ಕೂದಲು ಉದರುವಿಕೆ ತಡೆಯಲು ಸುಲಭ ಮನೆ ಮದ್ದು

0
1276

ಇತ್ತೀಚಿನ ದಿನಗಳ ಜೀವನ ಜಾಂಜಾಟದ ಜೇವನವಾಗಿದೆ ಕೇವಲ ಕೆಲಸ ಕೆಲಸ ಎಂದು ತಮ್ಮ ಆರೈಕೆಯನ್ನೇ ಮರೆತಿದ್ದಾರೆ ಇದರ ಜೊತೆಗೆ ಕಲುಷಿತ ವಾತಾವರಣ ಹಾಗೂ ಅನಾರೋಗ್ಯಕರ ಆಹಾರ ಶೈಲಿಯಿಂದಾಗಿ ಮಹಿಳೆಯರಲ್ಲಿ ಕೂದಲು ಉದುರುವ ಸಮಸ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಕೂದಲು ಉದುರುವುದರೊಂದಿಗೆ ಕೂದಲು ತುಂಡಾಗುವುದು ಮತ್ತು ತಲೆಹೊಟ್ಟು ಮುಂತಾದ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವುದು. ಇದನ್ನು ನಿವಾರಣೆ ಮಾಡಲು ಹಲವಾರು ರೀತಿಯ ಪ್ರಯೋಗಗಳನ್ನು ಮಹಿಳೆಯರು ಮಾಡುತ್ತಾರೆ.

ಆದರೆ ಕೆಲವರು ಕೂದಲು ಬೆಳೆಸಲು ಇಷ್ಟವಿದ್ದರು ಆರೈಕೆ ಮಾಡಲು ಸಮಯವಿಲ್ಲದೆ ಕೂದಲು ಕತ್ತರಿಸಿಕೊಳ್ಳುತ್ತಾರೆ ಇದನ್ನು ತಡೆಯಲಾರದೆ ಇದನ್ನು ನಿವಾರಣೆ ಮಾಡಲು ಹಲವಾರು ರೀತಿಯ ಮನೆಮದ್ದುಗಳು ಲಭ್ಯವಿದೆ. ಕೂದಲು ಉದುರುವಿಕೆ ತಡೆಯಬೇಕಾದರೆ ಕೆಲವೊಂದು ಹೇರ್ ಮಾಸ್ಕ್ ಗಳನ್ನು ಬಳಸಬೇಕು. ಇದನ್ನು ತಯಾರಿಸಲು ಸ್ವಲ್ಪ ಸಮಯ ಬೇಕಾದರೂ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ನಿಮ್ಮ ಸಮಸ್ಯೆಯನ್ನು ನಿವಾರಣೆ ಮಾಡಲಿದೆ.

ಮನೆಯಲ್ಲಿ ತೆಂಗಿನ ಕಾಯಿ ರುಬ್ಬುವಾಗ ಸ್ಲಲ್ಪ ಪ್ರಮಾಣದ ಹಾಲು ತೆಗೆದುಕೊಂಡು ಅದಕ್ಕೆ 4 ರಿಂದ 5 ಹನಿ ಲ್ಯಾವೆಂಡರ್ ಎಣ್ಣೆ ಮಿಕ್ಸ್ ಮಾಡಿ ಕೂದಲಿಗೆ ಮಸಾಜ್ ಮಾಡಿ. ತೆಂಗಿನ ಹಾಲಿನಲ್ಲಿರುವ ಪೊಟ್ಯಾಶಿಯಂ ಮತ್ತು ಅಗತ್ಯವಾದ ಫ್ಯಾಟ್ ಕೂದಲಿನ ಆರೈಕೆ ಮಾಡಿ ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ. ಕೂದಲು ಉದುರುವುದನ್ನು ತಡೆಗಟ್ಟುತ್ತದೇ.

