18 ರಿಂದ 30 ರ ಹರೆಯದ ವಯಸ್ಸಿನಲ್ಲಿ ಇವುಗಳನ್ನು ಹೆಚ್ಚು ತಿನ್ನಿ

0
1030

ಮನುಷ್ಯರ ಜೀವನ ಓಡುವ ಕುದುರೆಯಂತೆ ಒಂದು ಒಂದು ವಯಸ್ಸಿನಲ್ಲಿ ವಿಭಿನ್ನ ರೀತಿಯ ಚಟುವಟಿಕೆಗಳನ್ನು ಮಾಡುತ್ತೇವೆ.

ಚಿಕ್ಕ ವಯಸ್ಸಿನಲ್ಲಿ ಆಟ ತುಂಟಾಟಗಳು ಹೆಚ್ಚು ನೆಡೆಯುತ್ತವೆ.ಆದರೆ ಹದಿಹರೆಯದಲ್ಲಿ ಹೆಚ್ಚಾಗಿ ಕಠಿಣ ಕೆಲಸ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಆದರೆ ವಯಸ್ಸಾಗುತ್ತಾ ಹೋದಂತೆ ಯಾವುದೇ ಕೆಲಸಗಳನ್ನು ಮಾಡಲು ಆಗುವುದಿಲ್ಲ.

ಹದಿಹರೆಯದ ವಯಸ್ಸಿನಲ್ಲಿ ಹೆಚ್ಚು ಜವಾಬ್ದಾರಿಗಳು ಇರುತ್ತವೆ.ಅದಕ್ಕಾಗಿ ತಮ್ಮ ದೇಹ ಹಾಗೂ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು.

ಹದಿಹರೆಯದ ವಯಸ್ಸಿನವರು ಸೇವಿಸುವ ಆಹಾರ ಮತ್ತು ವಯಸ್ಸಾದವರು ಸೇವಿಸುವ ಆಹಾರದಲ್ಲಿ ತುಂಬಾ ವ್ಯತ್ಯಾಸವಿರುತ್ತದೆ.

ಹದಿಹರೆಯದ ವಯಸ್ಸಿನಲ್ಲಿ ದೇಹ ಬೆಳವಣಿಗೆಯಾಗಲು ಹೆಚ್ಚಿನ ಪೋಷಕಾಂಶಗಳು ಬೇಕು. ಸರಿಯಾದ ಪೋಷಕಾಂಶಗಳು ಸಿಗದೇ ಇದ್ದರೆ ದೇಹದ ಬೆಳವಣಿಗೆ ಕುಂಠಿತವಾಗುತ್ತದೆ ತಾವು ಆ ವಯಸ್ಸಿನಲ್ಲಿ ನಿರ್ವಹಿಸಬೇಕಾದ ಕೆಲಸಗಳನ್ನು ಪೂರೈಸಲು ಆಗಿವುದಿಲ್ಲ. ಆದ್ದರಿಂದ ನಿಮ್ಮ ದೇಹಕ್ಕೆ ಯಾವೆಲ್ಲಾ ಆಹಾರಗಳು ಬೇಕಾಗುತ್ತದೆ ಎಂದು ತಿಳಿದಿದುಕೊಂಡರೆ ಅದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮತ್ತು ನಿಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬಹುದು.

ಹದಿಹರೆಯದಲ್ಲಿ ಸೇವಿಸಬೇಕಾದ ಆಹಾರಗಳಲ್ಲಿ ಹೆಚ್ಚು ಪ್ರೋಟೀನ್ ಅಂಶ ಇರಬೇಕು.ಇದು ತಮ್ಮ ಸ್ನಾಯುಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

20ರ ಹರೆಯದಲ್ಲಿ ಪ್ರೋಟೀನ್ ತುಂಬಾ ಮುಖ್ಯವಾಗಿರುತ್ತದೆ. ಸ್ನಾಯುಗಳ ಬೆಳವಣಿಗೆಗೆ ಇದು ಅಗತ್ಯ. ದೇಹದ ಬೆಳವಣಿಗೆಗೆ ಈ ಹಂತದಲ್ಲಿ ಪ್ರೋಟೀನ್ ಅಗತ್ಯವಾಗಿ ಬೇಕಿರುತ್ತದೆ.

ವಯಸ್ಸಾಗುತ್ತಾ ಹೋದಂತೆ ಚಯಾಪಚಯ ಕ್ರಿಯೆಯು ಕಡಿಮೆಯಾಗುವ ಕಾರಣದಿಂದ ಹೆಚ್ಚಿನ ವಿಟಮಿನ್ ಇರುವ ಬೀಜ ಹಾಗೂ ಧಾನ್ಯಗಳನ್ನು ಸೇವಿಸಬೇಕು.

