ಲೇಸರ್ ಚಿಕಿತ್ಸೆ ಮಾಡಿಸುವ ಮುನ್ನ

0
1077

ಇತ್ತೀಚಿನ ಜಗತ್ತಿನಲ್ಲಿ ಎಲ್ಲರೂ ಸುಂದರವಾಗಿ ಕಾಣಬೇಕು ಎಂದು ಆಸೆ ಪಡುತ್ತಾರೆ. ಆದರೆ ಒಬ್ಬರಿಗೆ ಮುಖದಲ್ಲಿ ಅನೇಕ ರೀತಿಯ ಕಲೆಗಳು ಮೂಡುತ್ತವೆ. ಅಂದರೆ, ಮೊಡವೆಯ ಕಲೆ, ಸಿಡುಬಿನ ಕಲೆ, ಅಪಘಾತದಿಂದ ಆಗುವ ಕಲೆಗಳು ಮತ್ತು ಸುಟ್ಟ ಗಾಯದ ಕಲೆ… ಇತ್ಯಾದಿ. ಮುಖದ ಮೇಲೆ ಆಗುವ ಈ ರೀತಿಯ ಕಲೆಗಳು, ರೋಗಿಯ ಮೇಲೆ ಬಹಳ ದೊಡª ರೀತಿಯ ಮಾನಸಿಕ ಪರಿಣಾಮವನ್ನು ಬೀರುತ್ತವೆ. ಈ ಕಲೆಗಳಿಂದ ಮುಕ್ತಿಯನ್ನು ಪಡೆಯಲು ಹಲವಾರು ರೀತಿಯ ಕ್ರೀಮ್ಗಳನ್ನು ಬಳಸುತ್ತಾರೆ. ಬ್ಯೂಟಿ ಪಾರ್ಲರ್ ಗಳ ಮೊರೆ ಹೋಗುತ್ತಾರೆ.ಆದರೂ ಯಾವುದೇ ಪರಿಣಾಮ ಬೀರುವುದಿಲ್ಲ.

ಅಂತವರಿಗೆ ಕೊನೆಯ ಉಪಾಯ ಸಿಗುವುದು ಲೇಸರ್ ಟ್ರೀಟ್ಮೆಂಟಿ.
ಇದನ್ನು ಮಾಡಿಸುವುದು ಒಳ್ಳೆಯದ ಕೆಟ್ಟದ್ದಾ. ನೋಡೋಣ ಬನ್ನಿ.

ಲೇಸರ್ ಚಿಕಿತ್ಸೆ ಎಂದರೇ ತ್ವಚೆಯ ಹೊರಪದರವನ್ನು ಲೇಸರ್ ಮೂಲಕ ಸರಿಪಡಿಸುವ ವಿಧಾನ ಎನ್ನಬಹುದು.

ತ್ವಚೆಯ ಪದರಗಳನ್ನು ಸುಲಿಯುವ ಮೂಲಕ ಮುಖದ ಸಣ್ಣ ಪುಟ್ಟ ಗುಳ್ಳೆಗಳು ಅಥವಾ ತ್ವಚೆಯನ್ನು ಸುಧಾರಿಸುವುದಕ್ಕಾಗಿ ಲೇಸರ್ ಬೀಮ್ ಅನ್ನು ಬಳಸುವ ಒಂದು ವಿಧಾನವಾಗಿರುತ್ತದೆ.

ಈ ಲೇಸರ್ ಚಿಕಿತ್ಸೆಯನ್ನು ಸುಕ್ಕು, ಕಲೆಗಳು ಅಥವಾ ಇತರೆ ತ್ವಚೆಯ ಗುಳ್ಳೆಗಳನ್ನು ಹೊಂದಿರುವವರು ಮಾಡಿಸಲು ಸಾಧ್ಯವಿಲ್ಲ.

ಕಪ್ಪು ತ್ವಚೆಯನ್ನು ಹೊಂದಿರುವವರು ಅಥವಾ ಹಲವಾರು ಮೊಡವೆಗಳನ್ನು ಹೊಂದಿರುವವರು ಈ ಚಿಕಿತ್ಸೆ ಮಾಡಿಸಬಹುದು.

ಹೇಗೇ ಮಾಡುತ್ತಾರೆ ಪ್ರಕ್ರಿಯೆಯನ್ನು ಆರಂಭಿಸುವ 30 ನಿುಷಗಳ ಮೊದಲು ಸ್ಥಳೀಯ ಅರಿವಳಿಕೆ ಕ್ರೀಂ ಅನ್ನು ಹಚ್ಚಬೇಕು. ಆ ಬಳಿಕ ಲೇಸರ್‌ ಬೀಮ್‌ ಅನ್ನು ಚಿಕಿತ್ಸೆ ನೀಡಬೇಕಾದ ಜಾಗಕ್ಕೆ, ಅಂದರೆ ಕಲೆ ಇರುವ ಗುರುತಿಗೆ ಹಾಯಿಸಬೇಕು. ಅರಿವಳಿಕೆಯು ಕ್ರಿಯಾಶೀಲವಾಗಿರುವ ಕಾರಣ ರೋಗಿಗೆ ನೋವಿನ ಅನುಭವ ಆಗುವುದಿಲ್ಲ. ಒಂದು ಬಾರಿ ಕಲೆಯ ಮೇಲೆಲ್ಲಾ ಲೇಸರ್‌ ಬೀಮ್‌ ಅನ್ನು ಹಾಯಿಸಿದ ಬಳಿಕ, ದೊರಗಾಗಿರುವ ಅಥವಾ ಹೆಚ್ಚುವರಿ ಚರ್ಮದ ಮೇಲ್ಮೆ„ಗೆ ಮಾತ್ರವೆ ಸುಪಫೀìಶಿಯಲ್‌ ಲೇಸರ್‌ ಅನ್ನು ಹಾಯಿಸಿ ನಯಗೊಳಿಸುತ್ತಾರೆ.

