ಈಗ ಸೀಡ್ಲೆಸ್ ದ್ರಾಕ್ಷಿ ಹಣ್ಣೇ ಬೇಕು. ಬೀಜ ಇರುವ ದ್ರಾಕ್ಷಿಗೆ ಡಿಮ್ಯಾಂಡೇ ಇಲ್ಲ. ಹಾಗಾಗಿ ಹೆಚ್ಚಿನ ತಳಿಗಳು ಕೂಡಾ ನಾಶವಾಗಿವೆ. ಆದರೆ, ಈ ದ್ರಾಕ್ಷಿ ಬೀಜಗಳು ಕರುಳಿನ ಕ್ಯಾನ್ಸರ್ ವಿರುದ್ಧ ಹೋರಾಡುವ ಪ್ರಬಲ ಶಕ್ತಿಯನ್ನು ಹೊಂದಿವೆ ಎಂದರೆ ನಂಬುತ್ತಿರಾ?
ದ್ರಾಕ್ಷಿ ಬೀಜಗಳು ಕರುಳಿನ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವಲ್ಲಿ ಮಾಡುವ ಕೀಮೋತೆರಪಿಯ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತವೆ ಮತ್ತು ಕೀಮೋತೆರಪಿ ಉಂಟು ಮಾಡುವ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆ
ಈಗ ದ್ರಾಕ್ಷಿಹಣ್ಣಿನ ಕಾಲ ಆರಂಭವಾಗಿದೆ. ಬಗೆಬಗೆ ದ್ರಾಕ್ಷಿ ಬಾಯಲ್ಲಿ ನೀರೂರಿಸುವಂತಿವೆ. ಋತುಮಾನಕ್ಕೆ ಅನುಗುಣವಾಗಿ ಸಿಗುವ ಹಸಿರು, ಕಪ್ಪು, ಕೆಂಪು ದ್ರಾಕ್ಷಿ ಜೊತೆಗೇ ಯಾವಾಗಲೂ ಸಿಗುವುದು ಒಣದ್ರಾಕ್ಷಿ. ಇವೆಲ್ಲ ಬಾಯಿಗೆ ರುಚಿ ನೀಡುವುದು ಮಾತ್ರವಲ್ಲದೇ ಆರೋಗ್ಯವರ್ಧಕವೂ ಆಗಿವೆ.
ದ್ರಾಕ್ಷಿ ಹಣ್ಣಿನ ಬೀಜದ ಸತ್ವವು ತಲೆ ಮತ್ತು ಕುತ್ತಿಗೆ ಎಲುಬಿನ ಕೋಶ ಕಾರ್ಸಿನೋಮಾ ಕೋಶಗಳನ್ನು ಆರೋಗ್ಯವಂತ ಕೋಶಗಳಿಗೆ ಹಾನಿಯಾಗದಂತೆ ಅವುಗಳನ್ನು ಕೊಲ್ಲುತ್ತದೆಂದು ಭಾರತೀಯ ಮೂಲದ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ
ಕ್ಯಾನ್ಸರ್ ಕೋಶಗಳು ಹೆಚ್ಚು ವೇಗವಾಗಿ ಬೆಳೆಯುವ ಕೋಶಗಳಾಗಿವೆ. ಅದೂ ಅಲ್ಲದೆ, ಸಾಮಾನ್ಯವಾಗಿ ಶೀಘ್ರ ಬೆಳವಣಿಗೆಯ ಕೋಶಗಳಾಗಿದ್ದು, ಅವುಗಳು ಬೆಳೆಯಲಾರದ ಸ್ಥಿತಿಗೆ ಈ ದ್ರಾಕ್ಷಿ ಬೀಜ ಸಹಾಯ ಮಾಡುತ್ತದೆ.
