ಸೊಂಟದ ನೋವಿಗೆ ಕಾರಣವೇನು?

0
2262

ಪ್ರತಿಯೊಬ್ಬರನ್ನೂ ಕಾಡುವ ದೊಡ್ಡ ಸಮಸ್ಯೆ ಸೊಂಟದ ನೋವು.ಇದನ್ನು ವೈದ್ಯಕೀಯ ಪದ್ದತಿಯಲ್ಲಿ ಲಂಬಗೋ ಎಂದು ಕರೆಯುತ್ತಾರೆ.ಇದು ಬೆನ್ನಿನ ಕೆಳಭಾಗದಲ್ಲಿ ಅಥವಾ ಸೊಂಟದಲ್ಲಿ ಹೆಚ್ಚಿನ ನೋವು ಬರುತ್ತದೆ.ಇತ್ತೀಚೆಗೆ ಎಲ್ಲರೂ ಹೆಚ್ಚು ಕೆಲಸದ ಒತ್ತಡ ಅದರಲ್ಲೂ ಕಂಪ್ಯೂಟರ್ ಬಳಿ ಕುಳಿತು ಕೆಲಸ ಮಾಡುವವರಿಗೆ ಹೆಚ್ಚು ನೋವು ಕಾಡುತ್ತದೆ.

ಈ ಸೊಂಟದ ನೋವನ್ನು ಸಮಯಕ್ಕೆ ಆಧಾರವಾಗಿ ಮೂರು ವಿಧಾನದಲ್ಲಿ ನೋಡಬಹುದು ಅವುಗಳೆಂದರೆ
ಅಲ್ಪಾವಧಿ. ಉಪ- ಅಲ್ಪಾವಧಿ. ದೀರ್ಘವಾದಿ.

ಅಲ್ಪಾವಧಿ ಸೊಂಟನೋವು ನಾಲ್ಕರಿಂದ ಆರು ವಾರಗಳವರೆಗೆ ಇರುತ್ತದೆ.
ಉಪ-ಅಲ್ಪಾವಧಿ ಸೊಂಟನೋವು ಏಳೂರಿಂದ ನಾಲ್ಕು ತಿಂಗಳವರೆಗೆ ಕಾಡುತ್ತದೆ.
ದೀರ್ಘವಾದಿ ಸೊಂಟನೋವು ನಾಲ್ಕು ತಿಂಗಳಿಗಿಂತ ಹೆಚ್ಚು ಕಾಲ ಕಾಡುತ್ತದೆ.
ಸೊಂಟದಲ್ಲಿ ನೋವು ಕಾಣಿಸಿದಾಗ ದೇಹದ ಸ್ನಾಯುಗಳಲ್ಲಿ ಸೆಳೆತ ಉಂಟಾಗುತ್ತದೆ. ಮತ್ತು ಸೊಂಟದಲ್ಲಿ ನೋವು.ಸೊಂಟ ಹಿಡಿದುಕೊಂಡಂತೆ ಆಗುತ್ತದೆ.ಸೊಂಟದ ಹತ್ತಿರ ಒಟ್ಟು ಐದು ಬೆನ್ನೆಲುಬು ಇರುತ್ತದೆ. ಇದು ನಮ್ಮ ದೇಹದ ಮೇಲ್ಬಾಗದಲ್ಲಿನ ಸಂಪೂರ್ಣ ಭಾರವನ್ನು ಸೊಂಟ ಹೊರುತ್ತದೆ ಅದಕ್ಕಾಗಿ ಹೆಚ್ಚು ಒತ್ತಡ ಬಿದ್ದಗೆ ಹೆಚ್ಚು ನೋವು ಕಾಡುತ್ತದೆ.ಬೆನ್ನೆಲುಬುಗಳು ಬೇಗ ಹಾನಿಯಾಗುತ್ತವೆ.

ಈ ಸೊಂಟದ ನೋವನ್ನು ಮೂರು ರೀತಿಯಲ್ಲಿ ನೋಡಿದೋ ಆದರೆ ಈ ಸೊಂಟದ ನೋವಿಗೆ ನಿಖರ ಕಾರಣ ಸಿಗುವುದಿಲ್ಲ. ಆದರೆ ಕೆಲವು ಚಿಕಿತ್ಸಾ ವಿಧಾನಗಳನ್ನು ಅನುಸರಿಸಿ ಗುಣಪಡಿಸಬಹುದು.