ಕೂದಲ ಆರೈಕೆಯಲ್ಲಿ ಬೆಟ್ಟದ ನೆಲ್ಲಿಕಾಯಿ ಪಾತ್ರ ತುಂಬಾ ಮಹತ್ವದ್ದು. ವಿಟಮಿನ್ ಸಿ ಯನ್ನು ಅಧಿಕವಾಗಿ ಹೊಂದಿರುವ ನೆಲ್ಲಿಕಾಯಿ ಪುಡಿಯನ್ನುನಿಂಬೆ ರಸದ ಜೊತೆಗೆ ಮಿಕ್ಸ್ ಮಾಡಿ ಒಣಗಲು ಬಿಡಿ ನಂತರ ಬಿಸಿನೀರಿನಲ್ಲಿ ಶಾಂಪು ಹಾಕದೇ ತೊಳೆಯಿರಿ. ಇದರಿಂದ ತಲೆಹೊಟ್ಟು ನಿವಾರಣೆಯಾಗಿ ಕೂದಲೂ ಸೊಂಪಾಗಿ
ಬೆಳೆಯುತ್ತದೆ.

ರಾತ್ರಿ ಮಲಗುವ ಮುನ್ನ ಮೆಂತ್ಯೆ ಬೀಜಗಳನ್ನು ನೀರಿನಲ್ಲಿ ನೆನೆಸಿಡಿ. ಮಾರನೇ ಬೆಳ್ಳಿಗೆ ನೆನೆಸಿದ ಮೆಂತ್ಯೆ ಹಾಗೂ ನೀರನ್ನು ರುಬ್ಬಿ ತಲೆಗೆ ಹಚ್ಚಿಕೊಳ್ಳಿ. ಹಚ್ಚಿದ ನಂತರ ಅದು ಒಣಗದಂತೆ ತಲೆಗೆ ಶವರ್ ಕ್ಯಾಪ್ ಹಾಕಿಕೊಳ್ಳಿ. 30 ನಿಮಿಷಗಳ ನಂತರ ತಲೆಯನ್ನು ನೀರಿನೊಂದಿಗೆ ತೊಳೆಯಿರಿ. ಶ್ಯಾಂಪೂ ಅಥವಾ ಸಾಬೂನು ಬಳಸುವ ಅವಶ್ಯಕತೆ ಇರುವುದಿಲ್ಲ. ಈ ರೀತಿಯಾಗಿ ವಾರಕ್ಕೆ ಎರಡು ಬಾರಿ ಮಾಡುವುದರಿಂದ ಪರಿಣಾಮಕಾರಿ ಫಲಿತಾಂಶವನ್ನು ಪಡೆಯಬಹುದು.

ಲೊಳೆಸರದ ಎಲೆಯನ್ನು ಕತ್ತರಿಸಿ ಅದರಲ್ಲಿರುವ ಸಾರವನ್ನು ನಿಮ್ಮ ತಲೆಗೆ ಹಾಗೂ ಕೂದಲಿಗೆ ಹಚ್ಚಿಕೊಳ್ಳಿರಿ. 45 ನಿಮಿಷಗಳು ಅಥವಾ ಒಂದು ಗಂಟೆಯ ನಂತರ ನೀರಿನಲ್ಲಿ ತಲೆಯನ್ನು ತೊಳೆದುಕೊಳ್ಳಿರಿ. ಈ ರೀತಿಯಾಗಿ ವಾರಕ್ಕೆ ಮೂರು ನಾಲ್ಕು ಬಾರಿ ಮಾಡುವುದರಿಂದ ಫಲಿತಾಂಶ ಉತ್ತಮವಾಗಿರುತ್ತದೆ.

