ಬಿರುಕಿನ ಪಾದಗಳಿಗೆ ಮನೆ ಮದ್ದು

0
1437

ಬಿರುಕಿನ ಪಾದಗಳ ರಕ್ಷಣೆ.  ಪಾದದ ರಕ್ಷಣೆ ಬಹಳ ಮುಖ್ಯ. ಬಿರುಕು ಬಿಟ್ಟ ಪಾದಗಳು ಯಮ ಹಿಂಸೆ ನೀಡುತ್ವೆ. ಚಳಿಗಾಲ ಮುಗಿದ್ರೆ ಸಾಕು ಎನ್ನುವ ಪರಿಸ್ಥಿತಿ ಕೆಲವರಿಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಪಾದಗಳ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಕೆಲಸದ ಒತ್ತಡದ ಮಧ್ಯೆಯೂ ಪಾದಗಳ ಆರೈಕೆ ಮಾಡಿಕೊಳ್ಳಬೇಕು.

ಸಮಯ- ಸಮಯಕ್ಕೆ ಪೆಡಿಕ್ಯೂರ್ ಮಾಡಿಕೊಳ್ಳಬೇಕು. ಅದಕ್ಕಾಗಿ ನೀವು ಬ್ಯೂಟಿ ಪಾರ್ಲರ್ ಗೆ ಹೋಗಬೇಕೆಂದೇನಿಲ್ಲ. ಮನೆಯಲ್ಲಿ ಸುಲಭವಾಗಿ ಮಾಡಿಕೊಳ್ಳಬಹುದು. ಬಿಸಿ ನೀರಿಗೆ ಸ್ವಲ್ಪ ಶಾಂಪೂ ಬೆರೆಸಿ ಅದರಲ್ಲಿ ಪಾದವನ್ನಿಡಿ. ಇದರಿಂದ ಡೆಡ್ ಸ್ಕಿನ್ ದೂರವಾಗುವ ಜೊತೆಗೆ ಬಿರುಕಿನಲ್ಲಿ ಸಿಲುಕಿರುವ ಕೆಸರು ಹೋಗುತ್ತದೆ.

ಅರಿಶಿನ ಹಾಗೂ ಆಲಿವ್ ಆಯಿಲ್ ಒಡಕು ನಿವಾರಣೆಗೆ ಮನೆ ಮದ್ದು. ಅರಿಶಿನ ಪುಡಿಗೆ ಆಲಿವ್ ಆಯಿಲ್ ಸೇರಿಸಿ ಪೇಸ್ಟ್ ಸಿದ್ಧಪಡಿಸಿಕೊಳ್ಳಿ. ನಂತ್ರ ಅದನ್ನು ಒಡೆದ ಪಾದಗಳಿಗೆ ಹಚ್ಚಿಕೊಳ್ಳಿ. ಕೆಲವು ದಿನ ಹೀಗೆ ಮಾಡುತ್ತ ಬಂದಲ್ಲಿ ನಿಮ್ಮ ಪಾದ ಕೋಮಲ ಹಾಗೂ ಮೃದುವಾಗುತ್ತದೆ.

ವ್ಯಾಕ್ಸ್ ಮತ್ತು ತೆಂಗಿನೆಣ್ಣೆ ಸೇರಿಸಿ ಮಾಡಿದ ಮಿಶ್ರಣವನ್ನೂ ನೀವು ಪಾದಗಳಿಗೆ ಹಚ್ಚಬಹುದು. ಇದು ಪಾದಗಳ ಉರಿಯನ್ನು ಕಡಿಮೆ ಮಾಡುತ್ತದೆ. ವ್ಯಾಕ್ಸ್ ಹಾಗೂ ತೆಂಗಿನೆಣ್ಣೆಯನ್ನು ಸ್ವಲ್ಪ ಕುದಿಸಿ. ತಣ್ಣಗಾದ ನಂತ್ರ ರಾತ್ರಿ ಹಚ್ಚಿ ಮಲಗುವುದು ಬಹಳ ಒಳ್ಳೆಯದು.

