ಬಾಳೆಹಣ್ಣಿನ ಸಿಪ್ಪೆಯಲ್ಲಿ ಎಷ್ಟೊಂದು ಲಾಭ

0
1269

ಚಿಕ್ಕಮಕ್ಕಳಿಂದ ಹಿಡಿದು ತಾತ ಅಜ್ಜಿಯ ತನಕ ಬಾಳೆಹಣ್ಣು ಎಂದರೆ ಪ್ರಿಯ. ಎಲ್ಲ ಶುಭ ಸಮಾರಂಭದಲ್ಲು ಬಾಳೆಹಣ್ಣು ಕೊಡುತ್ತಾರೆ. ಊಟ ಮಾಡಿದ ನಂತರ ಬಾಳೆಹಣ್ಣು ತಿನ್ನುವವರ ಸಂಖ್ಯೆ ಹೆಚ್ಚು. ಬಾಳೆಹಣ್ಣಿನಲ್ಲಿ ಶಕ್ತಿವರ್ಧಕಗಳು ಇರುವುದರಿಂದ ನಮ್ಮ ಶರೀರದ ಹಿತವನ್ನು ಸದಾ ಕಾಪಾಡುತ್ತದೆ. ಹೇರಳವಾದ ವಿಟಮಿನ್ಗಳು, ಕಾರ್ಬೋಹೈಡ್ರೇಟ್ಸ್, ನಾರಿನಾಂಶ, ಕ್ಯಾಲ್ಸಿಯಂ, ಪ್ರೋಟೀನ್, ಎಲ್ಲದಕ್ಕಿಂತಲೂ ಮುಖ್ಯವಾಗಿ ಪೊಟ್ಯಾಶಿಯಂ ಗುಣಗಳಿವೆ. ಎಲ್ಲರೂ ಬಾಳೆಹಣ್ಣು ತಿನ್ನುತ್ತಾರೆ ಆದರೆ ಸಿಪ್ಪೆ ಮಾತ್ರ ಯಾರು ತಿನ್ನುವುದಿಲ್ಲ.

ಆದರೆ ಈ ಬಾಳೆಹಣ್ಣಿನ ಸಿಪ್ಪೆಯಲ್ಲಿ ಇರುವ ಆರೋಗ್ಯ ಮಾಹಿತಿಯನ್ನು ನೋಡೋಣ ಬನ್ನಿ.

ಬಾಳೆಹಣ್ಣಿನ ಸಿಪ್ಪೆಯು ಕಪ್ಪದಾಗ ಅದರಲ್ಲಿ ಹೆಚ್ಚಿನ ಮಟ್ಟದ ಸಕ್ಕರೆ ಅಂಶ ಇರುತ್ತದೆ.

ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಲ್ಲಿ ಇರುವ ನಾರಿನ ವಸ್ತು ಹಲ್ಲುಗಳ ಸ್ವಚ್ಛತೆಗೆ ಸಹಾಯವಾಗುತ್ತದೆ.

ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಎ. ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಅಷ್ಟೇ ಅಲ್ಲದೆ, ದೇಹದಲ್ಲಿ ರೋಗ ಪ್ರತಿರೋಧ ಶಕ್ತಿ ಹೆಚ್ಚಿಸುವ ಸಾಮಥ್ರ್ಯ ಇರುವ ಆಂಟ್ಯಿ ಓಕ್ಷಿಡೆಂಟ್ ಇದ್ದು ವಿಟಮಿನ್ ಬಿ, ಬಿ6 ಹೇರಳವಾಗಿದೆ. ಕಣ್ಣಿನ ಆರೋಗ್ಯ ಕಾಪಾಡುವ ಲುಟೈನ್ ಎಂಬ ಪದಾರ್ಥವೂ ಇದೆ.

ಬಾಳೆಹಣ್ಣಿನ ಸಿಪ್ಪೆಯಿಂದ ನಿಮ್ಮ ಮುಖದಲ್ಲಿ ಇರುವ ಮೊಡವೆಗಳನ್ನು ಹೋಗಿಸಲು ಸಹಾಯವಾಗುತ್ತದೆ.