ಉಗುರು ಬೆಚ್ಚಗಿನ ಎಣ್ಣೆಯನ್ನು ಬಳಸಿ ತಲೆಯ ಮಾಲಿಶು ಮಾಡಿಕೊಳ್ಳುವುದರಿಂದ ಕೂದಲು ಉದುರುವುದನ್ನು ತಡೆಗಟ್ಟಬಹುದು. ಮಾಲಿಶಿಗಾಗಿ ವಿಟಮಿನ್ “ಇ” ಹೆಚ್ಚಾಗಿರುವ ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ, ಸಾಸಿವೆ ಎಣ್ಣೆ, ಆಲಿವ್ ಎಣ್ಣೆ ಅಥವಾ ಜೋಜೋಬ(Jojoba oil) ಎಣ್ಣೆಯನ್ನು ಉಪಯೋಗಿಸಬಹುದು

ಮೊಸರನ್ನು ನೇರವಾಗಿ ತಲೆ ಹಾಗೂ ಕೂದಲಿಗೆ ಹಚ್ಚಿಕೊಳ್ಳಬಹುದು ಅಥವಾ ಎರಡು ಚಮಚ ಮೊಸರಿಗೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಆದನ್ನು ತಲೆಗೆ ಹಚ್ಚಿಕೊಳ್ಳಬಹುದು. ಹಚ್ಚಿದ ಮೂವತ್ತು ನಿಮಿಷಗಳ ನಂತರ ನೀರಿನಿಂದ ತೊಳೆದುಕೊಳ್ಳಬೇಕು. ಇದ್ನ್‌ನ್ನು ಮಾಡುವುದರಿಂದ ಉದ್ದವಾದ ಹಾಗು ಆರೋಗ್ಯವಾದ ಕೂದಲನ್ನು ಪಡೆಯಬಹುದು.

ಅಡುಗೆಮನೆಯಲ್ಲಿರುವ ಈರುಳ್ಳಿಯಲ್ಲಿ ಹೆಚ್ಚಾಗಿರುವ ಗಂಧಕದ ಅಂಶ ನಮ್ಮ ನೆತ್ತಿಯ ರಕ್ತ ಪರಿಚಲನೆಯನ್ನು ಹೆಚ್ಚಿಸಿ ಕೂದಲ ಬೇರಿಗೆ ಶಕ್ತಿಯನ್ನು ಒದಗಿಸುತ್ತದೆ ಹಾಗೂ ಆದರ ಜೀವಿರೋಧೀ ಗುಣ ನಮ್ಮ ನೆತ್ತಿಯಲ್ಲಿರಬಹುದಾದ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ತಾಜಾ ಈರುಳ್ಳಿಗಳನ್ನು ರುಬ್ಬಿ ಅದರ ರಸವನ್ನು ಹೀರಿತೆಗೆದು ನಿಮ್ಮ ನೆತ್ತಿಗೆ ಹಚ್ಚಿಕೊಳ್ಳಿ ಹಾಗೂ ಅರ್ಧ ಗಂಟೆಯ ನಂತರ ಸೌಮ್ಯವಾದ ಸಾಬೂನು ಹಾಗೂ ನೀರಿನೊಂದಿಗೆ ತೊಳೆಯಿರಿ.

ನೆಲ್ಲಿಕಾಯಿಗಳ ಬೀಜವನ್ನು ತೆಗೆದು ತಿರುಳನ್ನು ಮಾತ್ರ ರುಬ್ಬಿಕೊಂಡು ಅದಕ್ಕೆ ಎರಡು ಹನಿ ನಿಂಬೆ ಹಣ್ಣಿನ ರಸವನು ಬೆರೆಸಿ ತಲೆಗೆ ಹಚ್ಚಿಕೊಳ್ಳಬೇಕು. ನಿಂಬೆಹಣ್ಣಿನ ರಸವನ್ನು ಬೆರೆಸದೆಯೂ ಸಹ ಬಾರಿ ನೆಲ್ಲಿಯ ತಿರುಳನ್ನು ಹಚ್ಚಿಕೊಳ್ಳಬಹುದು. ಒಂದು ಗಂಟೆಯ ನಂತರ ತಲೆಯನ್ನು ನೀರಿನಲ್ಲಿ ತೊಳೆದುಕೊಳ್ಳಬೇಕು.

