ನಿಂಬೆ ರಸ ಬಳಸಿ ಹಲವು ರೋಗ ಓಡಿಸಿ

0
1586

ನಿಂಬೆಯು ಸದಾ ಹಸಿರಾಗಿರುವ ಒಂದು ಚಿಕ್ಕ ಮರ. ಇದಕ್ಕೆ ನಿಂಬೆಗಿಡ ಎಂದು ಕೂಡ ಕರೆಯಲಾಗುತ್ತದೆ. ಇದು ಮೂಲತಃ ಏಷ್ಯಾದ ಮೂಲದ್ದಾಗಿದೆ. ಈ ಗೊಲಾಕಾರದ ಹಳದಿ ಬಣ್ಣದ ಹಣ್ಣುಗಳನ್ನು ಪ್ರಮುಖವಾಗಿ ತಂಪುಪಾನೀಯವಾಗಿ ಬಳಸಲಾಗುವುದು ಹಾಗೂ ಅಡಿಗೆಗೂ ಕೂಡ ಹೇರಳವಾಗಿ ಬಳಸುತ್ತಾರೆ. ಇದರ ರುಚಿ ಹುಳಿಯಾಗಿದ್ದು, ಸ್ವಲ್ಪ ಒಗರು ಒಗರಾಗಿರುತ್ತದೆ. ಇದು ಆಯುರ್ವೈದಿಕ ಔಷಧೀಯ ಗುಣಗಳನ್ನು ಹೊಂದಿದೆ.

ನಿಂಬೆ ಹಣ್ಣು ವಿಟಮಿನ್ ಸಿ ಅಧಿಕವಿರುವ ಹಣ್ಣು. ನಿಂಬೆಹಣ್ಣು ಒಂದು ಬಹುಪಯೋಗಿ ಹಣ್ಣು. ಇದರಲ್ಲಿರುವ ವಿಟಮಿನ್ ಇ, ಎ, ಬಿ6, ಕಬ್ಬಿಣದಂಶ, ಕ್ಯಾಲ್ಶಿಯಂ ಅಂಶ ಹೇರಳವಾಗಿದೆ.ಈ ಹಣ್ಣಿನ ರಸವು ಸಹ ಅಷ್ಟೇ ಉಪಯುಕ್ತ

ನಿಂಬೆ ಹಣ್ಣಿನ ರಸದಲ್ಲಿ ಯಾಂಟಿ ಆಕ್ಸಿಡೆಂಟ್ಗಳು. ವಿಟಮಿನ್ ಸಿ. ಯಾಂಟಿಬಯೋಟಿಕ್. ಯಾಂಟಿ ಪಂಗಲ್. ಯಾಂಟಿ ವೈರಲ್. ಗುಣಗಳು ಹೆಚ್ಚಿವೆ. ಆದ್ದರಿಂದ ಈ ನಿಂಬೆ ರಸವನ್ನು ಬಳಸಿ ಹಲವಾರು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಅವುಗಳೆಂದರೆ

ಒಂದು ಲೋಟ ನೀರಿಗೆ ಒಂದು ನಿಂಬೆ ಹಣ್ಣಿನ ರಸವನ್ನು ಹಿಂಡಿ ಕೊಂಡು ಕುಡಿದರೆ ಹಲವಾರು ರೋಗಗಳಿಂದ ಮುಕ್ತಿ ಪಡೆಯಬಹುದು.ಪ್ರತಿದಿನ ಸೇವಿಸುತ್ತಾ ಬಂದರೆ ನಾವು ಯಾವುದೇ ರೀತಿಯ ಔಷಧಿಗಳು. ವೈದ್ಯರ ಸಹಾಯ ಇರುವುದೇಯಿಲ್ಲ.

ಹಾಗಾದರೆ ಏನು ಉಪಯೋಗ ನೋಡೋಣ ಬನ್ನಿ..

ಒಂದು ಲೋಟ ನೀರಿಗೆ ಸ್ವಲ್ಪ ನಿಂಬೆ ರಸ ಸೇರಿಸಿ ಪ್ರತಿದಿನ ಕುಡಿಯುತ್ತ ಬಂದರೆ ದೇಹದಲ್ಲಿ ಪೊಟ್ಯಾಸಿಯಂ ಲೇವಲ್ ಹೆಚ್ಚಾಗಿ ಸಿಟ್ರಿಕ್ ಮಟ್ಟ ಉತ್ತಮವಾಗುತ್ತದೆ ಇದರಿಂದ ಕಿಡ್ನಿ ಸ್ಟೋನ್ ಗಳು ಕರಗುತ್ತವೆ.

