ಕಿತ್ತಳೆ ಸಿಪ್ಪೆ ಬಗ್ಗೆ ಗೊತ್ತಾದ್ರೆ ಸಿಪ್ಪಿ ಬಿಸಾಕೊದಿಲ್ಲ

0
1090

ಪ್ರಕೃತಿಯ ವಿಸ್ಮಯ ನೋಡಿ. ಕೆಲವು ಹಣ್ಣುಗಳಲ್ಲಿ ಗುಣಗಳು ಅಡಗಿದ್ದರೆ ಇನ್ನು ಕೆಲವು ಹಣ್ಣುಗಳ ಸಿಪ್ಪೆಯಲ್ಲಿ ಅಡಗಿವೆ. ಇನ್ನು ಕೆಲವು ಹಣ್ಣುಗಳಲ್ಲಿ ಸಿಪ್ಪೆ ಹಾಗೂ ಒಳಗಿನ ಹಣ್ಣು ಮತ್ತು ಅದರ ಬೀಜದಲ್ಲಿ ಅಡಗಿದೆ. ಕಿತ್ತಳೆ ಹಣ್ಣುಗಳಲ್ಲಿ ಮಾತ್ರ ಪೌಷ್ಟಿಕಾಂಶ ಇದೆ ಎಂದು ತಿಂದು ಅದರ ಸಿಪ್ಪೆ ಮತ್ತು ಬೀಜವನ್ನು ಎಸೆಯದಿರಿ. ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಅಮೋಘವಾದ ಗುಣಗಳು ಅಡಗಿದೆ.

ಕಿತ್ತಳೆ ಸಿಪ್ಪೆಯಲ್ಲಿ ಫೈಬರ್. ವಿಟಮಿನ್. ಪ್ಲಾವೋನೋಯಿಡ್ ಶಕ್ತಿಯಿದೆ.
ಕಿತ್ತಳೆ ಹಣ್ಣು ತಿಂದು ಸಿಪ್ಪೆಯನ್ನು ಬಿಸಡುತ್ತೇವೆ ಆದರೆ ಈ ಸಿಪ್ಪೆಯಲ್ಲಿ ಎಷ್ಟೆಲ್ಲ ಆರೋಗ್ಯದ ಗುಟ್ಟುಗಳು ಅಡಗಿವೆ ಎಂಬುದನ್ನು ತಿಳಿದರೆ ಇನ್ನು ಮೇಲೆ ಖಂಡಿತವಾಗಿಯೂ ಈ ಸಿಪ್ಪೆಯನ್ನು ಬಿಸಾಡುವುದಿಲ್ಲ. ಅದು ಏನೆಂದು ಯೋಚಿಸುತ್ತಿದ್ದಿರ ಬನ್ನಿ ನೋಡೋಣ.

ಕಿತ್ತಳೆ ಹಣ್ಣಿನ ಸಿಪ್ಪೆ ತಿಂದರೆ ಗ್ಯಾಸ್ ಪ್ರಾಬ್ಲಮ್, ಎದೆ ಉರಿ, ವಾಂತಿ ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದು ಸುಸ್ತನ್ನು ಹೋಗಲಾಡಿಸುತ್ತದೆ. ಇದನ್ನು ಹಾಗೇ ತಿನ್ನಲು ಸಾಧ್ಯವಿಲ್ಲ. ಆದ್ದರಿಂದ ಇದನ್ನು ಅಡುಗೆ ಜತೆ ಹಾಕಿ ಬೇಯಿಸಿ ನಂತರ ತಿನ್ನಬಹುದು. ಕಿತ್ತಳೆ ಸಿಪ್ಪೆಯ ಪುಡಿಯನ್ನು ತಿಂದರೆ ಅಸ್ತಮಾ ಕಡಿಮೆಯಾಗುವುದು.

ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಡಬೇಕು. ಮನೆಯ ಮೂಲೆಯಲ್ಲಿ ಕೆಟ್ಟ ವಾಸನೆ ಬಂದರೆ ಈ ಪುಡಿಯನ್ನು ಹಾಕಿದರೆ ಸಾಕು ದುರ್ವಾಸನೆ ಕಡಿಮೆಯಾಗುವುದು. ಈ ಪುಡಿ ಹಾಕಿ ಡಬ್ಬಿಗಳನ್ನು ತೊಳೆದರೆ ಡಬ್ಬಿಗಳಲ್ಲಿ ಆಹಾರಗಳ ವಾಸನೆ ಉಳಿಯುವುದಿಲ್ಲ.

