ನಿಮ್ಮ ಮನೆಯ ವಾಸ್ತು ಹೀಗಿದ್ರೆ ಒಳ್ಳೇದು

0
1543

ಮನೆಯ ಮುಂಬಾಗಿಲು ಪೂರ್ವ ಅಧವಾ ಉತ್ತರ ದಿಕ್ಕಿನೆಡೆಗಿರಲಿ.

ದಕ್ಷಿಣ ಮತ್ತು ಪೂರ್ವ ದಿಕ್ಕಿನ ಗೋಡೆಗಿಂತ ಉತ್ತರ ಮತ್ತು ಪಶ್ಚಿಮ ದಿಕ್ಕಿನ ಗೋಡೆ ಗಟ್ಚಿಮುಟ್ಟಾಗಿರಲಿ.

ದಕ್ಷಿಣ ಅಧವಾ ಪೂರ್ವ ಭಾಗದಲ್ಲಿ ಅಡುಗೆ ಕೋಣೆ ಇರಲಿ

ಪಶ್ಚಿಮ ದಿಕ್ಕಿನಲ್ಲಿ ಊಟದ ಕೋಣೆ ಇದ್ದರೆ ಆರೋಗ್ಯ ವರ್ಧಿಸುತ್ತದೆ.

ಮನೆಯ ಬಾವಿ ಯಾವ ಮೂಲೆಯಲ್ಲಿ ಇರಬೇಕು?

ಮನೆಯಲ್ಲಿ ಬಾವಿಯನ್ನು ತೋಡುವುದಾದರೆ ಈಶಾನ್ಯ ಮೂಲೆಯಲ್ಲಿ ತೋಡಬೇಕು. ಹಾಗೆಯೇ ನೀರಿನ ಬೋರನ್ನು ತೋಡುವುದಾದರೂ ಈಶಾನ್ಯವೇ ಪ್ರಶಸ್ತ ಜಾಗವಾಗಿದೆ. ಒಳಾಂತರ್ಗತವಾಗಿ ಮನೆಯಲ್ಲಿ ನೀರಿನ ಸಂಪನ್ನು ನಿರ್ಮಾಣ ಮಾಡಿಕೊಳ್ಳುವ ದಿಕ್ಕು ಕೂಡಾ ಈಶಾನ್ಯವೇ ಆಗಿರಬೇಕು. ಹೀಗೆಂದು ಮನೆಯ ಮೇಲಿನ ಓವರ್‌ ಹೆಡ್‌ ಟ್ಯಾಂಕ್‌ಗಳು ಈಶಾನ್ಯದಲ್ಲಿರಬಾರದು. ಇವು ಕಡ್ಡಾಯವಾಗಿ ನೈಋತ್ಯದಿಕ್ಕಿನಲ್ಲಿ ಇರಬೇಕು. ದಕ್ಷಿಣ ಹಾಗೂ ಪಶ್ಚಿಮ ದಿಕ್ಕುಗಳು ಸೇರುವ ಮೂಲೆಗೆ ನೈಋತ್ಯವೆನ್ನುತ್ತಾರೆ. ನೈರುತ್ಯದಲ್ಲಿ ಟ್ಯಾಂಕ್‌ ಇಡುವುದು ಕ್ಷೇಮವೂ ಹೌದು.

ಮನೆಯ ನೈರುತ್ಯ ಮೂಲೆಯಲ್ಲಿ ಹೀಗಿರಬೇಕು.

ಮನೆಯ ನೈಋತ್ಯ ಮೂಲೆಯು ಇತರ ಯಾವುದೇ ಭಾಗಗಳಿಗಿಂತ ಹೆಚ್ಚು ಎತ್ತರದಲ್ಲಿ ಇರುವುದು ಸೂಕ್ತ. ಹಾಗೆಯೇ ಮನೆಯ ಸುತ್ತಲೂ ಕಟ್ಟುವ ಗಡಿ ಗೋಡೆಯ ವಿಚಾರದಲ್ಲೂ ನೈಋತ್ಯ ಭಾಗದ ಗಡಿಗೋಡೆ ಇತರ ದಿಕ್ಕಿಗಿಂತಲೂ ತುಸು ಹೆಚ್ಚೇ ಎತ್ತರವನ್ನು ಕಾಯ್ದುಕೊಳ್ಳುವುದು ಸೂಕ್ತ. ವಿಷಮತೆಗಳನ್ನು ತಂದೊಡ್ಡುವ ಸ್ಪಂದನಗಳನ್ನು ತಡೆದು ಒಳ್ಳೆಯ ಪರಿಣಾಮಗಳನ್ನು ನಿರೀಕ್ಷಿಸಬಹುದು.  ಇದರಿಂದ ಮನೆಯ ಜನರಿಗೆ ಒಳ್ಳೆಯ ಭವಿಷ್ಯಕ್ಕೆ ಇದು ಸಕಾರಾತ್ಮಕವಾಗಿ ಇರುತ್ತದೆ.

