ಈ ಸೂಚನೆಗಳು ನಿಮ್ಮಲ್ಲಿ ಇದ್ರೆ ಅದು ಸಕ್ಕರೆ ಖಾಯಿಲೆ ಆಗಿರಬಹುದು

0
1135

ಸಕ್ಕರೆ ಖಾಯಿಲೆ ಯಾರಿಗೆ ಬರೋದಿಲ್ಲ ಹೇಳಿ ಈಗಲಂತೂ ಸಣ್ಣ ವಯಸ್ಸಿನಲ್ಲೂ ಈ ಸಕ್ಕರೆ ಖಾಯಿಲೆ ಬರುವ ಸಾದ್ಯತೆ ಹೆಚ್ಚು ಹಿಂದೆ ಸಕ್ಕರೆ ಖಾಯಿಲೆ ಅಂದ್ರೆ ಅದು ಶ್ರೀಮಂತ್ರರಿಗೆ ಮಾತ್ರ ಬರುತ್ತೆ ಅಂತ ಇತ್ತು ಆದ್ರೆ ನಾವು ತಿನ್ನುವ ಆಹಾರ ಕ್ರಮ ಗಾಳಿ ನೀರು ಎಲ್ಲ ಕಲ್ಮಷವಾಗಿ ಎಲ್ಲರಿಗು ಬರುವ ಸರ್ವೇ ಸಾಮಾನ್ಯ ಖಾಯಿಲೆ ಆಗೋಗಿದೆ. ಆದರೆ ಖಾಯಿಲೆ ಬರದ ಹಾಗೇ ತಡೆಯುವ ಮತ್ತು ಕೆಲವು ಮಧುಮೇಹಿ ಖಾಯಿಲೆ ಸೂಚನೆ ನೀಡಿದ್ದೇವೆ ಈ ಗುಣಗಳು ನಿಮ್ಮಲ್ಲಿ ಇದ್ರೆ ಪರೀಕ್ಷೆ ಮಾಡಿಕೊಳ್ಳಿ.

ಮಧುಮೇಹ ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣವ್ಯವಸ್ಥೆಯ ದೋಶಗಳಿಂದ ಉಂಟಾಗುವು ಒಂದು ಕಾಯಿಲೆ. ವಂಶಪಾರಂಪರ್ಯದಿಂದ ಬರಬಹುದಾದ ಕಾಯಿಲೆಯಿದು. ಗ್ಲೂಕೋಸ್ಒಂದು ರೀತಿಯ ಸಕ್ಕರೆಯಾಗಿದ್ದು, ಇದನ್ನು ಪ್ರಮುಖವಾಗಿಪ್ಯಾಂಕ್ರಿಯಾಸ್ ಅಂಗವು ಉತ್ಪತ್ತಿ ಮಾಡುವ ಇನ್ಸುಲಿನ್ ಎಂಬಹಾರ್ಮೋನ್ ನಿಯಂತ್ರಿಸುತ್ತದೆ.

ಸದ್ಯಕ್ಕೆ ಇದನ್ನು ಪೂರ್ಣ ಪ್ರಮಾಣದಲ್ಲಿ ನಿವಾರಿಸಲು ಸಾಧ್ಯವಾಗಿಲ್ಲ. ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಳಿತದ ಮೇಲೆ ಈ ಕಾಯಿಲೆನಿರ್ಧರಿತವಾಗುತ್ತದೆ. ದಿನನಿತ್ಯ ಸುಮಾರು ಇಪ್ಪತ್ತು ನಿಮಿಷದವ್ಯಾಯಾಮ ಅಥವಾ ನಡಿಗೆಯಿಂದ ಮಧುಮೇಹವನ್ನುದೂರವಿಡಬಹುದೆಂದು ವೈದ್ಯರು ಹೇಳುತ್ತಾರೆ.

