ಕಲ್ಲಂಗಡಿ ಹಣ್ಣು ತಿಂದು ಬೀಜ ಉಗಿಯಬೇಡಿ ಏಕೆ ಅಂದ್ರೆ

0
1538

ಕಲ್ಲಂಗಡಿ ಹಣ್ಣು ಎಂದರೆ ಎಲ್ಲರಿಗೂ ಪ್ರಿಯ ಏಕೆಂದರೆ ಅದರ ರುಚಿ ತುಂಬಾ ಚೆನ್ನಾಗಿರುತ್ತದೆ. ಜೊತೆಗೆ ಅದರಲ್ಲಿ ಹೆಚ್ಚಿನ ನೀರಿನ ಅಂಶ ಇರುತ್ತದೆ. ಆದರೆ ಕಲ್ಲಂಗಡಿ ಹಣ್ಣು ತಿಂದು ಅದರ ಬೀಜವನ್ನು ಉಗಿದು ಬಿಡುತ್ತೇವೆ. ಆದರೆ ಅದು ನೀಡುವ ಆರೋಗ್ಯಕರ ಉಪಯೋಗಗಳನ್ನು ತಿಳಿದುಕೊಂಡರೆ ಉಗಿಯುವುದನ್ನು ಖಂಡಿತಾ ಬಿಡುತ್ತೀರಿ

ಅಂತಹದ್ದೇನಿದೆ ಅದರಲ್ಲಿ ಎನ್ನುತ್ತೀರಾ?
ಕಲ್ಲಂಗಡಿ ಬೀಜದಲ್ಲಿ ಐರನ್, ಮೆಗ್ನಿಷಿಯಂ, ಪೊಟ್ಯಾಷಿಯಂ, ಕಾಪರ್, ಫಾಸ್ಪರಸ್, ಸೋಡಿಯಂ, ಮ್ಯಾಂಗನೀಸ್, ಜಿಂಕ್‌ನೊಂದಿಗೆ ವಿಟಮಿನ್ಸ್, ಪ್ರೊಟೀನ್ಸ್, ಆಂಟಿ ಆಕ್ಸಿಡೆಂಟ್ಸ್, ಅಮಿನೋ ಆಮ್ಲಗಳು. ಪ್ಯಾಟಿ ಆಸ್ಸಿಡ್. ಕಬ್ಬಿಣ. ಸತು. ರಂಜಕ. ಥಿಯಮೈನ್. ನೀನಾಸಿಸ್.ಗಳು ಹೇರಳವಾಗಿವೆ.

ಇಷ್ಟೆಲ್ಲ ಅಂಶಗಳನ್ನು ಒಳಗೊಂಡಿರುವ ಕಲ್ಲಂಗಡಿ ಬೀಜದಿಂದ ಆಗುವ ಲಾಭಗಳನ್ನು ನೋಡೋಣ..

ಈ ಬೀಜಗಳಲ್ಲಿರುವ ಪಾಲಿ, ಮೋನೋ ಅನ್‌ಸ್ಯಾಚ್ಯುರೇಟೆಡ್ ಫ್ಯಾಟಿ ಆಮ್ಲಗಳು ಕೊಲೆಸ್ಟರಾಲನ್ನು ಕಡಿಮೆ ಮಾಡಿ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ. ಮೂಳೆಗಳ ಆರೋಗ್ಯವನ್ನು ವೃದ್ಧಿಸುತ್ತವೆ. ಜೀರ್ಣ ವ್ಯವಸ್ಥೆಯ ಕಾರ್ಯವನ್ನು ಉತ್ತಮಪಡಿಸುತ್ತವೆ.

