ಮೈದಾ ಹಿಟ್ಟಿನ ಆಹಾರಗಳು ಎಷ್ಟು ಡೇಂಜರ್ ತಿಳಿದುಕೊಳ್ಳಿ

0
1353

ಮೈದಾ ಎಂಬ ಸೈಲೆಂಟ್ ಕಿಲ್ಲರ್ ಮನುಷ್ಯನನ್ನು ದಿನದಿಂದ ದಿನಕ್ಕೆ ಸಾಯಿಸುತ್ತಾ ಹೋಗುತ್ತೆ

ಮೈದಾ.. ಇದು ಯಾರಿಗೆ ತಾನೇ ಗೊತ್ತಿಲ್ಲ. ಗೃಹಿಣಿಯರು ತಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುತ್ತಾರೆ. ಇದು ಬೇರೆ ಎಲ್ಲ ಆಹಾರ ಉತ್ಪನ್ನಗಳೊಂದಿಗೆ ಸುಲಭವಾಗಿ ಬೆರೆತು ಒಳ್ಳೆಯ ರುಚಿ, ಒಳ್ಳೆಯ ವಿನ್ಯಾಸವನ್ನು ನೀಡುವುದರಿಂದ ಇದನ್ನು ಯಥೇಚ್ಛವಾಗಿ ಬಳಸಲಾಗುತ್ತದೆ.ಅದರಲ್ಲೂ ಸಿಹಿ ತಿಂಡಿಗಳಿಗೆ ಹೆಚ್ಚು ಬಳಸುತ್ತಾರೆ.ಅದರಲ್ಲೂ ಬೇಕರಿ ತಿಂಡಿಗಳಲ್ಲಿ 80% ಮೈದಾ ಬಳಸಿದ ತಿಂಡಿಗಳೇ ಹೆಚ್ಚು.

ಮೈದಾ ಹಿಟ್ಟಿನ ಮೂಲ ವಸ್ತು ಗೋಧಿ. ಗೋಧಿಯನ್ನು ಗಿರಣಿಗಳಲ್ಲಿ ಹುಡಿಮಾಡಿಸಿದಾಗ,ಇದರ ಬಣ್ಣವು ನಸುಹಳದಿಯಾಗಿ ಇರುವುದು. ಮೈದಾಹಿಟ್ಟನ್ನು ಧಾನ್ಯದ ಪಿಷ್ಟಭರಿತ ಬಿಳಿ ಭಾಗದಿಂದ ತಯಾರಿಸಲಾದರೆ, ಗೋದಿಹಿಟ್ಟಿನಲ್ಲಿರುವ ನಾರುಯುಕ್ತ ತಾವುಡನ್ನು ಗಿರಣಿಯಲ್ಲಿ ತೆಗೆದು, ಈ ಹಿಟ್ಟನ್ನು ನುಣ್ಣಗೆ ನಯಗೊಳಿಸಿ. ಶುದ್ಧೀಕರಿಸಿ ಹಾಗು ಬೆನ್ಜೈಲ್ ಬೆನ್ಜೋಯಿಕ್ ಪೆರೋಕ್ಸೈಡ್ ಎನ್ನುವ ರಾಸಾಯನಿಕವನ್ನು ಬಳಸಿ ಬ್ಲೀಚ್ ಮಾಡಿದಾಗ ಅಚ್ಚ ಬಿಳಿಯ ಬಣ್ಣದ ಮೈದಾ ಹುಡಿಯು ಸಿದ್ದವಾಗುತ್ತದೆ.

ಈ ಮೈದಾವನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಬಳಸಿದರೆ ಏನಾಗಬಹುದು? ಇದನ್ನು ಬಳಸಿದ ಕೂಡಲೇ ಇದು ದೇಹದ ಮೇಲೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಆದರೆ ಇದನ್ನು ದೀರ್ಘಾವಧಿಯ ತನಕ ಬಳಸಿದರೆ ಮಾತ್ರ ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಬೀರುವ ಫಲಿತಾಂಶ ಮಾತ್ರ ತುಂಬಾ ನಿಧಾನವಾಗಿ ಗೋಚರಕ್ಕೆ ಬರುತ್ತದೆ. ಹಾಗಾದರೇ ಈ ಮೈದಾದಿಂದ ಆಗುವ ತೊಂದರೆಗಳೇನು ನೋಡೋಣ. ಮೈದಾವನ್ನು ಬಳಸಿ ಕೇಕ್ ಬ್ರೆಡ್ ಬನ್ ರಸ್ಕ್ ನ್ಯೂಡಲ್ಸ್ ಬಿಸ್ಕತ್ ಪರೋಟ ಪೂರಿ ಚಪಾತಿ ನಾನ್ ತಂದುರಿ ರೋಟಿ ಇವೆಲ್ಲವನ್ನು ತಯಾರಿಸಲಾಗುತ್ತದೆ. ಮೈದಾ ತಿನ್ನುವವರಿಗೆ ಸಕ್ಕರೆ ಕಾಯಿಲೆ ಕಟ್ಟಿಟ್ಟ ಬುತ್ತಿ. ಮೈದಾದಲ್ಲಿ ಬಳಸಿರುವ ಅಲಾಕ್ಸನ್ ಎಂಬ ಔಷಧಿಯು ಪ್ಯಾಂಕ್ರಿಯಾಸ್ನಲ್ಲಿರುವ ಬೀಟಾ ಜೀವಕೋಶಗಳನ್ನು ನಾಶ ಮಾಡಿ ಇನ್ಸುಲಿನ್ ಕಡಿಮೆಯಾಗಲು ಕಾರಣವಾಗುತ್ತದೆ.

