ಕಪ್ಪು ದ್ರಾಕ್ಷಿ ಬೀಜದ ಮಹತ್ವ.
ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್ ಸಾಮಾನ್ಯವಾಗಿಬಿಟ್ಟಿದೆ. ಆಸ್ಪತ್ರೆಗೆ ಹೋದವರು ವಾಪಸ್ ಬರುವಾಗ ಹೇಳುವ ಮಾತು ಕ್ಯಾನ್ಸರ್.ಕೆಮೊಥರಪಿ ಮೂಲಕ ಈ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತೆ.ಆದ್ರೆ ಕಿಮೊಥೆರಪಿ ವೇಳೆ ಅನುಭವಿಸುವ ನೋವು ಸಾವಿಗಿಂತ ಘೋರ ಎನ್ನಲಾಗುತ್ತೆ.
ಕೆಮೊಥೆರಪಿ ಬದಲು ನೈಸರ್ಗಿಕ ಔಷಧಿ ಕ್ಯಾನ್ಸರ್ ರೋಗ ನಿವಾರಣೆಗೆ ಉಪಯುಕ್ತ ಎಂದಿದ್ದಾರೆ.ಇದರಲ್ಲಿ ಅಡ್ಡ ಪರಿಣಾಮಗಳು ಕಡಿಮೆ.ಅಡ್ಡ ಪರಿಣಾಮ ಬೀರದೆ ಬಹುಬೇಗ ಕ್ಯಾನ್ಸರ್ ಗುಣಪಡಿಸುವ ಗುಣವುಳ್ಳ ಹಣ್ಣೊಂದು ನಮ್ಮಲ್ಲಿದೆ.ಅದೇ ದ್ರಾಕ್ಷಿ ಬೀಜ.
ದ್ರಾಕ್ಷಿ ಹಣ್ಣಿನ ಬೀಜದ ಸತ್ವವು ತಲೆ ಮತ್ತು ಕತ್ತಿಗೆ ಎಲುಬಿನ ಕೋಶ ಕಾರ್ಸಿನೋಮಾ ಕೋಶಗಳನ್ನು ಆರೋಗ್ಯವಂತ ಕೋಶಗಳಿಗೆ ಹಾನಿಯಾಗದಂತೆ ಅವುಗಳನ್ನು ಕೊಲ್ಲುತ್ತದೆಂದು ಭಾರತೀಯ ಮೂಲದ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇವರು ತಮ್ಮ ಪ್ರಯೋಗವನ್ನು ಇಲಿಯ ಮಾದರಿಗಳಲ್ಲಿ ಪ್ರಯೋಗಿಸಿ ಸಂಶೋಧನೆ ನಡೆಸಿದ್ದಾರೆ.
ಅಮೇರಿಕಾದಲ್ಲಿ ಹತ್ತಿರ ಹತ್ತಿರ 12,000 ದಷ್ಟು ಜನರು ತಲೆ ಹಾಗೂ ಕುತ್ತಿಗೆ ಕ್ಯಾನ್ಸರ್ನಿಂದ ಸಾವನ್ನಪ್ಪುತ್ತಿದ್ದು ಈ ವರ್ಷ ಸಾವಿನ ಸಂಖ್ಯೆಯು ಅರ್ಧ ಮಿಲಿಯನ್ ಅನ್ನು ದಾಟಿದೆ.
ಈ ರೋಗವು ದೇಹದ ಆರೋಗ್ಯವಂತ ಕೋಶಗಳ ಹೆಚ್ಚಿನ ಭಾಗವನ್ನು ಆಕ್ರಮಿಸಿದ್ದು, ಅವುಗಳನ್ನು ಹಾನಿಗೊಳಪಡಿಸುವ ಶಕ್ತಿಯನ್ನು ಇವುಗಳು ಪಡೆದುಕೊಂಡಿದೆ. “ಇದೊಂದು ನಾಟಕೀಯ ಪರಿಣಾಮವಾಗಿದೆ ಎಂದು ಕೊಲೆರಾಡೊ ಕ್ಯಾನ್ಸರ್ ಸಂಸ್ಥೆಯ ಸಂಶೋಧಕ ರಾಜೇಶ್ ಅಗರ್ವಾಲ್ ತಿಳಿಸಿದ್ದಾರೆ.