ತ್ವಚೆ ಆರೈಕೆಗೆ ಕಿತ್ತಳೆಯ ಸಿಪ್ಪೆಯನ್ನು ಸುಲಿದು ಒಣಗಿಸಿ ಅದನ್ನು ಪುಡಿ ಮಾಡಿ ಮುಖಕ್ಕೆ ಹಚ್ಚಿದರೆ ಮುಖದಲ್ಲಿರುವ ಮೊಡವೆಗಳು ಕಡಿಮೆಯಾಗುವುದು ಹಾಗೂ ಮುಖದ ಕಾಂತಿ ಕೂಡ ಹೆಚ್ಚಾಗುವುದು. ಮುಖದಲ್ಲಿರುವ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ಸ್ನಾನದ ನೀರಿನಲ್ಲಿ ಕಿತ್ತಳೆ ಸಿಪ್ಪೆ ಹಾಕಿ ಸ್ನಾನ ಮಾಡಿದರೆ ಮೂಡ್ ಫ್ರೆಶ್‌ಗಿರುತ್ತದೆ

ಕಿತ್ತಳೆಯ ಸಿಪ್ಪೆ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಒಬೆಸಿಟಿ ಇರುವವರು ಇದನ್ನು ತಿಂದರೆ ಉತ್ತಮವಾದ ಪ್ರಯೋಜನ ಪಡೆಯಬಹುದು. ಅಲ್ಲದೆ ಇದು ಕರುಳಿನ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನೂ ಹೊಂದಿದೆ.

ಕಿತ್ತಳೆ ಸಿಪ್ಪೆಗಳನ್ನು ತೆಳುವಾಗಿ ಹೆಚ್ಚಿ ನಿಮ್ಮ ಖಾದ್ಯಗಳಲ್ಲಿ ಕೊಂಚ ಪ್ರಮಾಣದಲ್ಲಿ ಸೇರಿಸುವುದರಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಬಹುದು.

ಕಿತ್ತಳೆ ಸಿಪ್ಪೆಯಲ್ಲಿನ ಡಿ ಲಿಮೊನ್ ಎಂಬ ಪೋಷಕಾಂಶವು ಈ ಆಮ್ಲದೊಡನೆ ಸಂಯೋಜನೆಗೊಂಡು ಹುಳಿ ತೇಗು ಆಗುವುದರಿಂದ ತಡೆಯುತ್ತದೆ

ಕಿತ್ತಳೆಯ ಸಿಪ್ಪೆಯಲ್ಲಿ ಕರಗದ ನಾರು ಇದೆ. ಇದು ಮಲಬದ್ದತೆಯಾಗುವುದನ್ನು ತಡೆಯುತ್ತದೆ.ಮತ್ತು ಸುಲಲಿತ ಮಲವಿಸರ್ಜನೆ, ಜೀರ್ಣಕ್ರಿಯೆಯಲ್ಲಿ ಸುಧಾರಣೆ ಕಂಡುಬರುತ್ತದೆ.

ಕಿತ್ತಳೆ ಸಿಪ್ಪೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಉತ್ತಮ ಪ್ರಮಾಣದ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕಿತ್ತಳೆ ಸಿಪ್ಪೆಯನ್ನು ಸೇವಿಸುವುದರಿಂದ ಉಸಿರಾಟದ ತೊಂದರೆಗಳಾದ ಅಸ್ತಮಾ, ಬ್ರಾಂಕೈಟಿಸ್ ಮೊದಲಾದ ಉಸಿರು ಸಂಬಂಧಿ ರೋಗಗಳಿಂದ ರಕ್ಷಣೆ ಪಡೆಯಬಹುದು.

ಕಿತ್ತಳೆ ಸಿಪ್ಪೆಯಿಂದ ಶ್ವಾಸಕೋಶದ ಕ್ಯಾನ್ಸರ್ ಬರದಂತೆ ತಡೆಯಬಹುದು. ಶೀತ, ಫ್ಲೂ ಮೊದಲಾದ ತೊಂದರೆಗಳಿಂದ ಮುಕ್ತಿ ಹೊಂದಬಹುದು.

ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದರೆ ಕಿತ್ತಳೆ ಸಿಪ್ಪೆ ಇದಕ್ಕೆ ರಾಮಬಾಣ. ಇದರಲ್ಲಿರುವ ಡಿ ಲಿಮೊನ್ ಪೋಷಕಾಂಶವೇ ಕರುಳಿನಲ್ಲಿ ಪಚನಕ್ರಿಯೆಗೆ ಸಹಕರಿಸುತ್ತದೆ. ಇದರಲ್ಲಿರುವ ಕರಗದ ನಾರು ಮಲಬದ್ದತೆಯಾಗುವುದನ್ನು ತಡೆಯುತ್ತದೆ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆದು ಅಜೀರ್ಣತೆಯ ತೊಂದರೆಯಿಂದ ಮುಕ್ತಿ ಪಡೆಯಬಹುದು.