ಎಲ್ಲರನ್ನು ಕಾಡುವ ಈ ಸೊಂಟನೋವಿಗೆ ಕಾರಣವೇನು ಎಂಬುದನ್ನು ತಿಳಿಯೋಣ ಬನ್ನಿ..

ಸರಿಯಾದ ವಿಧಾನದಲ್ಲಿ ಕುಳಿತುಕೊಳ್ಳಲಿಲ್ಲ ಎಂದರೆ ಸೊಂಟನೋವು ಬರುತ್ತದೆ.

ಅತಿಯಾದ ತೂಕದಿಂದ ಬೆನ್ನೆಲುಬು ಸವೆಯುತ್ತದೆ.

ಕೀಲುಗಳಿಗೆ ಏನಾದರೂ ಹಾನಿ ಉಂಟಾಗಿದ್ದರೆ ಸೊಂಟದಲ್ಲಿ ನೋವು ಕಾಣಿಸುತ್ತದೆ.

ಮಹಿಳೆಯರ ಮುಟ್ಟಿನ ಸಮಯದಲ್ಲಿ ಸೊಂಟದಲ್ಲಿ ನೋವು ಬರುತ್ತದೆ.

ಪೋಷಕಾಂಶವಿರದ ಆಹಾರಗಳನ್ನು ಸೇವಿಸುವುದರಿಂದ ಮತ್ತು ಸರಿಯಾದ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೇ ಇದ್ದಾಗ ಸೊಂಟನೋವು ಬರುತ್ತದೆ.

ಮನುಷ್ಯನಿಗೆ ನಿದ್ದೆ ಎಂಬುದು ಮುಖ್ಯ ರಾತ್ರಿ ವೇಳೆ ನಿದ್ರೆ ಬಾರದೆ ಹಗಲು ವೇಳೆಯಲ್ಲಿ ನಿದ್ರೆ ಮಾಡುವುದರಿಂದ ಸಹ ಸೊಂಟ ನೋವು ಬರುತ್ತದೆ.

ಚಿಂತೆ, ಮಾನಸಿಕ ಒತ್ತಡ ಕೂಡ ಸೊಂಟ ನೋವಿಗೆ ಕಾರಣವಾಗುತ್ತದೆ.

ಅತಿಯಾದ ಭಾರ ಎತ್ತುವುದರಿಂದ ಸೊಂಟ ನೋವು ಬರುತ್ತದೆ.

ವಾಹನಗಳ ಮೇಲೆ ದೂರ ಪ್ರಯಾಣ ಮಾಡುವುದು ಸಹ ಸೊಂಟ ನೋವಿಗೆ ಕಾರಣ.

ರಸ್ತೆ ಅಪಘಾತ, ದೀರ್ಘಕಾಲದ ಕಾಯಿಲೆ, ವಂಶಪಾರಂಪರ‌್ಯ ವ್ಯಾಧಿ ಇವೆಲ್ಲ ಸೊಂಟ ನೋವಿಗೆ ಕಾರಣಗಳಾಗಿವೆ.

ಸೊಂಟದ ಭಾಗದಲ್ಲಿ ಪ್ರತ್ಯೇಕವಾಗಿ ಬೆನ್ನುಮೂಳೆಯ ಮಧ್ಯ ಭಾಗದಲ್ಲಿರುವ ಸಯಾಟಿಕಾ ನರದ ಮೇಲೆ ಒತ್ತಡ ಬೀಳುವುದರಿಂದ ಈ ನೋವು ಉಂಟಾಗುತ್ತದೆ.

ಬೆನ್ನು ಮೂಳೆಯ ಮಧ್ಯೆ ಇರುವ ಡಿಸ್ಕ್‌ನಲ್ಲಿ ಕೆಲವು ಬದಲಾವಣೆಗಳಾಗುವುದರಿಂದ ಡಿಸ್ಕ್‌ನ ಮೇಲೆ ಒತ್ತಡ ಹೆಚ್ಚಾಗುತ್ತದೆ.ಆಗ ಊತ ಬರುವುದರಿಂದ ಡಿಸ್ಕ್‌ಗೆ ರಕ್ತ ಪ್ರಸರಣೆ ಸರಿಯಾಗಿ ಇಲ್ಲದೆ ಡಿಸ್ಕ್‌ಗಳು ಸವೆದು ಹೋಗುವಂತಹ ಅನೇಕ ಸಮಸ್ಯೆಗಳಿಂದ ಸೊಂಟ ನೋವು ಉಂಟಾಗುತ್ತದೆ. ಡಿಸ್ಕ್‌ನಲ್ಲಿ ಊತ ಕಾಣಿಸಿದರೆ ಅದರೊಳಗಿರುವ ಅಂಟು ದ್ರವ್ಯ ಹೊರಹೊಮ್ಮಿ ನರಗಳ ಮೇಲೆ ಒತ್ತಡ ಹೆಚ್ಚಾಗಿ ಇದರಿಂದ ಸೊಂಟ ನೋವು ಬರುತ್ತದೆ.

