ಈರುಳ್ಳಿ ತಿಂದರೆ ಅನೇಕ ಲಾಭಗಳು ತಿಳಿಯಿರಿ

0
1298

ಈರುಳ್ಳಿಯು ಒಂದು ತರಕಾರಿಯಾಗಿ ಬಳಸಲಾಗುವ ಬೆಳೆ. ಅದು ಸಸ್ಯದ ನೆಲದಡಿಯಲ್ಲಿ ಆಹಾರ ಸಂಗ್ರಹಕ್ಕಾಗಿ ಬಳಕೆಯಾಗುವ ಒಂದು ಲಂಬವಾದ ಕುಡಿಯಾಗಿ ಬೆಳೆಯುತ್ತದೆ, ಅತ್ಯಂತ ಹಳೆಯ ತರಕಾರಿಗಳ ಪೈಕಿಯಲ್ಲಿ ಒಂದಾದ ಈರುಳ್ಳಿಯಲ್ಲಿ ಸಾವಯವ ಗಂಧಕ ಸಂಯುಕ್ತ ವಸ್ತುಗಳಿವೆ.
ಇವು ಸಂಕೀರ್ಣ ರೂಪದಿಂದ ಸರಳ ರೂಪಕ್ಕೆ ಬದಲಾಗುತ್ತವೆ ಜೊತೆಗೆ ಈರುಳ್ಳಿಯಲ್ಲಿ ಪರಿಮಳವು ಹೊರಹೊಮೂಮ್ಮುತ್ತದೆ. ಈರುಳ್ಳಿಯನ್ನು ಶೀತಲೀಕರಿಸಿದಾಗ ಅಥವಾ ಹುರಿದಾಗ ಅದರ ರಾಸಾಯನಿಕ ರಚನೆ ಬದಲಾಗುತ್ತದೆ. ಅದು ಹಸಿ ಇದ್ದಗ ಕಿಣ್ವಗಳ ಪ್ರಕ್ರಿಯೆಯನ್ನು ಮಾಡುತ್ತಿದ್ದು ನಿಂತು ಹೋಗುತ್ತದೆ. ಈ ಕಾರಣದಿಂದಲೇ ಹುರಿದಾಗ ಅಥವಾ ಬೇಯಿಸಿದಾಗ ಈರುಳ್ಳಿಯ ರುಚಿ ಬೇರೆಯಾಗಿರುತ್ತದೇ. ಈರುಳ್ಳಿಯಲ್ಲಿರುವ ಕ್ವೆಸ್ರೆಟಿನ್ ಎನ್ನುವ ರಾಸಾಯನಿಕವು ಒಂದು ಪ್ರಬಲ ಯ್ಯಂಟಿ ಆಕ್ಸಿಡೆಂಟ್ ಆಗಿದ್ದು, ನಮ್ಮ ಆರೋಗ್ಯ ರಕ್ಷಣೆಯನ್ನು ಮಡುತ್ತದೆ. ಈ ಈರುಳ್ಳಿಯಲ್ಲಿ ಪ್ರೋಟೀನ್. ಕ್ಯಾಲ್ಸಿಯಂ. ಶರ್ಕರ್ ಪಿಷ್ಟ. ಕಬ್ಬಿಣಂಶ. ಜೀವಸತ್ವ ಗಳು ಇವೆ.

ಈರುಳ್ಳಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೆಚ್ಚಾಗಿದ್ದು, ಇದು ಹಿಸ್ಟಮೀನ್ ನ್ನು ಕಡಿಮೆ ಮಾಡುತ್ತದೆ. ದೇಹಕ್ಕೆ ಬರುವ ಅಲರ್ಜಿ ಹಾಗೂ ಅಸ್ತಮಾ ರೋಗಗಳಿಂದ ದೂರವಿಡುತ್ತದೆ. ಈರುಳ್ಳಿರಸಕ್ಕೆ ಜೇನುತುಪ್ಪ ಸೇರಿಸಿ ಸಮಪ್ರಮಾಣದಲ್ಲಿ ಸೇವಿಸುವುದರಿಂದ ಅಸ್ತಮಾದಿಂದ ದೂರವಿರಬಹುದು.