ಗ್ಲಿಸರಿನ್ ಹಾಗೂ ರೋಸ್ ವಾಟರ್ ಮಿಶ್ರಣವನ್ನು ಸಿದ್ಧಮಾಡಿಕೊಳ್ಳಿ. ಒಂದು ಚಮಚ ಗ್ಲಿಸರಿನ್ ಗೆ 2 ಚಮಚ ರೋಸ್ ವಾಟರ್ ಅಳತೆಯಂತೆ ನಿಮಗೆ ಎಷ್ಟು ಬೇಕು ಅಷ್ಟು ಮಿಶ್ರಣವನ್ನು ಸಿದ್ಧಪಡಿಸಿ ಒಂದು ಬಾಟಲಿಯಲ್ಲಿ ಹಾಕಿಟ್ಟುಕೊಳ್ಳಿ. ಪ್ರತಿದಿನ ರಾತ್ರಿ ಪಾದಗಳಿಗೆ ಹಚ್ಚಿ. ನಾಲ್ಕೈದು ದಿನದಲ್ಲಿ ಪರಿಣಾಮ ಕಾಣುತ್ತದೆ.

ಸಾಸಿವೆ ಎಣ್ಣೆ ಬಳಸಿ ಒಡೆದ ಹಿಮ್ಮಡಿಗೆ ಸರಿಯಾಗಿ ಮಸಾಜ್ ಮಾಡಿ ರಾತ್ರಿ ಹಾಗೆಯೇ ಬಿಡಿ. ಉತ್ತಮ ಫಲಿತಾಂಶ ಪಡೆಯಲು ಸಾಕ್ಸ್ ಬಳಸಿ.

ಅಕ್ಕಿ ಮತ್ತು ಜೇನಿನ ಸ್ಕ್ರಬ್ ಅನ್ನು ಮಾಡಿಕೊಳ್ಳಬಹುದು ಇದು ವೇಗವಾಗಿ ಫಲಿತಾಂಶ ನೀಡುತ್ತದೆ.ಜೇನು ಎಕ್ಸ್ ಫಾಲೋಯೆಟ್ ತರಹ ಕೆಲಸ ಮಾಡುತ್ತದೆ ಮತ್ತು ಮಾಯಿಶ್ಚರೈಸ್ ಮಾಡುತ್ತದೆ.ಅಕ್ಕಿ ಹುಡಿಯ ಮಿಶ್ರಣ ಒಡೆದ ಹಿಮ್ಮಡಿಯನ್ನು ನಿವಾರಿಸುತ್ತದೆ.

ಹಾಲು ಮತ್ತು ಜೇನಿನ ಮಿಶ್ರಣವನ್ನು ಹಚ್ಚುವುದರಿಂದ ಕಡಿಮೆಯಾಗುತ್ತದೆ.

ವಸೆಲಿನೆ ಅನ್ನು ದಪ್ಪದಾಗಿ ಹಚ್ಚಿ ಸಾಕ್ಸ್ ಧರಿಸಿ ಮಲಗಿದರೆ ಉತ್ತಮ ಹಿಮ್ಮಡಿ ಪಡೆಯಬಹುದು.

ಲಿಂಬೆ ರಸವನ್ನು ಬೆರೆಸಿದ ಉಗುರು ಬೆಚ್ಚಗಿನ ನೀರಿನಲ್ಲಿ ಕಾಲನ್ನು ಊರಿ ಈ ಮಿಶ್ರಣಕ್ಕೆ ಸ್ವಲ್ಪ ಉಪ್ಪು ಸೇರಿಸಿ ಇದು ಮೃತ ಕೋಶಗಳನ್ನು ತೆಗೆಯುತ್ತದೆ. ಜೊತೆಗೆ ಎಲ್ಲ ರೀತಿಯ ಸೋಂಕಿನಿಂದ ಮುಕ್ತಿ ಸಿಗುತ್ತದೆ.

ಬೆಳ್ಳಿಗ್ಗೆ ಸ್ನಾನಕ್ಕಿಂತ ಐದು ನಿಮಿಷ ಮೊದಲು ಹಿಮ್ಮಡಿಗೆ ಫುಟ್ ಕ್ರೀಂ ಅಥವಾ ಎಣ್ಣೆಯನ್ನು ಹಚ್ಚಿ. ಸ್ನಾನವಾದ ನಂತ್ರ ಮಾಯಿಶ್ಚರೈಸರ್ ಕ್ರೀಮ್ ಹಚ್ಚಿ. ಇದ್ರಿಂದ ಹಿಮ್ಮಡಿ ತೇವಾಂಶಯುಕ್ತವಾಗಿದ್ದು ಒಣ ಚರ್ಮದ ಸಮಸ್ಯೆ ಕಾಡುವುದಿಲ್ಲ.