ಸೊಂಟ ನೋವಿನ ಲಕ್ಷಣಗಳು.

ಊತ, ಹೆಚ್ಚು ಶ್ರಮಿಸುವುದರಿಂದ ಸೊಂಟ ನೋವು ತೀವ್ರವಾಗುವುದು.

ಸೂಜಿಗಳಿಂದ ಚುಚ್ಚಿದಂತೆ ನೋವು, ಕಾಲುಗಳು ಜೋಮು ಹಿಡಿಯುವುದು, ಉರಿ ಉಂಟಾಗುವುದು.

ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಸ್ಪರ್ಶಜ್ಞಾನ ಕೂಡ ಕಳೆದುಕೊಳ್ಳುವುದು. ಸಮಸ್ಯೆ ಇನ್ನು ತೀವ್ರವಾಗಿದ್ದರೆ ಕೆಲವರು ಮಲ ಮೂತ್ರದ ಮೇಲೆ ನಿಯಂತ್ರಣ ಕಳೆದುಕೊಳ್ಳುವರು.

ಸೊಂಟ ನೋವಿಗೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡರೆ ಅದು ಕೆಲವು ಕಾಲ ಮಾತ್ರ ಉಪಶಮನವಾಗುವುದು. ನೋವು ನಿವಾರಕ ಮಾತ್ರೆ ಸೇವನೆಯಿಂದ ಮಲಬದ್ಧತೆ, ಜೀರ್ಣದ ಸಮಸ್ಯೆ ಉಂಟಾಗಬಹುದು.

ನೋವು ಕೆಲವೊಮ್ಮೆ ಒಂದೇ ಜಾಗದಲ್ಲಿ ಅಥವಾ ಪೂರ್ತಿ ಸೊಂಟ. ಕಾಲುಗಳ ಮೇಲೆ ಪರಿಣಾಮ ಬೀರುತ್ತದೆ.

ಕೆಮ್ಮಿದಾಗ. ಸೀನಿದಾಗ. ಬಗ್ಗಿದಾಗ. ತಿರುಗಿದಾಗಲು ಸಹ ನೋವು ಬರುತ್ತದೆ.
ಆದ್ದರಿಂದ ಈ ಸಮಸ್ಯೆಯನ್ನು ತ್ವರಿತವಾಗಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು.

ಸೊಂಟ ನೋವಿಗೆ ಪರಿಹಾರ. ನಿಮ್ಮ ದೇಹದ ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳಿ. ನೀವು ನೇರವಾಗಿ ಕುಳಿತುಕೊಳ್ಳುವುದು ಬಹಳ ಅವಶ್ಯಕ. ಆದರೆ ನಿಮ್ಮ ಕೆಲಸ ಬಹಳ ಗಂಟೆಗಳ ಕಾಲ ಕುಳಿತು ಮಾಡಬೇಕಾದಂತಹ ಕೆಲಸವಾಗಿದ್ದರೆ, ಆಗಾಗ ವಿಶ್ರಾಂತಿಯನ್ನು ತೆಗೆದುಕೊಳ್ಳಿ. ನಿಮ್ಮದು ಕುಳಿತುಕೊಂಡು ಮಾಡುವ ಕೆಲಸವಾಗಿದ್ದರೆ ಸ್ವಲ್ಪ ಸಮಯ ನಡೆದಾಡಿ. ಮತ್ತು ನಿಮ್ಮ ಕೆಲಸ ಬಹಳ ಗಂಟೆಗಳ ಕಾಲ ನಿಂತುಕೊಂಡು ಮಾಡುವಂತಹದ್ದಾಗಿದ್ದರೆ ನಿಮ್ಮ ದಣಿದ ಕಾಲುಗಳಿಗೆ ವಿಶ್ರಾಂತಿ ನೀಡಿ. ಇದರಿಂದ ಸೊಂಟನೋವನ್ನು ತಡೆಗಟ್ಟಬಹುದು.

