ಮನೆಯ ಈ ಜಾಗದಲ್ಲಿ ಹಣ ಇಟ್ಟರೆ ತುಂಬಾ ಒಳ್ಳೇದು

0
1427

ಜೀವನದಲ್ಲಿ ಹಣದ ಅವಶ್ಯಕತೆ ಎಷ್ಟಿದೆ ಎಂದರೇ ಹಣ ಇದ್ದರೆ ಜೀವನ, ಹಣವೇ ಜೀವನ ಎಂಬಂತಾಗಿದೆ. ಪ್ರತಿಯೊಬ್ಬರು ಬೆಳಿಗ್ಗೆ ರಾತ್ರಿ ಎಂಬುದನ್ನು ಸಹ ದುಡಿಯುತ್ತಾರೆ ಅದು ಹಣ ಗಳಿಸಲು. ಯಾವ ಕೆಲಸವನ್ನು ಮಾಡದೆ ಹಣ ಗಳಿಸಲು ಸಾಧ್ಯವಿಲ್ಲ ಕೆಲವರು ದಿನ ನಿತ್ಯದ ಆಹಾರವನ್ನು ಪಡೆಯಲು ಕೆಟ್ಟ ಮಾರ್ಗಗಳನ್ನು ಅನುಸರಿಸುತ್ತಾರೆ . ಒಟ್ಟಾಗಿ ಜನರ ಜೀವನ ದುಡ್ಡು ಒಂದು ತಿಂಗಳು ಕಷ್ಟ ಪಟ್ಟು ಸಂಪಾದನೆ ಮಾಡಿದ ಹಣವನ್ನು ಉಳಿಸಿಕೊಳ್ಳಲು ಕೆಲವರು ಹರ ಸಹಾಸ ಮಾಡುತ್ತಾರೆ ಆದರೆ ಹಣ ಖರ್ಚು ಆಗುವುದು ಗೊತ್ತೇ ಆಗುವುದಿಲ್ಲ ಯಾಕೇ ಈ ರೀತಿ ಆಗುತ್ತದೆ ಹಣ ಯಾಕೇ ಉಳಿಯುವುದಿಲ್ಲ ಎಂದು ಯೋಚಿಸುತ್ತಿದ್ದಿರ. ಹಿಂದೂ ಪುರಾಣಗಳ ಪ್ರಕಾರ ಗಳಿಸಿದ ಹಣವನ್ನ ಸರಿಯಾಗಿ ಕಾಪಾಡಿಕೊಳ್ಳುವುದಕ್ಕೆ ಶಾಸ್ತ್ರದ ಪ್ರಕಾರ ಕೆಲವು ಉಪಯುಕ್ತ ಸಲಹೆಗಳನ್ನು ನಮ್ಮ ಹಿರಿಯರು ನಮಗೆ ಕೊಟ್ಟಿದ್ದಾರೆ,  ನಮ್ಮ ಮನೆಯಲ್ಲಿ ಹಣವನ್ನು ಇಡುವ ಜಾಗದ ಮಹಿಮೆ ಆಗಿರುತ್ತದೆ. ಔದು ನಾವು ಎಲ್ಲದಕ್ಕೂ ವಾಸ್ತು. ದಿಕ್ಕು, ಜಾಗಗಳನ್ನು ನೋಡುತ್ತೇವೆ ಅದೇ ರೀತಿ ಹಣವನ್ನು ಸರಿಯಾದ ಜಾಗದಲ್ಲಿ ಇಡಬೇಕು. ಕಂಡ ಜಗದಲ್ಲೆಲ್ಲ ಇಡಬಾರದು.

ಹಾಗಾದರೆ ಯಾವ ಜಾಗದಲ್ಲಿ ಹಣ ಇಡಬಾರದು
ಟೇಬಲ್ ಮೇಲೆ ಎಲ್ಲೆಂದರಲ್ಲಿ ಇಡಬಾರದು. ಹಾಗೂ ಮಹಿಳೆಯರು ಬೇಳೆ ಡಬ್ಬಿಗಳಲ್ಲಿ ಇಡಬಾರದು. ಮಲಗುವ ಮಂಚದ ಕೆಳಗೆ ಇಡಬಾರದು. ಬಾಚಣಿಗೆ ಇಡುವ ಜಾಗದಲ್ಲಿ ಯಾವುದೇ ಕಾರಣಕ್ಕೂ ಹಣ ಇರಬಾರದು. ಸ್ನಾನದ ಮನೆಗಳಲ್ಲಿ ಜೇಬಿನಲ್ಲಿ ಸಿಕ್ಕಿತು ಎಂಬ ಕಾರಣಕ್ಕೆ ಹಣ ಈಡುತ್ತೇವೆ ಅದನ್ನು ಮಾಡಬಾರದು.