ದ್ರಾಕ್ಷಿ ಬೀಜದಲ್ಲಿ ಟ್ಯಾನಿನ್ ಅಥವಾ ಪಾಲಿ ಫಿನಾಲ್ಸ್ ಎಂಬ ಉರಿ ನಿವಾರಕ ಅಂಶಗಳಿರುವುದು ಮೊದಲೇ ಗೊತ್ತಿತ್ತು. ಇತ್ತೀಚೆಗೆ ಕ್ಯಾನ್ಸರ್ ನಿವಾರಕ ಶಕ್ತಿಯೂ ಬೆಳಕಿಗೆ ಬಂದಿದ್ದು, ಇದರ ಶಕ್ತಿ ಇನ್ನಷ್ಟು ಹೆಚ್ಚುವಂತಾಗಿದೆ.
ಕರುಳಿನ ಕ್ಯಾನ್ಸರ್ ಎನ್ನುವುದು ಅತ್ಯಂತ ಸಂಕಟದಾಯಕವಾಗಿದ್ದು, ಕೀಮೋತೆರಪಿ ಇಲ್ಲಿ ಗರಿಷ್ಠ ಅಪಾಯವನ್ನು ಉಂಟುಮಾಡುತ್ತದೆ. ಇಂಥ ಸಮಸ್ಯೆಯನ್ನು ದ್ರಾಕ್ಷಿ ಬೀಜದ ಬಳಕೆಯಿಂದ ಪರಿಣಾಮಕಾರಿಯಾಗಿ ನಿವಾರಿಸಬಹುದು ಎನ್ನುವುದು ದೊಡ್ಡದೊಂದು ವರದಾನ ಎನ್ನುತ್ತಾರೆ
ನಿಜವೆಂದರೆ, ದ್ರಾಕ್ಷಿ ಬೀಜವನ್ನು ಜಗಿದು ಬಾಯಿ ಮೂಲಕ ನುಂಗಿದ್ದರಿಂದಲೇ ಸಣ್ಣ ಕರುಳಿನ ಉರಿಯೂತ ಮತ್ತು ಕೀಮೋತೆರಪಿಯಿಂದ ಆಗಿರುವ ಕೆಟ್ಟ ಪರಿಣಾಮಗಳನ್ನು ನಿಯಂತ್ರಿಸಲು ಸಾಧ್ಯವಾಯಿತು. ಇದು ಕ್ಯಾನ್ಸರೇತರ ಕೋಶಗಳ ಮೇಲೆ ಯಾವುದೇ ದುಷ್ಪರಿಣಾಮ ಬೀರುವುವುದಿಲ್ಲ. ಕೀಮೋತೆರಪಿ ಎನ್ನುವುದು ಕ್ಯಾನ್ಸರ್ ಕೋಶಗಳನ್ನಲ್ಲದೆ, ಇತರ ಕೋಶಗಳಿಗೂ ಕಿರಿಕಿರಿ ಮಾಡುತ್ತವೆ. ಆದರೆ, ದ್ರಾಕ್ಷಿ ಬೀಜ ಇತರ ಕ್ಯಾನ್ಸರ್ ಕೋಶಗಳ ಮೇಲಷ್ಟೇ ಪರಿಣಾಮ ಬೀರುವುದು ದೊಡ್ಡ ಲಾಭಕರ ಸಂಗತಿ.
ವೈನ್ ಮಾಡುವಾಗ ದೊಡ್ಡ ಪ್ರಮಾಣದಲ್ಲಿ ಸಿಗುವ ಬೀಜಗಳಿಂದ ಟ್ಯಾನಿನ್ನ್ನು ಹೊರತೆಗೆದು ಪುಡಿ ಮಾಡಿ ಬಳಸಬಹುದು. ಇದು ಯಾವುದೇ ಅಡ್ಡ ಪರಿಣಾಮಗಳನ್ನು ತೋರಿಸುವುದಿಲ್ಲ ಆದುದರಿಂದ ಆರೋಗ್ಯವಂತರು ಕೂಡಾ ಸ್ವೀಕರಿಸುವುದರಿಂದ ಸಮಸ್ಯೆ ಆಗುವುದಿಲ್ಲ.
ನೋಡಿದರಲ್ಲ ನಿರ್ಲಕ್ಷಿಸಿಸುವ ದ್ರಾಕ್ಷಿ ಬೀಜದ ಉಪಯೋಗವನ್ನು. ಇನ್ನು ಮೇಲೆ ನಿರ್ಲಕ್ಷಿಸಬೇಡಿ.