ನಿತ್ಯವೂ ಬೆಳಿಗ್ಗೆ ಈರುಳ್ಳಿ ರಸ 2 ಚಮಚ ಮತ್ತು ಜೇನುತುಪ್ಪ 2 ಚಮಚ ಬೆರೆಸಿ ಸೇವಿಸಿದರೆ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ.

ಈರುಳ್ಳಿಯಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ಕ್ಯಾನ್ಸರ್ ನಂತಹ ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ.
ಸಕ್ಕರೆ ಖಾಯಿಲೆಯಿಂದ ದೂರವಿರಬಹುದು.

ಈರುಳ್ಳಿಯನ್ನು ಪ್ರತೀನಿತ್ಯ ಸೇವಿಸುವುದರಿಂದ ಬಾಯಿಯ ಆರೋಗ್ಯ ಉತ್ತಮವಾಗಿರುತ್ತದೆ. ಈರುಳ್ಳಿಯನ್ನು ಜಗಿದು ತಿನ್ನುವುದರಿಂದ ಇದು ಹಲ್ಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಪ್ರತೀ ನಿತ್ಯ 3 ನಿಮಿಷಕ್ಕಿಂತ ಹೆಚ್ಚಾಗಿ ಈರುಳ್ಳಿಯನ್ನು ಜಗಿಯುವುದರಿಂದ ಇದು ಹಲ್ಲಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.

ಈರುಳ್ಳಿಯನ್ನು ಹೇರಳವಾಗಿ ತಿನ್ನುವುದರಿಂದ ಇದು ದೇಹದಲ್ಲಿ ಉತ್ಪತ್ತಿಯಾಗುವ ಗ್ಲೂಕೋಸ್ ನ್ನು ಕಡಿಮೆ ಮಾಡಿ, ಇನ್ಸುಲಿನ್ ನ್ನು ಹೆಚ್ಚಾಗುವಂತೆ ಮಾಡುತ್ತದೆ. ಇದರಿಂದ ನಾವು ಸಕ್ಕರೆ ಖಾಯಿಲೆಯಿಂದ ದೂರವಿರಬಹುದು.

ದೇಹ ಕರಗಿಸುವಲ್ಲಿಯೂ ಈರುಳ್ಳಿ ಸಹಕಾರಿಯಾಗುತ್ತದೆ. ಡಯಟ್ ಮತ್ತು ವ್ಯಾಯಾಮ ಮಾಡುವವರಿಗೆ ಕೊಬ್ಬನ್ನ ಕರಗಿಸಲು ಅನುಕೂಲಕರವಾಗಿದೆ. ಇದಕ್ಕೆ ಸ್ಪ್ರಿಂಗ್ ಆನಿಯನ್ ಹೆಚ್ಚು ಪರಿಣಾಮಕಾರಿಯಾಗುತ್ತದೆ.

ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಈರುಳ್ಳಿ ಒಳ್ಳೆಯ ಔಷಧಿ. ರಾತ್ರಿ ಊಟಕ್ಕೂ ಮುನ್ನ ಈರುಳ್ಳಿ ಸೂಪ್ ಸೇವಿಸಿದರೆ ಚೆನ್ನಾಗಿ ನಿದ್ರೆ ಬರುತ್ತದೆ.

ಹಸಿ ಈರುಳ್ಳಿಯನ್ನು ಕತ್ತರಿಸಿ ಬೆಲ್ಲದ ಜೊತೆ ಸೇವಿಸಿದರೆ ಕಫ ಕರಗುತ್ತದೆ. ಕೆಮ್ಮು, ಕಡಿಮೆಯಾಗುತ್ತದೆ.

ಈರುಳ್ಳಿಯನ್ನು ಹೆಚ್ಚಿ ನೀರಿಗೆ ಹಾಕಿ ಅದಕ್ಕೆ ಮೆಣಸಿನಕಾಳು, ಬೆಲ್ಲ, ಶುಂಠಿ, ಹಾಕಿ ಜಜ್ಜಿ ಕಷಾಯ ಮಾಡಿ ಕುಡಿದರೆ ನೆಗಡಿ, ಕೆಮ್ಮು, ಜ್ವರ, ಕಡಿಮೆಯಾಗುತ್ತದೆ.