ದಿನ ನಿತ್ಯ ಸೇವಿಸುತ್ತಾ ಬಂದರೆ ಹೊಟ್ಟೆಯ ಯಲ್ಲ ಸಮಸ್ಯೆಗಳು ದೂರವಾಗುತ್ತವೆ.

ನಾವು ತಿನ್ನುವ ಆಹಾರ. ಸೇವಿಸುವ ಗಾಳಿ. ಕುಡಿಯುವ ನೀರು ಇವುಗಳ ಜೊತೆ ನಮಗೆ ವಿಷ ಪದಾರ್ಥಗಳು ಬಂದು ಸೇರುತ್ತವೆ ಆದ್ದರಿಂದ ನಿಂಬೆರಸ ವನ್ನು ಸೇವಿಸುತ್ತಾ ಬಂದರೆ ವಿಷ ಪದಾರ್ಥ. ಕೆಟ್ಟ ಪದಾರ್ಥಗಳನ್ನು ಹೊರ ಹಾಕಲು ಸಹಾಯವಾಗುತ್ತದೆ.

ನಿಂಬೆ ಹಣ್ಣಿನ ರಸದಲ್ಲಿ ಸಕ್ಕರೆ ಕಲಿಸಿ ಸ್ವಲ್ಪಸ್ವಲ್ಪವೇ ಕುಡಿಯುತ್ತಿದ್ದರೆ ವಾಂತಿ ನಿಲ್ಲುವದು.

ದೊಡ್ಡ ಲೋಟದಲ್ಲಿ, ತಾಜಾ ನಿಂಬೆ ರಸವನ್ನು ಬೆರೆಸಿದ ನೀರನ್ನು ಬೆಳಗ್ಗೆ ಎದ್ದ ಕೂಡಲೇ ಸೇವಿಸುವುದು ಒಂದು ಲಿವರ್ ನ ಆರೋಗ್ಯ ಕಾಪಾಡಬಹುದು.

ನಿತ್ಯವೂ ನಿಂಬೆರಸ ಸೇವಿಸಿದರೆ ಜೀರ್ಣಕ್ರಿಯೆ ಸಮಸ್ಯೆಗಳು ದೂರವಾಗುತ್ತದೆ. ಪ್ರಮುಖವಾಗಿ ಮಲಬದ್ಧತೆ.ಅಸಿಡಿಟಿ ದೂರವಾಗುತ್ತವೆ.

ದೇಹದಲ್ಲಿ ಇರುವ ಅಧಿಕ ಕೊಬ್ಬನ್ನು ಕರಗಿಸಿ ತೂಕವನ್ನು ಕಡಿಮೆ ಮಾಡಿಕೊಳ್ಳಲು ಈ ನಿಂಬೆರಸ ಸಹಾಯಮಾಡುತ್ತದೆ.

ರಕ್ತದ ಸರಬರಾಜು ಉತ್ತಮವಾಗಿ. ಹೃದಯ ಸಂಬಂದಿ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ.

ಕೀಲು ನೋವುಗಳಿಂದ ನರಳುತ್ತಿರುವವರು ಈ ನಿಂಬೆ ರಸವನ್ನು ಸೇವಿಸುತ್ತಾ ಬಂದರೆ ನೋವಿಗಳು ಕಡಿಮೆಯಾಗುತ್ತದೆ. ಜೊತೆಗೆ ಚಳಿಗಾಲದಲ್ಲಿ ಬರುವ ಫ್ಲೋ ಜ್ವರ. ಕೆಮ್ಮು. ನೆಗಡಿ ಕಡಿಮೆಯಾಗುತ್ತದೆ.

ಮಧುಮೇಹದಿಂದ ನರಳುತ್ತಿರುವವರು ನಿಂಬೆರಸವನ್ನು ಕುಡಿದರೆ ಅವರ ರಕ್ತದಲ್ಲಿ ಇರುವ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ನಿಂಬೆರಸವನ್ನು ತಲೆಯ ಬುಡಕ್ಕೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ನಿಂಬೆರಸದ ಸೇವನೆಯಿಂದ ದಂತ ಸಮಸ್ಯೆಗಳು ದೂರವಾಗುತ್ತವೆ ಜೊತೆಗೆ ಬಾಯಿಯ ದುರ್ವಾಸನೆ ಹೋಗುತ್ತದೆ.

ನಿಂಬೆರಸದಲ್ಲಿ ಎಷ್ಟೆಲ್ಲ ಉಪಯೋಗಗಳಿವೆ ಅಲ್ಲವೇ ನೀವು ಕೂಡ ಇನ್ನು ಮೇಲೆ ಟೀ. ಕಾಫಿ ಬಿಟ್ಟು ನಿಂಬೆರಸವನ್ನು ಸೇವಿಸಿ.

LEAVE A REPLY

Please enter your comment!
Please enter your name here