ಕೆಲವು ನಂಬಲೇ ಬೇಕು ವಿಧಿ ಇಲ್ಲ

0
1154

ಶ್ರೀಮನ್ಮಹಾಗಣಪತಯೇ ನಮಃ
ಶ್ರೀ ಗುರು ಚರಣ ಕಮಲಾಭ್ಯಾಂ ನಮಃ
ಮೂಢ ನಂಬಿಕೆಗಳನ್ನು ನಂಬಬೇಕೆ? ಬೇಡವೆ?
ನಮ್ಮ ಸಂಸ್ಕೃತಿ ಅತ್ಯುನ್ನತವಾದದ್ದು. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ.ಅಂಥ ಸಂಸ್ಕೃತಿಯನ್ನು ನಾವು ಸಮಾಜದಿಂದ ಕಲಿಯುತ್ತೇವೆ.ಪ್ರಸ್ತುತ ಈ ಸಂಸ್ಕೃತಿಯು ಅಳಿವಿನತ್ತ ಸಾಗುತ್ತಿದೆ.ಅದಕ್ಕೆ ಕಾರಣ ಸಂಸ್ಕೃತಿಯ ಭದ್ರ ಬುನಾದಿಗಳನ್ನು ಬದಿಗೊತ್ತಿ ನಿಂತಿರುವುದು.
ನಮ್ಮಲ್ಲಿ ಸಂಸ್ಕೃತಿಯ ಅರಿವಳಿಕೆ ಕಡಿಮೆಯಾಗುತ್ತಿದೆ.ನಮ್ಮ ದೇಶದಲ್ಲಿ ಆವಿಷ್ಕಾರಗೊಂಡ “ಧ್ಯಾನ” ಪಾಶ್ಚಾತ್ಯರಿಂದ ಕಲಿಯುವಂತಾಗಿದೆ.ಇಲ್ಲಿ ಕೃಷ್ಣ ಮಂದಿರ ಕಟ್ಟಬೇಕಾದರೆ ಹೊರಗಿನ ದೇಶದವರ ಆರ್ಥಿಕ ಸಹಾಯ ಬೇಕಾಗಿದೆ. ಕಾರಣ ನಮ್ಮ ಸಂಸ್ಕೃತಿಯಲ್ಲಿ ನಂಬಿಕೆ ಇಲ್ಲದಿರುವುದು.ನಮ್ಮ ಸಂಸ್ಕೃತಿಯಲ್ಲಿ ನಂಬಿಕೆ ಬರಬೇಕಾದರೆ ಅದರಲ್ಲಿನ ಸಂಗತಿಗಳು ಸತ್ಯವೆಂದು ಮನದಟ್ಟಾಗಬೇಕು.ಈ ಧರ್ಮವನ್ನು ಏತಕ್ಕಾಗಿ ಆಚರಣೆ ಮಾಡಬೇಕೆಂಬುದನ್ನು ನೆನಪಿಸುವುದಕ್ಕಾಗಿ ಹಿಂದಿನ ಪದ್ಧತಿಗಳ ಆಚರಣೆಗಳು ಅಗತ್ಯವಾಗಿದೆ.
ಅದರಲ್ಲೂ ಮುಖ್ಯವಾಗಿ ಸಂಧ್ಯಾವಂದನೆ. ಜಪ ತಪ. ದೇವರ ಪೂಜೆ. ಇವುಗಳನ್ನು ಮಾಡುವುದರಿಂದ ಮನಸ್ಸಿಗೆ ನೆಮ್ಮದಿ. ಶಾಂತಿ. ಎಂಬುದು ಲಭಿಸುತ್ತದೆ. ಹಾಗಾದರೇ ಇವುಗಳನ್ನು ಮಾಡುವುದು ಹೇಗೆ ಅಂತ ನೋಡೋಣ..