ಈರುಳ್ಳಿಯ ರಸ 4 ಚಮಚ, ಜೇನುತುಪ್ಪ 2 ಚಮಚ, ತುಪ್ಪ 1 ಚಮಚ ಇವು ಮೂರನ್ನು ಬೆರೆಸಿ ಕುಡಿದರೆ ವೀರ್ಯವೃದ್ದಿಯಾಗುತ್ತದೆ. ಇಂದ್ರಿಯ ಉದ್ದಿಪನೆಯಾಗುತ್ತದೆ.

ಮೂಗಿನಿಂದ ರಕ್ತ ಬರುತ್ತಿದ್ದರೆ 2 ಹನಿ ಈರುಳ್ಳಿ ರಸ ಹಾಕಿದರೆ ರಕ್ತ ಬರುವುದು ನಿಲ್ಲುತ್ತದೆ.

ಹಸಿ ಈರುಳ್ಳಿಯನ್ನು ನಿತ್ಯವೂ ತಿಂದರೆ ಹೃದಯ ಮತ್ತು ಸ್ನಾಯುಗಳಿಗೆ ಹಿತಕರ.

ಮಕ್ಕಳಿಗೆ ಇಡೀ ಈರುಳ್ಳಿಯನ್ನು ಬೇಯಿಸಿ ಅಥವಾ ಸುಟ್ಟು ನಿತ್ಯವೂ ತಿನ್ನಲು ಕೊಟ್ಟರೆ ಆಗಾಗ್ಗೆ ಶೀತ,ಕೆಮ್ಮು ಉಂಟಾಗುವುದಿಲ್ಲ.

ಈರುಳ್ಳಿ ದೇಹದ ಆರೋಗ್ಯವಷ್ಟೇ ಅಲ್ಲದೆ, ಸೌಂದರ್ಯ ವೃದ್ಧಿಗೂ ಸಹಕಾರಿಯಾಗಿದ್ದು, ಕೂದಲಿನ ಆರೈಕೆಗೆ ಉತ್ತಮ ಔಷಧವೆನ್ನಬಹುದು. ಈರುಳ್ಳಿಯಲ್ಲಿ ವಿಟಮಿನ್ ಎ ಹಾಗೂ ಸಿ ಇರುವುದರಿಂದ ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಕೂದಲಿನ ಬುಡವನ್ನು ಗಟ್ಟಿಯಾಗಿಸುತ್ತದೆ. ಈರುಳ್ಳಿಯ ರಸವನ್ನು ಕೂದಲಿನ ಬುಡಕ್ಕೆ ಹಚ್ಚುತ್ತಾ ಬಂದರೆ ಕೂದಲು ಉದುರುವುದು ಕ್ರಮೇಣವಾಗಿ ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೆ, ರಕ್ತ ಸಂಚಲನ ಸುಗಮವಾಗುತ್ತದೆ.

ತಲೆಹೊಟ್ಟು ಉತ್ಪತ್ತಿಯನ್ನು ತಡೆಯಲು ಮತ್ತು ಅದರ ನಿವಾರಣೆಗೆ ಈರುಳ್ಳಿಯ ರಸ ನಿಜಕ್ಕೂ ಸಂಜೀವಿನಿಯಿದ್ದಂತೆ.

ಐರನ್ ಮಾಡುವಾಗ ಅಥವಾ ಬಿಸಿ ಪಾತ್ರೆಯನ್ನು ಇಳಿಸುವಾಗ ಬಿಸಿ ತಾಕಿದಾಗ ಆ ಜಾಗದಲ್ಲಿ ಈರುಳ್ಳಿಯಿಂದ ಉಜ್ಜಿದರೆ ನೋವು ಕಡಿಮೆ ಆಗೋದು ಅಲ್ಲದೆ ಇನ್ಫೆಕ್ಷನ್ ಆಗದ ಹಾಗೆ ಕಾಪಾಡುತ್ತದೆ .