ಬಾಳೆಹಣ್ಣಿನ ಸಿಪ್ಪೆ ತೆಗೆದುಕೊಂಡು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ರುಬ್ಬಿಕೊಂಡು ಅದಕ್ಕೆ ಒಂದು ಮೊಟ್ಟೆಯ ಹಳದಿ ಭಾಗವನ್ನು ಸೇರಿಸಿ. ನಂತರ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ. ಐದು ನಿಮಿಷ ಬಿಟ್ಟು ನೀರಿನಿಂದ ಮುಖವನ್ನು ತೊಳೆಯಿರಿ. ವಾರದಲ್ಲಿ ಎರಡು ಅಥವಾ ಮೂರುದಿನ ಹೀಗೆ ಮಾಡಿದರೆ ಮುಖದ ನೆರಿಗೆಯನ್ನು ಕಡಿಮೆ ಮಾಡಬಹುದು.

ಬಾಳೆಹಣ್ಣಿನ ಸಿಪ್ಪೆಗೆ ಮೊಸರು ಸೇರಿಸಿ ನುಣ್ಣಗೆ ರುಬ್ಬಿಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ. ಮತ್ತು ನಿಂಬೆರಸ ಹಾಕಿ ಫೆಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿದರೆ ಮುಖದ ಮೇಲಿನ ಕಲೆಗಳು ಹೋಗುತ್ತವೆ.

ಶೂ ಗಳನ್ನು ಪಾಲಿಶ್ ಮಾಡಲು ಬಳಸಬಹುದು.

ಬೆಳ್ಳಿ ಪಾತ್ರೆಗಳನ್ನು ಹೊಳೆಯುವಂತೆ ಮಾಡಲು. ತೊಳೆಯಲು ಬಳಸಬಹುದು.

ಒತ್ತಡ ನಿವಾರಣೆಗೆ ಮಾನಸಿಕ ಒತ್ತಡ ನಿವಾರಣೆಯಾಗಬೇಕಾದರೆ ಬಾಳೆಹಣ್ಣಿನ ಸಿಪ್ಪೆಯನ್ನು ನೀರು ಹಾಕಿ ಚೆನ್ನಾಗಿ ಕುದಿಸಿ ಕಷಾಯದಂತೆ ಮಾಡಿಕೊಂಡು ಕುಡಿಯಬಹುದು.

ಚರ್ಮದಲ್ಲಿ ತುರಿಕೆ. ಗುಳ್ಳೆಗಳು ಇದ್ದರೆ ಬಾಳೆಹಣ್ಣಿನ ಸಿಪ್ಪೆಯಲ್ಲಿ ಇರುವ ಮಾಯಿಶ್ಚರೈಸರ್ ಗುಣಗಳು ಇದನ್ನು ನಿವಾರಿಸುತ್ತದೆ.

ನೋವು ಉಂಟಾಗುತ್ತಿರುವ ಜಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯಲ್ಲಿ ಉಜ್ಜಿದರೆ ನೋವು ಕಡಿಮೆಯಾಗುತ್ತದೆ.

ನಿಮ್ಮ ತ್ವಚೆಯ ಮೇಲೆ ಉಂಟಾಗಿರುವ ನರವಲಿಗಳನ್ನು ನಿವಾರಿಸಲು ಬಾಳೆಹಣ್ಣಿನ ಸಿಪ್ಪೆ ಸಹಾಯ ಮಾಡುತ್ತದೆ.

ಬಾಳೆಹಣ್ಣಿನ ಸಿಪ್ಪೆಯನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಒಣಗಿಸಿ ಕಣ್ಣಿನ ಸುತ್ತ ಲೇಪಿಸಿಕೊಳ್ಳುವುದರಿಂದ ಯು.ವಿ.ಕಿರಣಗಳಿಂದ ರಕ್ಷಣೆ ಪಡೆಯಬಹುದು ಮತ್ತು ಕಣ್ಣಿನಲ್ಲಿ ಪೊರೆ ಬರದೆ ಇರುವ ರೀತಿ ಕಾಪಾಡುತ್ತದೆ.

ಭಾರತೀಯ ಆಹಾರ ಪದ್ಧತಿಯಲ್ಲಿ ಹಲವಾರು ಅಡುಗೆಗಳಿಗೆ ಬಾಳೆ ಹಣ್ಣಿನ ಸಿಪ್ಪೆಯನ್ನು ಬಳಸುತ್ತಾರೆ.

ಹಣ್ಣು ತಿಂದು ಕಸದ ಬುಟ್ಟಿಗೆ ಎಸೆಯುವ ಈ ಸಿಪ್ಪೆಯಿಂದ ಎಷ್ಟೆಲ್ಲ ಪ್ರಯೋಜನಗಳಿವೆ ನೀವು ಒಮ್ಮೆ ಪ್ರಯತ್ನಿಸಿ.

LEAVE A REPLY

Please enter your comment!
Please enter your name here