ಯಾವ ಭಾಗಗಳಲ್ಲಿ ಕಂಡು ಬರುತ್ತದೆ ಎಂದು ತಿಳಿದು ಎಚ್ಚರವಹಿಸಿ. ಇಲ್ಲ ಅಂದ್ರೆ ಅಪಾಯ ತಪ್ಪಿದಲ್ಲ

0
1017

ತಲೆನೋವು ತಲೆಯ ಯಾವ ಭಾಗಗಳಲ್ಲಿ ಕಂಡು ಬರುತ್ತದೆ ಎಂದು ತಿಳಿದು ಎಚ್ಚರವಹಿಸಿ.

ಶಾಲೆಗೆ ಚಕ್ಕರ್ ಹೊಡೆದು ಸಿನೆಮಾ ನೋಡಲು ಅಥವಾ ಯಾವುದೋ ಕೆಲಸಕ್ಕಾಗಿ ಕಛೇರಿಯಿಂದ ಬೇಗನೇ ಹೊರಹೋಗಲು ಅಥವಾ ಒಲ್ಲದ ಕೆಲಸವನ್ನು ಮಾಡದೇ ಇರಲು ನಾವೆಲ್ಲಾ ಒಂದು ಸಾಮಾನ್ಯವಾದ ನೆಪವನ್ನು ನೀಡುತ್ತೇವೆ. ಅದೇ ತಲೆನೋವು. ಆದರೆ ನಿಜವಾದ ತಲೆನೋವು ನಿಜಕ್ಕೂ ದೇಹವನ್ನು ಒಳಗಿನಿಂದ ಹಿಂಡುವ ಮಹಾ ನೋವಾಗಿದೆ. ವೈದ್ಯವಿಜ್ಞಾನಕ್ಕೆ ಇಂದಿಗೂ ಸವಾಲಾಗಿರುವ ತಲೆನೋವಿನ ಮೂಲ ಹಾಗೂ ಸೂಕ್ತ ಚಿಕಿತ್ಸೆ ಇಂದಿಗೂ ಲಭ್ಯವಿಲ್ಲ. ಪ್ರಸ್ತುತ ಲಭ್ಯವಿರುವ ಔಷಧಿಗಳೆಲ್ಲಾ ಈ ನೋವಿನ ಸಂಜ್ಞೆಗಳು ಮೆದುಳನ್ನು ತಲುಪದಿರುವಂತೆ ಮಾಡುವ ಉಪಾಯಗಳಷ್ಟೇ

ತಲೆನೋವುಗಳಲ್ಲಿಯೂ ವಿವಿಧ ಪ್ರಕಾರಗಳಿವೆ. ಚಿಕ್ಕದಾಗಿರುವ ತಲೆನೋವಿನಿಂದ ಹಿಡಿದು ಪಂಚೇಂದ್ರಿಯಗಳ ಮೇಲಿನ ಹತೋಟಿಗಳನ್ನೇ ಅಲ್ಲಾಡಿಸುವಂತಹ ಮೈಗ್ರೇನ್ ತಲೆನೋವುಗಳಿವೆ. ಅಮೇರಿಕಾದಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ ಶೇಖಡಾ ಮೂವತ್ತು ಜನರು ಮೈಗ್ರೇನ್ ನಿಂದ ಬಳಲುತ್ತಾರೆ. ಅದರಲ್ಲಿ ಪುರುಷರಿಗಿಂತ ಮಹಿಳೆಯರ ಪಾಲು ಮುಕ್ಕಾಲರಷ್ಟಿದೆ. ಸಾಮಾನ್ಯವಾಗಿ ಚಿಕ್ಕ ವಯಸ್ಸಿನಲ್ಲಿಯೇ ತೊಡಗಿ ಪ್ರಬುದ್ಧಾವಸ್ಥೆಯವರೆಗೂ ತಲೆನೋವು ಕಾಡುತ್ತದೆ

ಪ್ರತಿ ತಲೆನೋವಿಗೂ ವೈದ್ಯರ ಮಧ್ಯಪ್ರವೇಶ ಅಗತ್ಯವಿಲ್ಲ. ಕೆಲವು ತಲೆನೋವುಗಳು ಊಟಮಾಡದೇ ಇರುವುದರಿಂದ ಅಥವಾ ಸ್ನಾಯು ಸೆಳೆತದಿಂದ ಉಂಟಾಗಿರಬಹುದು. ಅವುಳಿಗೆ ಮನೆಯಲ್ಲೇ ಶುಶ್ರೂಷೆ ಮಾಡಿಕೊಳ್ಳಬಹುದು. ಬೇರೆ ತಲೆನೋವುಗಳು ಗಂಭೀರ ಸ್ವರೂಪದ ಕಾಯಿಲೆಯ ಚಿಹ್ನೆಗಳು. ಅವುಗಳಿಗೆ ತಕ್ಷಣವೇ ವೈದ್ಯಕೀಯ ನೆರವು ಅಗತ್ಯ. ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ನೀವು ತುರ್ತು ವೈದ್ಯಕೀಯ ನೆರವು ಪಡೆಯಬೇಕು.