ಹಾಗಾದರೇ ಹಣವನ್ನು ಯಾವ ಜಾಗದಲ್ಲಿ ಇಟ್ಟರೆ ಉತ್ತಮ

ಮನೆಯ ಪೂರ್ವ ದಿಕ್ಕಿನಲ್ಲಿ ಲಾಕರ್ ಇಡಬೇಕು. ಹೀಗೆ ಮಾಡಿದ್ರೆ  ನಿಮ್ಮ ಉದ್ಯೋಗ ವ್ಯಾಪಾರ ಚೆನ್ನಾಗಿ ನಡೆಯುತ್ತದೆ.
ಪಶ್ಚಿಮ ದಿಕ್ಕಿನಲ್ಲಿ ಬಾಂಗರ ಇಡಬೇಕು.
ದಕ್ಷಿಣ ದಿಕ್ಕಿನಲ್ಲಿ ಹಣ ಇಡುವುದು ಒಳ್ಳೆಯದು.
ಹಣ ಇಡುವ ಜಾಗ ಶುಭ್ರವಾಗಿರಬೇಕು. ಆಗ ಮನೆಗೆ ಬಂದ ಲಕ್ಷ್ಮಿ ಮನೆಯಲ್ಲೇ ಉಳಿಯಲು ಸಾಧ್ಯ.
ಎರಡು ಗಜಗಳುಳ್ಳ ಲಕ್ಷ್ಮಿ ಪ್ರತಿಮೆಯನ್ನು ಇಟ್ಟುಕೊಳ್ಳುವುದು ಒಳ್ಳೆಯದು.

ಮಲಗುವ ಮುನ್ನ ಮನೆಯ ಎಲ್ಲ ದೀಪಗಳನ್ನು ಹೋಗಿಸಬೇಡಿ.ಒಂದಾದರೂ ದೀಪ ಉರಿಯಲೇ ಬೇಕು.
ಲಿವಿಂಗ್ ರೂಮ್ ಗಳಲ್ಲಿ ಅಕ್ವೇರಿಯಂ ಇಡುವುದು ಸಹ ಒಳ್ಳೆಯದು.ಮನೆಯ ದ್ವಾರ ಶುಭ್ರವಾಗಿರಬೇಕು ಜೊತೆಗೆ ಮನೆಯು ಶುಭ್ರವಾಗಿರಬೇಕು ಲಕ್ಷ್ಮಿ ದೇವಿಯು ಮನೆಗೆ ಆಗಮಿಸುವ ರೀತಿ ಮನೆ ಇರಬೇಕು.ಮನೆಯ ನೈರುತ್ಯ ಭಾಗವು ಕುಬೇರ ಸ್ಥಾನವನ್ನು ಗಳಿಸಿದೆ.

ಇವುಗಳನ್ನು ಅನುಸರಿಸುವ ಜೊತೆಗೆ ಕಷ್ಟ ಪಟ್ಟು ಸಂಪಾದಿಸಿದ ಹಣವನ್ನು ಉಳಿಸಿಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳಬೇಕು. ಯಾರಿಗೂ ಅನ್ಯಾಯ ತೊಂದರೆ ಮಾಡದೆ ಹಣ ಗಳಿಸಿ. ಹಣ ಉಳಿಸಿ. ನೆಮ್ಮದಿಯ ಜೀವನ ನೆಡೆಸಿ. ಆಚಾರ. ನಮ್ಮ ಧರ್ಮ ನಂಬಿಕೆಗಳು ನಂಬುವುದು ಬಿಡುವುದು ನಿಮ್ಮ ಇಷ್ಟ.

LEAVE A REPLY

Please enter your comment!
Please enter your name here