ಸಂಧ್ಯಾವಂದನೆಯನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೂರ್ಯ ಉದಯಿಸುವಾಗ ಮತ್ತು ಮುಳುಗುವಾಗ ಪ್ರಪಂಚಕ್ಕೆಲ್ಲ ಬೆಳಕನ್ನು ಕೊಡುವ ಸೂರ್ಯನಿಗೆ ಕೃತಜ್ಞತೆ ಹೇಳುವ ಉದ್ದೇಶದಿಂದ ಮಾಡುವ ಕಾರ್ಯವೇ “ಸಂಧ್ಯಾವಂದನೆ”.
ಸಂಧ್ಯಾವಂದನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ,ಶಾಂತಿ ದೊರಕುತ್ತದೆ.ಆರೋಗ್ಯ ದೃಷ್ಠಿಯಿಂದ ಪ್ರಾಣಾಯಾಮ ಮಾಡಿದರೆ ಮನಸ್ಸು ಶುದ್ದವಾಗುತ್ತದೆ,ಬುದ್ಧಿ ಚುರುಕಾಗುತ್ತದೆ,ಆಯಸ್ಸು ಹೆಚ್ಚುತ್ತದೆ. ಋಷಿವರೇಣ್ಯರ ಧೀರ್ಘಾಯುಷ್ಯದ ಗುಟ್ಟು ಈ “ಪ್ರಾಣಾಯಾಮ”.ಹಾಗೆ ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಎಲ್ಲ ಅಂಗಾಂಗಗಳಿಗೂ ವ್ಯಾಯಾಮ ಆಗುತ್ತದೆ. ಸೂರ್ಯನ ಕಿರಣಗಳಲ್ಲಿನ ವಿಟಮಿನ್ ಗಳು ನಮ್ಮ ದೇಹವನ್ನು ಸೇರುತ್ತವೆ.ಅಷ್ಟೆ ಅಲ್ಲದೆ ನಮ್ಮ ಜೀವನದಲ್ಲಿ ಶಿಸ್ತು ಮೂಡಲು ಪ್ರಥಮ ಮೆಟ್ಟಿಲು ಸಂಧ್ಯಾವಂದನೆ ಆಗಿದೆ.

ಇದನ್ನು ಮಾಡುವ ಕ್ರಮ.
ಉತ್ತರ ಅಥವಾ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಬೇಕು. ಮಣೆ ಅಥವಾ ಚಾಪೆಯ ಮೇಲೆ ಕುಳಿತು ಕೈ ಮುಗಿದುಕೊಂಡು ಪ್ರಾರ್ಥನೆ ಮಾಡಬೇಕು. ಬೆನ್ನು ಕುತ್ತಿಗೆ ನೇರವಾಗಿರುವಂತೆ ಸ್ವಸ್ತಿಕಾಸನ ಅಥವಾ ಸುಖಾಸನದಲ್ಲಿ ಕುಳಿತು ಸಂಧ್ಯಾವಂದನೆ ಮಾಡಬೇಕು, ಕೈ ಕಾಲು ತೊಳೆದು, ದೇಹ ಶುದ್ಧಿ ಮನಸ್ಸು ಶುದ್ಧಿ ಇರಬೇಕು.

ಜಪತಪ ಯಾಕೆ ಮಾಡಬೇಕು ಎಂದರೆ
ಸಂಧ್ಯಾಕಾಲ ಕ್ಷುದ್ರ ಶಕ್ತಿಗಳು ಒಡಾಡುವ ಸಮಯ. ಈ ಕಾಲದಲ್ಲಿ ಅಸುರ ಶಕ್ತಿಗಳದ್ದೇ ಕಾರುಬಾರಂತೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು, ಗರ್ಭಿಣಿಯರನ್ನು ಹೊರಗೆ ಕರೆದೊಯ್ಯಬಾರದು, ನಿದ್ರಿಸುತ್ತಿರಬಾರದು ಎಂಬ ನಂಬಿಕೆ. ಈ ವೇಳೆ ನಕಾರಾತ್ಮಕ ಶಕ್ತಿಗಳು ನಮ್ಮ ಮೇಲೆ ಪ್ರಭಾವ ಬೀರದಂತೆ ತಡೆಯಲು ದೇವರ ಧ್ಯಾನದಲ್ಲಿ ತೊಡಗಬೇಕು. ಇಂತಹ ಕಾರಣಗಳಿಂದಾಗಿ ದೇವರ ಧ್ಯಾನ ಮಾಡುತ್ತಿದ್ದರೆ, ಆ ಸಂದರ್ಭದಲ್ಲಿ ಬರಬಹುದಾದ ಅಪಾಯಗಳು ತಪ್ಪುತ್ತವೆ ಎಂಬ ನಂಬಿಕೆ. ಹಾಗಾಗಿ ಈ ಕಾಲದಲ್ಲಿ ದೇವರ ಧ್ಯಾನ, ಭಜನೆ, ಜಪ ತಪ ಮಾಡುತ್ತಿರಬೇಕು ಎನ್ನುತ್ತಾರೆ ಹಿರಿಯರು.

