ಹೆಚ್ಚು ವರ್ಷ ಬದುಕಲು ಮಾಡಬೇಕಾದ ಕೆಲಸಗಳು.

1
2028

ಪ್ರತಿಯೊಬ್ಬರಿಗೂ ತಾವು 100 ವರ್ಷ ಬದುಕಬೇಕು ಎಂದು ಆಸೆ ಪಡುತ್ತಾರೆ. ಹಾಗೆಯೇ ಶುಭ ಕಾರ್ಯಗಳಲ್ಲಿ ಆಶೀರ್ವಾದ ಮಾಡುವಾಗ ನೂರು ವರ್ಷ ಚೆನ್ನಾಗಿ ಬಾಳಿ ಬದುಕಿ ಎಂದು ಆರೈಸುತ್ತಾರೆ.

ಆದರೆ ಆಸೆ ಪಟ್ಟ ಹಾಗೆ ತುಂಬಾ ವರ್ಷ ಬದುಕ ಬೇಕು ಅಂದರೇ ಆಶೀರ್ವಾದ ಮಾಡಿದರು. ದೇವರನ್ನು ಬೇಡಿದೆವು. ಇಷ್ಟ ಪಟ್ಟೆವು ಎಂದು ತುಂಬಾ ವರ್ಷ ಬದುಕಲು ಸಾಧ್ಯವೇ.?
ಈ ಭೂಮಿಯ ಮೇಲೆ ಹುಟ್ಟಿದ ನಂತರ ಎಲ್ಲರೂ ಒಂದಲ್ಲ ಒಂದು ದಿನ ಒಂದಲ್ಲ ಒಂದು ರೀತಿ ಸಾಯಲೇ ಬೇಕು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಆದರೆ ತಾನು ಬದುಕುವ ಸಮಯವನ್ನು ಸ್ವಲ್ಪ ದಿನಗಳು ಹೆಚ್ಚಿಸಿಕೊಳ್ಳಬಹುದು.
ಅದಕ್ಕಾಗಿ ನಾವು ತುಂಬಾ ಕಷ್ಟ ಪಡಬೇಕು ಜೊತೆಗೆ ಆ ಬದುಕು ಕೂಡ ನಮ್ಮಲ್ಲೇ ಇರುತ್ತದೆ ಅದನ್ನು ನಾವು ಪಾಲಿಸುತ್ತ ಹೋದರೆ ನಾವು ಇಷ್ಟ ಪಟ್ಟ ಹಾಗೆ ತುಂಬಾ ವರ್ಷಗಳು ಬದುಕಬಹುದು ಹೇಗೆಂದರೇ.

ನಾವು ನಮ್ಮ ಆರೋಗ್ಯವನ್ನು ತುಂಬಾ ಜೋಪಾನವಾಗಿ ನೋಡಿಕೊಳ್ಳಬೇಕು.

ನಾವು ಪ್ರತಿ ದಿನ ತಿನ್ನುವ ಆಹಾರದ ಕ್ರಮವು ಸರಿಯಾಗಿರಬೇಕು ಅಂದರೆ ಒಂದೇ ಸಲ ಹೊಟ್ಟೆಯನ್ನು ಪೂರ್ತಿಯಾಗಿ ತುಂಬಿಸಬಾರದು ಮತ್ತೊಂದು ಸಲ ತಿನ್ನಲು ಜಾಗ ಇರಬೇಕು ಆ ರೀತಿಯಲ್ಲಿ ನಾವು ಆಹಾರ ಸೇವಿಸಬೇಕು. ಅದನ್ನು ಬಿಟ್ಟು ಒಂದೇ ಸಲ ತಿಂದರೆ ದೇಹದ ಎಲ್ಲ ಕೋಶಗಳಿಗೂ ಒತ್ತಡ ಬೀರುತ್ತವೆ ಆದ್ದರಿಂದ ರೋಗಗಳು ಸೃಷ್ಟಿಯಾಗುತ್ತವೆ.

ಮನುಷ್ಯನ ದೇಹವು ಹೆಚ್ಚು ನೀರಿನಿಂದ ಆವೃತವಾಗಿರಬೇಕು. ಹೆಚ್ಚು ನೀರು ಕುಡಿದಂತೆ ಹೆಚ್ಚು ಆರೋಗ್ಯವಾಗಿ ಇರುತ್ತೀರಿ. ಅದರಲ್ಲೂ ತಾಮ್ರ. ಮಣ್ಣಿನ ಮಾಡಕೆಯಲ್ಲಿ ಇರುವ ನೀರು ಕುಡಿದರೆ ತುಂಬಾ ಒಳ್ಳೆಯದು. ನೀರು ನಮ್ಮ ದೇಹದ ಕಲ್ಮಶಗಳನ್ನು ಹೊರಹಾಕಲು ಸಹಾಯವಾಗುತ್ತದೆ.

