ಒಮ್ಮೆ ಹೋಗಿ ಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ

0
1046

ದೇವಾಲಯದ ಸ್ಥಳ ಪುರಾಣಗಳ ವಿವರ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹಳೇಕೋಟೆಯಲ್ಲಿ ಬೆಟ್ಟದ ರಂಗನಾಥಸ್ವಾಮಿ ದೇವಾಲಯವು 500-600 ಅಡಿ ಎತ್ತರದ ಬೆಟ್ಟದಿಂದ ಶಿಲ್ಪ ಕಲೆಯ ಸೌಂದರ್ಯವನ್ನು ಪುರಾತನ ಸಂಸ್ಕೃತಿಯನ್ನು ಸುರಿದು ಮಾನವನಿಗೆ ಮೋಕ್ಷ ನೀಡುವ ಮಾಹಾಕ್ಷೇತ್ರವಿದು.

ಈ ಬೆಟ್ಟವು ರೈಲು ಮಾರ್ಗದ ಇನ್ನೊಂದು ಬದಿಯಿದ್ದು. ಹಳ್ಳಿಯಿಂದ ಸ್ವಲ್ಪ ದೂರದಲ್ಲಿದೆ. ಈ ಬೆಟ್ಟದ ತುದಿಯಲ್ಲಿ ರಂಗನಾಥ ಸ್ವಾಮಿಯ ದೇವಾಲಯವು ಮರಕ್ಕೆ ಹೊಂದಿಕೊಂಡಿರುವ ಗುಹೆಯಲ್ಲಿಯೇ ಕಟ್ಟಲ್ಪಟ್ಟಿದೆ. ಈ ದೇವಾಲಯವು ನಕ್ಷತ್ರಾಕೃತಿಯಲ್ಲಿದೆ. ದೇವಾಲಯದ ಸುತ್ತಲಿನ ಪರಿಸರಗಳಿಂದ ನಮಗೆ ಪಕ್ಕದ ಹಳ್ಳಿಯ ಬಗ್ಗೆ ಸಾಕಷ್ಟು ತಿಳುವಳಿಕೆಯುಂಟಾಗುತ್ತದೆ. ಈ ಹಳ್ಳಿಯು ಬೆಟ್ಟದ ಸಾತೇನಹಳ್ಳಿ ಎಂದು ಹೆಸರಾಗಿದೆ. ಸುತ್ತಲೂ ಹಸುರಿನ ಹೊಲಗದ್ದೆಗಳು ಕಂಡು ಬರುವವು. ರಂಗನಾಥ ಸ್ವಾಮಿಯ ದೇವಾಲಯಕ್ಕೆ ಎರಡು ಮುಖ್ಯ ಪ್ರವೇಶ ದ್ವಾರಗಳಿದ್ದು, ಒಂದು ನೇರವಾಗಿ ಗರ್ಭಗುಡಿಗೆ ಕರೆದೊಯ್ಯುತ್ತದೆ. ಇನ್ನೊಂದು ಮಾರ್ಗವು ಹನುಮಂತನ ಮೂರ್ತಿ ಇರುವಲ್ಲಿಯೂ ನಂತರ ಮೊಗಸಾಲೆಗೂ ಕರೆದೊಯ್ಯುತ್ತದೆ.

ವೈಖಾನಸ ಆಗಮವೆಂಬ ಒಂದು ವಿಶಿಷ್ಟ ಕ್ರಮದಲ್ಲಿ ದೇವಾಲಯವನ್ನು ಶುದ್ದಗೊಳಿಸಲಾಗುತ್ತದೆ. ಮತ್ತು ಪೂಜಾದಿಗಳನ್ನು ನೆರವೇರಿಸುತ್ತಾರೆ. ಮೇಘ ಮಾಸದಲ್ಲಿ ಪುಷ್ಯ ನಕ್ಷತ್ರದ ದಿನ ಅಂದರೆ ಪೌರ್ಣಮಿಯ ಹಿಂದಿನ ದಿನ ತ್ರಯೋದಶಿ ಚತುರ್ದಶಿಯಂದು ನಡೆಯುವ ಸ್ವಾಮಿಯ ರಥೋತ್ಸವ ಕಾಲದಿಂದ 15 ದಿನಗಳವರೆಗೆ ದೊಡ್ಡದೊಂದು ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ನಾಡಿನ ನಾನಾ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಸ್ವಾಮಿಯ ಭಕ್ತಾಧಿಗಳು ಸೇರುವರು.

