ಇವುಗಳನ್ನು ತಿಂದರೆ ಮೊಡವೆ ಬರುತ್ತವೆ.

0
1081

ಎಲ್ಲರೂ ಸುಂದರವಾಗಿ ಕಾಣಬೇಕು ಎಂದು ಆಸೆ ಪಡುತ್ತಾರೆ.ಆದರೆ ಅವರ ಸೌಂದರ್ಯಕ್ಕೆ ಮುಳ್ಳಾಗುವುದು ಮೊಡವೆಗಳು.

ಮುಖದಲ್ಲಿ ಮೊಡವೆ ಆದರೆ ಅದೊಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ.ಮೊಡವೆ ಹೋಗಲಾಡಿಸಲು ಸಾಕಷ್ಟು ಕಷ್ಟ ಪಟ್ಟರು ಹೋಗಿಸುವುದು ಕಷ್ಟ ಒಮ್ಮೆ ಮೊಡವೆ ಮುಖದಲ್ಲಿ ಕಾಣಿಸಿಕೊಂಡರೆ ಕನಿಷ್ಠ ಒಂದು ವಾರ ಹೋಗಲಾರದು ಜೊತೆಗೆ ಕೆಲವೊಮ್ಮೆ ಕಲೆ ಆಗುವ ಸಾಧ್ಯತೆ ಕೂಡ ಹೆಚ್ಚು. ಈ ಕಲೆಯು ಧೂಳು. ಕೊಳೆ. ನೀರು. ಹಲವಾರು ರೀತಿಯ ಕ್ರೀಮ್. ಸೋಪ್. ಗಳಿಂದ ಮೊಡವೆಗಳು ಬರುತ್ತವೆ. ಇದರ ಜೊತೆಗೆ ನೀವು ಸೇವಿಸುವ ಆಹಾರದಿಂದ ಸಹ ಮೊಡವೆಗಳು ಕಾಣಿಸುತ್ತವೆ.

ಹಾಗಾದರೆ ಆ ಆಹಾರಗಳು ಯಾವುವು ಎಂದು ತಿಳಿಯೋಣ.
ನಾವು ಪ್ರತಿದಿನ ಹಾಲು ಮತ್ತು ಹಾಲಿನಿಂದ ತಯಾರಿಸಿದ ಉತ್ಪನ್ನಗಳನ್ನು ಸೇವಿಸುತ್ತೇವೆ ಆದರೆ ಇವುಗಳು ಹೆಚ್ಚು ಇನ್ಸುಲಿನ್ ಅನ್ನು ಬಿಡುಗಡೆ ಮಾಡುತ್ತವೆ.ಜೊತೆಗೆ ಮೊಡವೆಗಳ ಕಾರಣಕ್ಕೆ ಹಾರ್ಮೋನ್ ಕಾರಣವಾಗಿದ್ದು. ಈ ಹಾಲಿನಲ್ಲಿ ಹೆಚ್ಚು ಹಾರ್ಮೋನ್ ಇದೆ ಆದ್ದರಿಂದ ಮೊಡವೆಗಳು ಆಗುತ್ತವೆ.

ಕ್ಯಾಂಡಿ,ಕುಕ್ಕೀಸ್,ಬ್ರೆಡ್ ಇವುಗಳಲ್ಲಿ ಕಾರ್ಬೋಹೈಡ್ರೇಟ್ ಇದೆ. ಇವುಗಳಲ್ಲಿ ಹೆಚ್ಚು ಸಕ್ಕರೆ ಅಂಶ ಇರುವುದರಿಂದ ಮೊಡವೆಗಳು ಹೇಳುತ್ತವೆ.