ನೀರು ಇರುವ ಒಂದು ಪಾತ್ರೆಯಲ್ಲಿ ತಾಜಾ ಈರುಳ್ಳಿಯನ್ನು ಇಟ್ಟು ಆ ಪಾತ್ರೆಯನ್ನು ಆ ರೂಮಿನಲ್ಲಿ ಒಂದು ರಾತ್ರಿ ಪೂರ್ತಿ ಇಟ್ಟರೆ ಸಾಕು ಅದು ರೂಮ್ ಫ್ರೆಷೆರ್ ಹಾಗೆ ಕೆಲಸ ಮಾಡುತ್ತದೆ.

ಮುಖದ ಮೇಲೆ ಪಿಂಪಲ್ಸ್ ಹೋಗಬೇಕು ಎಂದರೆ ಈರುಳ್ಳಿ ಚೂರುಗಳನ್ನು ಸ್ವಲ್ಪ ನೀರಿನಿಂದ ನೆನಸಿ ಅದನ್ನು ಪಿಂಪಲ್ಸ್ ಮೇಲೆ ಹಚ್ಚಿಕೊಂಡರೆ ಸರಿಹೋಗುತ್ತದೆ

ಜೇನು ಹುಳ ಕಚ್ಚಿದರೆ ಈರುಳ್ಳಿಯಿಂದ ಉಜ್ಜಿದರೆ ಆ ನೋವು ಕಡಿಮೆ ಆಗುತ್ತದೆ.

ತಲೆ ನೋವು ಇದ್ದಾಗ ಈರುಳ್ಳಿಯನ್ನು ಹಣೆಯ ಮೇಲೆ ಉಜ್ಜುವುದರಿಂದ ತಲೆ ನೋವು ಕಡಿಮೆ ಆಗುತ್ತದೆ.

ಈರುಳ್ಳಿಯನ್ನು ಸಣ್ಣಗೆ ಹಚ್ಚಿ ಅದನ್ನು ತುಪ್ಪದಲ್ಲಿ ಉರಿದು ಸೇವಿಸಿದರೆ ಸೋರಿಯಾಸಿಸ್ ಕಾಯಿಲೆ ದೂರವಾಗುತ್ತದೆ.

ತಲೆಯಲ್ಲಿ ಹೇನು ಇದ್ದರೆ ರಾತ್ರಿ ಮಲಗುವ ಮುಂಚೆ ಈರುಳ್ಳಿ ರಸವನ್ನು ತಲೆಗೆ ಹಚ್ಚಿಕೊಂಡು ಮಲಗಿ ಬೆಳಗ್ಗೆ ಸ್ನಾನ ಮಾಡಬೇಕು.

ರಕ್ತ ಶುದ್ಧತೆ ಮತ್ತು ಚರ್ಮರೋಗ ನಿವಾರಣೆಗೆ ಈರುಳ್ಳಿಯ ರಸ ಮತ್ತು ಹುರಿದು ಪುಡಿ ಮಾಡಿದ ಜೀರಿಗೆ ಪುಡಿಯನ್ನು ಮಿಶ್ರಣ ಮಾಡಿಕೊಂಡು ಸೇವಿಸಬೇಕು.

ನೋಡಿದರಲ್ಲ ಕಣ್ಣಲ್ಲಿ ನೀರು ಬರಿಸುವ ಈ ಈರುಳ್ಳಿಯಲ್ಲಿ ಎಷ್ಟೊಂದು ಉಪಯೋಗವಿದೆಯೆಂದು ಅದಕ್ಕಾಗಿ ಇನ್ನು ಮೇಲೆ ನೀವು ಕೇವಲ ಅಡುಗೆಗೆ ಮಾತ್ರ ವಲ್ಲದೆ ನಿಮ್ಮ ಇನ್ನಿತರ ಆರೋಗ್ಯ ಸಮಸ್ಯೆಗಳಿಗೂ ಬಳಸಿಕೊಳ್ಳಿ.

LEAVE A REPLY

Please enter your comment!
Please enter your name here