ಮೊದಲೆಲ್ಲಾ ಅರುವತ್ತಕ್ಕೇ ಅರಳು ಮರಳು ಅನ್ನುವಂತಹಾ ಪರಿಸ್ಥಿತಿಯೂ, ಅರುವತ್ತು ವರ್ಷ ದಾಟಿದರೆ ಒಂದಿಲ್ಲೊಂದು ವೃದ್ಧಾಪ್ಯದ ಕಾಯಿಲೆ ಅಂಟಿಕೊಳ್ಳಲು ಶುರು ಹಚ್ಚಿಕೊಳ್ಳುತ್ತದೆ ಎಂಬ ಪರಿಸ್ಥಿತಿ ಇತ್ತು. ಆದರೆ ಈಗ ಹಾಗಿಲ್ಲ. ಕಾಲ ಬದಲಾಗಿದೆ. ವರುಷ ಮೂವತ್ತು ದಾಟಿತೋ, ಬೀಪಿ, ಶುಗರ್, ಬೊಜ್ಜು, ಹಾರ್ಟ್ ಪ್ರಾಬ್ಲಂ ಒಂದಿಲ್ಲೊಂದು ಮುತ್ತಿಕ್ಕಿಕೊಂಡು ಬಿಡಲಾರಂಭಿಸಿದೆ.

ಪ್ರಕೃತಿಯನ್ನು, ವಾತಾವರಣವನ್ನು ನಾವು ಅಷ್ಟರ ಮಟ್ಟಿಗೆ ಹಾಳು ಮಾಡಿಕೊಂಡಿದ್ದೇವೆ. ಹೀಗಾಗಿ ಇದ್ದುದರಲ್ಲೇ ಬದುಕಬೇಕಾದ ಅನಿವಾರ್ಯತೆ. ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ (ಐಡಿಎಫ್)ದ ವರದಿ ಪ್ರಕಾರ, ಭಾರತದಲ್ಲಿ ಮಧುಮೇಹ, ಸಕ್ಕರೆ ಕಾಯಿಲೆ, ಸಿಹಿಮೂತ್ರ ರೋಗ ಎಂದೆಲ್ಲಾ ಕರೆಯಲ್ಪಡುವ ಡಯಾಬಿಟೀಸ್‌ನಿಂದ ಬಳಲುತ್ತಿರುವವರ ಸಂಖ್ಯೆ 4.09 ಕೋಟಿ. ಇದು ಹೀಗೆಯೇ ಮುಂದುವರಿದರೆ, 2030ರ ವೇಳೆಗೆ ಜಗತ್ತಿನ ಐವರು ಮಧುಮೇಹಿಗಳಲ್ಲಿ ಒಬ್ಬ ಭಾರತೀಯ ಇರುವಷ್ಟರ ಮಟ್ಟಕ್ಕೆ ಮುಟ್ಟುತ್ತದೆಯಂತೆ!

ಹಾಗಿದ್ದರೆ, ಮಧುಮೇಹಕ್ಕೆ ಕಾರಣಗಳೇನು? ನಮ್ಮ ಬದಲಾಗಿರುವ ಜೀವನ ಶೈಲಿಯೇ? ಮಾನಸಿಕ ಒತ್ತಡವೇ? ನಮ್ಮ ಜೀನ್‌ಗಳೇ? ಈ ತೊಂದರೆ ಬಾರದಂತೆ, ಬಂದಿದ್ದನ್ನು ನಿಯಂತ್ರಿಸುವಂತೆ ಏನಾದರೂ ಉಪಾಯಗಳಿವೆಯೇ?

ಹೌದು, ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ನಮ್ಮ ಜೀವನ ಶೈಲಿ ಎಂಬುದರಲ್ಲಿ ಎರಡು ಮಾತಿಲ್ಲ. ಈ ಜೀವನ ಶೈಲಿಯಲ್ಲಿ ಮಧುಮೇಹಕ್ಕೆ ಪೂರಕವಾಗುವಂಥವುಗಳ ಬಗ್ಗೆ ಒಂದಿಷ್ಟು ಗಮನ ಹರಿಸೋಣ ಬನ್ನಿ..

ಪದೇ-ಪದೇ ಮೂತ್ರವಿಸರ್ಜನೆ ಉಂಟಾಗುವುದು. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದರಿಂದ ಆಗಾಗ
ಬಾಯಾರಿಕೆಯಾಗುತ್ತದೆ.

ದೇಹದಲ್ಲಿ ಇನ್ಸುಲಿನ್ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗುವುದರಿಂದ ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಶಕ್ತಿ ಸಾಕಾಗುವುದಿಲ್ಲ. ದೇಹದಲ್ಲಿ ಶಕ್ತಿ ಕಡಿಮೆಯಾದಾಗ ಹೊಟ್ಟೆ ಹಸಿವು ಜಾಸ್ತಿಯಾಗುತ್ತದೆ.

