ಎಲ್ಲರಿಗೂ ದೇವರು ಎಂದರೇ ಭಕ್ತಿ. ಗೌರವ. ಶ್ರದ್ಧೆ. ಇರುತ್ತವೆ. ಎಲ್ಲರೂ ದೇವರನ್ನು ಫೋಟೋದಲ್ಲಿ ನೋಡಿ. ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಜೊತೆಗೆ ದೇವರು ಮನೋಕಾಮನೆಗಳನ್ನು ಪೂರ್ತಿ ಮಾಡಲು ಮಾತ್ರ ಇರುವುದು ಎಂದು ತಿಳಿದು ಕೊಂಡಿದ್ದೇವೆ.
ಹಾಗೆಯೇ ಎಲ್ಲ ಊರುಗಳಲ್ಲೂ ಏನೇ ಚಿಕ್ಕ ಜಗಳವಾದರು ಪೊಲೀಸ್ ಕೋರ್ಟ್. ಎಂದು ಹೋಗುತ್ತಾರೆ. ಆದರೆ ಛತ್ತೀಸ್ಗಡದ ಬಿಲಾಸಪುರ ನಗರದ ಮಗರಪಾರಾ ಕ್ಷೆತ್ರದಲ್ಲಿ ಒಂದು ಹನುಮನ ಮಂದಿರವಿದೆ. ಇಲ್ಲಿ ಇರುವ ಹನುಮಂತನೆ ಆ ಗ್ರಾಮದಲ್ಲಿ ಎಲ್ಲ ರೀತಿಯ ತೀರ್ಪುಗಳನ್ನು ನೀಡುವುದು.
ಹಾಗಂತ ಈ ಗ್ರಾಮದಲ್ಲಿ ಪೊಲೀಸ್ ಕೋರ್ಟ್ ಇಲ್ಲವೆಂತಲ್ಲ. ಈ ನಗರದಲ್ಲಿ ಉಚ್ಚ ನ್ಯಾಯಾಲಯವು ಇದೆ. ಪೊಲೀಸ್ ಠಾಣೆಯು ಇದೆ. ಸಹಜವಾಗಿ ಪ್ರಕರಣಗಳು ಸಹ ದಾಖಲಾಗುತ್ತೆ , ಆದರೆ ಈ ಗ್ರಾಮದವರು ಯಾವ ರೀತಿಯ ಸಮಸ್ಯೆ ಬಂದರು ಹನುಮನ ಮಂದಿರಕ್ಕೆ ಹೋಗುತ್ತಾರೆ. ಹನುಮ ನಮ್ಮ ಸಮಸ್ಯೆಗೆ ಪರಿಹಾರ ನೀಡುತ್ತಾನೆ ಎಂಬ ಅಪಾರ ನಂಬಿಕೆ. ಹನುಮಂತನ ಮುಂದೆ ಪ್ರಮಾಣ ಮಾಡಿಸಿ ವಾದ ವಿವಾದ ಚರ್ಚೆ ನಡೆಸುತ್ತಾರೆ, ಹನುಮಂತನ ಮುಂದೆ ಪ್ರಮಾಣ ಮಾಡಿದ ಮೇಲೆ ಇಲ್ಲಿ ಯಾರು ಸುಳ್ಳನು ಹೇಳೋದಿಲ್ಲ, ತಪ್ಪು ಮಾಡಿದ ವ್ಯಕ್ತಿ ಸತ್ಯವನ್ನೇ ಹೇಳುತ್ತಾನೆ, ಸುಳ್ಳು ಹೇಳಿದರೆ ಹನುಮಂತ ಶಿಕ್ಷೆ ನೀಡುತ್ತಾನೆ ಎಂದು ಹಲವಾರು ವರ್ಷದಿಂದ ನಂಬಿದ್ದಾರೆ, ಹನುಮಂತನ ಮೇಲೆ ಇಲ್ಲಿನ ಪಂಚಾಯತ್ ಹನುಮಂತನನ್ನು ಸಾಕ್ಷಿಯಾಗಿ ಇಟ್ಟುಕೊಂಡು ನ್ಯಾಯ ನೀಡುತ್ತಾರೆ. ಆ ನ್ಯಾಯವನ್ನು ಹನುಮ ನೀಡಿದ್ದಾನೆ ಇದು ಅವನ ನಿರ್ಧಾರ ಎಂದು ಹೇಳುತ್ತಾರೆ.
ಬಿಲಾಸಪುರ ಎಂಬ ಈ ಕ್ಷೇತ್ರದಲ್ಲಿ ಭಜರಂಗಿ ಪಂಚಾಯತ್ ಎಂಬ ಹೆಸರಿನ ಒಂದು ಮಂದಿರವಿದೆ.
ಇಲ್ಲಿ ಸುಮಾರು 80 ವರ್ಷಗಳಿಂದ ತೀರ್ಪು ಮಾಡುತ್ತಿದ್ದಾರೆ. ಇಲ್ಲಿ ಯಾರಿಗೆ ಯಾವ ರೀತಿಯ ಸಮಸ್ಯೆ ಬಂದರು ಅದನ್ನು ಪರಿಹರಿಸಿಕೊಳ್ಳಲು ಈ ಮಂದಿರಕ್ಕೆ ಬಂದು ಪರಿಹರಿಸಿಕೊಳ್ಳುತ್ತಾರೆ.
ಈ ಮಂದಿರದ ನಿರ್ಮಾಣ ಸುಮಾರು 80 ವರ್ಷದ ಹಿಂದೆ ಹನುಮಾನ್ ಭಕ್ತನಾದ ಸುರೂಖ್ ನಾಯಿ ಎಂಬ ಹೆಸರಿನ ಒಬ್ಬರು ಅಶ್ವತ್ಥ್ ಮರದ ಕೆಳಗಡೆ ಆಂಜನೇಯ ಮೂರ್ತಿಯನ್ನು ಇಟ್ಟು ಪೂಜೆ ಮಾಡುತ್ತಿದ್ದರು. ನಂತರ ನ್ಯಾಯ ಪಂಚಾಯತ್ ಸದಸ್ಯರು ಹಾಗೂ ಹನುಮಾನ್ ಭಕ್ತರ ಸಹಾಯದಿಂದ ದೊಡ್ಡ ಮಂದಿರ 1983 ರಲ್ಲಿ ಸ್ಥಾಪಿಸಿದರು.
ಅಲ್ಲಿಂದ ಇಲ್ಲಿಯವರೆಗು ಎಲ್ಲರ ಸಮಸ್ಯೆಗಳಿಗೆ ಹನುಮಂತ ಸಾಕ್ಷಿಯಾಗಿ ಸಮಸ್ಯೆಗೆ ಪರಿಹಾರ ನೀಡುತ್ತಾನೆ. ಎಂದು ನಂಬಿದ್ದಾರೆ. ಜೊತೆಗೆ ಇಲ್ಲಿ ಆಗುವ ತೀರ್ಪು ಕೊನೆಯ ತೀರ್ಪಗಿರುತ್ತದೆ. ಎಂದು ಎಲ್ಲರು ಸಂತೋಷದಿಂದ ಸ್ವೀಕರಿಸುತ್ತಾರೆ.