ನಮ್ಮ ಹಿಂದಿನ ಜೀವನ ತುಂಬಾ ವೇಗವಾಗಿ ಚಲಿಸುತ್ತಿದೆ. ಎಲ್ಲ ಕೆಲಸಗಳು ತುಂಬಾ ವೇಗವಾಗಿವೆ . ಜೊತೆಗೆ ಸಂದೇಶದ ರವಾನೆಯು ತುಂಬಾ ವೇಗದಿಂದ ಸಾಗುತ್ತಿದೆ ಇದಕ್ಕೆಲ್ಲ ಕಾರಣ ನಮ್ಮ ಹಿಂದಿನ ತಂತ್ರಜ್ಞಾನದ ವ್ಯವಸ್ಥೆ. ಈ ತಂತ್ರಾಂಶಗಳು ಇಲ್ಲವೆಂದರೆ ಕೆಲಸವೇ ಸಾಗುವುದಿಲ್ಲ. ಅದರಲ್ಲೂ ಫೋನ್ ಗಳ ಬಳಕೆಗೆ ಮಿತಿಯಿಲ್ಲ ಪ್ರತಿಯೊಂದು ಹಳ್ಳಿಗಳಲ್ಲೂ ಈ ಫೋನ್ ಬಳಕೆ ನೆಡೆಯುತ್ತಲೇ ಇದೆ.
ಆದರೆ ಈ ಫೋನ್ ನಲ್ಲಿ ಆಗುವಂತಹ ರೆಡಿಯೇಶನ್ ಹೇಳತೀರದು.ಈ ರೇಡಿಯೇಶನ್ ನಮ್ ಆರೋಗ್ಯವನ್ನು ಕೆಡಿಸುತ್ತದೆ. ಮೊಬೈಲ್ ಫೋನಿನಿಂದ ಮೆಸೇಜ್. ಬ್ರೋಸರ್.ಪಿಚ್ಚರ್ಸ್.ಕಾಲ್ ಹೀಗೆ ಹಲವಾರು ಕೆಲಸಗಳನ್ನು ಮಾಡುತ್ತಾರೆ.
ಆದರೆ ಇವುಗಳಲ್ಲಿ ಹೆಚ್ಚಿನ ಕೆಲಸ ಮಾಡುವುದು ಕಾಲ್ ಅದರಲ್ಲೂ ಕೆಲವರು ಸಮಯದ ಮಿತಿಯಿಲ್ಲದೆ ಫೋನ್ ನಲ್ಲಿ ಮಾತನಾಡುತ್ತಾರೆ ಆದರೆ ಅದರಲ್ಲಿ ಉಂಟಾಗುವ ರೇಡಿಯೇಶನ್.ವೈಬ್ರೇಷನ್ ಗಳಿಂದ ಅವರಿಗೆ ರೋಗಗಳು ಉತ್ಪತ್ತಿ ಆಗುತ್ತವೆ. ಆದರ ಜೊತೆಗೆ ಅವರು ಕಾಲ್ ಮಾಡುವಾಗ ಯಾವ ಕಿವಿಯಲ್ಲಿ ಫೋನ್ ಇಟ್ಟುಕೊಂಡು ಮಾತನಾಡುತ್ತಾರೆ ಎಂಬುದು ಮುಖ್ಯ.
ಯಾವ ಕಿವಿಯಾದರೇನು ಮಾತನಾಡಲು ಎಂದು ಯೋಚಿಸುತ್ತಿದ್ದಿರ ನಿಜ ಆದರೆ ಬಲಗಡೆಯ ಕಿವಿಯಲ್ಲಿ ಫೋನ್ ಇಟ್ಟುಕೊಂಡು ಮಾತನಾಡುವುದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವುಗಳೆಂದರೆ
ಫೋನ್ ರಿಂಗಾದ ಬಳಿಕ ಎಲ್ಲರೂ ಹೆಚ್ಚಾಗಿ ಬಲಗಡೆಯ ಕಿವಿಗೆ ಫೋನ್ ಇಟ್ಟುಕೊಳ್ಳುತ್ತಾರೆ. ಅದರಲ್ಲೂ ಗಾಡಿ ಡ್ರೈವ್ ಮಾಡುವಾಗ ತಮ್ಮ ಬಲ ಭುಜಕ್ಕೆ ಕಿವಿಯನ್ನು ಇಟ್ಟು ಮಾತನಾಡಲು ಶುರು ಮಾಡುತ್ತಾರೆ. ಆದರೆ ಈ ರೀತಿ ಮಾತನಾಡುವುದರಿಂದ ರೇಡಿಯೇಶನ್ ಮೆದುಳಿನ ಮೇಲೆ ನೇರವಾಗಿ ಪರಿಣಾಮಬಿರುತ್ತದೆ.ಜೊತೆಗೆ ಕಿವಿಗಳು ಕೇಳಿಸದ ಪರಿಸ್ಥಿತಿಯು ನಿರ್ಮಾಣವಾಗಬಹುದು.
ಬಲ ಕಿವಿ ಮತ್ತು ಎಡ ಕಿವಿಯ ಬಳಿ ಫೋನ್ ಬಳಸುವವರನ್ನು ಸಂಶೋಧನೆ ಮಾಡಿದಾಗ ತಿಳಿದು ಬಂದಿರುವುದೇನೆಂದರೆ ಫೋನ್ ಹೆಚ್ಚಾಗಿ ಬಳಸುವುದೇ ಡೇಂಜರ್ ಅದರಲ್ಲೂ ಹೆಚ್ಚಾಗಿ ಬಲ ಕಿವಿಯ ಬಳಿ ಇಟ್ಟುಕೊಂಡು ಮಾತನಾಡಿದ ಜನರು ತುಂಬಾ ಸಮಸ್ಯೆಗಳನ್ನು ಅನುಭವಿಸುತ್ತಿದರೆ. ಎಡ ಕಿವಿಯ ಬಳಿ ಇಟ್ಟು ಮಾತನಾಡುವವರು ಸಮಸ್ಯೆ ಅನುಭವಿಸುತ್ತಾರೆ ಆದರೆ ಸ್ವಲ್ಪ ಕಡಿಮೆ. ಎಂದು ತಿಳಿದು ಬಂದಿದೆ.
ಜೊತೆಗೆ ಹೆಚ್ಚಿನ ಜನ ಲಿವರ್.ಕಿಡ್ನಿ. ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.