ಇದ್ದಕ್ಕಿದ್ದ ಹಾಗೇ ತೂಕ ಕಡಿಮೆಯಾಗುತ್ತದೆ. ದೇಹದಲ್ಲಿ ಗ್ಲೂಕೋಸ್ ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿ ಮೂತ್ರ ವಿಸರ್ಜನೆ ಜಾಸ್ತಿಯಾಗುವುದರಿಂದ ದೇಹದಲ್ಲಿರುವ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ತೂಕ ಇಳಿಮುಖವಾಗುವುದು.

ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಏರುಪೇರಾದರೆ ಮೊದಲು ಇದರ ಪರಿಣಾಮ ಚರ್ಮದ ಮೇಲಾಗುತ್ತದೆ. ಚರ್ಮದಲ್ಲಿ ಕಪ್ಪು ಕಲೆಗಳಾಗುವುದು, ನೆರಿಗೆ ಮೂಡುವುದು, ಬಣ್ಣ ತಿಳಿಯಾಗುವುದು ಅಥವಾ ಗಾಢವಾಗುವುದು ಮೊದಲಾದವು ಕಂಡುಬಂದರೆ ಮೊದಲು ತಪಾಸಣೆಗೊಳಗಾಗುವುದು ಅಗತ್ಯ.

ಇತ್ತೀಚಿನ ಸಂಶೋಧನೆಯ ಪ್ರಕಾರ ಮಧುಮೇಹದ ಪರಿಣಾಮವಾಗಿ ಕಿವಿಯ ಶ್ರಾವ್ಯಶಕ್ತಿಗೆ ರಕ್ತಸಂಚಾರ ಒದಗಿಸುವ ಸೂಕ್ಷ್ಮನರಗಳ ಮೇಲೂ ಪ್ರಭಾವ ಬೀರುವ ಮೂಲಕ ಕಿವಿಯ ಕೇಳುವಿಕೆಯ ಕ್ಷಮತೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ.

ಕೆಲವೊಮ್ಮೆ ರಕ್ತದಲ್ಲಿ ಅಧಿಕವಾದ ಸಕ್ಕರೆಯ ಇರುವಿಕೆಯಿಂದ ಕಣ್ಣುಗಳ ದೃಷ್ಟಿ ತಾತ್ಕಾಲಿಕವಾಗಿ ಉತ್ತಮಗೊಳ್ಳುತ್ತದೆ. ಇದಕ್ಕೆ ದೇಹದ ದ್ರವದಲ್ಲಿ ಏರಿಕೆಯಾಗುವುದೇ ಕಾರಣ. ತನ್ಮೂಲಕ ಕಣ್ಣಿನಲ್ಲಿರುವ ದ್ರವವೂ ಹೆಚ್ಚಳಗೊಂಡು ನಿಮ್ಮ ದೃಷ್ಟಿ ಥಟ್ಟನೇ ಉತ್ತಮಗೊಂಡ ಭಾವನೆ ಮೂಡಬಹುದು.

ಮಧುಮೇಹದ ಮೂಲಕ ರಕ್ತಸಂಚಾರದಲ್ಲಿ ಕೊಂಚ ಬಾಧೆಯುಂಟಾಗುತ್ತದೆ. ಪರಿಣಾಮವಾಗಿ ಹೃದಯದಿಂದ ದೂರವಿರುವ ಪಾದ ಮತ್ತು ಹಸ್ತಗಳಿಗೆ ಸಾಕಷ್ಟು ರಕ್ತ ದೊರಕದೇ ಆರ್ದ್ರತೆಯ ಕೊರತೆಯಿಂದ ಚರ್ಮ ಒಣಗುತ್ತದೆ. ಇದರಿಂದ ಆ ಭಾಗಗಳಲ್ಲಿ ಸತತವಾಗಿ ತುರಿಕೆ ಪ್ರಾರಂಭವಾಗುತ್ತದೆ.

ಮಧುಮೇಹಿಗಳ ದೇಹದಲ್ಲಿ ಅಲ್ಲಲ್ಲಿ ಕಚಗುಳಿ ಇಟ್ಟಂತೆ ಅನುಭವವನ್ನು ಪಡೆಯುತ್ತಾರೆ. ನಿಮಗೂ ಹೀಗೇ ಆಗುತ್ತಿದ್ದರೆ ತಕ್ಷಣ ತಪಾಸಣೆಗೆ ಒಳಪಡುವುದು ಅನಿವಾರ್ಯ.