ಧ್ಯಾನ ವನ್ನು ಯಾಕೆ ಮಾಡಬೇಕು ಎಂದರೆ ಧ್ಯಾನ ಎಂದರೆ ಏಕಾಗ್ರತೆ. ನಮ್ಮ ಮನಸ್ಸು ಚಂಚಲವಗಿರುತ್ತದೆ. ಈಚಂಚಲತೆಯನ್ನು ಹೋಗಲಾಡಿಸಿ ಮನಸ್ಸನ್ನು ಧೃಡವಾಗಿರಿಸುವ ಪ್ರಕ್ರಿಯೆಯೇ”ಧ್ಯಾನ”. ದೃಡವಾದ ಮನಸ್ಸಿನಿಂದ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳಬಹುದು. ಹಾಗೆ ಸರಿಯಾದ ನಿರ್ಣಯಗಳಿಂದ ತೆಗೆದುಕೊಂಡ ನಿರ್ಧಾರವು ತಪ್ಪಾಗಲಿಕ್ಕೆ ಸಾಧ್ಯವಿಲ್ಲ.ಯವುದೇ ಕಾರ್ಯಗಳನ್ನು ಏಕಗ್ರತೆಯಿಂದ ಮಾಡುವವನಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.ಧ್ಯಾನದಿಂದ ಏಕಾಗ್ರತೆ ಹೆಚ್ಚುತ್ತದೆ.ಮನಸ್ಸಿನ ಸಂಕಟಗಳು ದೂರವಾಗುತ್ತದೆ. ಮನಸ್ಸನ್ನು ಉಲ್ಲಾಸದಾಯಕವಾಗಿಡುವ ಈ ಧ್ಯಾನವನ್ನು ಮೂಢ ನಂಬಿಕೆಯೆಂದು ದೂರ ಮಾಡಿದರೆ, ಬಹಳ ದೊಡ್ಡ ಪ್ರಮಾಣದ ನಷ್ಠವೆಂದರೆ ಅತಿಶಯೋಕ್ತಿಯಲ್ಲ.

ದೇವರ ಪೂಜೆ ಯಾಕೆ ಮಾಡಬೇಕು ಅಂದರೇ ದೇವರಿಗೆ ದೀಪ ಹಚ್ಚುವುದು. ದೂಪ ಹಾಕುವುದು. ಘಂಟೆ ಬಾರಿಸುವುದು. ಇವುಗಳನ್ನು ಮಾಡುವುದೇಕೆಂದರೆ
ನಾವು ಬೆಳಗುವ ದೀಪಗಳು ಪರಮಾತ್ಮನಿಗಲ್ಲ.ಆತನಿಂದ ಜ್ಞಾನವೆಂಬ ಬೆಳಕು ಅಂಧಕಾರವೆಂಬ ನಮ್ಮ ಬಾಳಿನಲ್ಲಿ ಹರಡಲಿ ಎಂಬ ಭಾವನೆಯನ್ನಿಟ್ಟುಕೊಂಡು ದೀಪವನ್ನು ಬೆಳಗುತ್ತೇವೆ.