ಬೆಟ್ಟದ ರಂಗನಾಥ ಸ್ವಾಮಿಯ ಈ ದೇವಾಲಯವು ಹೊಯ್ಸಳರ ಶೈಲಿಯದಾಗಿದೆ. ರಂಗನಾಥಸ್ವಾಮಿಯ ಈ ದೇವಾಲಯವು ಹರಿಹರರ ಅಭಿನ್ನತೆಯ ಸ್ಥಾನವೆಂದು ಕರ್ನಾಟಕದಲ್ಲ್ರಿ ಕ್ರಿ. ಶ. 13, 14 ನೇ ಶತಮಾನಗಳಿಂದ ಪೂಜಿಸಲ್ಪಡುತ್ತಿದೆ. ವಿಜಯನಗರ ಹಾಗೂ ಹೊಯ್ಸಳ ದೊರೆಗಳ ಅನೇಕರು ತಮ್ಮ ರಾಜ್ಯಗಳಲ್ಲಿನ ಜಾತಿಗಳ ಮಧ್ಯದಲ್ಲಿನ ಬೇದಾಂತರಗಳನ್ನು ತೊರೆದು ಹಾಕುವ ಪ್ರಯತ್ನ ಮಾಡಿದರು. ಇದರಿಂದಾಗಿ ಪೂಜೆಗಳಲ್ಲಿ ಭಾಂಧವ್ಯದ ಬೆಸುಗೆಯನ್ನುಂಟು ಮಾಡಿದರು. ಇದರಂತೆಯೇ ವಿಜಯನಗರ ಸಾಮ್ರಾಜ್ಯ ಸ್ಥಾಪಕರಲೊಬ್ಬರಾದ ಬುಕ್ಕ ದೊರೆಯು ತನ್ನ ರಾಜ್ಯದಲ್ಲಿನ ಜೈನ ಮತ್ತು ವೈಷ್ಣವರ ನಡುವಿನ ಜಗಳಗಳನ್ನು ವಾದ ವಿವಾದಗಳನ್ನು ತೊಡೆದು ಹಾಕಿ ಅವರು ಒಂದಾಗಿ ಬಾಳುವಂತೆ ಮಾಡಿದನು. ಆತ ಸರ್ವಮತ ಪ್ರಿಯ ವಿಶಿಷ್ಟಾದ್ವೈತ ಮತ ಸ್ಥಾಪಕರಾದ ಶ್ರೀ ರಾಮಾನುಜಾಚಾರ್ಯರು ಈ ಬೆಟ್ಟದ ಮೇಲೆ ಕೆಲಕಾಲ ತಂಗಿ ತಮ್ಮ ಭಕ್ತಿ ಪೂರ್ವಕವಾದ ಭಜನೆಗಳಿಂದ ಶ್ರೀ ರಂಗನಾಥನ ದರ್ಶನವನ್ನು ಮಾಡಿಕೊಂಡರೆಂದು ಇಲ್ಲಿಯ ಜನರು ಹೇಳುವುದುಂಟು.

ಇದು ಆ ವಿಭಾಗದ ಪಾಳೆಯಗಾರರಿಗೆ ಸಂಬಂಧಿಸಿದ್ದು, ಆತ ಸ್ವಾಮಿಯ ಅಭಿಷೇಕಕ್ಕಾಗಿ 12 ಕೊಡ ಪಂಚಾಮ್ರೃತದ ವಸ್ತುಗಳನ್ನು ತೆಗೆದುಕೊಂಡು ಬಂದನಂತೆ ಈ ಮೊದಲೇ ತಿಳಿಸಿದಂತೆ ಅಭಿಷೇಕವಾದ ಮೇಲೆ ಎಲ್ಲಾ ವಸ್ತುಗಳೂ ಇಂಗಿ ಹೋಗಿ ಒಂದು ಚಮಚದಷ್ಟು ಮಾತ್ರ ಉಳಿಯಿತಂತೆ ಅದನ್ನೇ ತೀರ್ಥವೆಂದು ಸ್ವೀಕರಿಸಲಾಯಿತು. ಆ ಪಾಳೆಯಗಾರರಿಗೆ ತಾನು 12 ಕೊಡಗಳಷ್ಟು ಪಂಚಾಮೃತ ಅಭಿಷೇಕವನ್ನು ಮಾಡಿಸಿದರೂ ಸ್ವಲ್ಪವೂ ಉಳಿಯಿಲಿಲ್ಲವೆಂದು ಅಸಮಾದಾನವಾಯಿತು. ಅಲ್ಲದೆ ಈವರೆಗೂ ಯಾರು ಇಷ್ಟು ದೊಡ್ಡ ಪ್ರಮಾಣದಲ್ಲಿ ಅಭಿಷೇಕ ಮಾಡಿಸಿರಲಿಲ್ಲ. ತಾನೇ ಮೊದಲಿಗನೆಂಬ ಗರ್ವವೂ ಉಂಟಾಯಿತು. ಅಂದೇ ರಾತ್ರಿ ಆತನಿಗೊಂದು ಕನಸು ಬಿತ್ತು. ಅದರಲ್ಲಿ ಆತನಿಗೆ ಪಂಚಾಮೃತ ವಸ್ತುಗಳಿದ್ದ 12 ಕೊಡಗಳು ಕಾಣಿಸಿ ಕೊಂಡವಲ್ಲದೆ ಅವುಗಳನ್ನು ವಾಪಸ್ ತೆಗೆದುಕೊಳ್ಳುವಂತೆ ಸ್ವಾಮಿಯ ಅಪ್ಪಣೆ ಆಯಿತಂತೆ. ಮರುದಿನ ಮುಂಜಾನೆ ಅವನು ದೇವಾಲಯಕ್ಕೆ ಹೋಗಿ ತನ್ನ ತಪ್ಪನ್ನು ಮನ್ನಿಸುವಂತೆ ತನ್ನ ಗರ್ವಕ್ಕೆ ಪ್ರಾಯಶ್ಚಿತ ಮಾಡಿಕೊಂಡನೆಂಬ ಪ್ರತೀತಿ ಇದೆ.

LEAVE A REPLY

Please enter your comment!
Please enter your name here