ಮಧುಮೇಹ ಪ್ರಾರಂಭವಾಗುವಾಗ ದೇಹದ ರೋಗ ನಿರೋಧಕ ಶಕ್ತಿ ಕೊಂಚ ಉಡುಗುವ ಕಾರಣ ರೋಗಿಗಳು ವಿವಿಧ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳ ಧಾಳಿಗೆ ಸುಲಭವಾಗಿ ತುತ್ತಾಗುತ್ತಾರೆ

ಒಂದು ವೇಳೆ ನಿಮ್ಮ ಉಸಿರಿನಲ್ಲಿ ದುರ್ವಾಸನೆಯನ್ನು ನಿಮ್ಮ ಮನೆಯವರು ಗಮನಿಸಿದರೆ, ಅದರಲ್ಲೂ ಬಾಯಿಯ ಸ್ವಚ್ಛತೆಯನ್ನು ನೀವು ಕಾಪಾಡಿಕೊಂಡ ಬಳಿಕವೂ ದುರ್ವಾಸನೆ ದೂರಾಗದಿದ್ದರೆ ಮಧುಮೇಹದ ಪರೀಕ್ಷೆಯಾಗಲೇ ಬೇಕು ಎಂಬುದನ್ನು ಇದು ಸೂಚಿಸುತ್ತದೆ. ಏಕೆಂದರೆ ಬಾಯಿಗೆ ಲಭಿಸುವ ಲಾಲಾರಸದಲ್ಲಿಯೂ ಸಕ್ಕರೆ ಹೆಚ್ಚಿದ್ದು ಇಲ್ಲಿ ಬ್ಯಾಕ್ಟೀರಿಯಾಗಳು ಸಕ್ಕರೆಯನ್ನು ಶೀಘ್ರವಾಗಿ ಕೊಳೆಸುತ್ತವೆ.

ದಿನಂಪ್ರತಿ ಜೀವಕೋಶಗಳಿಗೆ ಸಕ್ಕರೆಯ ಪ್ರಮಾಣ ಕಡಿಮೆಯಾಗುತ್ತಾ ಹೋಗುವುದರಿಂದ ದೇಹದ ಸಕಲ ಅಂಗಗಳು ತಮ್ಮ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತಾ ಬರುತ್ತವೆ. ಇದರಿಂದಾಗಿ ದಿನದ ಚಟುವಟಿಕೆಗಳಿಗೆ ಶಕ್ತಿ ಸಾಲದೇ ಸುಸ್ತು ಬೇಗನೇ ಆವರಿಸುತ್ತದೆ.

ಅಸಮರ್ಪಕ ರಕ್ತದ ಸಂಚಾರದಿಂದಾಗಿ ಕಾಲಿನಲ್ಲಿ ಸಮಸ್ಯೆ ಕಂಡುಬರುವುದು ಮಧುಮೇಹಿಗಳ ಸಾಮಾನ್ಯ ಲಕ್ಷಣವಾಗಿದೆ. ಆರಂಭಿಕ ಹಂತದ ಲಕ್ಷಣ ಎಂದರೆ ಕಾಲಿನ ಮಧ್ಯದಲ್ಲಿ ಮರಗಟ್ಟುವಿಕೆ ಮತ್ತು ಜುಮ್ಮೆನಿಸುವ ಸಂವೇದನೆ ಕಂಡುಬರುತ್ತದೆ.

ನಿಮಗೆ ಬ್ಲರ್‌ ವಿಶನ್‌, ಅಥವಾ ಕಣ್ಣಿನಲ್ಲಿ ಊತ ಮೊದಲಾದ ಸಮಸ್ಯೆ ಕಾಣಿಸತೊಡಗಿದರೆ ಇದು ಸಹ ಡಯಾಬಿಟೀಸ್‌ನ ಲಕ್ಷಣಗಳಲ್ಲಿ ಒಂದಾಗಿದೆ.

ಅತಿಯಾದ ನಿದ್ದೆ ಅಥವಾ ಆಯಾಸವಾಗುವುದು.ವಾಕರಿಕೆ ಮತ್ತು ವಾಂತಿಯಾಗುವುದು.ಯಾವುದೇ ರೀತಿಯ ಗಾಯ ಬೇಗ ವಾಸಿಯಾಗದೆ ಇರುವುದು.
ಈ ಲಕ್ಷಣಗಳು ಕಂಡು ಬಂದರೆ ದಯವಿಟ್ಟು ನಿರ್ಲಕ್ಷಿಸಬೇಡಿ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

LEAVE A REPLY

Please enter your comment!
Please enter your name here