ಇದರಲ್ಲಿನ ನಿಯಾಸಿನ್ ಎಂಬ ರಾಸಾಯನಿಕ ದೇಹದ ರಕ್ತಸಂಚಲನೆಯನ್ನು ಉತ್ತಮಪಡಿಸುತ್ತದೆ. ಇದರಲ್ಲಿನ ವಿಟಮಿನ್ ಬಿ ಹೃದಯ ಮತ್ತು ನರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

ಕಲ್ಲಂಗಡಿ ಹಣ್ಣಿನ ಬೀಜ ಆಂಟಿ ಆಕ್ಸಿಡೆಂಟ್‌ಗಳನ್ನು ಯತೇಚ್ಛವಾಗಿ ಹೊಂದಿದೆ. ಇದು ದೇಹದಲ್ಲಿನ ಪ್ರೀರಾಡಿಕಲ್ಸ್‌ ತೊಂದರೆಯಿಂದ ರಕ್ಷಿಸುತ್ತವೆ. ಇದರಲ್ಲಿನ ಪೋಷಕಾಂಶಗಳು ದೇಹದಲ್ಲಿನ ಕಣಜಾಲವನ್ನು ಮತ್ತು ಡಿಎನ್‌ಎ ಡ್ಯಾಮೇಜ್ ತೊಂದರೆಯಿಂದ ರಕ್ಷಿಸುತ್ತದೆ.

ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟುಗಳು ವೃದ್ಧಾಪ್ಯವನ್ನು ನಿಧಾನವಾಗಿಸುತ್ತದೆ.

ಈ ಬೀಜಗಳಲ್ಲಿರುವ ಮೆಗ್ನೇಶಿಯಂ ಉತ್ತಮ ಪ್ರಮಾಣದಲ್ಲಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

ಕಲ್ಲಂಗಡಿ ಬೀಜವನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಬೇಕು ಶರೀರದ ಯಾವುದಾದರೊಂದು ಭಾಗದಲ್ಲಿ ನೋವು ಕಾಣಿಸಿಕೊಂಡರೆ ಬಿಸಿನೀರಿಗೆ ಒಂದು ಚಮಚ ಪುಡಿ, ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಚೆನ್ನಾಗಿ ಕಲಸಿ ಕುಡಿಯಬೇಕು. ಇದರಿಂದ ನೋವು ಕಡಿಮೆಯಾಗುತ್ತದೆ.

ಈ ಬೀಜಗಳು ಎಲ್ ಸಿಟ್ರುಲ್ಲೈನ್ ಎಂಬ ಅಮೈನೋ ಆಮ್ಲವನ್ನು ಹೊಂದಿದ್ದು ಇದು ಆಯಾಸವನ್ನು ಕಡಿಮೆ ಮಾಡುತ್ತದೆ.

ಈ ಬೀಜಗಳು ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ9 ಇಂದ ಸಮೃದ್ಧವಾಗಿದ್ದು ಮೆದುಳಿನ ಕಾರ್ಯ ಚಟುವಟಿಕೆ ಉತ್ತಮವಾಗಿ ನೆಡೆಯುತ್ತದೆ.

ಈ ಬೀಜದಲ್ಲಿ ಇರುವ ಅಮೈನೋ ಆಮ್ಲವು ಅರ್ಜಿನೈನ್ ಆಗಿ ಪರಿವರ್ತನೆ ಆಗುತ್ತದೆ ಇದು ದೇಹದ ಕೊಬ್ಬನ್ನು ಕಡಿಮೆಮಾಡುತ್ತದೆ.

ಈ ಬೀಜದಲ್ಲಿ ಇರುವ ವಿಟಮಿನ್ ಎ ಕಣ್ಣಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗೆ ರಾಮಬಾಣವಿದ್ದಂತೆ.

ಕಲ್ಲಂಗಡಿ ಬೀಜದಲ್ಲಿ ಪ್ರತ್ಯಾಮ್ಲಗಳು ಹೆಚ್ಚಾಗಿದ್ದು ಇದು ದೇಹಕ್ಕೆ ಹಾನಿಯುಂಟು ಮಾಡುವ ರಾಸಾಯನಿಕಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಅಸ್ತಮಾ ಸಮಸ್ಯೆಯನ್ನು ಹೋಗಿಸಲು ಈ ಬೀಜ ಸಹಾಯ ಮಾಡುತ್ತದೆ.