ದೂಪ ಹಾಕುವುದರಿಂದ ಲೋಭಾನ, ಶ್ರೀಗಂಧ, ಚಂಗಲಕೋಷ್ಠ, ಗುಗ್ಗುಳ, ಯಾಲಕ್ಕಿ, ಕೃಷ್ಣಾಗರು, ದೇವದಾರು, ಹಾಲುಮಡ್ಡಿ, ಜಟಾಮಾಂಸಿ ಮತ್ತು ಕಚೋರಗಳೆಂಬ ಹತ್ತು ವಿಧವಾದ ಮೂಲಿಕೆಗಳಿಂದ ಸಿದ್ಧಪಡಿಸಿ ಬೆಂಕಿಯಲ್ಲಿ ಸುಟ್ಟು ಅದರ ಹೊಗೆಯನ್ನು ಕುಡಿದರೆ ಶ್ವಾಸಕೋಶಗಳ ತೊಂದರೆಗಳು ನಿವಾರಣೆಯಾಗುತ್ತದೆ. ಈ ಹತ್ತು ವಿಧವಾದ ಮೂಲಿಕೆಗಳನ್ನು “ದಶಾಂಗ ಧೂಪ”ವೆನ್ನುತ್ತಾರೆ. ಧೂಪವನ್ನು ಹಚ್ಚುವದರಿಂದ ಅದರ ವಾಸನೆಯು ನಮ್ಮ ಮನಸ್ಸನ್ನು ಹಗುರ ಮಾಡುತ್ತದೆ.

ಘಂಟೆ ಬಾರಿಸುವುದರಿಂದ ಎರಡು ಲೋಹಗಳು ಪರಸ್ಪರ ಢಿಕ್ಕಿ ಹೊಡೆದಾಗ ಶಬ್ದ ತರಂಗಗಳುಂಟಾಗುತ್ತವೆ. ಈ ಶಬ್ದ ತರಂಗಗಳು ಕಿವಿಯನ್ನು ಹೊಕ್ಕು ಮೆದುಳನ್ನು ಸೇರುತ್ತದೆ.
ಸಾಮಾನ್ಯವಾಗಿ ಘಂಟೆಗಳನ್ನು ಕಂಚು,ಪಂಚಲೋಹ,ಬೆಳ್ಳಿ ಅಥವ ಹಿತ್ತಾಳೆಯಿಂದ ಮಾಡುತ್ತಾರೆ. ಪೂಜೆ ಮಾಡುವಾಗ ಹೊರಗಿನ ಎಲ್ಲ ವಿಚಾರಗಳನ್ನು ಪಕ್ಕಕ್ಕಿಟ್ಟು ಶುದ್ಧವಾದ ಮನಸ್ಸಿನಿಂದ ಪೂಜಿಸಬೇಕು. ಕಂಚಿನ ಘಂಟೆಯ ಸದ್ದು ಕಿವಿಯಲ್ಲಿ ಗುಂಯಿಗುಡುತ್ತಾ ಹೊರಗಿನ ಪ್ರಪಂಚವನ್ನು ಕ್ಷಣ ಕಾಲ ಮರೆಸಿಬಿಡುತ್ತದೆ. ಅಂಥಹ ಸ್ಥಿತಿಯಲ್ಲಿ ನಮ್ಮ ಮನಸ್ಸು ಪರಿಪೂರ್ಣ ಶುದ್ಧವಾಗಿರುತ್ತದೆ. ಆ ಸಮಯದಲ್ಲಿ ಮಾಡುವ ಆಲೋಚನೆ ಸಫ಼ಲವಾಗುತ್ತದೆ.

ಮನೆಯ ಮುಂದೆ ತುಳಸಿ ಇಡುವುದು ಏಕೆಂದರೆ ತುಲಸಿಯ ಎಲೆಗಳಲ್ಲಿ ವಿಷೇಶ ಗುಣಗಳಿವೆ. ತುಲಸಿಯು ಔಷದೀಯ ಸಸ್ಯವಾಗಿದೆ. ಇದರಿಂದ ಅನೇಕ ಕಾಯಿಲೆಗಳನ್ನು ಗುಣಪಡಿಸಬಹುದು. ಆಯುರ್ವೇದದಲ್ಲಿತುಲಸಿಗೆ ಬಹಳ ಪವಿತ್ರ ಸ್ಥಾನವನ್ನು ಕೊಟ್ಟಿದ್ದಾರೆ. ಕೆಮ್ಮು, ಕಫ಼ ಮುಂತಾದ ಸಣ್ಣ ಸಣ್ಣ ಕಾಯಿಲೆಗಳಿಂದ ಹಿಡಿದು ಕ್ಷಯದ ವರೆಗೆ ನಿವಾರಿಸುವ ಶಕ್ತಿ ಈ ತುಲಸಿಗಿದೆ.