ಮೈದಾ ಹಿಟ್ಟಿನಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್ ಅಂಶವಿದ್ದು ಇದು ರಕ್ತದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ ಇದರಿಂದ ಮಧುಮೇಹ ರೋಗ ಬರುವ ಸಾಧ್ಯತೆ ಹೆಚ್ಚು. ಮೈದಾದಲ್ಲಿ ನಾರಿನ ಅಂಶ ಸಂಪೂರ್ಣವಾಗಿ ತೆಗೆದಿರುವುದರಿಂದ ದೇಹದಲ್ಲಿ ಅನಗತ್ಯವಾದ ಕೊಬ್ಬು ಸಂಗ್ರಹವಾಗುತ್ತದೆ. ಇದರಿಂದ ದೇಹದ ತೂಕ ಹೆಚ್ಚಿ ಬೊಜ್ಜು ಮುಂತಾದ ಸಮಸ್ಯೆಗಳಿಗೆ ಎಡೆ ಮಾಡಿ ಕೊಡುತ್ತದೆ. ಮೈದಾದಲ್ಲಿ ನಾರಿನಂಶ ಸಂಪೂರ್ಣವಾಗಿ ತೆಗೆದಿರುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತದೆ. ಮೈದಾದಲ್ಲಿ ನಾರು ಇಲ್ಲದೆ ಇರುವ ಕಾರಣ ಮಲವಿಸರ್ಜನೆಗೆ ತೊಡಕು ಉಂಟಾಗಿ ಮಲಬದ್ಧತೆ ಸಮಸ್ಯೆ ತಲೆದೋರಬಹುದು.

ಮೈದಾ ಸೇವಿಸಿದ ಕೂಡಲೇ ಸಕ್ಕರೆ ಅಂಶದಲ್ಲಿ ಏರುಪೇರು ಆಗುತ್ತದೆ ಇದು ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಸದೂತದ ಸ್ರವಿಸುವಿಕೆಗೆ ಅಡ್ಡಿ ಉಂಟು ಮಾಡುತ್ತದೆ. ಇದರಿಂದ ಸಿಟ್ಟು ಅಸಹನೆ ಜಾಸ್ತಿಯಾಗುತ್ತದೆ. ಮೈದಾದಲ್ಲಿ ನಾರಿನ ಅಂಶ ಸಂಪೂರ್ಣವಾಗಿ ತೆಗೆದಿರುವುದರಿಂದ ದೇಹದಲ್ಲಿ ಹೆಚ್ಚು ಕೊಬ್ಬು ಸಂಗ್ರಹವಾಗುತ್ತದೆ. ಇದರಿಂದ ದೇಹದ ತೂಕ ಹೆಚ್ಚಗುತ್ತದೆ. ಮೈದಾವನ್ನು ಸೇವಿಸಿದ ಕೂಡಲೇ ರಕ್ತದಲ್ಲಿ ಸಕ್ಕರೆ ಅಂಶ ಏರುತ್ತದೆ ಮತ್ತು ಅಷ್ಟೇ ನಿಧಾನವಾಗಿ ಇಳಿಯುತ್ತದೆ. ಇದರಿಂದ ಸೋಮಾರಿತನ ಆವರಿಸಿ ನಿದ್ರೆ ಬರುತ್ತದೆ. ಮೈದಾವನ್ನು ಸೇವಿಸಿದ ಕೂಡಲೇ ರಕ್ತದಲ್ಲಿ ಸಕ್ಕರೆ ಪ್ರಮಾಣ ಬೇಗ ಲಭ್ಯವಾಗುತ್ತದೆ. ಆದರೆ ಅದು ಬೇಗ ಖಾಲಿಯಾಗುತ್ತದೆ.ಇದರಿಂದ ದೇಹವು ಪುನಃ ಪುನಃ ಸಕ್ಕರೆಯ ಬೇಡಿಕೆ ಇಡುತ್ತದೆ. ರುಚಿ ರುಚಿ ಎಂದು ತಿನ್ನುವ ಈ ಮೈದಾದಿಂದ ಎಷ್ಟೆಲ್ಲ ತೊಂದರೆಗಳಿವೆ ತಿಳಿದಿರಲ್ಲ ಇನ್ನು ಮೇಲೆ ಆದಷ್ಟು ಕಡಿಮೆ ಪ್ರಮಾಣದಲ್ಲಿ ಬಳಸಿ.

 

LEAVE A REPLY

Please enter your comment!
Please enter your name here