ತಲೆಯ ಅರ್ಧ ಭಾಗದಲ್ಲಿ ವಿಪರೀತವಾದ ನೋವು ಇರುತ್ತದೆ. ಆ ವ್ಯಕ್ತಿಗೆ ತಲೆಗೆ ಸುತ್ತಿಗೆಯಿಂದ ಯಾರೋ ಹೊಡೆಯುತ್ತಿರುವಂತೆ ನೋವು, ಜತೆಗೆ ಸೂಜಿಯಿಂದ ಚುಚ್ಚಿದಂತೆ ನೋವಿನ ಅನುಭವವಾಗುತ್ತದೆ.

ಈ ನೋವು ವಾಂತಿ ಮತ್ತು ತಲೆ ಸುತ್ತುವಿಕೆಯಿಂದ ಕೂಡಿರುತ್ತದೆ. ಅತಿಯಾದ ಬೆಳಕು ಮತ್ತು ಶಬ್ದವು ಅಸಹನೆಯನ್ನು ಉಂಟು ಮಾಡುತ್ತದೆ. ಈ ನೋವು ಹಲವು ಗಂಟೆಗಳವರೆಗೂ ಅಥವಾ ಕೆಲವರಲ್ಲಿ ಹಲವು ದಿನಗಳವರೆಗೂ ಕಾಣಿಸಿಕೊಳ್ಳಬಹುದು. ತಲೆನೋವು ಇರುವ ಸಂದರ್ಭದಲ್ಲಿ ಕತ್ತಲು ಪ್ರಿಯವಾಗುತ್ತದೆ. ಸುಮ್ಮನೆ ಮಲಗಬೇಕು ಅನಿಸುತ್ತದೆ.
ಅರೆ ತಲೆನೋವಿನಿಂದ ಬಳಲುವವರಿಗೆ ಕೆಲವು ಮುನ್ಸೂಚನೆಗಳು ಕಂಡು ಬರುತ್ತವೆ. ಕಣ್ಣ ಮುಂದೆ ಮಿಂಚು ಬಂದಂತೆ, ಅಕ್ಷರಗಳು ಕಂಡಂತೆ, ವಿಚಿತ್ರ ಚಿತ್ರಗಳು ಮತ್ತು ಕೈ ಕಾಲುಗಳಲ್ಲಿ ಜೋಮು ಹಿಡಿದಂತಾಗುವುದು. ಈ ರೀತಿಯ ಮುನ್ಸೂಚನೆಗಳಿಗೆ ಓರಾ (Aura) ಎಂದು ಕರೆಯುತ್ತಾರೆ.

ಕಣ್ಣಿನ ಉಬ್ಬಿನ ನಡುವೆ ಅಥವಾ ಹಣೆಯ ಮೇಲೆ ಕಾಣಿಸಿಕೊಳ್ಳುವ ತಲೆನೋವು-ಟೆನ್ಷನ್ ಅಥವಾ ಸೈನಸ್ ಗೆ ಸಂಭಂದಿಸಿದ ತಲೆನೋವಾಗಿರುತ್ತದೆ.

ತಲೆಯ ಬಲ ಅಥವಾ ಎಡಭಾಗದಲ್ಲಿ ಏನಾದರೂ ನೋವು ಬಂದರೆ ಅದು ಮೈಗ್ರೇನ್ ಎಂದು ಭಾವಿಸಬೇಕು.

ಕಣ್ಣಿನ್ನು ಗುಡ್ಡೆಯ ಸುತ್ತಲೂ ನೋವು ಕಂಡರೆ ಅದನ್ನು ಕ್ಲಸ್ಟರ್ ತಲೆನೋವು ಎಂದು
ಭಾವಿಸುತ್ತಾರೆ. ಇಂತಹ ಸಂಧರ್ಭಗಳಲ್ಲಿ ಅತಿಯಾಗಿ ವಾಂತಿ ಬರುವ ಹಾಗೆ ಆಗುತ್ತದೆ.