ಈ ಪ್ರಕ್ರಿಯೆಯು ಪೂರ್ಣಗೊಳ್ಳಲು 3 ರಿಂದ 7 ದಿನಗಳ ಅವಧಿ ಬೇಕಾಗುತ್ತದೆ. ಆದರೆ, ಈ ಅವಧಿಯಲ್ಲಿ ವ್ಯಕ್ತಿಯು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬಾರದು. ಲೇಸರ್‌ ಚಿಕಿತ್ಸೆಯ ಪ್ರಯೋಜನಕಾರಿ ಪರಿಣಾಮಗಳು ವಿಶೇಷವಾಗಿದ್ದು, ಕೇವಲ ಒಂದೆ ಬಾರಿಯ ಚಿಕಿತ್ಸೆಯಿಂದ ಚರ್ಮದ ಸಂಯೋಜನೆ (ಟೆಕ್ಸರ್‌) ಮತ್ತು ಗಾಯದ ಗುರುತಿನ ಮಾಯುವಿಕೆಯಲ್ಲಿ ಉತ್ತಮ ಫಲಿತಾಂಶವನ್ನು ಕಾಣಬಹುದು.

ಈ ಚಿಕಿತ್ಸೆಯನ್ನು ಪಡೆಯುವ ವ್ಯಕ್ತಿಗಳು, ತಮ್ಮ ಚರ್ಮದ ಗುಣಮಟ್ಟವು ಕನಿಷ್ಠ ಎರಡು ಶೇಡ್‌ಗಳಲ್ಲಿ ಒಟ್ಟಾರೆಯಾಗಿ ಉತ್ತಮಗೊಳ್ಳುವುದನ್ನು ಕಾಣಬಹುದು.

ಚರ್ಮದ ಮೇಲೆ ಲೇಸರ್‌ನ ಸೂಕ್ಷ್ಮ ಚಾನೆಲ್‌ಗ‌ಳನ್ನು ಉತ್ಪಾದಿಸುವ ಮೂಲಕ ಇದು ಕೆಲಸ ಮಾಡುತ್ತದೆ, ಗಾಯದ ಗುರುತಿನ ಸಣ್ಣ ಅಂಗಾಂಶವನ್ನು ಅದು ತೆಗೆದು ಹಾಕುತ್ತದೆ ಮತ್ತು ಹೊಸ ಕೊಲಾಜೆನ್‌ ಮತ್ತು ಎಲಾಸ್ಟಿಕ್‌ ಎಳೆಗಳನ್ನು ಉತ್ಪಾದಿಸಲು ಪ್ರಚೋದನೆಯನ್ನು ನೀಡುತ್ತದೆ. ಲೇಸರ್‌ ಚಿಕಿತ್ಸೆಯು ಚಾನೆಲ್‌ಗ‌ಳ ಮಧ್ಯೆ ಕಲೆಗಳಿಲ್ಲದ ಭಾಗವನ್ನು ಬಿಟ್ಟು ಬಿಡುವ ಮೂಲಕ, ಉಪಶಮನದ ಸಮಯವನ್ನು ತಗ್ಗಿಸುತ್ತದೆ. ಚರ್ಮಕ್ಕೆ ಸಮಾನ-ರೀತಿಯ ನೋಟವನ್ನು ನೀಡಲು, ಆ ಬಳಿಕ ಚರ್ಮವನ್ನು ವಿಶೇಷವಾಗಿ ನಯಗೊಳಿಸಲಾಗುವುದು.

ವಿಧಾನದ ಒಂದೇ ಒಂದು ಲೇಸರ್‌ ಚಿಕಿತ್ಸೆಯು ವಿಶೇಷ ಪರಿಣಾಮಕಾರಿ ಆಗಿದ್ದು, ಈ ಲೇಸರ್‌ ಚಿಕಿತ್ಸೆಯನ್ನು ಪಡೆಯುವುದರಿಂದ ಚರ್ಮವು ಗಮನಾರ್ಹವಾಗಿ ಸ್ಪಷ್ಟಗೊಳ್ಳುತ್ತದೆ ಮತ್ತು ಕಲೆಯು ಮಾಯವಾಗುತ್ತದೆ. ನೀವು ಒಮ್ಮೆ ಪ್ರಯತ್ನಿಸಿ

LEAVE A REPLY

Please enter your comment!
Please enter your name here