ಕ್ಯಾನ್ಸರ್ ಕೋಶಗಳು ಹೆಚ್ಚು ವೇಗವಾಗಿ ಬೆಳೆಯುವ ಕೋಶಗಳಾಗಿವೆ. ಅದೂ ಅಲ್ಲದೆ, ಸಾಮಾನ್ಯವಾಗಿ ಶೀಘ್ರ ಬೆಳವಣಿಗೆಯ ಕೋಶಗಳಾಗಿದ್ದು, ಅವುಗಳು ಬೆಳೆಯಲಾರದ ಸ್ಥಿತಿಗೆ ಬಂದಾಗ ಅವುಗಳು ಸಾಯುತ್ತವೆ ಎಂದವರುತಿಳಿಸಿದ್ದಾರೆ.
ದ್ರಾಕ್ಷಿ ಬೀಜದ ಸತ್ವವು ಅವು ಬೆಳೆಯಲಾಗದೆ ಇರುವಂತಹ ಸ್ಥಿತಿಯನ್ನು ಉಂಟುಮಾಡುವುದರಿಂದ ಅವುಗಳು ಬೆಳೆಯಲಾರವು.
ನಿರ್ದಿಷ್ಟವಾಗಿ, ದ್ರಾಕ್ಷಿ ಬೀಜದ ಸತ್ವವು ಕ್ಯಾನ್ಸರ್ ಕೋಶಗಳಾದ ಡಿಎನ್ಎಗೆ ಹಾನಿ ಉಂಟು ಮಾಡುತ್ತವೆ ಮತ್ತು ಅದು ಪುನಃ ಸರಿಯಾಗುವಂತಹ ದಾರಿಯನ್ನು ನಿಲ್ಲಿಸುತ್ತದೆ.
ದ್ರಾಕ್ಷಿ ಬೀಜದ ಸಾರವು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತಾದರೂ ಆರೋಗ್ಯವಂತ ಕೋಶಗಳಿಗೆ ಇದು ಯಾವುದೇ ರೀತಿಯ ಹಾನಿಯನ್ನುಂಟುಮಾಡುವುದಿಲ್ಲ.
ಇತ್ತೀಚೆಗೆ ನಡೆದ ಸಂಶೋಧನೆಯಲ್ಲಿ ಕ್ಯಾನ್ಸರ್ ಗೆ ದ್ರಾಕ್ಷಿ ಬೀಜ ಒಳ್ಳೆಯದು ಎಂಬ ವಿಷಯ ತಿಳಿದು ಬಂದಿದೆ. ದ್ರಾಕ್ಷಿ ಬೀಜ ರಕ್ತ ಕ್ಯಾನ್ಸರ್ ಹಾಗೂ ಇತರ ಕ್ಯಾನ್ಸರ್ ಹೊಡೆದೋಡಿಸಲು ಔಷಧಿ ರೂಪದಲ್ಲಿ ಕೆಲಸ ಮಾಡುತ್ತದೆಯಂತೆ.
ಬೊಜ್ಜನ್ನು ಸುಲಭವಾಗಿ ಕರಗಿಸಬಹುದು.
ಇದರಲ್ಲಿ ಬಿ ಕಾಂಪ್ಲೆಕ್ಸ್, ತಾಮ್ರಾಂಶ, ಕಬ್ಬಿಣಾಂಶ, ಸೆಲೆನಿಯಂ ಅಂಶ ಹೆಚ್ಚಿಗೆ ಇದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಕಪ್ಪುದ್ರಾಕ್ಷಿ ಬೀಜ ಮೂತ್ರ ಸಂಬಂಧಿ ಸೋಂಕುಗಳನ್ನು ತಡೆಗಟ್ಟಿ, ಮೂತ್ರ ಸೋಂಕನ್ನು ಉಂಟು ಮಾಡುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ.ಇದರಲ್ಲಿರುವ ನೀಲಿ ಅಂಶ ಬ್ಯಾಕ್ಟೀರಿಯಾಗಳ ಜೊತೆ ಹೋರಾಡುತ್ತದೆ.ಹಾಗೂ
ಮ್ಯಾಲಿಕ್ ಆಸಿಡ್ ಹಲ್ಲುಗಳ ಬಣ್ಣ ಮಾಸುವುದನ್ನು ನೈಸರ್ಗಿಕವಾಗಿ ತಡೆಯುತ್ತದೆ.
ಈ ಒಂದು ಬೀಜದಲ್ಲಿ ಎಷ್ಟೆಲ್ಲ ಆರೋಗ್ಯ ಅಂಶಗಳಿವೆ ಅಲ್ಲವೇ ನೀವು ಇದನ್ನು ಪ್ರಯೋಗಿಸಿ ಪ್ರಾಯೋಜನ ಪಡೆಯಿರಿ.