ಮನೆಯ ಮುಂದೆ ಸಗಣಿಯಿಂದ ಸ್ವಚ್ಛ ಮಾಡುತ್ತಿದ್ದರು ಏಕೆಂದರೆಗೋಮಯ, ಗೋಮೂತ್ರ, ಹಾಲು, ಮೊಸರು ಮತ್ತು ತುಪ್ಪ ಇವುಗಳನ್ನು ಪಂಚಗವ್ಯಗಳೆನ್ನುತ್ತೇವೆ. ಇವೆಲ್ಲವೂ ಆಕಳದ್ದಾಗಿರುತ್ತದೆ. ಇವುಗಳಲ್ಲಿ ಪ್ರತಿಯೊಂದಕ್ಕೂ ಅದರದೆ ಆದ ವಿಷೇಶ ಗುಣಗಳಿರುತ್ತವೆ.ವಿಷೇಶವಾಗಿ ಗೋಮಯದಲ್ಲಿ ಸೂಕ್ಷ್ಮವಾದ ಬ್ಯಾಕ್ತೀರಿಯಾಗಳನ್ನು ತಡೆಯುವ ಶಕ್ತಿ ಹೆಚ್ಚಾಗಿರುತ್ತದೆ.ಗೋಮಯದಿಂದ ಮನೆಯ ಮುಂದೆ ಸಾರಿಸಿದರೆ ಹೊರಗಿನ ವಾತಾವರಣದಲ್ಲಿನ ರೋಗಕಾರಕ ಬ್ಯಾಕ್ತೇರಿಯಾಗಳು ಮನೆಯೊಳಗೆ ಬರದಂತೆ ತಡೆಯುತ್ತದೆ. ಇದರಿಂದ ಅನೇಕ ರೋಗಗಳನ್ನು ಹತ್ತಿರ ಸುಳಿಯದಂತೆ ಮಾಡುತ್ತದೆ ಎಂದು.

ಮನೆಯ ಮುಂದೆ ರಂಗೋಲಿಯನ್ನು ಹಾಕುತ್ತಿದ್ದರು ರಂಗವಲ್ಲಿ ಹಾಕುವುದು ನಮ್ಮ ಧರ್ಮದ ವಿಶೇಷ ಸಂಪ್ರದಾಯವಾಗಿದೆ. ಚಿತ್ತಾಕರ್ಶಕ ಬಗೆಬಗೆಯ ರಂಗೋಲಿಗಳನ್ನು ಸುಣ್ಣದ ಉಂಡೆ ಮತ್ತು ಕೆಂಪು ಮಣ್ಣಿನಿಂದ ಹಾಕುತ್ತಾರೆ. ಸುಣ್ಣದ ಉಂಡೆಮತ್ತು ಕೆಂಪುಮಣ್ಣುಗಳೂ ಸಹ ಆಂಟಿ ಬಯೋಟಿಕ್ ಅಂಶಗಳಿವೆ ಎಂಬ ಕಾರಣ ದಿಂದ.

ಮನೆಯ ತೋರಣಕ್ಕೆ ಮಾವಿನ ಎಲೆ ಮತ್ತು ಊಟಕ್ಕೆ ಬಾಳೆಯ ಎಲೆ ಬಳುಸುತ್ತಿದ್ದಾರು ಏಕೆಂದರೆ.
ಮಾವಿನ ಎಲೆಗಳಲ್ಲಿ ಪತ್ರಹರಿತ್ತಿನ ಪ್ರಮಾಣ ಹೆಚ್ಚಾಗಿರುತ್ತದೆ. ಪತ್ರಹರಿತ್ತು ಹೆಚ್ಚಾಗಿರುವ ಎಲೆಗಳು ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಮಾವಿನ ಎಲೆಗಳು ಮತ್ತು ಬಾಳೆ ಎಲೆಗಳು ಧೀರ್ಘಕಾಲದವರೆಗೆ ಆಮ್ಲಜನಕವನ್ನು ಉತ್ಪಾದ

LEAVE A REPLY

Please enter your comment!
Please enter your name here