ಕಲ್ಲಂಗಡಿ ಬೀಜದಲ್ಲಿ ಸಿಟ್ರುಲೈನ್ ಅಧಿಕವಿದ್ದು ಇದು ದೇಹದಲ್ಲಿ ನಿಟ್ರಿಕ್ ಆಕ್ಸೈಡ್ ಉತ್ಪತ್ತಿಗೆ ಸಹಾಯಮಾಡುತ್ತದೆ. ನಿಟ್ರಿಕ್ ಆಕ್ಸೈಡ್ ರಕ್ತ ನಾಳಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ ಹಾಗೂ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಈ ಬೀಜದಲ್ಲಿ ಇರುವ ಅಮೈನೋ ಆಸಿಡ್ ಕಿಡ್ನಿಯಲ್ಲಿ ಕಲ್ಲು ಉಂಟಾಗದಂತೆ ಕಾಪಾಡುತ್ತದೆ.

ಈ ಬೀಜದ ಬಳಕೆಯಿಂದ ಹಲ್ಲು ಹಾಗೂ ವಸಡುಗಳು ಬಲವಾಗುತ್ತದೆ. ವಸಡುಗಳಲ್ಲಿ ರಕ್ತ ಬರುವುದಿಲ್ಲ.

ಈ ಬೀಜವು ನೆರಿಗೆ ಬರುವುದನ್ನು ತಡೆಗಟ್ಟಿ ತಾರುಣ್ಯದ ಚೆಲುವನ್ನು ಉಳಿಸಲು ಸಹಾಯ ಮಾಡುತ್ತದೆ.

ಈ ಬೀಜದಲ್ಲಿ ಫಾಲಿಕ್ ಆಸಿಡ್ ಅಧಿಕವಿರುವುದರಿಂದ ಗರ್ಭಿಣಿಯರಿಗೆ ಸೂಕ್ತವಾದ ಆಹಾರವಾಗಿದೆ. ಅಲ್ಲದೆ ಇದರಲ್ಲಿ ಖನಿಜಾಂಶಗಳು ಇರುವುದರಿಂದ ಪೋಷಕಾಂಶಾದ ಕೊರತೆ ಉಂಟಾಗುವುದಿಲ್ಲ.

ಈ ಬೀಜದಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗಳು ವೃದ್ಯಾಪವನ್ನು ನಿದಾನವಾಗು ಸಾಗಿಸುತ್ತದೆ.

ಈ ಬೀಜವನ್ನು ಹಿಂಡಿ ತೆಗೆದ ಎಣ್ಣೆಯಿಂದ ಮೊಡವೆಗಳ ನಿವಾರಣೆ ಆಗುತ್ತದೆ. ಸೂಕ್ಷ್ಮ ರಂಧ್ರಗಳು ಮುಚ್ಚುತ್ತವೆ.ಜೊತೆಗೆ ಚರ್ಮದ ಕಾಂತೀಯತೆ ಹೆಚ್ಚುತ್ತದೆ.

ಈ ಬೀಜದ ಎಣ್ಣೆಯಲ್ಲಿ ಅಮೈನೋ ಆಮ್ಲ ಮತ್ತು ಪ್ರೋಟೀನ್ಗಳು ಇರುವುದರಿಂದ ಇದನ್ನು ಕೂದಲಿಗೆ ಹಚ್ಚುತ್ತಾ ಬಂದರೆ ಕೂದಲು ಉದುರುವುದು ನಿಲ್ಲುತ್ತದೆ. ಹೊಟ್ಟು ಕಡಿಮೆಯಾಗಿ ಕೂದಲು ಬೆಳೆಯುತ್ತದೆ.

ತಿಳಿಯಿತ ಕಲ್ಲಂಗಡಿ ಹಣ್ಣು ತಿಂದು ಬೀಜವನ್ನು ಸಹ ಬಳಕೆ ಮಾಡಿಕೊಳ್ಳಬೇಕು ಅಂತ ಅದರಿಂದ ನಮಗೆ ಒಳ್ಳೆಯದು ಎಂದು ಇನ್ನು ಮೇಲೆ ಯಾರು ಸಹ ಬೀಜ ಎಸೆಯದೇ ಉಪಯೋಗ ಪಡೆಯಿರಿ.

LEAVE A REPLY

Please enter your comment!
Please enter your name here