಕ ದೇಹದ ಜೀರ್ಣ ಕ್ರಿಯೆಯನ್ನು ಇದು ಉತ್ತಮಪಡಿಸುತ್ತದೆ.
  5. ಮಾರಕ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ
    ಇನ್ನು ತಾಮ್ರದಲ್ಲಿನ ಆ್ಯಂಟಿ ಆಕ್ಸಿಡೆಂಟ್ ಅಂಶ ಮಾರಕ ಕ್ಯಾನ್ಸರ್ ರೋಗವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಅಂತೆಯೇ ಭವಿಷ್ಯದಲ್ಲಿ ಕ್ಯಾನ್ಸರ್ ರೋಗ ಬರದಂತೆಯೂ ಇದು ತಡೆಯುತ್ತದೆ.
  6. ಚರ್ಮರೋಗ ಸಮಸ್ಯೆಯಲ್ಲೂ ಪರಿಣಾಮಕಾರಿ
    ತಾಮ್ರದಲ್ಲಿರುವ ಅಂಶಗಳು ಮಾನವನ ಚರ್ಮಕ್ಕೆ ಯಾವುದೇ ರೀತಿಯ ಸಮಸ್ಯೆ ಕಾಡದಂತೆ ತಡೆಯುತ್ತದೆ. ಅಂತೆಯೇ ಸಂಧಿವಾತ ಮತ್ತು ಸಂಧಿನೋವಿನಲ್ಲೂ ಇದು ಪರಿಣಾಮಕಾರಿಯಾಗಬಲ್ಲದು
  7. ರಕ್ತ ಹೀನತೆ ಸಮಸ್ಯೆ ದೂರ
    ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ಅದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶ ದೇಹದ ಬೊಜ್ಜನ್ನು ನಿಯಂತ್ರಿಸುವ ಮೂಲಕ ದೇಹ ಸದಾಕಾಲ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುತ್ತದೆ. ಅಂತೆಯೇ ಹೃದಯ ಆರೋಗ್ಯದಲ್ಲೂ ತಾಮ್ರ ಪರಿಣಾಮಕಾರಿಯಾಗಿದ್ದು, ಹೃದಯ ನಾಳಗಳು ಸದಾಕಾಲ ಚಟುವಟಿಕೆಯಿಂದ ನೋಡಿಕೊಳ್ಳುತ್ತದೆ. ಆ ಮೂಲಕ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಪರಿಚಲನೆಯಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ರಕ್ತ ಹೀನತೆ ಸಮಸ್ಯೆ ಕೂಡ ದೂರಾಗುತ್ತದೆ.

LEAVE A REPLY

Please enter your comment!
Please enter your name here