ಹೆಚ್ಚು ಸಿಹಿ ತಿಂಡಿ ತಿಂದರೆ ಏನಾಗುತ್ತದೆ

0
1000

ಚಿಕ್ಕಮಕ್ಕಳಿಂದ ಹಿಡಿದು ತಾತ ಅಜ್ಜಿಯ ವರೆಗೂ ಸಿಹಿತಿಂಡಿ ಎಂದರೆ ಬಾಯಿಯಲ್ಲಿ ನೀರು ಸುರಿಯುತ್ತದೆ.

ಯಾವುದೇ ಶುಭ ಸಮಾರಂಭದಲ್ಲು ಸಿಹಿತಿಂಡಿ ಇಲ್ಲದೆ ಸಮಾರಂಭ ಮುಗಿಯುವುದಿಲ್ಲ. ಎಲ್ಲರಿಗೂ ಪ್ರಿಯವಾದದ್ದು ಈ ಸಿಹಿತಿಂಡಿಗಳು.

ಆದರೆ ಈ ಸಿಹಿತಿಂಡಿ ಸೇವನೆ ಆರೋಗ್ಯಕ್ಕೆ ಒಳ್ಳೆಯದ? ಕೆಟ್ಟದ್ದಾ? ಎಂದು ಯಾರು ಚಿಂತಿಸುವುದಿಲ್ಲ ಸಿಹಿ ಸಿಕ್ಕರೆ ಬಾಯಿ ಮುಕ್ಕಳೊವುದು ಅಷ್ಟೇ..
ಆದರೆ ಹೆಚ್ಚು ಸಿಹಿತಿಂಡಿಗಳ ಸೇವನೆ ಆರೋಗ್ಯಕ್ಕೆ ಕುತ್ತು ಹೇಗೆಂದರೇ..

ಸಿಹಿತಿಂಡಿಯನ್ನು ಹೆಚ್ಚು ಸೇವಿಸುವುದರಿಂದ ಹೃದಯದ ಸಮಸ್ಯೆ ಕಾಡುತ್ತದೆ.

ಹೆಚ್ಚು ಸೇವಿಸುವುದರಿಂದ ರಕ್ತದಲ್ಲಿ ಕೊಬ್ಬಿನ ಮಟ್ಟ ಹೆಚ್ಚಾಗಿ ಯಕೃತ್ತಿನ ಸಮಸ್ಯೆ ಶುರುವಾಗುತ್ತದೆ.
ಯಕೃತ್ತಿನಲ್ಲಿ ಹೆಚ್ಚು ಕೊಬ್ಬು ಶೇಖರಣೆ ಆಗುತ್ತದೆ.

ಮೆದುಳಿಗೆ ಹೆಚ್ಚು ಹಾನಿ ಉಂಟಾಗುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತದೆ.

ಸಿಹಿತಿಂಡಿ ಸೇವಿಸಿದ ನಂತರ ಯಾವುದೇ ರೀತಿಯ ಆಹಾರ ಸೇವಿಸಲು ಆಗುವುದಿಲ್ಲ.

ದಂತ ಸಮಸ್ಯೆಗಳು ಕಾಡುತ್ತವೆ.

ಹೆಚ್ಚು ಸಿಹಿತಿಂಡಿ ಸೇವನೆಯಿಂದ ದೇಹದ ಉಷ್ಣಾಂಶ ಹೆಚ್ಚಿಗೆ ಹಲವಾರು ರೀತಿಯ ನೋವುಗಳು ನಮ್ಮನ್ನು ಕಾಡುತ್ತದೆ.

ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುತ್ತದೆ.

ದೇಹದಲ್ಲಿ ಹೆಚ್ಚು ಸೂಕ್ಷ್ಮ ಜೀವಿಗಳು ಸೇರಲು ಸಹಾಯವಾಗುತ್ತದೆ.

ಹೊಟ್ಟೆಯ ಸಮಸ್ಯೆ ಹೆಚ್ಚು ಕಾಡುತ್ತದೆ.

ಸಿಹಿತಿಂಡಿಯಿಂದ ಆಗುವ ಸಮಸ್ಯೆ ಗೋತಾಯಿತಲ್ಲ ಇನ್ನು ಮೇಲೆ ಕಡಿಮೆ ಪ್ರಮಾಣದಲ್ಲಿ ಸಿಹಿತಿಂಡಿ ಸೇವಿಸಿ.

LEAVE A REPLY

Please enter your comment!
Please enter your name here