ಹಲ್ಲುಗಳು ಹಳದಿಯಾಗಿದ್ದರೆ ಕಿತ್ತಳೆ ಸಿಪ್ಪೆಯನ್ನು ಅರೆದು ಮಾಡಿದ ಮಿಶ್ರಣವನ್ನು ಉಪಯೋಗಿಸಿ ಹಲ್ಲುಗಳಿಗೆ ಹಚ್ಚುವ ಮೂಲಕ ಹಳದಿ ಬಣ್ಣವನ್ನು ತೊಡೆಯಲು ಸಾಧ್ಯವಾಗುತ್ತದೆ.

ಕಿತ್ತಳೆಸಿಪ್ಪೆಯನ್ನು ಉಪಯೋಗಿಸಿ ಸಿಂಕ್ ಗಳನ್ನು ಸ್ವಚ್ಛಗೊಳಿಸಬಹುದು. ಇದರಿಂದ ಕಠಿಣವಾದ ಜಿಡ್ದು ಸುಲಭವಾಗಿ ಹೋಗುತ್ತದೆ.

ಕಿತ್ತಳೆ ಸಿಪ್ಪೆಗಳನ್ನು ಮಣ್ಣಿನಲ್ಲಿ ಕೊಳೆಸುವುದರಿಂದ ಉತ್ತಮ ಪ್ರಮಾಣದ ಸಾರಜನಕ ಬೇರುಗಳಿಗೆ ಲಭ್ಯವಾಗಿ ಗಿಡಗಳ ಬೆಳವಣಿಗೆಯನ್ನು ಉತ್ತಮಗೊಳಿಸುತ್ತದೆ.

ಬಿಸಿಲಿನ ಕಾರಣದಿಂದ ಚರ್ಮ ಕಪ್ಪಗಾಗಿದ್ದರೆ ಆ ಸ್ಥಳದಲ್ಲಿ ಕಿತ್ತಳೆ ಸಿಪ್ಪೆಯನ್ನು ಅರೆದು ತಯಾರಿಸಿದ ಫೆಸ್ಟ್ ಅನ್ನು ಹಚ್ಚುವ ಮೂಲಕ ಉತ್ತಮ ಪರಿಣಾಮಗಳನ್ನು ಪಡೆಯಬಹುದು.

ಕಿತ್ತಳೆ ಸಿಪ್ಪೆ ಯಿಂದ ಗಾಯದ ಕಲೆ, ಸುಟ್ಟಕಲೆ ಮೊದಲಾದವುಗಳನ್ನು ನಿಧಾನವಾಗಿ ತೊಡೆಯಬಹುದು.ಜೊತೆಗೆ ಸೂಕ್ಷ್ಮರಂಧ್ರಗಳಲ್ಲಿರುವ ಕೊಳೆಯನ್ನೂ ನಿವಾರಿಸಬಹುದು.

ಕಿತ್ತಳೆ ಸಿಪ್ಪೆಯನ್ನು ಕಿವುಚಿ ಅದರ ಸುವಾಸನೆ ಕೋಣೆಯಲ್ಲಿ ಹರಡುವಂತೆ ಮಾಡುವ ಮೂಲಕ ನೊಣ ಮತ್ತು ಸೊಳ್ಳೆಗಳನ್ನೂ ದೂರ ಓಡಿಸಬಹುದು.

ಮುಖದಲ್ಲಿರುವ ನೆರಿಗೆ ಮತ್ತು ಗೆರೆಗಳನ್ನು ಹೋಗಲಾಡಿಸಲು ಕಿತ್ತಳೆ ಸಿಪ್ಪೆ ಮತ್ತು ಮೊಸರು ನೆರವನ್ನು ನೀಡಲಿದೆ.

ಹಣ್ಣನ್ನು ತಿಂದು ಸಿಪ್ಪೆಯನ್ನು ಬಿಸಾಡುವ ಈ ಕಿತ್ತಳೆ ಸಿಪ್ಪೆ ಎಷ್ಟೆಲ್ಲ ಪ್ರಯೋಜನ ಹೊಂದಿದೆ ನೋಡಿ ಇನ್ನು ಮೇಲೆ ನೀವು ಸಿಪ್ಪೆ ಬಿಸಾಡದೆ ಅದರ ಅದನ್ನು ಉಪಯೋಗ ಮಾಡಿಕೊಳ್ಳಿ..

LEAVE A REPLY

Please enter your comment!
Please enter your name here