ನಮ್ಮ ದೇಹಕ್ಕೆ ಎಲ್ಲ ಪೋಷಕಾಂಶಗಳನ್ನು ಒಳಗೊಂಡಿರುವ ವಿಟಮಿನ್ ಇರುವ ತರಕಾರಿ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಮಾಂಸಹಾರಿಗಿಂತ ಸಸ್ಯಾಹಾರಿ ಪದಾರ್ಥಗಳು ಒಳ್ಳೆಯದು.

ಆಹಾರದ ಜೊತೆ ಮನುಷ್ಯನಿಗೆ ವ್ಯಾಯಾಮ ಸಹ ಅಷ್ಟೇ ಮುಖ್ಯ ಆದ್ದರಿಂದ ಹೊರಗಿನ ಶುದ್ಧ ಗಾಳಿಯನ್ನು ಸೇವಿಸಬೇಕು. ತಮ್ಮ ದೇಹದ ಎಲ್ಲ ಭಾಗಗಳಿಗೂ ವ್ಯಾಯಾಮ ನೀಡಬೇಕು. ಜೊತೆಗೆ ಹೆಚ್ಚಿನ ನಡಿಗೆ ಇರಬೇಕು ಇದರಿಂದ ನಮ್ಮಲ್ಲಿ ಇರುವ ನೆಗೆಟಿವ್ ಏನರ್ಜಿಯನ್ನು ಭೂಮಿಯು ತೆಗೆದುಕೊಳ್ಳುತ್ತದೆ.

ನಾವು ಉಸಿರಾಡುವ ನಿಯಮ ಸರಿಯಾಗಿರಬೇಕು ಅಂದರೆ ನಿಯಮಿತವಾಗಿ ದೀರ್ಘವಾಗಿ ಸುಲಲಿತವಾಗಿ ಉಸಿರಾಡಬೇಕು.ನಮ್ಮ ಮನಸ್ಸನ್ನು ಉಸಿರಾಟದ ಮೇಲೆ ಕೇಂದ್ರೀಕರಿಸಬೇಕು ಆಗ ಮಾತ್ರ ನಾವು ನಿಯಮಿತವಾಗಿ ಉಸಿರಾಡಲು ಸಾಧ್ಯ. ಹಾಗೆಯೇ ಯೋಗದಲ್ಲಿ ಹೇಳುವ ಪ್ರಾಣಾಯಾಮವು ಈ ಉಸಿರಾಟದ ಬಗ್ಗೆ ಹೇಳುವುದು.

ನಮ್ಮ ಆರೋಗ್ಯಕ್ಕೆ ಆಹಾರ. ಗಾಳಿ . ನೀರು ಎಷ್ಟು ಅವಶ್ಯಕತೆ ಇದಿಯೋ ಅಷ್ಟೇ ನಿದ್ರೆಗೂ ಸಹ ಇದೆ ಒಬ್ಬ ಮನುಷ್ಯ ತನ್ನ ವಯಸ್ಸಿಗೆ ತಕ್ಕ ಹಾಗೆ ಎಷ್ಟು ನಿದ್ರೆ ಅವಶ್ಯಕ ಇದಿಯೋ ಅಷ್ಟು ನಿದ್ರೆ ಮಾಡಲೇ ಬೇಕು.

ಒಬ್ಬ ವ್ಯಕ್ತಿ ಎಷ್ಟು ಸಂತೋಷವಾಗಿ. ಎಷ್ಟು ನಗು ನಗುತ್ತಾ ಇರುತ್ತಾನೋ ಅಷ್ಟು ಆರೋಗ್ಯವಾಗಿ ಇರುತ್ತಾನೆ.ತನ್ನ ಒತ್ತಡ. ತೊಂದರೆ. ಸಮಸ್ಯೆ ಇವುಗಳಿಂದ ದೂರವಾಗಿ ಖುಷಿಯಿಂದ ಇರಬೇಕು.

ರಾತ್ರಿಯ ಸಮಯದಲ್ಲಿ ಹೆಚ್ಚು ಆಹಾರ ಸೇವಿಸಬಾರದು ಅದರಲ್ಲೂ ಬೇಗ ಜೀರ್ಣವಾಗದೆ ಇರುವ ಆಹಾರವನ್ನು ಸೇವಸಲೇ ಬಾರದು

ಇವುಗಳನ್ನು ಪಾಲಿಸುತ್ತಾ ಬಂದರೆ ನಮ್ಮ ಹಿಂದಿನ ಕಾಲದ ಜನರಂತೆ ದೀರ್ಘಾಯುಷಿಗಾಳಗಿ ಆರೋಗ್ಯವಂತರಾಗಿ ತುಂಬಾ ದಿನಗಳ ಕಾಲ ಜೀವಿಸಬಹುದು.

1 COMMENT

LEAVE A REPLY

Please enter your comment!
Please enter your name here