ಮೆದುಳಿನಲ್ಲಿ ಏನಾದರೂ ಟ್ಯೂಮರ್‍ಗಳಿದ್ದರೂ, ರಕ್ತಸ್ರಾವವು ಆಗುತ್ತಿದ್ದರೂ ತಲೆ ನೋವು ಬರುತ್ತದೆ ಈ ತಲೆ ನೋವು ಒಮ್ಮೆಲೆ ಅಧಿಕ ಪ್ರಮಾಣದಲ್ಲಿ ಬರುತ್ತದೆ. ಇದು ಸುಮಾರು 60 ನಿಮಿಷ ಇರುವುದು ಇದನ್ನು ಬರಿಸಲು ಅಸಾಧ್ಯವಾಗದಂತೆ ಕಂಡುಬರುತ್ತದೆ.

ಕೆಲವು ಜನರಿಗೆ ವ್ಯಾಯಮ ಮಾಡಿದರು ..? ಸೆಕ್ಸ್‌ನಲ್ಲಿ ಪಾಲ್ಗೊಂಡರೂ ತಲೆನೋವು ಬರುತ್ತದೆ. ಇದು ಸಾಧಾರಣವಾಗಿ ಬ್ರೈಯಿನ್ ಟ್ಯೂಮರ್‍ಗೆ ಸೇರಿರುವ ಕಾಯಿಲೆ ಆಗಿರುತ್ತದೆ.

ಮಂದವಾದ ಅಸ್ಪಷ್ಠವಾದ ನೋಟದಿಂದ ಬರುವ ತಲೆನೋವು ಬ್ರೈಯಿನ್ ಸ್ಟ್ರೋಕ್ ಕಾರಣದಿಂದ ಬರುತ್ತದೆ. ಈ ಸಂಧರ್ಭದಲ್ಲಿ ಒಂದೊಂದು ಸಾರಿ ಮಾತುಗಳು ತೊದಲುವುದು, ಮನಸ್ಸು ಸ್ವಾಧೀನದಲ್ಲಿ ಇರದೇ ಇರುವ ಲಕ್ಷಣಗಳು ಕಾಣಸುತ್ತವೆ.

ಮೇಲಿನವುಗಳನ್ನು ಬಿಟ್ಟು ಪದೇ ಪದೇ ತಲೆನೋವು ಬರುತ್ತಿದ್ದರು ಅನುಮಾನಿಸಬೇಕಾಗಿದ್ದೇ, ತಕ್ಷಣ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು.

50 ವರ್ಷ ವಯಸ್ಸು ದಾಟಿದವರಲ್ಲಿ ತಲೆನೋವು ಪದೇ ಪದೇ ಬರುತ್ತಿದ್ದರೆ ಅವರ ಮೆದುಳಿನಲ್ಲಿನ ಧಮನಿಗಳ ಕೆಲಸ ಕಡಿಮೆಯಾಗಿದೆ ಎಂದರ್ಥ .

ಕತ್ತು ಹಿಡಿದು ಕೊಳ್ಳುವುದು, ಜ್ವರ, ತಲೆನೋವುಗಳಂತಹವುಗಳು ಮೆನಿಂಜೈಟಿಸ್’ಳಂತಹ ದೋಷಗಳೂ ಸಹಜವಾಗಿ ಕಾಣುವ ಲಕ್ಷಣಗಳಾಗಿವೆ.

ತಲೆಗೆ ಏನಾದರೂ ಗಾಯವಾದರೂ ಒಂದೊಂದು ಸಾರಿ ತಲೆನೋವು ಬರುತ್ತಿರುತ್ತದೆ. ಇಂತಹ ಸಂಧರ್ಭಗಳಲ್ಲಿ ಮಾನಸಿಕ ಏಕಾಗ್ರತೆ ಸಹ ಸರಿಯಾಗಿ ಇರುವುದಿಲ್ಲ.

ಒಮ್ಮೊಮ್ಮೆ ತಲೆನೋವು ಬಂದು 24 ಘಂಟೆಗಳಕಾಲ ಕಡಿಮೆಯಾಗದೆ ಇದ್ದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಬೇಕು.

ಕ್ಯಾನ್ಸರ್‍ ಇದ್ದವರಲ್ಲಿ ತಲೆನೋವು ಬರುತ್ತಿದ್ದರೆ ಅದು ಬ್ರೆಯಿನ್ ಟ್ಯೂಮರ್ ಆಗಿ ಪರಿಣಮಿಸುತ್ತದೆ ಎಂದು ಗಮನಿಸಬೇಕು.

LEAVE A REPLY

Please enter your comment!
Please enter your name here