ಜ್ಯೇಷ್ಟಮಧು ಬೇರಿನ ಹಲವು ಎಸಳುಗಳನ್ನು ಇಡೀ ರಾತ್ರಿ ಹಾಲಿನಲ್ಲಿ ನೆನೆಸಿಟ್ಟು ಬೆಳ್ಳಿಗೆ ರುಬ್ಬಬೇಕು. ರುಬ್ಬಿದ ಲೇಪನವನ್ನು ಮರುದಿನ ರಾತ್ರಿ ಕೂದಲು ಉದುರುವ ಜಾಗಕ್ಕೆ ಹಚ್ಚಿಕೊಂಡು ಮಲಗಬೇಕು. ಮರುದಿನ ಬೆಳ್ಳಿಗೆ ಸಾಬೂನು ಬಳಸಿ ತಲೆಯನ್ನು ತೊಳೆದುಕೊಳ್ಳಬಹುದು.

ಹತ್ತು ಹನ್ನೆರಡು ದಾಸವಾಳದ ಹೂವುಗಳ್ಲನ್ನು ಎರಡು ಚಮಚೆ ಕೊಬ್ಬರಿ ಎಣ್ಣೆಯಲ್ಲಿ ಚೆನ್ನಾಗಿ ಕುದಿಸಿ, ನಂತರ ಅದರಿಂದ ಎಣ್ಣೆಯನ್ನು ಹಿಂಡಿ ತೆಗೆದ ಎಣ್ಣೆಯನ್ನು ತಲೆಗೆ ಹಾಗೂ ಕೂದಲಿಗೆ ರಾತ್ರಿ ಹಚ್ಚಿಕೊಂಡು ಬೆಳ್ಳಿಗೆ ತೊಳೆಯಬೇಕು. ದಾಸವಾಳದ ಎಲೆಗಳನ್ನು ಬಳಸಬೇಕೆಂದರೆ, ಎಲೆಗಳನ್ನು ಅರೆದು, ಅರೆದ ಎಲೆಗಳನ್ನು ತಲೆಗೆ ಹಾಗೂ ಕೂದಲಿಗೆ ಹಚ್ಚಿಕೊಳ್ಳಿ. ಮೂವತ್ತು ನಿಮಿಷಗಳ ನಂತರ ತೊಳೆದುಬಿಡಿ. ಇದರಿಂದ ಕೂದಲು ಉದುರುವುದು ಕಡಿಮೆಯಾಗಿ ಬೆಳವಣಿಗೆ ವೃದ್ಧಿಯಾಗುತ್ತದೆ.

ಬೀಟ್ರೂಟ್ನಲ್ಲಿರುವ ರಂಜಕ, ಕ್ಯಾಲ್ಸಿಯಂ, ಸಸಾರಜನಕ, ಪೊಟ್ಯಾಶಿಯಂ, ಕಾರ್ಬೊಹೈಡ್ರೆಟ್, ವಿಟಮಿನ್ “ಬೀ” ಹಾಗೂ “ಸಿ” ಸತ್ವ ಕೂದಲ ಬೆಳವಣಿಗೆಗೆ ಸಹಾಯಕಾರಿ. ಬೀಟ್ರೂಟ್ ರಸವನ್ನು ದಿನವೂ ಸೇವಿಸುವುದರಿಂದ ಅಥವಾ ಬೀಟ್ರೂಟನ್ನು ದಿನವೂ ಅಡುಗೆಯಲ್ಲಿ ಬಳಸುವುದರಿಂದ ಕೂದಲ ಬೆಳವಣಿಗೆಗೆ ಸಹಾಯವಾಗುತ್ತದೆ. ಸಾಧ್ಯವಾಗದಿದಲ್ಲಿ ಬೀಟ್ರೂಟ್ ಎಲೆಗಳನ್ನು ರುಬ್ಬಿ ತಲೆ ಹಾಗೂ ಕೂದಲಿಗೆ ಹಚ್ಚಿಕೊಳ್ಳಬಹುದು. ಬೀಟ್ರೂಟ್ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದನ್ನು ರುಬ್ಬಿಕೊಳ್ಳಬೇಕು. ಗಟ್ಟಿಯಾಗಿ ರುಬ್ಬಿದ ಎಲೆಗಳನ್ನು ತಲೆಗೆ ಹಚ್ಚಿ ಮೂವತ್ತು ನಿಮಿಷಗಳ ನಂತರ ನೀರಿನಲ್ಲಿ ತೊಳೆಯಬೇಕು. ಈ ರೀತಿಯಾಗಿ ವಾರಕ್ಕೆ ಎರಡು ಬಾರಿ ಮಾಡುವುದರಿಂದ ಒಳ್ಳೆಯ ಬೆಳವಣಿಗೆಯನ್ನು ಕಾಣಬಹುದು.