ಭಾರದ ವಸ್ತುಗಳನ್ನು ಎತ್ತುವಾಗ ನಿಮ್ಮ ದೇಹದ ಸ್ಥಿತಿಯ ಬಗ್ಗೆ ಗಮನವಿರಲಿ. ನಿಮ್ಮ ದೇಹದ ಮೇಲೆ ಪರಿಣಾಮ ಬೀರದ ರೀತಿಯಲ್ಲಿ ಕೆಲಸವನ್ನು ಮಾಡಿ. ಅನಗತ್ಯವಾಗಿ ಬೆನ್ನನ್ನು ಬಗ್ಗಿಸುವುದು, ಬಾಗುವುದು (ಗೂನು) ಹಾಗೂ ಅನಗತ್ಯ ಭಾರದ ವಸ್ತುಗಳನ್ನು ಎತ್ತಬೇಡಿ.

ಸಾಸಿವೆ ಎಣ್ಣೆ ಮತ್ತು ಶುಂಠಿ ರಸ ಸೇರಿಸಿ, ಅದನ್ನು ಕುದಿಸಿ, ಎಣ್ಣೆ ಚೆನ್ನಾಗಿ ಕಾದ ನಂತರ ಆ ಎಣ್ಣೆಯನ್ನು ಸೊಂಟಕ್ಕೆ ಹಚ್ಚಿ ಮೆಲ್ಲಗೆ ಮಾಲೀಶ್‌ ಮಾಡಿ.

ಉಪ್ಪು ನೀರಿನ ಶಾಖ ನೀಡುವುದರಿಂದ ಸೊಂಟ ನೋವಿಗೆ ಸ್ವಲ್ಪ ಆರಾಮ ಸಿಗುತ್ತದೆ.

ಉಗುರುಬಿಸಿ ನೀರಿಗೆ ಅಥವಾ ಬಿಸಿ ನೀರಿಗೆ ನೀಲಗಿರಿ ಎಣ್ಣೆ ಹಾಕಿ, ಅದರಿಂದ ಸ್ನಾನ ಮಾಡಿದರೆ ನೀವು ಸೊಂಟ ನೋವಿನಿಂದ ಸುಲಭವಾಗಿ ಮುಕ್ತಿ ಹೊಂದಬಹುದು.

ಪ್ರತಿ ದಿನ ಹಾಲಿಗೆ ಸ್ವಲ್ಪ ಅರಿಶಿನ, ಎರಡು ಹನಿ ಜೇನು ಹಾಕಿ ಸೇವಿಸಿ.

ನೀವು ತುಂಬಾ ಹೊತ್ತು ಟಿವಿ ನೋಡುತ್ತಿದ್ದರೆ ಸೊಂಟ ಬಳಿ ತಲೆ ದಿಂಬು ಇಟ್ಟು ಅದರ ಮೇಲೆ ಹಾಟ್ ವಾಟರ್‌ ಬ್ಯಾಗ್‌ ಇರಿಸಿ. ಇದರಿಂದ ನೋವು ನಿವಾರಣೆಯಾಗುತ್ತದೆ.

ಎತ್ತರದ ಹಿಮ್ಮಡಿಯ ಪಾದರಕ್ಷೆಗಳನ್ನು, ವಿಶೇಷವಾಗಿ ಸ್ಟಿಲಿಟೊಸ್ ಗಳನ್ನು ಧರಿಸುವುದರಿಂದ, ನಿಮ್ಮ ಸೊಂಟ ಮತ್ತು ಬೆನ್ನಿನ ಕೆಳಭಾಗದ ಮೇಲೆ ಒತ್ತಡ ಉಂಟಾಗುತ್ತದೆ.

ಪೋಷಕಾಂಶಗಳು ಇರುವ ಆಹಾರ ಸೇವಿಸಿ.

ಸೊಂಟ ನೋವನ್ನು ನಿರ್ಲಕ್ಷಿಸಬೇಡಿ. ಉತ್ತಮ ಆಹಾರ. ವ್ಯಾಯಾಮ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.

LEAVE A REPLY

Please enter your comment!
Please enter your name here