ಹೆಚ್ಚು ಕ್ಯಾಲ್ಸಿಯಂ ಇರುವಂತಹ ಆಹಾರಗಳನ್ನು ಸೇವಿಸುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ.ಹಾಗೂ ಹೆಚ್ಚಿನ ಕಾಲ ಬದುಕಲು ಸಹಾಯ ಆಗುತ್ತದೆ.

ಹದಿಹರೆಯದಲ್ಲಿ ಕುಟುಂಬ, ಕೆಲಸದ ಒತ್ತಡದಲ್ಲಿ ಮೆದುಳಿನ ಮೇಲೆ ಅತಿಯಾದ ಒತ್ತಡ ಬೀಳುತ್ತದೆ. ಆದ್ದರಿಂದ ಪಾಲಿಫೆನಾಲ್ಸ್. ಅ್ಯಂಟಿ ಆಕ್ಸಿಡೆಂಟ್‌ಗಳು. ಆಲಿವ್ ತೈಲ, ತೆಂಗಿನ ಎಣ್ಣೆ, ಸಾಲ್ಮನ್, ನೇರಳೆ ಮತ್ತು ಮೊಟ್ಟೆಗಳು ಇಂತಹ ಆಹಾರಗಳನ್ನು ಸೇವಿಸುವುದರಿಂದ ಮೆದುಳಿಗೆ ಹೆಚ್ಚು ಸಂರಕ್ಷಣೆ ನೀಡಿ ಹೆಚ್ಚು ಶಕ್ತಿ ನೀಡುತ್ತದೆ.

ಹದಿಹರೆಯದಲ್ಲಿ ಬಿಳಿ ಕೂದಲು ಕಪ್ಪು ಕೂದಲಿನ ನಡುವಿನಲ್ಲಿ ಹೆಚ್ಚು ಒಡೆದಾಟ ನೆಡೆಯುತ್ತದೆ. ಇದರಿಂದ ಹೆಚ್ಚಿನ ಆ್ಯಂಟಿ ಆಕ್ಸಿಡೆಂಟ್ ಇರುವ ಆಹಾರವನ್ನು ಸೇವಿಸಿ. ಹಸಿರೆಲೆ ಹಾಗೂ ಬಣ್ಣಬಣ್ಣದ ತರಕಾರಿಗಳು, ಆಯಾಯ ಋತುವಿನಲ್ಲಿ ಸಿಗುವ ಹಣ್ಣುಗಳನ್ನು ಹೆಚ್ಚು ಸೇವಿಸುತ್ತಾ ಬಂದರೆ ನಿಮ್ಮ ಕೂದಲು ನಿಮ್ಮನ್ನು ಯುವಕರಂತೆ ಇಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ನಿಮ್ಮ ಮೂಳೆಯ ದ್ರವ್ಯರಾಶಿಗಳನ್ನು ಹೆಚ್ಚಿಸಿಕೊಳ್ಳಲು ಹೆಚ್ಚಿನ ಕ್ಯಾಲ್ಸಿಯಂ ಸೇವನೆ ಮಾಡಬೇಕು. ಅಂದರೆ ಹಾಲು, ಗಿಣ್ಣು, ಬೆಣ್ಣೆ, ಮೊಸರನ್ನು ಸೇವಿಸಬೇಕು.

ಮೊಸರು, ಅಕ್ರೋಟ್ ಮತ್ತು ಓಟ್ ಮಿಲ್ಗಳಲ್ಲಿ ಹೆಚ್ಚು ಹಾರ್ಮೋನುಗಳು ಇದ್ದು ಇವು ದೇಹವನ್ನು ಸಮತೋಲನದಲ್ಲಿ ಇಡುತ್ತವೆ. ಹಾಗೂ ಆರೋಗ್ಯಕ್ಕು ಒಳ್ಳೆಯದು ಮತ್ತು ದೇಹದಲ್ಲಿನ ತೇವಾಂಶವನ್ನು ಕಾಪಾಡುತ್ತದೆ.
ಆದ್ದರಿಂದ ಈ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಿ ನಿಮ್ಮ ಆರೋಗ್ಯವನ್ನು ಬಲಿಷ್ಠ ಮಾಡಿಕೊಳ್ಳಿ.

LEAVE A REPLY

Please enter your comment!
Please enter your name here