ಕಾಡುವ ರಕ್ತಹೀನತೆಗೆ ಪರಿಹಾರ. ಓದಿ ಒಮ್ಮೆ ಪರೀಕ್ಷೆ ಮಾಡಿಕೊಳ್ಳಿ

0
1453

ರಕ್ತಹೀನತೆ ಎಂದರೆ ಹತ್ತು ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದಾದ ಒಂದು ತೊಂದರೆ. ವಿಶ್ವದಾದ್ಯಂತ ರಕ್ತಹೀನತೆಗೆ ಕಬ್ಬಿಣದ ಕೊರತೆಯೇ ಮುಖ್ಯ ಕಾರಣ ಎಂಬುದು ತಿಳಿದು ಬಂದಿದೆ. ನಮ್ಮ ದೇಶದಲ್ಲೂ ಇದು ವ್ಯಾಪಕವಾಗಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ `ಅನೀಮಿಯ~ ಎನ್ನಲಾಗುತ್ತದೆ. ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.

ಭಾರತೀಯ ಮಹಿಳೆಯರಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಿದೆ. ಶೇಕಡಾ 50-60ರಷ್ಟುಮಹಿಳೆಯರು ಈ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತ ಸಾಗಿರುವುದು ದುರದೃಷ್ಟಕರ. ಹೆಚ್ಚಾಗುತ್ತಿರುವ ಆರೋಗ್ಯ ಸೇವೆ, ವೈದ್ಯಕೀಯ ಸೇವಾ ಲಭ್ಯತೆಯು ಕೂಡ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ.

ರಕ್ತದಲ್ಲಿ ಕಬ್ಬಿಣದ ಕೊರತೆ ಉಂಟಾದರೆ ಈ ಸಮಸ್ಯೆ ಖಂಡಿತ ಬರುತ್ತದೆ ಅದಕ್ಕಾಗಿ
ನಾವು ದಿನಂಪ್ರತಿ ಸೇವಿಸುವ ಆಹಾರದಲ್ಲಿ ದೇಹಕ್ಕೆ ಅತ್ಯಾವಶ್ಯಕವಾಗಿ ಬೇಕಾಗುವ ಸತ್ವ, ಪೋಷಕಾಂಶ ಇರಬೇಕು. ಜೊತೆಗೆ ಅಗತ್ಯ ಪ್ರಮಾಣದ ಖನಿಜಗಳು, ಅನ್ನಾಂಗಗಳು (ವಿಟಮಿನ್) ಇರಲೇಬೇಕು. ಅದರಲ್ಲೂ ಕಬ್ಬಿಣಾಂಶ ರಕ್ತದಲ್ಲಿ ಸರಿ ಪ್ರಮಾಣದಲ್ಲಿ ಇರಲೇಬೇಕು.

ರಕ್ತದ ಪ್ರತಿ ಕಣವು ಅಗತ್ಯ ಆಮ್ಲಜನಕವನ್ನು ಜೀವಕೋಶಗಳಿಗೆ ತಲುಪಿಸುವಲ್ಲಿ ಈ ಕಬ್ಬಿಣ ಸಹಕಾರಿಯಾಗಿರುತ್ತದೆ. ಕೊರತೆ ಕಾಡಿದರೆ ಜೀವಕೋಶಗಳಿಗೆ ಆಮ್ಲಜನಕ ತಲುಪುವುದಿಲ್ಲ. ದೇಹ ಮನಸ್ಸು ಸೊರಗಿ ಸುಸ್ತಾಗುತ್ತದೆ. ದೈಹಿಕ, ಮಾನಸಿಕ ಬೆಳವಣಿಗೆ ಬಲವರ್ಧನೆಗೆ ತೊಂದರೆಯಾಗುತ್ತದೆ.

ಈ ರಕ್ತ ಹೀನತೆ ಹೆಚ್ಚಾಗಿ ಗರ್ಭಿಣಿಯರು, ಸಾಮಾನ್ಯ ಮಹಿಳೆಯರು, ಋತುಸ್ರಾವ ಹೆಚ್ಚಿರುವವರು.ಹದಿಹರೆಯದ ಹೆಣ್ಣು ಮಕ್ಕಳು.ಶೀಘ್ರ ಬೆಳವಣಿಗೆಯ ಮಕ್ಕಳು.
ಅತೀ ಒತ್ತಡದ, ಶ್ರಮದಾಯಕ ಕೆಲಸ ನಿರ್ವಹಿಸುವವರು.ವಿಶ್ರಾಂತಿ ಇಲ್ಲದ ಕೆಲಸ, ದೀರ್ಘಕಾಲೀನ ರೋಗ, ರಕ್ತದ ಕಾಯಿಲೆ ಇರುವವರಲ್ಲಿ ಕಂಡು ಬರುತ್ತದೆ.