ಕನ್ನಡಿಯನ್ನು ಎಲ್ಲಿ ಅಳವಡಿಸಬೇಕು?

ನಿಮ್ಮ ಹಾಸಿಗೆ ಕಾಣುವಂತೆ ಕನ್ನಡಿ ಇಡಬೇಡಿ. ಇದರಿಂದ ಹೆಚ್ಚಿನ ಅನಾರೋಗ್ಯ ಹಾಗೂ ಋಣಾತ್ಮಕ ಪರಿಣಾಮ ಬೀರಬಹುದು. ನಿಮ್ಮ ಕನ್ನಡಿಯಲ್ಲಿ ಮುಖ್ಯ ದ್ವಾರ ಕಾಣಿಸುತ್ತಿದ್ದರೆ ಆಗ ನೀವು ಇದನ್ನು ಸ್ಥಳಾಂತರಿಸುವ ಬಗ್ಗೆ ಮರುಚಿಂತಿಸಬೇಕಾಗಿದೆ. ಇದರಿಂದ ಮನೆಗೆ ಧನಾತ್ಮಕ ಶಕ್ತಿ ಬರುತ್ತದೆ. ಋಣಾತ್ಮಕ ಶಕ್ತಿಯಿರುವ ಬೀರುವಂತಹ ವಸ್ತುಗಳಿಗೆ ವಿರುದ್ಧವಾಗಿ ಕನ್ನಡಿ ಅಳವಡಿಸಿ. ಇದು ಮನೆಯೊಳಗಿನ ಎಲ್ಲಾ ಋಣಾತ್ಮಕ ಶಕ್ತಿ ಹೀರಿಕೊಳ್ಳುತ್ತದೆ.

ಮನೆಯಲ್ಲಿ ತುಳಸಿ ಗಿಡ ಎಲ್ಲಿರಬೇಕು?

ತುಳಸೀ ಗಿಡದ ಉಪಸ್ಥಿತಿ ಮನೆಯನ್ನು ಹತ್ತು ಹಲವು ಉಪಟಳಗಳಿಂದ ಪಾರು ಮಾಡಿ ಒಂದು ಅವಿಚ್ಛಿನ್ನವಾದ ದೈಹೀಕ ಶಕ್ತಿಯನ್ನು ಮನೆಯೊಳಗೆ ತರುತ್ತದೆ. ತುಳಸಿ ಗಿಡವನ್ನು ನೆಡಲು ಮನೆಯ ವಾಯುವ್ಯ ದಿಕ್ಕು ಪ್ರಶಸ್ತವಾಗಿದೆ.

ಮನೆಯೊಳಗೆ ಹಳೇ ಸರಂಜಾಮುಗಳನ್ನು ತುಂಬಿ ಇಡಲೇಬೇಡಿ.

ಕೆಲವರ ಮನೆಯನ್ನು ಗಮನಿಸಿದರೆ ಇಡೀ ಮನೆ ಪೂರ್ತಿಯಾಗಿ ಬೊಬ್ಬಿರಿದ ತಿಪ್ಪೆಗುಂಡಿಯಂತಿರುತ್ತದೆ. ಒಂದು ರೂಮಿನಲ್ಲಿ ಹಳೆಯ ಪೇಪರ್‌, ಅರ್ಧಂಬರ್ಧ ತುಂಬಿದ ಪ್ಲಾಸ್ಟಿಕ್‌ ಚೀಲಗಳು, ಬೇಡದ ವಸ್ತುಗಳು ತುಂಬಿರುತ್ತದೆ. ಇದು ಅನಿಷ್ಟವೂ ಹೌದು. ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

 

 

LEAVE A REPLY

Please enter your comment!
Please enter your name here