ವಿಟಮಿನ್ ಎ ಹಾಗೂ ಮಿಟಮಿನ್ ಡಿ ಕೊರತೆಯಿಂದಾಗಿ ಹಿಮ್ಮಡಿ, ಪಾದ, ಕಾಲು ಒಡೆಯುತ್ತದೆ. ಹಾಗಾಗಿ ನಿಮ್ಮ ಆಹಾರದಲ್ಲಿ ವಿಟಮಿನ್ ಎ ಮತ್ತು ಡಿ ಇರುವಂತೆ ನೋಡಿಕೊಳ್ಳಿ.

ಕಾಲಿಗೆ ತೇವಾಂಶ ಬಡಿದರೆ ಸಮಸ್ಯೆ ಹೆಚ್ಚುತ್ತದೆ. ಇದರಿಂದ ಅಂಗಾಲು ತಂಪಾದ ನೆಲ, ತೇವಾಂಶಭರಿತ ಸ್ಥಳವನ್ನು ಆದಷ್ಟು ಕಡಿಮೆ ಸ್ಪರ್ಶಿಸುವಂತೆ ನೋಡಿಕೊಳ್ಳಿ. ಸದಾ ಚಪ್ಪಲಿ ಹಾಗೂ ಶೂ ಧರಿಸಿ. ಮನೆಯಲ್ಲಿದ್ದರೂ ಅದಕ್ಕಾಗಿಯೇ ವಿಶೇಷವಾಗಿ ಸಿದ್ಧಪಡಿಸಿದ ಚಪ್ಪಲಿಯೂ ಈಗ ಮಾರುಕಟ್ಟೆಯಲ್ಲಿ ಸಿಗುತ್ತದೆ. ಅದನ್ನು ತಂದುಕೊಳ್ಳಿ.

ಚಳಿಗಾದಲ್ಲಿ ವಾತಾವರಣ ತುಂಬಾ ಒಣದಾಗಿರುತ್ತದೆ. ಶರೀರದ ಒಳಗೆ ಸಾಕಷ್ಟು ನೀರಿನ ಸಂಗ್ರಹವಿದ್ದರೆ, ಅದು ಕಾಲನ್ನು ಕೂಡ ತಂಪಾಗಿ ಇರಿಸುತ್ತದೆ. ಸಮಸ್ಯೆ ಕಡಿಮೆ ಆಗಬಹುದು. ಹೀಗಾಗಿ ನೀರನ್ನು ಹೆಚ್ಚು ಸೇವಿಸಿ.

ಮಾವಿನ ಮರದ ಅಂಟನ್ನು ಹಚ್ಚಿದರು ಹೊಡೆದ ಹಿಮ್ಮಡಿ ಕಡಿಮೆಯಾಗುತ್ತದೆ.

ಕ್ಯಾಂಡಲ್ ನ ಮೇಣವನ್ನು ಸಾಸಿವೆ ಎಣ್ಣೆ ಜೊತೆ ಮಿಕ್ಸ್ ಮಾಡಿ ಒಡೆದ ಪಾದಗಳಿಗೆ ಹಚ್ಚಿ ಒಂದಿಡಿ ರಾತ್ರಿ ಬಿಡುವುದರಿಂದ ಕಾಲುಗಳು ಮೃದುವಾಗಿ ಬಿರುಕು ಮಾಯವಾಗುತ್ತದೆ. ಸುಮಾರು ಒಂದು ವಾರಗಳ ಕಾಲ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

ಎಳ್ಳೆಣ್ಣೆ ಒಡೆದ ಪಾದಗಳ ಚಿಕಿತ್ಸೆಗೆ ರಾಮಬಾಣ. ಪ್ರತಿ ದಿನ ರಾತ್ರಿ ಮಲಗುವ ಮುನ್ನ ಪಾದಗಳಿಗೆ ಎಳ್ಳೆಣ್ಣೆ ಹಚ್ಚಿದರೇ ಕಾಲುಗಳ ಸೌಂದರ್ಯ ಇಮ್ಮಡಿಗೊಂಡು, ಪಾದಗಳಿಗೆ ಹೊಳಪು ದೊರೆಯುತ್ತದೆ. ಇವುಗಳನ್ನು ಮಾಡುತ್ತ ನಿಮ್ಮ ಪಾದದ ಹಿಮ್ಮಡಿಯ ಒಡೆತ ವನ್ನು ಕಡಿಮೆ ಮಾಡಿಕೊಳ್ಳಿ.

LEAVE A REPLY

Please enter your comment!
Please enter your name here