ರಕ್ತ ಹೀನತೆಯ ಲಕ್ಷಣಗಳು.
ಬಿಳುಪಾಗುವ ಮುಖ, ಬಿಳಿಚಿಕೊಂಡ ಮುಖ, ಬಿಳುಪಾದ ಉಗುರಿನ ಮೇಲ್ಭಾಗ, ಕಣ್ಣಿನ ಕೆಳ-ಒಳ ಭಾಗ (ಕೆಳ ರೆಪ್ಪೆಯ ಒಳ ಭಾಗ) ಬಿಳಿಯಾಗಿರುವುದು ರಕ್ತಹೀನತೆಯ ಲಕ್ಷಣಗಳು.

ರಕ್ತಹೀನತೆಗೆ ಕಾರಣ
ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡದಿರುವುದು. ದೀರ್ಘಕಾಲೀನ ರೋಗ ಪೀಡಿತರು, ಅತೀ ಮಾತ್ರೆ ಸೇವನೆ ಮಾಡುವವರು.ರಕ್ತದ ಮೂಲಕ ಕಬ್ಬಿಣಾಂಶದ ನಷ್ಟ
ಕ್ಯಾನ್ಸರ್‌ಗೆ ಪಡೆಯುವ ಔಷಧಗಳಿಂದ.
ದೇಹದಲ್ಲಿ ರಕ್ತಕಣ ಉತ್ಪತ್ತಿ ಸರಿಯಾಗಿ ಆಗದಿರುವುದು ಉದಾ: ಮೂಳೆ ರೋಗ, ವಿಟಮಿನ್ ಕೊರತೆ.ಇರುವುದು.

ಈ ರಕ್ತ ಹೀನತೆ ಸಮಸ್ಯೆಗೆ ಪರಿಹಾರ ಏನೆಂದರೆ.
ಸತ್ವಯುತ ಆಹಾರ ಸೇವನೆ, ಕಬ್ಬಿಣಾಂಶದ ಲಭ್ಯತೆ ಹೆಚ್ಚಿಸುವುದು.
ಗರ್ಭಿಣಿಯರು ಹೆಚ್ಚುವರಿ ಫೋಲಿಕ್ ಆಮ್ಲದ ಮಾತ್ರೆ ಸೇವಿಸುವುದು.
ಕಬ್ಬಿಣಾಂಶ ಹೆಚ್ಚಾಗಿರುವ ಒಣ ಹಣ್ಣು , ಕರಿಎಳ್ಳು, ಜೇನು, ಬಾಳೆ, ಹಾಲು, ದ್ವಿದಳ ಧಾನ್ಯ, ಕಡು ಹಸಿರು ತರಕಾರಿ, ಸೊಪ್ಪು, ನುಗ್ಗೆ ಸೊಪ್ಪು, ಕಾರ್ನ್‌ಫ್ಲೇಕ್ಸ್. ಗಳನ್ನು ಹೆಚ್ಚಾಗಿ ಬಳಸುವುದು.

ಖರ್ಜುರವನ್ನು ತಿನ್ನುವುದರಿಂದ ರಕ್ತ ಹೀನತೆ ಕಡಿಮೆಯಾಗುತ್ತದೆ.

ಒಂದು ಚಿಟಕಿ ಏಲಕ್ಕಿ ಪುಡಿ ಮತ್ತು ಒಂದು ಚಮಚ ಅರಿಶಿನ ಪುಡಿಯನ್ನು ಹಾಲಿನೊಂದಿಗೆ ಸೇರಿಸಿ ರಾತ್ರಿ ಮಲಗುವ ಮುಂಚೆ ಕುಡಿದು ಮಲಗಬೇಕು.

ಬೀಟ್ ರೂಟ್ ನಲ್ಲಿ ಕಬ್ಬಿಣದಂಶ, ನಾರಿನಂಶ, ಕ್ಯಾಲ್ಸಿಯಂ, ವಿಟಮಿನ್ ಸಿ ಅಧಿಕವಾಗಿ ಇದ್ದು, ಪ್ರತಿದಿನ ಇದರ ಜ್ಯೂಸ್ ಕುಡಿದರೆ ರಕ್ತ ಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ.

ಅಡುಗೆಯನ್ನು ಅಲ್ಯೂಮಿನಿಯಂ ಮತ್ತು ಸ್ಟಿಲ್ ಪಾತ್ರೆಗಳಲ್ಲಿ ಮಾಡುವುದನ್ನು ತಪ್ಪಿಸಿಕೊಳ್ಳಿ.

ಮೂಸಂಬಿ. ದ್ರಾಕ್ಷಿ. ನಿಂಬೆ . ನೆಲ್ಲಿಕಾಯಿ ಯನ್ನು ಹೆಚ್ಚಾಗಿ ಬಳಸಿ. ಜೊತೆಗೆ ಬೆಳ್ಳುಳ್ಳಿ. ಗೋಧಿ ಹುಲ್ಲಿನ ಜ್ಯೂಸ್. ಬೆಲ್ಲ . ಸ್ಟ್ರಾಬೆರಿ ಯನ್ನು ಬಳಸುತ್ತಾ ಬಂದರೆ ರಕ್ತ ಹೀನತೆ ಸಮಸ್ಯೆ ದೂರವಾಗುತ್ತದೆ.

LEAVE A REPLY

Please enter your comment!
Please enter your name here