ಕೆಫೀನ್ ದೇಹದಲ್ಲಿ ಒತ್ತಡದ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ ಇದರಿಂದ ಚರ್ಮಕ್ಕೆ ಹಾನಿಯಾಗಿ ಮೊಡವೆ ಬರುವ ಸಾಧ್ಯತೆ ಇದೆ

ಜಿಡ್ಡಿನ ಪದಾರ್ಥಗಳಲ್ಲಿ ಹೆಚ್ಚು ಕೊಬ್ಬಿನ ಅಂಶ ಇರುತ್ತದೆ. ಕೊಬ್ಬಿನ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚುತ್ತದೆ ಇದರಿಂದ ಹಾರ್ಮೋನ್ ಏರುಪೇರು ಉಂಟಾಗಿ ಮೊಡವೆಗಳು ಏಳುವ ಸಾಧ್ಯತೆಯಿದೆ.

ಎಣ್ಣೆಯಲ್ಲಿ ಕರಿದಿರುವ ಪದಾರ್ಥಗಳನ್ನು ಸೇವಿಸುವುದರಿಂದ ಮೊಡವೆಗಳು ಬರುತ್ತವೆ

ಸಮುದ್ರಾಹಾರಗಳಾದ ಏಡಿ, ಸೀಗಡಿ ಇವುಗಳಲ್ಲಿ ಅಯೋಡಿನ್ ಅಂಶ ಹೆಚ್ಚಿರುವುದರಿಂದ ಮೊಡವೆಗಳು ಹೆಚ್ಚುವ ಸಾಧ್ಯತೆ ಇರುತ್ತದೆ.

ಪಾಲಕ್ ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು ಎಂದು ಸೇವಿಸುತ್ತೇವೆ. ಆದರೆ ಈ ಪಾಲಕ್ ಸೊಪ್ಪಿನಲ್ಲಿ ಅಯೋಡಿನ್ ಅಂಶ ಹೆಚ್ಚಿದ್ದು ಮೊಡವೆ ಬರುವ ಸಾದ್ಯತೆ ಹೆಚ್ಚು.

ಹೆಚ್ಚು ಮಸಾಲೆ ಪದಾರ್ಥಗಳನ್ನು ಸೇವಿಸುವುದರಿಂದ ದೇಹದ ಉಷ್ಣತೆ ಹೆಚ್ಚಿಸುತ್ತದೆ ಮತ್ತು ಚರ್ಮದ ಉರಿಯೂತಕ್ಕೆ ಕಾರಣವಾಗುತ್ತದೆ ಇದರಿಂದ ಮೊಡವೆ ಹೆಚ್ಚಬಹುದು.

ಪ್ರಾಣಿಗಳ ಮಾಂಸದಲ್ಲಿ ಆಂಟಿ ಬಯಾಟಿಕ್ಸ್ ಹಾಗು ಹಾರ್ಮೋನುಗಳು ಬಹಳಷ್ಟು ಇರುತ್ತವೆ ಆದ್ದರಿಂದ ಮೊಡವೆಗಳು ಹೇಳುತ್ತವೆ.

ಸೋಡಾ ಮತ್ತಿತರ ಎನೆರ್ಜಿ ಡ್ರಿಂಕ್ಸ್ ನಮ್ಮ ಚರ್ಮದ ಮೇಲೆ ಮೊಡವೆಗಳನ್ನು ಎಬ್ಬಿಸುತ್ತವೆ.

ಆಲ್ಕೋಹಾಲ್ ನಮ್ಮ ದೇಹ ಸ್ವಾಭಾವಿಕವಾಗಿ ನಿರ್ಜಲೀಕರಣವಾಗುವಂತೆ ಮಾಡುತ್ತದೆ ಇದರಿಂದ ತ್ವಚೆಯ ತೇವಾಂಶ ಕಡಿಮೆಯಾಗಿ ಮೊಡವೆ ಕಾಣಿಸಿಕೊಳ್ಳುತ್ತವೆ.

ನೀವು ಹೆಚ್ಚು ಇಷ್ಟ ಪಡುವ ಆಹಾರಗಳೇ ನಿಮ್ಮ ಸೌಂದರ್ಯವನ್ನು ಕೆಡಿಸುತ್ತವೇ ನಿಮ್ಮ ಮುಖದಲ್ಲಿ ಮೊಡವೆಗಳನ್ನು ಹುಟ್ಟಿಸುತ್ತವೆ.

LEAVE A REPLY

Please enter your comment!
Please enter your name here