ಟಿಎಲೆಯಲ್ಲಿರುವ ಟ್ಯಾನಿಕ್ ಆಮ್ಲ ತಲೆಯ ಸೋಂಕನ್ನು ಕಡಿಮೆಮಾಡಿ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ನೀರಿನಲ್ಲಿ ಟೀ ಎಲೆಗಳನ್ನು ಕುದಿಸಿ ಕಷಾಯವನ್ನು ತಯಾರುಮಾಡಿ, ಸೋಸಿಕೊಂಡು ಅದಕ್ಕೆ ಒಂದು ನಿಂಬೆ ಹಣ್ಣನು ಹಿಂಡಿ, ಶ್ಯಾಂಪೂವಿನ ನಂತರ ಅದರಲ್ಲಿ ತಲೆಯನ್ನು ತೊಳೆಯಬೇಕು.

ಆಲೂಗಡ್ಡೆಯನ್ನು ಜಜ್ಜಿ ಅದರಲ್ಲಿನ ರಸವನ್ನು ತೆಗೆದುಕೊಳ್ಳಿ. ತೆಗೆದುಕೊಂಡ ರಸವನ್ನು ತಲೆಗೆ ಹಚ್ಚಿ ಮೂವತ್ತು ನಿಮಿಷಗಳಿಂದ ಒಂದು ಗಂಟೆ ಕಾಲ ಹಾಗೆಯೇ ಬಿಡಿ ಆದರೆ ಅದು ಒಣಗದಂತೆ ಜಾಗ್ರತೆ ವಹಿಸಿ. ನಂತರ ನೀರಿನಿದೊಂದಿಗೆ ತೊಳೆಯಿರಿ.

ಸಿಲಿಕಾ ಹಾಗೂ ಜ಼ಿಂಕ್ ಖನಿಜಗಳು ಕೂದಲು ಬೆಳೆಯುವಲ್ಲಿ ಹಾಗೂ ನೆತ್ತಿಯ ಅರೊಗ್ಯವನ್ನು ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ದೇಹಕ್ಕೆ ಅತಿ ಕಡಿಮೆ ಪ್ರಮಾಣದಲ್ಲಿ ಅವಶ್ಯವಿರುವ ಈ ಖನಿಜಗಳು ಅವ್ಶ್ಯಕಿಂತ ಕಡಿಮೆ ಪ್ರಮಾಣದಲ್ಲಿ ಇರುವಾಗ ಕೂದಲು ಉದುರುತ್ತದೆ. ಹುರುಳಿ, ಇತರೆ ಬೀಜಗಳು, ಸೌತೆಕಾಯಿ, ಮಾವು, ಅಜ್ಮೋದ, ಕುಂಬಳಕಾಯಿಯ ಬೀಜ, ಸಿಂಪಿ ಹಾಗೂ ಮೊಟ್ಟೆಗಳು ಈ ಖನಿಜಗಳನ್ನು ಹೆಚ್ಚಾಗಿ ಹೊಂದಿರುವ ತರಕಾರಿಗಳು. ಈ ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕೂದಲ ಆರೋಗ್ಯವನ್ನು ಕಾಪಡಿಕೊಳ್ಳಬಹುದು.

ನೀವು ಕೂಡ ಇವುಗಳನ್ನು ಬಳಸಿ ನಿಮ್ಮ ಕೂದಲನ್ನು ಬೆಳೆಸಿ.

LEAVE A REPLY

Please enter your comment!
Please enter your name here